ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಎರಡನೇ ಹಂತದ ಮಾದರಿ ವಿಭಾಗದಲ್ಲಿ ಜಮ್ಮು ಮತ್ತು ಕಾಶ್ಮೀರದ ಗ್ರಾಮಗಳು ಶೇ.100 ರಷ್ಟು ಬಯಲು ಬಹಿರ್ದೆಸೆ ಮುಕ್ತ (ಒಡಿಎಫ್) ಫ್ಲಸ್ ಸ್ಥಾನಮಾನ ಸಾಧಿಸಿದ್ದಕ್ಕಾಗಿ ಜಮ್ಮು & ಕಾಶ್ಮೀರವನ್ನು ಅಭಿನಂಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ X ಮಾಧ್ಯಮ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ.
“ಶ್ಲಾಘನೀಯ ಪ್ರಯತ್ನ, ಅದಕ್ಕಾಗಿ ನಾನು ಜಮ್ಮು ಮತ್ತು ಕಾಶ್ಮೀರದ ಜನರನ್ನು ಅಭಿನಂದಿಸುತ್ತೇನೆ. ಇದು ಸ್ವಚ್ಛ ಮತ್ತು ಆರೋಗ್ಯಕರ ಭಾರತದತ್ತ ನಮ್ಮ ಪಯಣದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ’’
Laudatory effort, for which I congratulate the people of Jammuand Kashmir. This is a monumental step in our journey towards a cleaner and healthier India. https://t.co/daxXYQ3aFY
— Narendra Modi (@narendramodi) October 2, 2023