ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿಕ್ಕಿಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿರುವ ಸೇನಾ ಸಿಬ್ಬಂದಿಗಳ ಜೀವಹಾನಿಗೆ ಸಂತಾಪ ಸೂಚಿಸಿದ್ದಾರೆ. ರಸ್ತೆ ಅಪಘಾತದಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಧಾನಮಂತ್ರಿ ಶ್ರೀ ಮೋದಿಯವರು ಹಾರೈಸಿದ್ದಾರೆ.
ಪ್ರಧಾನಿ ಕಾರ್ಯಾಲಯವು ಟ್ವೀಟ್ ಮಾಡಿದ್ದು ಹೀಗೆ ;
"ಸಿಕ್ಕಿಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದಾಗಿ ನಮ್ಮ ವೀರ ಸೇನಾ ಸಿಬ್ಬಂದಿಯ ಪ್ರಾಣಹಾನಿಯಿಂದ ಮನಸಿಗೆ ನೋವಾಗಿದೆ. ಮೃತ ಸೇನಾನಿಗಳ ದುಃಖತಪ್ತ ಕುಟುಂಬಗಳಿಗೆ ಸಂತಾಪ ಸಲ್ಲಿಸಿರುವ ಪ್ರಧಾನಿಗಳು, ಅಪಘಾತದಿಂದ ಗಾಯಗೊಂಡಿರುವ ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
Pained by the loss of lives of our brave army personnel due to a road mishap in Sikkim. Condolences to the bereaved families. May the injured recover soon: PM @narendramodi
— PMO India (@PMOIndia) December 23, 2022