ಡೊಮಿನಿಕಾಗೆ ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ನೀಡಿದ ಬೆಂಬಲ ಹಾಗೂ ಭಾರತ ಮತ್ತು ಡೊಮಿನಿಕಾ ಬಾಂಧವ್ಯವನ್ನು ಬಲಪಡಿಸುವ ಬದ್ಧತೆಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕಾಮನ್ವೆಲ್ತ್ ಆಫ್ ಡೊಮಿನಿಕಾದ ಅಧ್ಯಕ್ಷರಾದ ಗೌರವಾನ್ವಿತ ಸಿಲ್ವಾನಿ ಬರ್ಟನ್ ಅವರು ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ "ಡೊಮಿನಿಕಾ ಅವಾರ್ಡ್ ಆಫ್ ಆನರ್ (ಗೌರವ ಪ್ರಶಸ್ತಿ)" ಯನ್ನು ನೀಡಿ ಗೌರವಿಸಿದರು. ಡೊಮಿನಿಕಾದ ಪ್ರಧಾನಿ ಶ್ರೀ.ರೂಸ್ವೆಲ್ಟ್ ಸ್ಕೆರಿಟ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗಯಾನಾ ಅಧ್ಯಕ್ಷ ಡಾ. ಇರ್ಫಾನ್ ಅಲಿ, ಬಾರ್ಬಡೋಸ್ ಪ್ರಧಾನಿ ಮಿಯಾ ಅಮೋರ್ ಮೊಟ್ಲಿ, ಗ್ರೆನಡಾದ ಪ್ರಧಾನಿ ಶ್ರೀ ಡಿಕಾನ್ ಮಿಚೆಲ್, ಸೇಂಟ್ ಲೂಸಿಯಾ ಪ್ರಧಾನಿ ಫಿಲಿಪ್ ಜೆ. ಪೈರ್ರೆ ಹಾಗೂ ಆಂಟಿಗುವಾ ಮತ್ತು ಬಾರ್ಬುಡಾದ ಪ್ರಧಾನಿ ಶ್ರೀ ಗ್ಯಾಸ್ಟನ್ ಬ್ರೌನೆ ಅವರು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಾಕ್ಷಿಯಾದರು.
ಪ್ರಧಾನಮಂತ್ರಿಯವರು ಈ ಗೌರವವನ್ನು ಭಾರತದ ಜನತೆಗೆ ಹಾಗೂ ಭಾರತ ಮತ್ತು ಡೊಮಿನಿಕಾ ನಡುವಿನ ಆಳವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳಿಗೆ ಸಮರ್ಪಿಸಿದರು. ಮುಂದಿನ ವರ್ಷಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯಾಗಲಿದೆ ಮತ್ತು ಗಾಢವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಗಯಾನಾದ ಜಾರ್ಜ್ಟೌನ್ ನಲ್ಲಿ ನಡೆದ ಎರಡನೇ ಭಾರತ-ಕ್ಯಾರಿಕಾಮ್ ಶೃಂಗಸಭೆಯ ನೇಪಥ್ಯದಲ್ಲಿ 2024ರ ನವೆಂಬರ್ 20 ರಂದು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
Gratitude to President Sylvanie Burton of Dominica for conferring the 'Dominica Award of Honour' upon me. This honour is dedicated to my sisters and brothers of India. It is also indicative of the unbreakable bond between our nations. pic.twitter.com/Ro27fpSyr3
— Narendra Modi (@narendramodi) November 20, 2024