ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು 7, ಲೋಕ ಕಲ್ಯಾಣ ಮಾರ್ಗದಲ್ಲಿ ಮಕ್ಕಳೊಂದಿಗೆ ರಕ್ಷಾ ಬಂಧನವನ್ನು ಆಚರಿಸಿದರು.
ವಿವಿಧ ವಿಷಯಗಳ ಕುರಿತು ಸಂವಾದ ನಡೆಸಿದ ಪ್ರಧಾನಮಂತ್ರಿಯವರಿಗೆ ಮಕ್ಕಳು ರಾಖಿ ಕಟ್ಟಿದರು. ಇತ್ತೀಚಿನ ಚಂದ್ರಯಾನ-3 ಮಿಷನ್ ನ ಯಶಸ್ಸಿನ ಬಗ್ಗೆ ಮಕ್ಕಳು ತಮ್ಮ ಸಕಾರಾತ್ಮಕ ಭಾವನೆಗಳನ್ನು ಹಂಚಿಕೊಂಡರು ಮತ್ತು ಮುಂಬರುವ ಆದಿತ್ಯ L-1 ಮಿಷನ್ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿದರು.
ಸಂವಾದದ ಸಮಯದಲ್ಲಿ ಮಕ್ಕಳು ಕವಿತಾ ವಾಚನ ಮಾಡಿದರು ಮತ್ತು ಹಾಡುಗಳನ್ನು ಹಾಡಿದರು. ಅವರ ವಾಕ್ಚಾತುರ್ಯದಿಂದ ಪ್ರಭಾವಿತಗೊಂಡ ಪ್ರಧಾನಮಂತ್ರಿಯವರು ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರದ ಯೋಜನೆಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಕವತೆಗಳನ್ನು ಬರೆಯುವಂತೆ ಅವರನ್ನು ಪ್ರೋತ್ಸಾಹಿಸಿದರು. ಸ್ವಾವಲಂಬನೆಯ ಮಹತ್ವವನ್ನು ವಿವರಿಸಿದ ಪ್ರಧಾನಮಂತ್ರಿಯವರು, ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಬಳಸುವಂತೆ ಮಕ್ಕಳಿಗೆ ಸಲಹೆ ನೀಡಿದರು.
ತಮ್ಮ ಶಿಕ್ಷಕರೊಡಗೂಡಿ ಆಗಮಿಸಿದ ವಿವಿಧ ವಿದ್ಯಾರ್ಥಿಗಳು, ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ವೃಂದಾವನದ ವಿಧವೆಯರು ಹಾಗೂ ಇತರರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.