ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಏಷ್ಯನ್ ಗೇಮ್ಸ್ ನಲ್ಲಿ ಪುರುಷರ ಟ್ರ್ಯಾಪ್ ವೈಯಕ್ತಿಕ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಕಿನಾನ್ ಚೆನೈ ಅವರನ್ನು ಶ್ಲಾಘಿಸಿದ್ದಾರೆ.
ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಈ ಸಂಬಂಧ ಹಂಚಿಕೊಂಡಿದ್ದಾರೆ;
"@kynanchenai ಯಶಸ್ಸಿನಿಂದ ಸಂತೋಷವಾಗಿದೆ. ಅವರು ಪುರುಷರ ಟ್ರ್ಯಾಪ್ ವೈಯಕ್ತಿಕ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು. ಅವರು ಅತ್ಯುತ್ತಮ ಕೌಶಲ್ಯ ಮತ್ತು ದೃಢನಿಶ್ಚಯವನ್ನು ತೋರಿಸಿದ್ದಾರೆ. ಅವರ ಯಶಸ್ಸಿನಿಂದಾಗಿ, ಮುಂಬರುವ ಅನೇಕ ಶೂಟರ್ ಗಳು ಪ್ರೇರೇಪಿಸಲ್ಪಡುತ್ತಾರೆ,’’ಎಂದು ತಿಳಿಸಿದ್ದಾರೆ.
Delighted at the success of @kynanchenai. He wins the Bronze Medal in Men’s Trap Individual Shooting event. He has shown outstanding skill and determination. Due to his success, many upcoming shooters will be motivated. pic.twitter.com/cPFWJ01Rfr
— Narendra Modi (@narendramodi) October 1, 2023