ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿಶ್ವ ಕುಸ್ತಿ ಚಾಂಪಿಯನ್ ಶಿಪ್ 2021ನಲ್ಲಿ ಬೆಳ್ಳಿ ಪದಕ ಗೆದ್ದ ಅನ್ಶು ಮಲ್ಲಿಕ್ ಮತ್ತು ಕಂಚಿನ ಪದಕ ಜಯಿಸಿರುವ ಸರಿತಾ ಮೋರ್ ಅವರನ್ನು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ: “ವಿಶ್ವ ಕುಸ್ತಿ ಚಾಂಪಿಯನ್ ಶಿಪ್ 2021ನಲ್ಲಿ ಬೆಳ್ಳಿ ಪದಕ ಗದ್ದ ಅನ್ಶು ಮಲ್ಲಿಕ್ ಮತ್ತು ಕಂಚಿನ ಪದಕ ಗೆದ್ದ ಸರಿತಾ ಮೋರ್ ಅವರಿಗೆ ಅಭಿನಂದನೆಗಳು. ಈ ಅಸಾಧಾರಣ ಅಥ್ಲೀಟ್ ಗಳಿಗೆ ಅವರ ಮುಂದಿನ ಕ್ರೀಡಾ ಪ್ರಯತ್ನಗಳಿಗೆ ಶುಭವಾಗಲಿ.” ಎಂದು ಹೇಳಿದ್ದಾರೆ.
Congratulations to @OLyAnshu for winning the Silver and @saritamor3 for winning the Bronze at the World Wrestling Championship 2021. Best wishes to these outstanding athletes for their future endeavours. pic.twitter.com/2HNzheJ6G7
— Narendra Modi (@narendramodi) October 10, 2021