ಖ್ಯಾತ ಪಿಟೀಲು ವಾದಕ ಶ್ರೀ ಟಿ.ಎನ್.ಕೃಷ್ಣನ್ ಅವರ ನಿಧನಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
"ಹೆಸರಾಂತ ಪಿಟೀಲು ವಾದಕ ಶ್ರೀ ಟಿ.ಎನ್. ಕೃಷ್ಣನ್ ಅವರ ನಿಧನವು ಸಂಗೀತ ಜಗತ್ತಿನಲ್ಲಿ ಒಂದು ದೊಡ್ಡ ಶೂನ್ಯವನ್ನು ಉಂಟುಮಾಡಿದೆ. ಅವರ ಕೃತಿಗಳಲ್ಲಿ ನಮ್ಮ ಸಂಸ್ಕೃತಿಯ ವ್ಯಾಪಕವಾದ ಭಾವನೆಗಳು ಮತ್ತು ತಂತುಗಳು ಸುಂದರವಾಗಿ ಅಡಕವಾಗಿವೆ. ಅವರು ಯುವ ಸಂಗೀತಗಾರರಿಗೆ ಅತ್ಯುತ್ತಮ ಮಾರ್ಗದರ್ಶಕರಾಗಿದ್ದರು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ. " ಎಂದು ಪ್ರಧಾನಿ ತಿಳಿಸಿದ್ದಾರೆ.
The demise of noted violinist Shri TN Krishnan leaves a big void in the world of music. His works beautifully encapsulated a wide range of emotions and strands of our culture. He was also an outstanding mentor to young musicians. Condolences to his family and admirers. Om Shanti.
— Narendra Modi (@narendramodi) November 3, 2020