ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಕೈಗಾರಿಕಾ ಜಗತ್ತಿನಲ್ಲಿ ಬೃಹತ್ ವ್ಯಕ್ತಿ, ಶಕ್ತಿಯಾಗಿದ್ದ ಶ್ರೀ ಶಶಿಕಾಂತ್ ರೂಯಾ ಜೀ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ನಾವಿನ್ಯತೆ ಮತ್ತು ಬೆಳವಣಿಗೆಗೆ ಉನ್ನತ ಮಾನದಂಡಗಳ ಸೃಷ್ಟಿಗಾಗಿ ಶ್ರೀ ಮೋದಿಯವರು ಅವರನ್ನು ಶ್ಲಾಘಿಸಿದ್ದಾರೆ.
Xನ ಪೋಸ್ಟ್ ನಲ್ಲಿ, ಶ್ರೀ ಮೋದಿಯವರು:
"ಶ್ರೀ ಶಶಿಕಾಂತ್ ರುಯಾ ಜಿ ಅವರು ಕೈಗಾರಿಕಾ ಜಗತ್ತಿನಲ್ಲಿ ಬೃಹತ್ ವ್ಯಕ್ತಿಯಾಗಿದ್ದವರು. ಅವರ ದೂರದೃಷ್ಟಿಯ ನಾಯಕತ್ವ ಮತ್ತು ಉತ್ಕೃಷ್ಟತೆಗೆ ಅವರ ಅಚಲ ಬದ್ಧತೆಯು ಭಾರತದ ವ್ಯವಹಾರಗಳ ದಿಕ್ಕನ್ನೇ ಪರಿವರ್ತಿಸಿತು. ಅವರು ನಾವೀನ್ಯತೆ ಮತ್ತು ಬೆಳವಣಿಗೆಗೆ ಉನ್ನತ ಮಾನದಂಡಗಳನ್ನು ಸೃಷ್ಟಿಸಿದರು. ಅವರು ಸದಾ ಆಲೋಚನೆಗಳಿಂದ ತುಂಬಿದ್ದು, ನಮ್ಮ ದೇಶವನ್ನು ಹೇಗೆ ಉತ್ತಮಗೊಳಿಸಬಹುದು ಎಂದು ಯಾವಾಗಲೂ ಚರ್ಚಿಸುತ್ತಿದ್ದರು.
ಶಶಿ ಜಿ ಅವರ ನಿಧನವು ನನಗೆ ತೀವ್ರ ದುಃಖ ತಂದಿದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಆಳವಾದ ಸಂತಾಪಗಳು. ಅವರಿಗೆ ದೇವರು ಶಶಿ ಜಿಯವರ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೆನೆ. ಓಂ ಶಾಂತಿ" ಎಂದು ಬರೆದಿದ್ದಾರೆ.
Shri Shashikant Ruia Ji was a colossal figure in the world of industry. His visionary leadership and unwavering commitment to excellence transformed the business landscape of India. He also set high benchmarks for innovation and growth. He was always full of ideas, always… pic.twitter.com/2Dwb2TdyG9
— Narendra Modi (@narendramodi) November 26, 2024