ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು -20 ವಿಶ್ವ ಕಪ್ ಗೆದ್ದಿರುವ ಭಾರತ ಕ್ರಿಕೆಟ್ ತಂಡವನ್ನು ಅಭಿನಂದಿಸಿದ್ದಾರೆ.
ಅವರು ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಇಡೀ ರಾಷ್ಟ್ರ ತಂಡದ ಸಾಧನೆಗೆ ಹೆಮ್ಮೆಪಟ್ಟಿದೆ ಮತ್ತುಅದರ ಪ್ರದರ್ಶನವನ್ನು ಶ್ಲಾಘಿಸಿದೆ ಎಂದು ಹೇಳಿದ್ದಾರೆ. ಅಲ್ಲದೇ ಭಾರತ ತಂಡ, ಈ ಟೂರ್ನಮೆಂಟ್ ನ ಪ್ರತಿಯೊಂದು ತಂಡವನ್ನು ಪಂದ್ಯವನ್ನೂ ಗೆದ್ದಿರುವುದು ಇನ್ನಷ್ಟು ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಈ ರೀತಿ ಪೋಸ್ಟ್ ಮಾಡಿದ್ದಾಋಎ:
“ಚಾಂಪಿಯನ್ನರು!
ನಮ್ಮ ತಂಡ ಟಿ20 ವಿಶ್ವ ಕಪ್ ಅನ್ನು ತವರಿಗೆ ತನ್ನದೇ ಶೈಲಿಯಲ್ಲಿ ತಂದಿದೆ!
ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ನಾವು ಹೆಮ್ಮೆಪಡುತ್ತಿದ್ದೇವೆ.
ಈ ಪಂದ್ಯ ಐತಿಹಾಸಿಕವಾಗಿತ್ತು."
CHAMPIONS!
— Narendra Modi (@narendramodi) June 29, 2024
Our team brings the T20 World Cup home in STYLE!
We are proud of the Indian Cricket Team.
This match was HISTORIC. 🇮🇳 🏏 🏆 pic.twitter.com/HhaKGwwEDt