ಇಸ್ಲಾಮಿಕ್ ಗಣರಾಜ್ಯ ಇರಾನ್ ನ ಅಧ್ಯಕ್ಷರಾಗಿ ಚುನಾಯಿತರಾದ ಮಸೌದ್ ಮೆಜೆಶ್ಕಿಯಾನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ಇಸ್ಲಾಮಿಕ್ ಗಣರಾಜ್ಯವಾದ ಇರಾನ್ ಅಧ್ಯಕ್ಷರಾಗಿ ಚುನಾಯಿತರಾದ @drpezeshkian ಅವರಿಗೆ ಅಭಿನಂದನೆಗಳು. ನಮ್ಮ ಜನರು ಮತ್ತು ಪ್ರದೇಶದ ಅಭ್ಯುದಯಕ್ಕಾಗಿ ನಮ್ಮ ಆತ್ಮೀಯ ಮತ್ತು ದೀರ್ಘಾಕಾಲದ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಬಲಗೊಳಿಸಲು ನಿಮ್ಮೊಂದಿಗೆ ನಿಕಟ ಕಾರ್ಯನಿರ್ವಹಣೆಗೆ ಎದುರು ನೋಡುತ್ತಿದ್ದೇನೆ."
Congratulations @drpezeshkian on your election as the President of the Islamic Republic of Iran. Looking forward to working closely with you to further strengthen our warm and long-standing bilateral relationship for the benefit of our peoples and the region.
— Narendra Modi (@narendramodi) July 6, 2024