ಸಿ.ಬಿ.ಎಸ್.ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದ 12 ತರಗತಿ ವಿದ್ಯಾರ್ಥಿಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ವಿದ್ಯಾರ್ಥಿಗಳನ್ನು ಯುವ ಸ್ನೇಹಿತರೆಂದು ಸಂಬೋಧಿಸಿರುವ ಅವರು, ಉಜ್ವಲ, ಸಂತಸದ ಮತ್ತು ಆರೋಗ್ಯಕರ ಭವಿಷ್ಯವನ್ನು ಹಾರೈಸಿದ್ದಾರೆ. 

ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಪ್ರಧಾನಮಂತ್ರಿ ಅವರು “ ಸಿ.ಬಿ.ಎಸ್.ಸಿಯ 12 ನೇ ತರಗತಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿರುವ ನನ್ನ ಯುವ ಸ್ನೇಹಿತರಿಗೆ ಅಭಿನಂದನೆಗಳು. ಉಜ್ವಲ, ಸಂತಸದ ಮತ್ತು ಆರೋಗ್ಯಕರ ಭವಿಷ್ಯಕ್ಕಾಗಿ ಶುಭಾಶಯಗಳು“ ಎಂದು  ಹೇಳಿದ್ದಾರೆ.

ತಾವು ಹೆಚ್ಚು ಶ್ರಮವಹಿಸಿರಬಹುದು ಅಥವಾ ಉತ್ತಮ ಪ್ರದರ್ಶನ ನೀಡಿರಬಹುದೆಂದು ಭಾವಿಸಿರುವವರಿಗೆ ನಾನೊಂದು ಮಾತು ಹೇಳುತ್ತೇನೆ – ನಿಮ್ಮ ಅನುಭವದಿಂದ ಕಲಿಯಿರಿ ಮತ್ತು ನಿಮ್ಮ ತಲೆ ಎತ್ತಿ ನಡೆಯಿರಿ. ಉಜ್ವಲ ಮತ್ತು ಅವಕಾಶ ತುಂಬಿದ ಭವಿಷ್ಯ ನಿಮಗಾಗಿ ಕಾಯುತ್ತಿದೆ. ನೀವು ಪ್ರತಿಯೊಬ್ಬರೂ ಪ್ರತಿಭೆಯ ಶಕ್ತಿಯಾಗಿದ್ದೀರಿ. ಸದಾ ಕಾಲ ನಿಮಗೆ ಶುಭ ಕಾಮನೆಗಳು” ಎಂದಿದ್ದಾರೆ.

“ಈ ಬಾರಿ 12 ತರಗತಿ ಮಂಡಳಿ ಪರೀಕ್ಷೆ ಅಸಾಧಾರಣ ಪರಿಸ್ಥಿತಿಯಲ್ಲಿ ನಡೆದಿತ್ತು. ಕಳೆದ ವರ್ಷ ಶೈಕ್ಷಣಿಕ ಜಗತ್ತು ಅನೇಕ ಅನೇಕ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಆದರೂ ಇವರೆಲ್ಲಾ ಈ ವ್ಯವಸ್ಥೆಗೆ ಹೊಂದಿಕೊಂಡರು ಮತ್ತು ಅತ್ಯುತ್ತಮವಾದದ್ದನ್ನು ನೀಡಿದರು. ಅವರ ಬಗ್ಗೆ ನಮಗೆ ಹೆಮ್ಮೆ ಇದೆ” ಎಂದು ಹೇಳಿದ್ದಾರೆ.

 

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
1 in 3 US smartphone imports now made in India, China’s lead shrinks

Media Coverage

1 in 3 US smartphone imports now made in India, China’s lead shrinks
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 26 ಜುಲೈ 2025
July 26, 2025

Citizens Appreciate PM Modi’s Vision of Transforming India & Strengthening Global Ties