2020ರ ಮಾರ್ಚ್ 11ರಿಂದ ಅನ್ವಯವಾಗುವಂತೆ ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಪೋಷಕರಿಬ್ಬರನ್ನು ಅಥವಾ ಕಾನೂನಾತ್ಮಕ ಪಾಲಕರನ್ನು ಅಥವಾ ದತ್ತು ಪಡೆದ ಪೋಷಕರನ್ನು ಅಥವಾ ಬದುಕುಳಿದ ಪೋಷಕರ ಮಕ್ಕಳಿಗೆ ಬೆಂಬಲ ನೀಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2021 ಮೇ 29 ರಂದು ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯ ಉದ್ದೇಶವು ಮಕ್ಕಳ ಸಮಗ್ರ ರಕ್ಷಣೆ ಮತ್ತು ನಿರಂತರ ರಕ್ಷಣೆಯನ್ನು ಖಾತ್ರಿಪಡಿಸುವುದು ಮತ್ತು ಆರೋಗ್ಯ ವಿಮೆಯ ಮೂಲಕ ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವುದು, ಶಿಕ್ಷಣದ ಮೂಲಕ ಅವರನ್ನು ಸಬಲೀಕರಣಗೊಳಿಸುವುದು ಮತ್ತು 23ನೇ ವಯಸ್ಸಿಗೆ ಬಂದ ನಂತರ ಆರ್ಥಿಕ ಬೆಂಬಲದೊಂದಿಗೆ ಸ್ವಾವಲಂಬಿ ಅಸ್ತಿತ್ವಕ್ಕಾಗಿ ಅವರನ್ನು ಸಜ್ಜುಗೊಳಿಸುವುದಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಈ ಯೋಜನೆಯನ್ನು ಕೇಂದ್ರ ಮಟ್ಟದಲ್ಲಿ ಅನುಷ್ಠಾನಗೊಳಿಸಲು ನೋಡಲ್ ಸಚಿವಾಲಯವಾಗಿರುತ್ತದೆ. ರಾಜ್ಯಮಟ್ಟದಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸ್ಥಾಪಿಸಿದ ಬಾಲ ನ್ಯಾಯ ವಿಚಾರದಲ್ಲಿ ವ್ಯವಹರಿಸುವ ಇಲಾಖೆಗಳು ನೋಡಲ್ ಸಂಸ್ಥೆಗಳಾಗಿರುತ್ತವೆ. ಜಿಲ್ಲಾ ಮಟ್ಟದಲ್ಲಿ ಯೋಜನೆಯನ್ನು ಜಾರಿ ಮಾಡಲು ಜಿಲ್ಲಾಧಿಕಾರಿಗಳು ನೋಡಲ್ ಪ್ರಾಧಿಕಾರವಾಗಿರುತ್ತಾರೆ.
ಈ ಯೋಜನೆಗೆ ಆನ್ ಲೈನ್ ಪೋರ್ಟಲ್ ಅಂದರೆ https://pmcaresforchildren.in ಮೂಲಕ ಪ್ರವೇಶಿಸಬಹುದಾಗಿರುತ್ತದೆ. ಈ ಪೋರ್ಟಲ್ ಅನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 15.07.21ರಿಂದ ಪರಿಚಯಿಸಲಾಗಿದೆ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಅರ್ಹ ಮಕ್ಕಳನ್ನು ಗುರುತಿಸಿ ಈ ಪೋರ್ಟಲ್ ನಲ್ಲಿ ನೋಂದಾಯಿಸುವಂತೆ ಸೂಚಿಸಲಾಗಿದೆ. ಯಾವುದೇ ನಾಗರಿಕರು ಆಡಳಿತಕ್ಕೆ ಇಂತಹ ಅರ್ಹ ಮಕ್ಕಳ ಬಗ್ಗೆ ಬೆಂಬಲ ಯೋಜನೆ ಅಡಿಯಲ್ಲಿ ಈ ಪೋರ್ಟಲ್ ನಲ್ಲಿ ಮಾಹಿತಿ ನೀಡಬಹುದಾಗಿದೆ.
.