ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಅಥ್ಲೀಟ್ ವಿತ್ಯಾ ರಾಮರಾಜ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.
ಭರವಸೆಯ ಪ್ರದರ್ಶನ ನೀಡಿದ 25 ವರ್ಷ ವಯಸ್ಸಿನ ಕ್ರೀಡಾಪಟುವಿನ ದೃಢತೆ ಮತ್ತು ಪರಿಶ್ರಮಕ್ಕಾಗಿ ಪ್ರಧಾನಿ ಶ್ಲಾಘಿಸಿದರು.
ಈ ಸಂಬಂಧ ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನ ಮಂತ್ರಿ ಸಂದೇಶ ನೀಡಿದ್ದಾರೆ.
"ಮಹಿಳೆಯರ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ವಿತ್ಯಾ ರಾಮರಾಜ್ ಅವರಿಗೆ ಅಭಿನಂದನೆಗಳು.
ಆಕೆಯ ದೃಢತೆ ಮತ್ತು ಪರಿಶ್ರಮದಿಂದ ಭರವಸೆಯ ಪ್ರದರ್ಶನ ನೀಡಲು ಸಾಧ್ಯವಾಗಿದೆ. ಆಕೆಯ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು" ಎಂದು ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ.
Congrats to Vithya Ramraj for winning the Bronze medal in Women’s 400m Hurdles event.
— Narendra Modi (@narendramodi) October 3, 2023
Her tenacity and determination has led to this truly promising performance. Best wishes for her future endeavours. pic.twitter.com/RTniT2Mdjz