ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಭಾರತ ರತ್ನ ಮಹಾಮನ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಮೊಮ್ಮಗ ಶ್ರೀ ಗಿರಿಧರ್ ಮಾಳವೀಯ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಗಂಗಾ ಸ್ವಚ್ಛತಾ ಅಭಿಯಾನ ಮತ್ತು ಶಿಕ್ಷಣ ಜಗತ್ತಿಗೆ ಶ್ರೀ ಗಿರಿಧರ್ ಮಾಳವೀಯ ಅವರ ಕೊಡುಗೆಯನ್ನು ಶ್ರೀ ಮೋದಿಯವರು ಶ್ಲಾಘಿಸಿದ್ದಾರೆ.
Xನಲ್ಲಿ ಪೋಸ್ಟ್ ಮಾಡಿ, ಮೋದಿಯವರು:
"ಭಾರತ ರತ್ನ ಮಹಾಮನ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಮೊಮ್ಮಗ ಗಿರಿಧರ್ ಮಾಳವೀಯ ಜಿ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ನಿಧನವು ಶಿಕ್ಷಣ ಜಗತ್ತಿಗೆ ಮತ್ತು ಇಡೀ ದೇಶಕ್ಕೆ ಭರಿಸಲಾಗದ ನಷ್ಟವಾಗಿದೆ. ಗಂಗಾ ಶುದ್ಧೀಕರಣ ಅಭಿಯಾನಕ್ಕೆ ಅವರು ನೀಡಿದ ಕೊಡುಗೆಯು ಸದಾ ನೆನಪಿನಲ್ಲಿರುತ್ತದೆ. ನ್ಯಾಯಾಂಗ ಸೇವೆಯಲ್ಲಿ ತಮ್ಮ ಕೆಲಸದ ಮೂಲಕ ಅವರು ತಮ್ಮದೇ ಆದ ವಿಭಿನ್ನ ಗುರುತನ್ನು ಉಳಿಸಿಕೊಂಡಿದ್ದಾರೆ. ಅವರನ್ನು ಹಲವಾರು ಬಾರಿ ಖಾಸಗಿಯಾಗಿ ಭೇಟಿಯಾಗುವ ಸದವಕಾಶ ನನಗೆ ದೊರಕಿದೆ. 2014 ಮತ್ತು 2019ರಲ್ಲಿ, ಅವರು ನನ್ನ ಸಂಸದೀಯ ಕ್ಷೇತ್ರವಾದ ವಾರಣಾಸಿಯ ಪ್ರಸ್ತಾಪಕರಾಗಿದ್ದರು, ಅದನ್ನು ಎಂದಿಗೂ ನಾನು ಮರೆಯಲಾರೆ. ಈ ದುಃಖದ ಸಮಯದಲ್ಲಿ ದೇವರು ಅವರ ಕುಟುಂಬಕ್ಕೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಓಂ ಶಾಂತಿ!" ಎಂದು ಹೇಳಿದ್ದಾರೆ.
भारत रत्न महामना पंडित मदन मोहन मालवीय जी के प्रपौत्र गिरिधर मालवीय जी के निधन से अत्यंत दुख हुआ है। उनका जाना शिक्षा जगत के साथ-साथ पूरे देश के लिए एक अपूरणीय क्षति है। गंगा सफाई अभियान में उनके योगदान को हमेशा याद किया जाएगा। न्यायिक सेवा में अपने कार्यों से भी उन्होंने अपनी एक…
— Narendra Modi (@narendramodi) November 18, 2024