ಚೀನಾದ ಹ್ಯಾಂಗ್ ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ 2022ರಲ್ಲಿ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಎಸ್ ಎಲ್ 3 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಮಾನಸಿ ಜೋಶಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿಯವರು ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದಾರೆ:
"ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಎಸ್ಎಲ್ 3 ನಲ್ಲಿ ಕಂಚಿನ ಪದಕ ಗೆದ್ದ ಮಾನಸಿ ಜೋಶಿ ಅವರಿಗೆ ಅಭಿನಂದನೆಗಳು! ಇದು ರೋಮಾಂಚಕ ಸಾಧನೆ. ಭಾರತವು ಈ ಯಶಸ್ಸನ್ನು ಅಪಾರ ಉತ್ಸಾಹದಿಂದ, ಸಂಭ್ರಮದಿಂದ ಆಚರಿಸುತ್ತದೆ!” ಎಂದವರು ಹೇಳಿದ್ದಾರೆ.
Congratulations to @joshimanasi11 for securing the Bronze Medal in Badminton Women's Singles SL3! This is an incredible feat. India celebrates this success with immense excitement! pic.twitter.com/h2Tcvc4KOS
— Narendra Modi (@narendramodi) October 25, 2023