ಗ್ಲೋಬಲ್ ಫೈನಾನ್ಸ್ ಸೆಂಟ್ರಲ್ ಬ್ಯಾಂಕರ್ ರಿಪೋರ್ಟ್ ಕಾರ್ಡ್ಸ್ 2024 ರಲ್ಲಿ ಸತತವಾಗಿ ಎರಡನೇ ಬಾರಿಗೆ “ಎ+” ಎಂದು ರೇಟ್ ಮಾಡಿದ್ದಕ್ಕಾಗಿ ಆರ್.ಬಿ.ಐ. ಗವರ್ನರ್ ಶ್ರೀ ಶಕ್ತಿಕಾಂತ ದಾಸ್ ಅವರನ್ನು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಎಕ್ಸ್ ಸಂದೇಶಕ್ಕೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಬರೆದಿದ್ದಾರೆ:
“ಈ ಸಾಧನೆಗಾಗಿ ಆರ್.ಬಿ.ಐ. ಗವರ್ನರ್ ಶ್ರೀ @DasShaktikanta ಅವರಿಗೆ ಅಭಿನಂದನೆಗಳು ಮತ್ತು ಅದು ಕೂಡ ಎರಡನೇ ಬಾರಿಗೆ. ಇದು ಆರ್.ಬಿ.ಐ.ನಲ್ಲಿ ಅವರ ನಾಯಕತ್ವ ಮತ್ತು ಆರ್ಥಿಕ ಬೆಳವಣಿಗೆ ಹಾಗೂ ಸ್ಥಿರತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಅವರ ಕೆಲಸಕ್ಕೆ ದೊರಕಿದ ಮನ್ನಣೆಯಾಗಿದೆ.
Congratulations to RBI Governor Shri @DasShaktikanta for this feat, and that too for the second time. This is a recognition of his leadership at the RBI and his work towards ensuring economic growth and stability. https://t.co/lzfogAQb15
— Narendra Modi (@narendramodi) August 21, 2024