ಇಂದು ಬೆಳಗ್ಗೆ ಪಿಎಸ್ ಎಲ್ ವಿ ಸಿ54(PSLV C54) ರಾಕೆಟ್ ನ್ನು ಯಶಸ್ವಿಯಾಗಿ ಉಡಾಯಿಸಿದ ಇಸ್ರೋ ಹಾಗೂ ಎನ್ ಎಸ್ ಐಎಲ್ ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಉಡಾವಣೆಯಲ್ಲಿ ಭಾಗಿಯಾಗಿರುವ ಎಲ್ಲಾ ಕಂಪನಿಗಳನ್ನು ಸಹ ಪ್ರಧಾನಿ ನರೇಂದ್ರ ಮೋದಿಯವರು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಮೋದಿ, "ಪಿಎಸ್ ಎಲ್ ವಿ ಸಿ54 ರಾಕೆಟ್ ನ ಯಶಸ್ವಿ ಉಡಾವಣೆಗಾಗಿ ಇಸ್ರೋ ಮತ್ತು ಎನ್ ಎಸ್ ಐಎಲ್ (NSIL) ಗೆ ಅಭಿನಂದನೆಗಳು. ಇಒಎಸ್ 06(EOS-06) ಉಪಗ್ರಹವು ನಮ್ಮ ಕಡಲ ಸಂಪನ್ಮೂಲಗಳ ಬಳಕೆಯನ್ನು ಅತ್ಯುತ್ತಮವಾಗಿಸಲು ಸಹಾಯ ಮಾಡುತ್ತದೆ."
"ಭಾರತೀಯ ಕಂಪನಿಗಳಾದ ಪಿಕ್ಸೆಲ್ ಸ್ಪೇಸ್ ಮತ್ತು ಧ್ರುವಸ್ಪೇಸ್ ನಿಂದ 3 ಉಪಗ್ರಹಗಳ ಉಡಾವಣೆಯು ಹೊಸ ಯುಗದ ಆರಂಭವನ್ನು ಸೂಚಿಸುತ್ತಿದ್ದು, ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಭಾರತದ ಪ್ರತಿಭೆಯನ್ನು ಸಂಪೂರ್ಣವಾಗಿ ಅರಿತುಕೊಳ್ಳಬಹುದು. ಈ ಉಡಾವಣೆಯಲ್ಲಿ ತೊಡಗಿರುವ ಎಲ್ಲಾ ಕಂಪನಿಗಳು ಮತ್ತು ಪ್ರತಿಯೊಬ್ಬರಿಗೂ ಅಭಿನಂದನೆಗಳು.'' ಎಂದು ಬರೆದುಕೊಂಡಿದ್ದಾರೆ.
Congratulations to @ISRO and NSIL on the successful launch of PSLV C54 mission. The EOS-06 satellite will help in optimizing utilization of our maritime resources.
— Narendra Modi (@narendramodi) November 26, 2022