ಮಹಿಳೆಯರ 71 ಕೆಜಿ ವೇಟ್ ಲಿಫ್ಟಿಂಗ್ ನಲ್ಲಿ (ಭಾರ ಎತ್ತುವ ಸ್ಪರ್ಧೆಯಲ್ಲಿ) ಕಂಚಿನ ಪದಕ ಗೆದ್ದ ಹರ್ಜಿಂದರ್ ಕೌರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು:
"ನಮ್ಮ ವೇಟ್ಲಿಫ್ಟಿಂಗ್ ತಂಡವು ಬರ್ಮಿಂಗ್ಹ್ಯಾಮ್ ಸಿಡಬ್ಲ್ಯುಜಿಯಲ್ಲಿ ಅಸಾಧಾರಣವಾದ ಉತ್ತಮ ಪ್ರದರ್ಶನ ನೀಡಿದೆ. ಇದನ್ನು ಮುಂದುವರಿಸಿದ ಹರ್ಜಿಂದರ್ ಕೌರ್ ಕಂಚಿನ ಪದಕ ಗೆದ್ದಿದ್ದಾರೆ. ಈ ವಿಶೇಷ ಸಾಧನೆಗಾಗಿ ಅವರಿಗೆ ಅಭಿನಂದನೆಗಳು. ಅವರ ಭವಿಷ್ಯದ ಪ್ರಯತ್ನಗಳಿಗಾಗಿ ಅವರಿಗೆ ಶುಭ ಹಾರೈಕೆಗಳು"
ಎಂದು ಹೇಳಿದ್ದಾರೆ.
Our weightlifting contingent has performed exceptionally well at the Birmingham CWG. Continuing this, Harjinder Kaur wins a Bronze medal. Congratulations to her for this special accomplishment. Best wishes to her for her future endeavours. pic.twitter.com/0dPzgkWT3y
— Narendra Modi (@narendramodi) August 2, 2022