ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಲೋಕ ಕಲ್ಯಾಣ ಮಾರ್ಗದ 7 ರಲ್ಲಿರುವ ತಮ್ಮ ನಿವಾಸದಲ್ಲಿ ಅರೆವಾಹಕ (ಸೆಮಿ ಕಂಡಕ್ಟರ್ ) ಕಾರ್ಯನಿರ್ವಾಹಕರ ದುಂಡುಮೇಜಿನ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಕಾರ್ಯನಿರ್ವಾಹಕರ ವಿಚಾರಗಳು ಅವರ ವ್ಯವಹಾರವನ್ನು ರೂಪಿಸುವುದಲ್ಲದೆ ಭಾರತದ ಭವಿಷ್ಯವನ್ನೂ ರೂಪಿಸುತ್ತವೆ ಎಂದರು. ಮುಂಬರುವ ಸಮಯವು ತಂತ್ರಜ್ಞಾನ ಚಾಲಿತವಾಗಲಿದೆ ಎಂಬುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಅರೆವಾಹಕವು ಡಿಜಿಟಲ್ ಯುಗದ ಮೂಲಾಧಾರವಾಗಿದೆ ಮತ್ತು ಅರೆವಾಹಕ ಉದ್ಯಮವು ನಮ್ಮ ಮೂಲಭೂತ ಅಗತ್ಯಗಳಿಗೆ ಸಹ ಅಡಿಪಾಯವಾಗುವ ದಿನ ದೂರವಿಲ್ಲ ಎಂದೂ ಹೇಳಿದರು.
ಪ್ರಜಾಪ್ರಭುತ್ವ ಮತ್ತು ತಂತ್ರಜ್ಞಾನ ಒಗ್ಗೂಡಿದರೆ ಮಾನವೀಯತೆಯ ಕಲ್ಯಾಣವನ್ನು ಖಚಿತಪಡಿಸಬಹುದು ಮತ್ತು ಅರೆವಾಹಕ ವಲಯದಲ್ಲಿ ತನ್ನ ಜಾಗತಿಕ ಜವಾಬ್ದಾರಿಯನ್ನು ಗುರುತಿಸಿ ಭಾರತವು ಈ ಹಾದಿಯಲ್ಲಿ ಮುಂದುವರಿಯುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು.
ಸಾಮಾಜಿಕ, ಡಿಜಿಟಲ್ ಮತ್ತು ಭೌತಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು, ಅಂತರ್ಗತ ಅಭಿವೃದ್ಧಿಗೆ ಉತ್ತೇಜನ ನೀಡುವುದು, ಅನುಸರಣೆಯ ಹೊರೆಯನ್ನು ಕಡಿಮೆ ಮಾಡುವುದು ಮತ್ತು ಉತ್ಪಾದನೆ ಹಾಗು ನಾವೀನ್ಯತೆಗಳಲ್ಲಿ ಹೂಡಿಕೆಯನ್ನು ಆಕರ್ಷಿಸುವುದು ಸೇರಿದಂತೆ ಅಭಿವೃದ್ಧಿಯ ಸ್ತಂಭಗಳ ಬಗ್ಗೆ ಪ್ರಧಾನಿ ಮಾತನಾಡಿದರು. ವೈವಿಧ್ಯಮಯ ಅರೆವಾಹಕ ಪೂರೈಕೆ ಸರಪಳಿಯಲ್ಲಿ ವಿಶ್ವಾಸಾರ್ಹ ಪಾಲುದಾರರಾಗುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದು ಅವರು ಒತ್ತಿ ಹೇಳಿದರು.
ಭಾರತದ ಪ್ರತಿಭಾನ್ವಿತರು ಮತ್ತು ಉದ್ಯಮಕ್ಕೆ ತರಬೇತಿ ಪಡೆದ ಉದ್ಯೋಗಿಗಳು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಕೌಶಲ್ಯದ ಮೇಲೆ ಸರ್ಕಾರ ಅಪಾರ ಗಮನ ಹರಿಸಿದೆ ಎಂದು ಪ್ರಧಾನಿ ಹೇಳಿದರು. ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರುವ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವುದು ಭಾರತದ ಆದ್ಯತೆಯಾಗಿದೆ ಎಂದು ಅವರು ಹೇಳಿದರು. ಹೈಟೆಕ್ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ಭಾರತವು ಉತ್ತಮ ಮಾರುಕಟ್ಟೆಯಾಗಿದೆ ಎಂದು ಅವರು ಒತ್ತಿ ಹೇಳಿದರು ಮತ್ತು ಇಂದು ಅರೆವಾಹಕ ವಲಯದ ನಾಯಕರು ಹಂಚಿಕೊಂಡ ಉತ್ಸಾಹ ಭರಿತ ಹೇಳಿಕೆಗಳು ಈ ವಲಯಕ್ಕಾಗಿ ಹೆಚ್ಚು ಶ್ರಮಿಸಲು ಸರ್ಕಾರವನ್ನು ಪ್ರೇರೇಪಿಸುತ್ತವೆ ಎಂದು ಹೇಳಿದರು.
ಭಾರತ ಸರ್ಕಾರವು ಊಹಿಸಬಹುದಾದ ಮತ್ತು ಸ್ಥಿರವಾದ ನೀತಿ ಆಡಳಿತವನ್ನು ಅನುಸರಿಸುತ್ತದೆ ಎಂದು ಪ್ರಧಾನಿ ಅವರು ನಾಯಕರಿಗೆ ಭರವಸೆ ನೀಡಿದರು. ಮೇಕ್ ಇನ್ ಇಂಡಿಯಾ ಮತ್ತು ಮೇಕ್ ಫಾರ್ ದಿ ವರ್ಲ್ಡ್ ನ ಮೇಲೆ ಗಮನವನ್ನು ಕೇಂದ್ರೀಕರಿಸಿದ ಪ್ರಧಾನಮಂತ್ರಿಯವರು, ಸರ್ಕಾರವು ಪ್ರತಿ ಹಂತದಲ್ಲೂ ಉದ್ಯಮಕ್ಕೆ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ ಎಂದೂ ಹೇಳಿದರು.
ಸೆಮಿಕಂಡಕ್ಟರ್ ವಲಯದ ಬೆಳವಣಿಗೆಗೆ ಭಾರತದ ಬದ್ಧತೆಯನ್ನು ಶ್ಲಾಘಿಸಿದ ಸಿಇಓಗಳು, ಇಂದು ನಡೆದಿರುವುದು ಅಭೂತಪೂರ್ವವಾಗಿದೆ, ಇದರಲ್ಲಿ ಇಡೀ ಅರೆವಾಹಕ ವಲಯದ ನಾಯಕರನ್ನು ಒಂದೇ ಸೂರಿನಡಿ ತರಲಾಗಿದೆ ಎಂದು ಹೇಳಿದರು. ಅರೆವಾಹಕ ಉದ್ಯಮದ ಬೆಳವಣಿಗೆಗೆ ಇರುವ ಅಪಾರ ಅವಕಾಶಗಳು ಮತ್ತು ಭವಿಷ್ಯದಲ್ಲಿ ಅದರ ವ್ಯಾಪ್ತಿಯ ಬಗ್ಗೆ ಅವರು ಮಾತನಾಡಿದರು. ಅರೆವಾಹಕ ಉದ್ಯಮದ ಗುರುತ್ವಾಕರ್ಷಣೆಯ ಕೇಂದ್ರವು ಭಾರತದ ಕಡೆಗೆ ಚಲಿಸಲು ಪ್ರಾರಂಭಿಸುತ್ತಿದೆ ಎಂದು ಅವರು ಹೇಳಿದರು, ದೇಶವು ಈಗ ಉದ್ಯಮಕ್ಕೆ ಸೂಕ್ತ ವಾತಾವರಣವನ್ನು ಹೊಂದಿದೆ, ಇದು ಅರೆವಾಹಕ ವಲಯದಲ್ಲಿ ಭಾರತವನ್ನು ಜಾಗತಿಕ ನಕ್ಷೆಯಲ್ಲಿ ಇರಿಸಿದೆ. ಭಾರತಕ್ಕೆ ಯಾವುದು ಒಳ್ಳೆಯದೋ ಅದು ಜಗತ್ತಿಗೆ ಒಳ್ಳೆಯದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, ಅರೆವಾಹಕ ವಲಯದಲ್ಲಿ ಕಚ್ಚಾ ವಸ್ತುಗಳ ಜಾಗತಿಕ ಶಕ್ತಿ ಕೇಂದ್ರವಾಗಲು ಭಾರತಕ್ಕೆ ಅದ್ಭುತ ಸಾಮರ್ಥ್ಯವಿದೆ ಎಂದೂ ನುಡಿದರು.
ಭಾರತದಲ್ಲಿನ ವ್ಯಾಪಾರ ಸ್ನೇಹಿ ವಾತಾವರಣವನ್ನು ಶ್ಲಾಘಿಸಿದ ಅವರು, ಸಂಕೀರ್ಣ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಜಗತ್ತಿನಲ್ಲಿ, ಭಾರತ ಸ್ಥಿರವಾಗಿದೆ ಎಂದು ಹೇಳಿದರು. ಭಾರತದ ಸಾಮರ್ಥ್ಯದ ಬಗ್ಗೆ ತಮ್ಮ ಅಪಾರ ನಂಬಿಕೆಯನ್ನು ಉಲ್ಲೇಖಿಸಿದ ಅವರು, ಭಾರತವು ಹೂಡಿಕೆ ಮಾಡುವ ಸ್ಥಳವಾಗಿದೆ ಎಂಬ ಬಗ್ಗೆ ಉದ್ಯಮದಲ್ಲಿ ಸರ್ವಾನುಮತವಿದೆ ದ ಎಂದೂ ಹೇಳಿದರು. ಈ ಹಿಂದೆಯೂ ಪ್ರಧಾನಮಂತ್ರಿಯವರು ನೀಡಿದ ಪ್ರೋತ್ಸಾಹವನ್ನು ಸ್ಮರಿಸಿದ ಅವರು, ಇಂದು ಭಾರತದಲ್ಲಿ ಇರುವ ಅಗಾಧ ಅವಕಾಶಗಳನ್ನು ಹಿಂದೆಂದೂ ನೋಡಿರಲಿಲ್ಲ ಮತ್ತು ಭಾರತದೊಂದಿಗೆ ಪಾಲುದಾರರಾಗಲು ತಾವು ಹೆಮ್ಮೆಪಡುತ್ತೇವೆ ಎಂದರು.
ಸಭೆಯಲ್ಲಿ ಸೆಮಿ, ಮೈಕ್ರಾನ್, ಎನ್ಎಕ್ಸ್ಪಿ, ಪಿಎಸ್ಎಂಸಿ, ಐಎಂಇಸಿ (ಐಮೆಕ್), ರೆನೆಸಾಸ್, ಟಿಇಪಿಎಲ್, ಟೋಕಿಯೊ ಎಲೆಕ್ಟ್ರಾನ್ ಲಿಮಿಟೆಡ್, ಟವರ್, ಸಿನಾಪ್ಸಿಸ್, ಕ್ಯಾಡೆನ್ಸ್, ರಾಪಿಡಸ್, ಜೇಕಬ್ಸ್, ಜೆಎಸ್ಆರ್, ಇನ್ಫಿನಿಯನ್, ಅಡ್ವಾಂಟೆಸ್ಟ್, ಟೆರಾಡೈನ್, ಅಪ್ಲೈಡ್ ಮೆಟೀರಿಯಲ್ಸ್, ಲ್ಯಾಮ್ ರಿಸರ್ಚ್, ಮರ್ಕ್, ಸಿಜಿ ಪವರ್ ಮತ್ತು ಕೇನ್ಸ್ ಟೆಕ್ನಾಲಜಿ ಸೇರಿದಂತೆ ವಿವಿಧ ಸಂಸ್ಥೆಗಳ ಸಿಇಒಗಳು, ಮುಖ್ಯಸ್ಥರು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸ್ಯಾನ್ ಡಿಯಾಗೋ ಮತ್ತು ಐಐಟಿ ಭುವನೇಶ್ವರದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಸಭೆಯಲ್ಲಿ ಸೆಮಿ, ಮೈಕ್ರಾನ್, ಎನ್ಎಕ್ಸ್ಪಿ, ಪಿಎಸ್ಎಂಸಿ, ಐಎಂಇಸಿ (ಐಮೆಕ್), ರೆನೆಸಾಸ್, ಟಿಇಪಿಎಲ್, ಟೋಕಿಯೊ ಎಲೆಕ್ಟ್ರಾನ್ ಲಿಮಿಟೆಡ್, ಟವರ್, ಸಿನಾಪ್ಸಿಸ್, ಕ್ಯಾಡೆನ್ಸ್, ರಾಪಿಡಸ್, ಜೇಕಬ್ಸ್, ಜೆಎಸ್ಆರ್, ಇನ್ಫಿನಿಯನ್, ಅಡ್ವಾಂಟೆಸ್ಟ್, ಟೆರಾಡೈನ್, ಅಪ್ಲೈಡ್ ಮೆಟೀರಿಯಲ್ಸ್, ಲ್ಯಾಮ್ ರಿಸರ್ಚ್, ಮರ್ಕ್, ಸಿಜಿ ಪವರ್ ಮತ್ತು ಕೇನ್ಸ್ ಟೆಕ್ನಾಲಜಿ ಸೇರಿದಂತೆ ವಿವಿಧ ಸಂಸ್ಥೆಗಳ ಸಿಇಒಗಳು, ಮುಖ್ಯಸ್ಥರು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸ್ಯಾನ್ ಡಿಯಾಗೋ ಮತ್ತು ಐಐಟಿ ಭುವನೇಶ್ವರದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.