ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಾಂಗ್ ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2022ರ ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಕಿಶೋರ್ ಜೆನಾ ಅವರನ್ನು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಈ ಸಂಬಂಧ ಹಂಚಿಕೊಂಡಿದ್ದಾರೆ:
"ಏಷ್ಯನ್ ಗೇಮ್ಸ್ ನ ಪುರುಷರ ಜಾವೆಲಿನ್ ನಲ್ಲಿ ನಮ್ಮ ಸಾಧನೆಗಳು ಗಮನಾರ್ಹವಾಗಿವೆ. ಬೆಳ್ಳಿ ಕೂಡ ಭಾರತಕ್ಕೆ ಬರುತ್ತದೆ. ಈ ಸ್ಪರ್ಧೆಯಲ್ಲಿ ಈ ಅದ್ಭುತ ಬೆಳ್ಳಿ ಗೆದ್ದ ಕಿಶೋರ್ ಜೇನಾ ಅವರಿಗೆ ಅಭಿನಂದನೆಗಳು. ರಾಷ್ಟ್ರವು ಈ ವಿಜಯವನ್ನು ಗೌರವಿಸುತ್ತದೆ,’’ ಎಂದಿದ್ದಾರೆ.
Our accomplishments in Men's Javelin at Asian Games are remarkable. The Silver also comes to India. Congratulations to @Kishore78473748 for winning this splendid Silver in the event. The nation cherishes this victory. pic.twitter.com/3X257mE2ju
— Narendra Modi (@narendramodi) October 4, 2023