ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪಿಎಸ್ಎಲ್ ವಿ ಸಿ 53 ಮಿಷನ್ ಮೂಲಕ ಬಾಹ್ಯಾಕಾಶದಲ್ಲಿ ಭಾರತೀಯ ನವೋದ್ಯಮಗಳ ಎರಡು ಪೇಲೋಡ್ ಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಐಎನ್-ಎಸ್ಪೇಸ್ ಮತ್ತು ಇಸ್ರೋವನ್ನು ಅಭಿನಂದಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ,
"ಪಿಎಸ್ಎಲ್ವಿ ಸಿ53 ಮಿಷನ್ ಬಾಹ್ಯಾಕಾಶದಲ್ಲಿ ಭಾರತೀಯ ನವೋದ್ಯಮಗಳ ಎರಡು ಪೇಲೋಡ್ ಗಳನ್ನು ಪ್ರಾರಂಭಿಸುವ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಈ ಸಾಹಸಕ್ಕೆ ಅನುವು ಮಾಡಿಕೊಟ್ಟ @INSPACeIND ಮತ್ತು @isro ಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಭಾರತೀಯ ಕಂಪನಿಗಳು ಬಾಹ್ಯಾಕಾಶವನ್ನು ತಲುಪಲಿವೆ ಎಂಬ ವಿಶ್ವಾಸವಿದೆ." ಎಂದಿದ್ದಾರೆ.
The PSLV C53 mission has achieved a new milestone by launching two payloads of Indian Start-ups in Space. Congratulations @INSPACeIND and @isro for enabling this venture. Confident that many more indian companies will reach Space in near future.
— Narendra Modi (@narendramodi) July 1, 2022