ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಸಾವಯವ ಕೃಷಿಯಲ್ಲಿ ಅಪಾರ ಸಾಧನೆ ಮಾಡಿರುವ ರೈತ ನಾಯಕಿ ಶ್ರೀಮತಿ ಪಪ್ಪಮ್ಮಾಳ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶ್ರೀಮತಿ ಪಪ್ಪಮ್ಮಾಳ್ ಕೃಷಿ ಕ್ಷೇತ್ರದಲ್ಲಿ ಅದರಲ್ಲೂ ಸಾವಯವ ಕೃಷಿಯಲ್ಲಿ ಛಾಪು ಮೂಡಿಸಿದ್ದಾರೆ. ಅವರ ವಿನಮ್ರತೆ ಮತ್ತು ದಯೆ ಗುಣವನ್ನು ಜನರು ಬಹಳ ಮೆಚ್ಚಿಕೊಂಡಿದ್ದರು ಎಂದು ಪ್ರಧಾನಮಂತ್ರಿ ಹೇಳಿಕೊಂಡಿದ್ದಾರೆ.
ಈ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು;
"ಪಪ್ಪಮ್ಮಾಳ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ನೋವಾಗಿದೆ. ಕೃಷಿಯಲ್ಲಿ ಅದರಲ್ಲೂ ಸಾವಯವ ಕೃಷಿಯಲ್ಲಿ ಅವರು ಛಾಪು ಮೂಡಿಸಿದ್ದರು. ಅವರ ವಿನಮ್ರ ಮತ್ತು ದಯಾಗುಣದಿಂದ ಜನರಿಗೆ ಬಹಳ ಹತ್ತಿರವಾಗಿದ್ದರು. ಅವರ ನಿಧನದ ಈ ಸಮಯದಲ್ಲಿ ಅವರ ಕುಟುಂಬ ಮತ್ತು ಹಿತೈಷಿಗಳಿಗೆ ನನ್ನ ಸಂತಾಪಗಳನ್ನು ಹೇಳುತ್ತೇನೆ. ಓಂ ಶಾಂತಿ.” ಎಂದು ಬರೆದಿದ್ದಾರೆ.
Deeply pained by the passing away of Pappammal Ji. She made a mark in agriculture, especially organic farming. People admired her for her humility and kind nature. My thoughts are with her family and well wishers. Om Shanti. pic.twitter.com/3JR9LqlMmB
— Narendra Modi (@narendramodi) September 27, 2024