ಏಷ್ಯನ್ ಕ್ರೀಡಾಕೂಟದಲ್ಲಿ 50 ಮೀಟರ್ ರೈಫಲ್ 3 ಪೊಸಿಷನ್ಸ್ ಮಹಿಳೆಯರ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಸಿಫ್ಟ್ ಕೌರ್ ಸಮ್ರಾ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “50 ಮೀ ರೈಫಲ್ 3 ಪೊಸಿಷನ್ಸ್ ಮಹಿಳೆಯರ ಶೂಟಿಂಗ್‌ನಲ್ಲಿ ಚಿನ್ನದ ಪದಕವನ್ನು ಗೆದ್ದು ತರುವ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ಇತಿಹಾಸ ಬರೆದ @SiftSamra ಅವರಿಗೆ ಅಭಿನಂದನೆಗಳು. ಅವರು ದಾಖಲೆ ನಿರ್ಮಿಸಿರುವುದು ಇನ್ನಷ್ಟು ಸಂತಸ ತಂದಿದೆ. ಆಕೆ ಪ್ರತಿಯೊಬ್ಬ ಭಾರತೀಯನಿಗೂ ಸ್ಪೂರ್ತಿ. ಅವರ ಮುಂಬರುವ ಪ್ರಯತ್ನಗಳಿಗೆ ಶುಭಾಶಯಗಳು.'' ಎಂದು ಬರೆದುಕೊಂಡಿದ್ದಾರೆ.
Congratulations @SiftSamra for scripting history at the Asian Games by bringing home the prized Gold Medal in the 50m Rifle 3 Positions Women’s shooting. That she has set a record makes it even more joyous. She is an inspiration to every Indian. Best wishes for her upcoming… pic.twitter.com/XNU7mvI1Ry
— Narendra Modi (@narendramodi) September 27, 2023