ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಇಂದು 2020 ನೇ ಸಾಲಿನ ಪ್ರಥಮ PRAGATI ಸಭೆಯ ಅಧ್ಯಕ್ಷತೆ ವಹಿಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒಳಗೊಂಡ, ಸಕಾಲದಲ್ಲಿ ಅನುಷ್ಠಾನ ಮತ್ತು ಸಕಾರಾತ್ಮಕ ಆಡಳಿತಕ್ಕಾಗಿ ಐಸಿಟಿ ಆಧಾರಿತ ಬಹು ಮಾದರಿ ವೇದಿಕೆಯಾದ ಪ್ರಗತಿಯ ಮೂಲಕ ಪ್ರಧಾನ ಮಂತ್ರಿಗಳ 32 ನೇ ಸಂವಾದವನ್ನು ಇದು ಬಿಂಬಿಸಿತು.
ಇಂದಿನ PRAGATI ಸಭೆಯಲ್ಲಿ ವಿಳಂಬವಾದ 9 ಯೋಜನೆಗಳೂ ಒಳಗೊಂಡಂತೆ ಒಟ್ಟು 11 ವಿಷಯಗಳ ಕುರಿತು ಪ್ರಧಾನ ಮಂತ್ರಿಗಳು ಚರ್ಚಿಸಿದರು. ಮೂರು ಕೇಂದ್ರಾಡಳಿತ ಸಚಿವಾಲಯ ಸೇರಿದಂತೆ ಒಡಿಶಾ, ತೆಲಂಗಾಣ, ಮಹಾರಾಷ್ಟ್ರ, ಜಾರ್ಖಂಡ್, ಬಿಹಾರ್, ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಮತ್ತು ಉತ್ತರ ಪ್ರದೇಶ ಈ 9 ರಾಜ್ಯಗಳಲ್ಲಿ 24,000 ಕೋಟಿ ರೂಪಾಯಿ ವೆಚ್ಚದ ಈ 9 ಯೋಜನೆಗಳು ವ್ಯಾಪಿಸಿವೆ. ಇವುಗಳಲ್ಲಿ ರೈಲ್ವೇ ಸಚಿವಾಲಯದಿಂದ ಮೂರು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಐದು ಮತ್ತು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದಿಂದ ಒಂದು ಸೇರಿವೆ.
ವಿಮಾ ಯೋಜನೆಯಡಿ ಪ್ರಗತಿ – ಪಿಎಂಜೆಜೆಬಿವೈ ಮತ್ತು ಪಿಎಂಎಸ್ ಬಿ ವೈ ಯೋಜನೆಗಳ ಪರಿಶೀಲನೆ
ಪ್ರಧಾನ ಮಂತ್ರಿಯವರು ಈ ಸಭೆಯಲ್ಲಿ “ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮೆ ಯೋಜನೆ” (ಪಿಎಂಜೆಜೆಬಿವೈ) “ಪ್ರಧಾನ ಮಂತ್ರಿ ಸುರಕ್ಷಾ ವಿಮೆ ಯೋಜನೆ” (ಪಿಎಂಎಸ್ ಬಿ ವೈ) ಮುಂತಾದ ಯೋಜನೆಗಳ ಕುಂದು ಕೋರತೆಗಳ ವಿಷಯಗಳಿಗೆ ಸಂಬಂಧಿಸಿದಂತೆ ಹಣಕಾಸು ಸೇವೆಗಳ ಲಾಖೆಯ ಅಡಿಯಲ್ಲಿ ಬರುವಂತಹ ವಿಮಾ ಯೋಜನೆಗಳ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿದರು.
ಪ್ರಧಾನ ಮಂತ್ರಿಯವರು ಈ – ಆಡಳಿತದ ಮೂಲಕ ಪರಿಣಾಮಕಾರಿ ಪೋಲಿಸಿಂಗ್ ಗಾಗಿ ಸಂಯೋಜಿತ ವ್ಯವಸ್ಥೆಯ ಯೋಜನೆಯನ್ನು ಅಪರಾಧ ಮತ್ತು ಅಪರಾಧಿಗಳನ್ನು ಪತ್ತೆಹಚ್ಚುವ ಜಾಲ ಹಾಗೂ ವ್ಯವಸ್ಥೆಗಳು (ಸಿಸಿಟಿಎನ್ ಎಸ್) ನ ಪ್ರಗತಿಯ ಅವಲೋಕನಗೈದರು.
ಹಿಂದಿನ 31 PRAGATI ಸಂವಾದಗಳಲ್ಲಿ, ಪ್ರಧಾನ ಮಂತ್ರಿಗಳು ಒಟ್ಟು 12.30 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯ ಒಟ್ಟು 269 ಯೋಜನೆಗಳನ್ನು ಪರಿಶೀಲಿಸಿದ್ದಾರೆ. 17 ವಿಭಿನ್ನ ವಿಭಾಗಗಳ ಯೋಜನೆಗಳ ಮತ್ತು 47 ಸರ್ಕಾರೀ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಕುಂದುಕೊರತೆ ನಿವಾರಣೆಯ ಪರಿಹಾರಗಳನ್ನೂ ಕೂಡಾ ಪ್ರಧಾನ ಮಂತ್ರಿಯವರು ಪರಿಶೀಲಿಸಿದ್ದಾರೆ.