Quote“ಭಾರತ@ 100 ಮಾಮೂಲಿಯಲ್ಲ. ಆ 25 ವರ್ಷಗಳನ್ನು ಒಂದು ಘಟಕದಂತೆ ನೋಡಬೇಕು ಮತ್ತು ಈಗಿನಿಂದಲೇ ಒಂದು ದೂರದೃಷ್ಟಿ ಹೊಂದಬೇಕು. ಈ ವರ್ಷದ ಆಚರಣೆಯು ಪರ್ವಕಾಲವಾಗಬೇಕು’’
Quote“ದೇಶದ ಸಾಮಾನ್ಯ ಜನರ ಜೀವನದಲ್ಲಿ ಬದಲಾವಣೆ ತರಬೇಕಿದೆ, ಅವರ ಜೀವನ ಸುಗಮವಾಗಬೇಕಿದೆ ಮತ್ತು ಆ ನಿರಾಳತೆ ಅವರ ಅನುಭವಕ್ಕೆ ಬರಬೇಕು’’
Quoteಸಾಮಾನ್ಯ ಜನರ “ಸಪ್ನ’(ಕನಸು)ದಿಂದ ಸಂಕಲ್ಪ (ನಿಶ್ಚಯ)ದಿಂದ ‘ಸಿದ್ಧಿ’ (ಸಂಪೂರ್ಣ)ಯ ಪಯಣದಲ್ಲಿ ನಾವು ಪ್ರತಿಯೊಂದು ಹಂತದಲ್ಲೂ ಕೈ ಹಿಡಿಯಬೇಕಿದೆ’’
Quote“ನಾವು ಜಾಗತಿಕ ಮಟ್ಟದ ಚಟುವಟಿಕೆಗಳನ್ನು ಅನುಸರಿಸದಿದ್ದರೆ, ನಮ್ಮ ಆದ್ಯತೆಗಳು ಮತ್ತು ಕೇಂದ್ರೀಕೃತ ವಲಯವನ್ನು ಖಚಿತಪಡಿಸಿಕೊಳ್ಳುವುದು ತುಂಬಾ ಕಷ್ಟಕರವಾಗುತ್ತದೆ. ಆ ದೃಷ್ಟಿಕೋನವನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ನಮ್ಮ ಯೋಜನೆಗಳು ಮತ್ತು ಆಡಳಿತದ ಮಾದರಿಗಳನ್ನು ಅಭಿವೃದ್ಧಿಪಡಿಸಬೇಕಿದೆ’’
Quote“ಸಮಾಜದ ಸಾಮರ್ಥ್ಯವನ್ನು ಪೋಷಿಸುವುದು, ಅನಾವರಣಗೊಳಿಸುವುದು ಮತ್ತು ಬೆಂಬಲಿಸುವುದು ಸರ್ಕಾರಿ ವ್ಯವಸ್ಥೆಯ ಕರ್ತವ್ಯವಾಗಿದೆ’’
Quote“ಆಡಳಿತದಲ್ಲಿ ಸುಧಾರಣೆ ನಮ್ಮ ಸಹಜ ನಿಲುವುವಾಗಿರಬೇಕು”
Quote“ನಮ್ಮ ನಿರ್ಧಾರಗಳಲ್ಲಿ ಸದಾ ‘ರಾಷ್ಟ್ರ ಮೊದಲು’ ಎಂಬ ಮಾಹಿತಿ ನೀಡುತ್ತವೆ’’
Quoteಕೊರತೆಯ ಸಮಯದಲ್ಲಿ ಹೊರಹೊಮ್ಮಿದ ನಿಯಮಗಳು ಮತ್ತು ಮನಸ್ಥಿತಿಯಿಂದ ನಾವು ಆಡಳಿತ ನಡೆಸಬಾರದು, ನಾವು ಸಮೃದ್ಧಿಯ ಮನೋಭಾವ ಹೊಂದಿರಬೇಕು’’
Quote“ನಾನು ರಾಜನೀತಿಯ ಸ್ವಭಾವದವನಲ್ಲ, ಆದರೆ ಸ್ವಾಭಾವಿಕವಾಗಿ ಜನನೀತಿಗೆ ಒಲವು ಹೊಂದಿದ್ದೇನೆ’’

ನಾಗರಿಕ ಸೇವಾ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ವಿಜ್ಞಾನಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆ ತೋರಿದವರಿಗೆ ಪ್ರಧಾನಮಂತ್ರಿಗಳ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಕೇಂದ್ರ ಸಚಿವ ಶ್ರೀ ಜಿತೇಂದ್ರ ಸಿಂಗ್, ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಕೆ. ಮಿಶ್ರಾ, ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ನಾಗರಿಕ ದಿನದಂದು ಎಲ್ಲ ‘ಕರ್ಮಯೋಗಿಗಳಿಗೆ’ ಶುಭಾಶಯ ಕೋರಿದರು. ಅವರು ಆಡಳಿತ ಮತ್ತು ಜ್ಞಾನ ಹಂಚಿಕೆಯಲ್ಲಿ ಸುಧಾರಣೆಯನ್ನು ತರುವ ಸಲಹೆಯೊಂದಿಗೆ ಭಾಷಣ ಆರಂಭಿಸಿದರು. ಪ್ರತಿ ವಾರ ಪ್ರಶಸ್ತಿ ವಿಜೇತರ ಅನುಭವಗಳನ್ನು ಮತ್ತು ಆ ಪ್ರಕ್ರಿಯೆಯ ಕುರಿತು ಎಲ್ಲ ತರಬೇತಿ ಅಕಾಡೆಮಿಗಳು ವರ್ಚುವಲ್ ರೂಪದಲ್ಲಿ ಮಾಹಿತಿಯನ್ನು ಹಂಚಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಎರಡನೆಯದಾಗಿ ಪ್ರಶಸ್ತಿ ವಿಜೇತ ಯೋಜನೆಗಳು ಅಂದರೆ ಒಂದು ಯೋಜನೆಯನ್ನು ಕೆಲವು ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ಆಯ್ಕೆ ಮಾಡಿಕೊಳ್ಳಬೇಕು ಮತ್ತು ಅದರ ಅನುಭವವನ್ನು ಮುಂದಿನ ವರ್ಷದ ನಾಗರಿಕ ಸೇವಾ ದಿನದಂದು ಚರ್ಚೆ ಮಾಡಬಹುದು ಎಂದರು.

 

|

    ಕಳೆದ 20-22 ವರ್ಷಗಳಿಂದ ಮೊದಲು ಮುಖ್ಯಮಂತ್ರಿಯಾಗಿ ಹಾಗೂ ಆನಂತರ ಪ್ರಧಾನಮಂತ್ರಿಯಾಗಿ ನಾಗರಿಕ ಸೇವಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇನೆ ಎಂದು ಪ್ರಧಾನಮಂತ್ರಿಯವರು ನೆನಪಿಸಿಕೊಂಡರು. ಇದು ಪರಸ್ಪರ ಕಲಿಕೆಯ ಅನುಭವವಾಗಿದೆ ಎಂದು ಅವರು ಹೇಳಿದರು. ಆಜಾದಿ ಕಾ ಅಮೃತ ಮಹೋತ್ಸವ ವರ್ಷದಲ್ಲಿ ನಡೆಯುತ್ತಿರುವ ಈ ಆಚರಣೆಗೆ ಅತ್ಯಂತ ಮಹತ್ವವಿದೆ ಎಂದು ಶ್ರೀ ನರೇಂದ್ರ ಮೋದಿ ಪ್ರತಿಪಾದಿಸಿದರು. ಈ ವಿಶೇಷ ವರ್ಷದಲ್ಲಿ ಹಿಂದಿನ ಜಿಲ್ಲಾಧಿಕಾರಿಗಳನ್ನು ಮತ್ತೆ ಜಿಲ್ಲೆಗೆ ಕರೆಸುವಂತೆ ಜಿಲ್ಲಾಧಿಕಾರಿಗಳಿಗೆ ಅವರು ಕರೆ ನೀಡಿದರು. ಇದರಿಂದ ಜಿಲ್ಲೆಗೆ ಹೊಸ ಚೈತನ್ಯ ತುಂಬಲಿದೆ ಮತ್ತು ಜಿಲ್ಲಾಡಳಿತಕ್ಕೆ ಹಿಂದಿನ ಅನುಭವ ಲಭ್ಯವಾಗುವುದರಿಂದ ಉತ್ತಮವಾಗಲಿದೆ. ಅಂತೆಯೇ ರಾಜ್ಯಗಳ ಮುಖ್ಯಮಂತ್ರಿಗಳು ಮಾಜಿ ಮುಖ್ಯ ಕಾರ್ಯದರ್ಶಿಗಳನ್ನು, ಸಂಪುಟ ಕಾರ್ಯದರ್ಶಿಗಳನ್ನು ಕರೆಸಬೇಕು. ಈ ಮಹತ್ವದ ವರ್ಷ ಸ್ವತಂತ್ರ ಭಾರತದ ಪಯಣದಲ್ಲಿ ಗಣನೀಯ ಕೊಡುಗೆ ನೀಡಿದ ಆಡಳಿತ ಯಂತ್ರದ ಧ್ವಜಧಾರಿಗಳ ಸ್ಮರಣಾರ್ಥ ಮತ್ತು ಪ್ರಯೋಜನವನ್ನು ಪಡೆದುಕೊಳ್ಳಬಹುದು. ಆಜಾದಿ ಕಾ ಅಮೃತ ಮಹೋತ್ಸವ ವರ್ಷದಲ್ಲಿ ನಾಗರಿಕ ಸೇವೆಯನ್ನು ಗೌರವಿಸಲು ಇದು ಅತ್ಯಂತ ಸೂಕ್ತ ಮಾರ್ಗವಾಗಿದೆ.

    ಅಮೃತ ಕಾಲ ಕೇವಲ ಒಂದು ಆಚರಣೆಯಲ್ಲ ಅಥವಾ ಹಿಂದಿನದನ್ನು ಶ್ಲಾಘಿಸುವುದಲ್ಲ ಮತ್ತು 75 ರಿಂದ 100 ವರ್ಷದವರೆಗೆ ಮಾಮೂಲಿಯ ಪಯಣವಲ್ಲ ಎಂದು ಅವರು ಹೇಳಿದರು. “ಭಾರತ @ 100 ಮಾಮೂಲಿಯಲ್ಲ, ಈ 25 ವರ್ಷಗಳ ಅವಧಿಯನ್ನು ಒಂದು ಘಟಕವನ್ನಾಗಿ ಪರಿಗಣಿಸಬೇಕು ಮತ್ತು ಈಗಿನಿಂದಲೇ ನಾವು ಆ ನಿಟ್ಟಿನಲ್ಲಿ ಒಂದು ದೂರದೃಷ್ಟಿ ಅಥವಾ ಮುನ್ನೋಟವನ್ನು ಹೊಂದಬೇಕು. ಈ ವರ್ಷದ ಆಚರಣೆ ಪರ್ವಕಾಲವಾಗಬೇಕು. “ ಈ ಮನೋಭಾವದೊಂದಿಗೆ ಪ್ರತಿಯೊಂದು ಜಿಲ್ಲೆಗಳೂ ಮುನ್ನಡೆಬೇಕು, ಆದರೆ ಪ್ರಯತ್ನಗಳನ್ನು ಬಿಡಬಾರದು. 1947ರ ಇದೇ ದಿನ ಸರ್ದಾರ್ ಪಟೇಲ್ ಅವರು ತೋರಿದ ಹಾದಿ, ನೀಡಿದ ಪ್ರತಿಜ್ಞೆಗಳು ಮತ್ತು ನಿರ್ದೇಶನಗಳಿಗೆ ನಮ್ಮನ್ನು ನಾವು ಮರು ಸಮರ್ಪಿಸಿಕೊಳ್ಳಲು ಇದು ಸಕಾಲ ಎಂದು ಪ್ರಧಾನಮಂತ್ರಿ ಹೇಳಿದರು.

|

    ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಮೂರು ಗುರಿಗಳಿಗೆ ಬದ್ಧವಾಗಿರಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಮೊದಲ ಗುರಿ ದೇಶದ ಸಾಮಾನ್ಯ ಜನರ ಬದುಕಿನಲ್ಲಿ ಪರಿವರ್ತನೆಯಾಗಬೇಕು. ಅವರ ಜೀವನ ಸುಲಭವಾಗಬೇಕು ಮತ್ತು ಆದರ ನಿರಾಳತೆಯ ಅನುಭವವೂ ಕೂಡ ಅವರಿಗೆ ತಿಳಿಯಬೇಕು. ಸರ್ಕಾರದೊಂದಿಗಿನ ವ್ಯವಹಾರದಲ್ಲಿ ಜನಸಾಮಾನ್ಯರು ಕಷ್ಟಪಡಬೇಕಾಗಿಲ್ಲ, ಅವರಿಗೆ ತೊಂದರೆ ಇಲ್ಲದೆ ಸವಲತ್ತುಗಳು ಮತ್ತು ಸೇವೆಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಲಭ್ಯವಾಗಬೇಕು. ಸಾಮಾನ್ಯ ಜನರ ಕನಸುಗಳನ್ನು ಅವು ಸಂಕಲ್ಪ ಈಡೇರುವ ಮಟ್ಟಕ್ಕೆ ಕೊಂಡೊಯ್ಯುವುದು ವ್ಯವಸ್ಥೆಯ ಹೊಣೆಗಾರಿಕೆಯಾಗಿದೆ. ಈ ಸಂಕಲ್ಪ(ದೃಢ ನಿಶ್ಚಯ)ವನ್ನು ಸಿದ್ಧಿವರೆಗೆ(ಸಂಪೂರ್ಣಗೊಳಿಸುವುದು) ಕೊಂಡೊಯ್ಯಬೇಕು ಮತ್ತು ನಾವೆಲ್ಲರೂ ಆ ಗುರಿಗಳನ್ನು ಸಾಧನೆ ಮಾಡಬೇಕಿದೆ. ಸಪ್ನ(ಕನಸು)ದಿಂದ ಸಂಕಲ್ಪ(ದೃಢ ನಿಶ್ಚಯ)ದಿಂದ ಸಿದ್ಧಿ ಸಂಪೂರ್ಣಗೊಳಿಸುವವರೆಗೆ ನಾವು ಪ್ರತಿಯೊಂದು ಹಂತದಲ್ಲೂ ನಾವು ಕೈಹಿಡಿದು ಬೆಂಬಲಿಸಬೇಕು” ಎಂದು ಹೇಳಿದರು.  ಭಾರತದ ಸ್ಥಾನಮಾನ ಮತ್ತು ಅದರ ಸ್ವರೂಪ ಬದಲಾಗುತ್ತಿದೆ, ನಾವು ಏನೇ ಮಾಡಿದರು ಅದನ್ನು ಜಾಗತಿಕ ಮಟ್ಟದಲ್ಲಿ ಮಾಡಬೇಕಾಗುತ್ತದೆ. ನಾವು ಜಾಗತಿಕ ಮಟ್ಟದಲ್ಲಿ ಚಟುವಟಿಕೆಗಳನ್ನು ಅನುಸರಿಸದಿದ್ದರೆ ನಮ್ಮ ಆದ್ಯತೆಗಳು ಮತ್ತು ಗಮನಹರಿಸಬೇಕಾದ ಪ್ರದೇಶಗಳನ್ನು ಗುರುತಿಸುವುದು ಕಷ್ಟಕರವಾಗಲಿದೆ. ಈ ದೃಷ್ಟಿಕೋನವನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ನಮ್ಮ ಯೋಜನೆಗಳ ಮತ್ತು ಸರ್ಕಾರದ ಮಾದರಿಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮತ್ತು ಮಾದರಿಗಳು ಆಗಾಗ್ಗೆ ವೇಗವಾಗಿ ಉನ್ನತೀಕರಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ಪ್ರಧಾನಮಂತ್ರಿ, ನಾವು ಕಳೆದ ಶತಮಾನದ ವ್ಯವಸ್ಥೆಯ ಇಂದಿನ ಸವಾಲುಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದರು. ಮೂರನೆಯದಾಗಿ “ವ್ಯವಸ್ಥೆಯಲ್ಲಿ ನಾವು ಎಲ್ಲೇ ಇದ್ದರು, ದೇಶದ ಏಕತೆ ಮತ್ತು ಸಮಗ್ರತೆ ನಮ್ಮ ಪ್ರಾಥಮಿಕ ಹೊಣೆಗಾರಿಕೆಯಾಗಿದೆ. ಇದೇ ಮಾನದಂಡದಲ್ಲಿ ಸ್ಥಳೀಯ ನಿರ್ಧಾರಗಳನ್ನು ಸಹ ಅಳೆಯಲಾಗುತ್ತದೆ. ನಮ್ಮ ಪ್ರತಿಯೊಂದು ನಿರ್ಧಾರಗಳನ್ನೂ ಸಹ ದೇಶದ . ಏಕತೆ ಮತ್ತು ಸಮಗ್ರತೆ ಬಲವರ್ಧನೆ ನಿಟ್ಟಿನಲ್ಲಿ ಮೌಲ್ಯಮಾಪನ ಮಾಡಲಾಗುವುದು. ನಮ್ಮ ನಿರ್ಧಾರಗಳಲ್ಲಿ ಸದಾ ‘ರಾಷ್ಟ್ರ ಮೊದಲು’ ಎನ್ನುವ ಭಾವನೆ ಇರಬೇಕು.

    ಭಾರತದ ಶ್ರೇಷ್ಠ ಸಂಸ್ಕೃತಿ, ನಮ್ಮ ದೇಶ ಕೇವಲ ರಾಜಮನೆತನದ ವ್ಯವಸ್ಥೆ ಮತ್ತು ರಾಜರ ಸಿಂಹಾಸನಗಳಿಗೆ ಸೀಮಿತವಾಗಿಲ್ಲ. ಸಾವಿರಾರು ವರ್ಷಗಳ ನಮ್ಮ ಪರಂಪರೆಯಲ್ಲಿ ಸಾಮಾನ್ಯ ಜನರ ಸಾಮರ್ಥ್ಯಗಳನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಇದು ಕೂಡ ನಮ್ಮ ಪುರಾತನ ವಿವೇಕವನ್ನು ಸಂರಕ್ಷಿಸುವ ಜೊತೆಗೆ ಬದಲಾವಣೆ ಮತ್ತು ಆಧುನಿಕತೆಯನ್ನು ಸ್ವೀಕರಿಸುವ ದೇಶದ ಮನೋಭಾವ ಇದೆ ಎಂದು ಪ್ರಧಾನಮಂತ್ರಿ ಹೇಳಿದರು. ಸಮಾಜದ ಸಾಮರ್ಥ್ಯದಲ್ಲಿ ಸರ್ಕಾರಿ ವ್ಯವಸ್ಥೆಯನ್ನು ಪೋಷಿಸುವುದು, ಬೆಳೆಸುವುದು ಮತ್ತು ಬೆಂಬಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ನವೋದ್ಯಮ ಪೂರಕ ವ್ಯವಸ್ಥೆ ಮತ್ತು ಕೃಷಿಯಲ್ಲಿ ನಡೆಯುತ್ತಿರುವ ಹಲವು ಆವಿಷ್ಕಾರಗಳ ಉದಾಹರಣೆಯನ್ನು ನೀಡಿದ ಅವರು, ಆಡಳಿತಗಾರರು ಅತ್ಯಂತ ಪ್ರಮುಖ ಪೋಷಣಾ ಮತ್ತು ಬೆಂಬಲದ ಪಾತ್ರವನ್ನು ನಿರ್ವಹಿಸುತ್ತಾರೆ ಎಂದರು.

|

ಬೆರಳಚ್ಚುಗಾರರು ಮತ್ತು ಸಿತಾರ್ ವಾದಕರ ನಡುವಿನ ವ್ಯತ್ಯಾಸವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ಅವರು ಶಿಸ್ತಿನ ಜೀವನ ನಡೆಸಬೇಕಾಗಿದೆ. ಕನಸಿನ ಜೀವನ ಮತ್ತು ಅತ್ಯುತ್ತಮ ಉತ್ಸಾಹ ಜೀವನಕ್ಕೆ ಅಗತ್ಯ ಎಂದರು. “ನಾವು ಪ್ರತಿಯೊಂದು ಕ್ಷಣವನ್ನು ಜೀವಿಸಬೇಕು, ಹಾಗಾಗಿ ಬೇರೆಯವರೂ ಕೂಡ ಉತ್ತಮ ರೀತಿಯಲ್ಲಿ ಜೀವನ ನಡೆಸುವುದಕ್ಕೆ ಸಹಾಯ-ಸೇವೆ ಮಾಡಲು ನಾವು ಬಯಸಿದ್ದೇವೆ ಎಂದರು. ಅಧಿಕಾರಿಗಳು ಈಗಾಗಲೇ ಸವೆಸಿರುವ ಪಥವನ್ನು ಬಿಟ್ಟು ಮತ್ತು ಚೌಕಟ್ಟಿನಿಂದಾಚೆ ಯೋಚಿಸಬೇಕು ಎಂದು ಶ್ರೀ ನರೇಂದ್ರ ಮೋದಿ ಕರೆ ನೀಡಿದರು. ಆಡಳಿತದಲ್ಲಿ ಸುಧಾರಣೆಗಳು ಮತ್ತು ನಮ್ಮ ಸ್ವಾಭಾವಿಕ ಸ್ವರೂಪದಲ್ಲಿರಬೇಕು ಎಂದ ಅವರು, ಆಡಳಿತ ಸುಧಾರಣೆಗಳು ದೇಶ ಪ್ರಯೋಗಾತ್ಮಕವಾಗಿರಬೇಕು ಮತ್ತು ದೇಶ ಹಾಗೂ ಸಮಯದ ಅಗತ್ಯಗಳಿಗೆ ತಕ್ಕಂತಿರಬೇಕು. ಹಳೆಯ ಕಾನೂನುಗಳನ್ನು ತಪ್ಪಿಸುವುದು ಮತ್ತು ಅನುಪಾಲನೆ ಮಾಡಬೇಕಾದ ಕಾಯ್ದೆಗಳ ಸಂಖ್ಯೆಯನ್ನು ಇಳಿಕೆ ಮಾಡಿರುವುದು ತಮ್ಮ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿತ್ತು ಎಂದು ಅವರು ಉಲ್ಲೇಖಿಸಿದರು. ನಾವು ಒತ್ತಡದಲ್ಲಿ ಮಾತ್ರ ಬದಲಾಗಬೇಕಿಲ್ಲ, ಆದರೆ ಸಕ್ರಿಯವಾಗಿ ಸುಧಾರಣೆ ನಿಟ್ಟಿನಲ್ಲಿ ಪ್ರಯತ್ನ  ಮಾಡಬೇಕು. ಕೊರತೆಯ ಅವಧಿಯಲ್ಲಿ ಹುಟ್ಟಿಕೊಂಡ ನಿಯಂತ್ರಣಗಳು ಮತ್ತು ಮಾನಸಿಕತೆಯಿಂದ ನಾವು ಆಡಳಿತ ನಡೆಸಬಾರದು. ನಮ್ಮಲ್ಲಿ ಸಾಕಷ್ಟು ಪರಿವರ್ತನೆಗಳು ಆಗಬೇಕಿದೆ. ಅಂತೆಯೇ ಸವಾಲುಗಳಿಗೆ ಕೇವಲ ಪ್ರತಿಕ್ರಿಯಿಸುವುದಷ್ಟೇ ಅಲ್ಲದೆ ಅವುಗಳನ್ನು ನಿರೀಕ್ಷಿಸುವಂತಾಗಬೇಕು. “ಕಳೆದ 8 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಹಲವು ಪ್ರಮುಖ ಸಂಗತಿಗಳು ಘಟಿಸಿದವು. ಹಲವು ಅಭಿಯಾನಗಳು ಮೂಲ ನಡವಳಿಕೆಯಲ್ಲಿ ಬದಲಾವಣೆಗಳನ್ನು ತಂದವು” ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ನಾನು ರಾಜನೀತಿಯ ಸ್ವಭಾವದವನಲ್ಲ, ಆದರೆ ಸ್ವಾಭಾವಿಕವಾಗಿ ಜನನೀತಿಗೆ ಒಲವು ಹೊಂದಿದ್ದೇನೆ’’ ಎಂದರು.

ಅಧಿಕಾರಿಗಳು ತಮ್ಮ ವೈಯಕ್ತಿಕ ಜೀವನದಲ್ಲಿ ಪ್ರಮುಖ ಸುಧಾರಣೆಗಳನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡುವ ಮೂಲಕ ಪ್ರಧಾನಿ ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು. ಉದಾಹರಣೆಗೆ ಸ್ವಚ್ಛತೆ, ಜಿಇಎಂ ಅಥವಾ ಯುಪಿಐ ಬಳಕೆ ಅವರ ಸ್ವಂತ ಜೀವನದಲ್ಲಿ ಇದೆಯೋ ಇಲ್ಲವೋ ಎಂದರು.

ಸಾಮಾನ್ಯ ಪ್ರಜೆಗಳ ಕಲ್ಯಾಣಕ್ಕಾಗಿ ಜಿಲ್ಲೆಗಳು/ಅನುಷ್ಠಾನ ಘಟಕಗಳು ಮತ್ತು ಕೇಂದ್ರ/ರಾಜ್ಯ ಸರ್ಕಾರಿ ಸಂಸ್ಥೆಗಳು ಮಾಡಿದ ಅಸಾಧಾರಣ ಮತ್ತು ನವೀನ ಕಾರ್ಯಗಳನ್ನು ಗುರುತಿಸುವ ದೃಷ್ಟಿಯಿಂದ ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆ ಕುರಿತ ಪ್ರಧಾನಮಂತ್ರಿ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಗುರುತಿಸಲಾದ ಆದ್ಯತೆಯ ಕಾರ್ಯಕ್ರಮಗಳು ಮತ್ತು ನವೀನ ವಿಧಾನಗಳ ಮೂಲಕ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕೆಲಸ ಮಾಡಿದವರಿಗೆ ಪ್ರಶಸ್ತಿ ನೀಡಲಾಗುವುದು.

ಈ ಕೆಳಗಿನ ಐದು ಗುರುತಿಸಲಾದ ಆದ್ಯತೆಯ ಕಾರ್ಯಕ್ರಮಗಳಲ್ಲಿ ಮಾಡಿದ ಅಸಾಧಾರಣ ಕಾರ್ಯಗಳಿಗೆ ಪ್ರಶಸ್ತಿಗಳನ್ನು ನೀಡಲಾಗುವುದು, ಅವುಗಳನ್ನು ನಾಗರಿಕ ಸೇವಾ ದಿನ 2022 ರಂದು ನೀಡಲಾಗುವುದು: ಅವುಗಳೆಂದರೆ (i) “ಜನ ಭಾಗಿದಾರಿ” ಗೆ ಉತ್ತೇಜನ ಅಥವಾ ಪೋಷಣ್  ಅಭಿಯಾನದಲ್ಲಿ ಜನರ ಒಳಗೊಳ್ಳುವಿಕೆ, (ii) ಖೇಲೋ ಇಂಡಿಯಾ ಯೋಜನೆ ಮೂಲಕ ಕ್ರೀಡೆ ಮತ್ತು ಯೋಗಕ್ಷೇಮದಲ್ಲಿ ಉತ್ಕೃಷ್ಟತೆಯನ್ನು ಉತ್ತೇಜಿಸುವುದು (iii) ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಲ್ಲಿ ಡಿಜಿಟಲ್ ಪಾವತಿಗಳು ಮತ್ತು ಉತ್ತಮ ಆಡಳಿತ (iv) ಒಂದು ಜಿಲ್ಲೆ- ಒಂದು ಉತ್ಪನ್ನ ಯೋಜನೆಯ ಮೂಲಕ ಸಮಗ್ರ ಅಭಿವೃದ್ಧಿ, (v) ಮಾನವರ ಮಧ್ಯಪ್ರವೇಶ ವಿಲ್ಲದೆಯೇ ಆರಂಭದಿಂದ ಅಂತ್ಯದಿಂದ ತಡೆರಹಿತ ಸೇವೆಗಳ ವಿತರಣೆ.

ಗುರುತಿಸಲ್ಪಟ್ಟ 5 ಆದ್ಯತಾ ಕಾರ್ಯಕ್ರಮಗಳಿಗೆ ಮತ್ತು ಸಾರ್ವಜನಿಕ ಆಡಳಿತ/ಸೇವೆಗಳ ವಿತರಣೆ ಇತ್ಯಾದಿ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳಿಗೆ ಈ ವರ್ಷ ಒಟ್ಟು 16 ಪ್ರಶಸ್ತಿಗಳನ್ನು ನೀಡಲಾಯಿತು.

 

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

  • Jitender Kumar BJP Haryana State MP January 11, 2025

    BJP National 🙏
  • Jayanta Kumar Bhadra June 15, 2022

    Jay Jai Ram
  • Jayanta Kumar Bhadra June 15, 2022

    Jay Sri Ganesh
  • Jayanta Kumar Bhadra June 15, 2022

    Jay Sree Ram
  • జాతకం చెప్పబడును వశీకరణం చేయబడును ➏➌⓿⓿➋➋➑⓿➋➌Callme May 28, 2022

    ❤️❤️
  • జాతకం చెప్పబడును వశీకరణం చేయబడును ➏➌⓿⓿➋➋➑⓿➋➌Callme May 28, 2022

    『ఉచిత』 『జ్యోతిష్యం』 『చెప్పబడును』 『{6300228023}☎మీరు』 『ఎన్నో』 『సమస్యలతో』 『బాధపడుతున్నట్లైతే』 『』 『』 『ఒకసారి』 『గురువు』 『గారిని』 『సంప్రదించండి』 『మీ』 『యొక్క』 『సమస్యలకు』 『ఎటువంటి』 『పరిష్కారమైన』 『ఫోన్లోనే』 『చెప్పబడును,📲{6300228023}[☎ఇంకా』 『స్త్రీ』 『పురుష』 『వశీకరణం』
  • G.shankar Srivastav May 27, 2022

    नमो
  • Chowkidar Margang Tapo May 23, 2022

    vande mataram jai BJP.
  • Sanjay Kumar Singh May 14, 2022

    Jai Shri Laxmi Narsimh
  • ranjeet kumar May 10, 2022

    omm
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'India is our top performing market in the world': Blackstone CEO Stephen Schwarzman

Media Coverage

'India is our top performing market in the world': Blackstone CEO Stephen Schwarzman
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 13 ಮಾರ್ಚ್ 2025
March 13, 2025

Viksit Bharat Unleashed: PM Modi’s Policies Power India Forward