ಗಣಿತಶಾಸ್ತ್ರಜ್ಞ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ಆರ್. ಎಲ್. ಕಶ್ಯಪ್ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು;
"ಶ್ರೀ ಆರ್.ಎಲ್. ಕಶ್ಯಪ್ ಅವರು ಬಹುಮುಖ ವ್ಯಕ್ತಿತ್ವದ ಶ್ರೇಷ್ಠ ವಿದ್ವಾಂಸರಾಗಿದ್ದರು. ಅವರು ಗಣಿತ ಮತ್ತು ವೈಜ್ಞಾನಿಕ ಜ್ಞಾನದ ಗಣಿಯಾಗಿದ್ದರು. ಅವರು ಭಾರತದ ಸಾಂಸ್ಕೃತಿಕ ಬೇರುಗಳ ಬಗ್ಗೆ ಅಪಾರ ಹೆಮ್ಮೆಹೊಂದಿದ್ದರು ಮತ್ತು ವೇದಾಧ್ಯಯನದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಕುಟುಂಬ ವರ್ಗಕ್ಕೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ." ಎಂದು ತಿಳಿಸಿದ್ದಾರೆ.
Shri RL Kashyap was a multifaceted personality and great scholar. He was blessed with rich mathematical and scientific knowledge. He was very proud of India’s cultural roots and distinguished himself in Vedic studies. Pained by his demise. Condolences to his family. Om Shanti. pic.twitter.com/NE1k9Fvitv
— Narendra Modi (@narendramodi) November 12, 2022
ಶ್ರೀ ಆರ್.ಎಲ್.ಕಶ್ಯಪ್ ಅವರು ಬಹುಮುಖ ವ್ಯಕ್ತಿತ್ವದವರು ಮತ್ತು ಶ್ರೇಷ್ಠ ವಿದ್ವಾಂಸರು. ಅವರಿಗೆ ಗಣಿತ ಮತ್ತು ವೈಜ್ಞಾನಿಕ ಜ್ಞಾನ ಶ್ರೀಮಂತಿಕೆಯ ಅನುಗ್ರಹವಿತ್ತು. ಅವರು ಭಾರತದ ಸಾಂಸ್ಕೃತಿಕ ಬೇರುಗಳ ಬಗ್ಗೆ ಬಹಳ ಹೆಮ್ಮೆಪಡುತ್ತಿದ್ದರು ಮತ್ತು ವೈದಿಕ ಅಧ್ಯಯನದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡರು. pic.twitter.com/viw1F8QKH5
— Narendra Modi (@narendramodi) November 12, 2022