ಪ್ರಗತಿಪರ ಲಿಂಗತ್ವ ನೀತಿಗಳನ್ನು ಅಳವಡಿಸಿಕೊಂಡಿದ್ದಕ್ಕಾಗಿ ನಾಗಾಲ್ಯಾಂಡ್ ನ ವಾನ್ಸೋಯ್ ಗ್ರಾಮದ ಜನರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ರಾಜ್ಯಸಭಾ ಸಂಸದೆ ಶ್ರೀಮತಿ ಎಸ್.ಫಾಂಗ್ನಾನ್ ಕೊನ್ಯಾಕ್ ಅವರು ಟ್ವೀಟ್ ನಲ್ಲಿ, ವಾನ್ಸೋಯ್ ನ ಮಹಿಳೆಯರಿಗೆ ಮೊರುಂಗ್ (ಪುರುಷರ ಡಾರ್ಮೆಟರಿ-ಬಿದಿರು ಬಳಸಿ ಕಟ್ಟಿದ ಸಾಂಪ್ರದಾಯಿಕ ಕಟ್ಟಡ) ಪ್ರವೇಶಿಸಲು ಮತ್ತು ಮೊದಲ ಬಾರಿಗೆ ಲಾಗ್ಡ್ರಮ್ (ಮರದಲ್ಲಿ ಮಾಡಿದ ಡ್ರಮ್ )ಆಡಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇಲ್ಲಿಯವರೆಗಿನ ಸಂಪ್ರದಾಯದಲ್ಲಿ ಮಹಿಳೆಯರಿಗೆ ಮೊರುಂಗ್ ಒಳಗೆ ಕಾಲಿಡಲು ಸಹ ಅವಕಾಶ ನೀಡುತ್ತಿರಲಿಲ್ಲ.
ಸಂಸದರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿ ಅವರು;
"ಇದು ಬಹಳ ಮುಖ್ಯವಾದ ಹೆಜ್ಜೆ, ಇದು ಮಹಿಳೆಯರ ಘನತೆ ಮತ್ತು ಸಬಲೀಕರಣಕ್ಕೆ ಉತ್ತೇಜನ ನೀಡುತ್ತದೆ. ವಾನ್ಸೋಯಿ ಗ್ರಾಮದ ಜನರಿಗೆ ಅಭಿನಂದನೆಗಳು” ಎಂದು ಹೇಳಿದ್ದಾರೆ. .
A very important step, which will give a boost to dignity and empowerment of women. Compliments to the people of Wansoi village. https://t.co/BBLzvgnnAH
— Narendra Modi (@narendramodi) April 15, 2023