ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಟಲಿಯ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಫ್ರಟೆಲಿ 'ಡಿ' ಇಟಾಲಿಯಾ ಪಕ್ಷದ ಜಾರ್ಜಿಯಾ ಮೆಲೋನಿ ಅವರನ್ನು ಅಭಿನಂದಿಸಿದ್ದಾರೆ.
ಈ ಸಂಬಂಧ ಬುಧವಾರ ಟ್ವೀಟ್ ಮಾಡಿರುವ ಅವರು,"ಇಟಲಿಯ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಫ್ರಟೆಲಿ 'ಡಿ' ಇಟಾಲಿಯಾ ಪಕ್ಷದ ನೇತೃತ್ವ ವಹಿಸಿರುವ ಜಾರ್ಜಿಯಾ ಮೆಲೋನಿ ಅವರಿಗೆ ಅಭಿನಂದನೆಗಳು. ಉಭಯ ರಾಷ್ಡ್ರಗಳ ಸಂಬಂಧ ಬಲವರ್ಧನೆಗಾಗಿ ಒಟ್ಟಾಗಿ ಕಾರ್ಯ ನಿರ್ವಹಿಸೋಣ" ಎಂದು ಆಶಿಸಿದ್ದಾರೆ.
Congratulations @GiorgiaMeloni for leading your party @FratellidItalia to victory in the Italian general elections. We look forward to working together to strengthen our ties.
— Narendra Modi (@narendramodi) September 28, 2022