ಚೀನಾದ ಹ್ಯಾಂಗ್ ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2022 ರ ಪುರುಷರ 200 ಮೀಟರ್ ಟಿ35 ಸ್ಪರ್ಧೆಯಲ್ಲಿ ನಾರಾಯಣ್ ಠಾಕೂರ್ ಅವರು ಕಂಚಿನ ಪದಕ ಗೆದ್ದಿದ್ದಕ್ಕಾಗಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ;
“ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಪುರುಷರ 200 ಮೀಟರ್ ಟಿ35 ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಭಾರತಕ್ಕೆ ತಂದಿದ್ದಕ್ಕಾಗಿ ನಾರಾಯಣ್ ಠಾಕೂರ್ ಅವರಿಗೆ ಅಭಿನಂದನೆಗಳು. ಅವರ ಅತ್ಯಂತ ವೇಗದ ಓಟ ಮತ್ತು ಅಚಲವಾದ ಮನೋಭಾವವು ನಮ್ಮ ರಾಷ್ಟ್ರಕ್ಕೆ ಗೌರವವನ್ನು ತಂದಿದೆ.
Compliments to @Narayan38978378 for bringing home the Bronze Medal in Men's 200m T35 at the Asian Para Games. His incredible sprint and unwavering spirit have brought honour to our nation. pic.twitter.com/adY6F1JLXB
— Narendra Modi (@narendramodi) October 25, 2023