ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ವಾಜಪೇಯಿ ಅವರ ದೀರ್ಘಕಾಲದ ಸಹಾಯಕ ಶ್ರೀ ಶಿವಕುಮಾರ್ ಪಾರೀಕ್ ಅವರ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ,
"ಶ್ರೀ ಶಿವಕುಮಾರ್ ಪಾರೀಕ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ನಮ್ಮ ಪಕ್ಷದ ಸಿದ್ಧಾಂತದಲ್ಲಿ ದೃಢವಾಗಿ ಬೇರೂರಿದ್ದ ಅವರು ಸೇವೆ, ರಾಷ್ಟ್ರ ನಿರ್ಮಾಣ ಮತ್ತು ಅಟಲ್ ಜೀ ಅವರೊಂದಿಗೆ ನಿಕಟವಾಗಿ ತೊಡಗಿಸಿಕೊಂಡಿದ್ದರು. ಹಲವು ವರ್ಷಗಳಲ್ಲಿ ಅವರೊಂದಿಗಿನ ನನ್ನ ಪ್ರೀತಿಯ ಒಡನಾಟದಿಂದ ಸಂತುಷ್ಟನಾಗಿದ್ದೇನೆ. ಅವರ ಕುಟುಂಬಕ್ಕೆ ಸಂತಾಪಗಳು. ಓಂ ಶಾಂತಿ," ಎಂದಿದ್ದಾರೆ.
Saddened by the passing away of Shri Shiv Kumar Pareek Ji. Firmly rooted in our Party’s ideology, he devoted himself to service, nation building and worked closely with Atal Ji. Will cherish my interactions with him over the years. Condolences to his family. Om Shanti.
— Narendra Modi (@narendramodi) March 6, 2022