ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2023 ರ ವಿಶ್ವ ಆರ್ಚರಿ ಯೂತ್ ಚಾಂಪಿಯನ್ ಶಿಫ್ ನಲ್ಲಿ ಹನ್ನೊಂದು ಪದಕಗಳನ್ನು ಗೆದ್ದ ಭಾರತದ ಜೂನಿಯರ್ ಮತ್ತು ಕೆಡೆಟ್ ಬಿಲ್ಲುಗಾರರನ್ನು ಅಭಿನಂದಿಸಿದರು.
ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರ ಟ್ವೀಟ್ ಅನ್ನು ಮರುಟ್ವೀಟ್ ಮಾಡಿದ ಪ್ರಧಾನಮಂತ್ರಿ ಅವರು ಹೀಗೆ ಟ್ವೀಟ್ ಮಾಡಿದ್ದಾರೆ:
“2023 ರ ವಿಶ್ವ ಆರ್ಚರಿ ಯೂತ್ ಚಾಂಪಿಯನ್ ಶಿಫ್ ನಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕಾಗಿ ನಮ್ಮ ಬಿಲ್ಲುಗಾರರ ಬಗ್ಗೆ ಹೆಮ್ಮೆಯಿದೆ. ಅವರ ಸಾಧನೆಗಳು ಭಾರತದಲ್ಲಿ ಬಿಲ್ಲುಗಾರಿಕೆಯ ಭವಿಷ್ಯವನ್ನು ಉತ್ತಮಗೊಳಿಸುತ್ತವೆ ಮತ್ತು ಅನೇಕ ಉದಯೋನ್ಮುಖ ಬಿಲ್ಲುಗಾರರಿಗೆ ಸ್ಫೂರ್ತಿ ನೀಡುತ್ತವೆ.”
Proud of our archers for excelling in the 2023 World Archery Youth Championships. Their accomplishments augur well for the future of archery in India and will motivate many upcoming archers. https://t.co/bXex3hxuwe pic.twitter.com/2Z9p0AgnAW
— Narendra Modi (@narendramodi) July 10, 2023