ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಿಎಸ್.ಎಲ್.ವಿ-ಸಿ49/ಇಓಎಸ್01 ಮಿಷನ್ ಯಶಸ್ವೀ ಉಡಾವಣೆಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಭಾರತೀಯ ಬಾಹ್ಯಾಕಾಶ ಕೈಗಾರಿಕೆಗೆ ಅಭಿನಂದನೆ ಸಲ್ಲಿಸಿದ್ದಾರೆ.
"ನಾನು ಪಿಎಸ್.ಎಲ್.ವಿ-ಸಿ49/ಇಓಎಸ್01 ಮಿಷನ್ ಅನ್ನು ಇಂದು ಯಶಸ್ವೀಯಾಗಿ ಉಡಾವಣೆ ಮಾಡಿದ ಇಸ್ರೋ ಮತ್ತು ಭಾರತದ ಬಾಹ್ಯಾಕಾಶ ಕೈಗಾರಿಕೆಗೆ ಅಭಿನಂದನೆ ಸಲ್ಲಿಸುತ್ತೇನೆ. ಕೋವಿಡ್ 19ರ ಕಾಲದಲ್ಲೂ ನಮ್ಮ ವಿಜ್ಞಾನಿಗಳು ಗಡುವು ಪೂರ್ಣಗೊಳಿಸಲು ಹಲವು ಅಡ್ಡಿಗಳನ್ನು ದಾಟಿ ಬಂದಿದ್ದಾರೆ.
ಅಮೆರಿಕ ಮತ್ತು ಲುಕ್ಸೆಂಬರ್ಗ್ ನ ತಲಾ 4 ಮತ್ತು ಲಿತುವೇನಿಯಾದ 1 ಸೇರಿದಂತೆ ಒಂಬತ್ತು ಉಪಗ್ರಹಗಳನ್ನು ಈ ಮಿಷನ್ ನಲ್ಲಿ ಉಡಾವಣೆ ಮಾಡಲಾಗಿದೆ" ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.
Nine satellites, including four each from the US and Luxembourg and one from Lithuania, have also been launched in the Mission.
— Narendra Modi (@narendramodi) November 7, 2020
I congratulate @ISRO and India's space industry for the successful launch of PSLV-C49/EOS-01 Mission today. In the time of COVID-19, our scientists overcame many constraints to meet the deadline.
— Narendra Modi (@narendramodi) November 7, 2020