ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ಕೈಮಗ್ಗ ತಯಾರಿತ ಉತ್ಪನ್ನಗಳಿಗೆ ಬೆಂಬಲ ನೀಡಲು ಪ್ರಧಾನಿ ಕರೆ
ಭಾರತದ ವೈವಿಧ್ಯ ಹಾಗೂ ಅಸಂಖ್ಯಾತ ನೇಕಾರರು ಮತ್ತು ಕುಶಲಕರ್ಮಿಗಳ ನೈಪುಣ್ಯವನ್ನು ಕೈಮಗ್ಗವು ಅನಾವರಣಗೊಳಿಸುತ್ತದೆ: ಪ್ರಧಾನಿ
ಕೈಮಗ್ಗಗಳು ಭಾರತದ ವೈವಿಧ್ಯ ಹಾಗೂ ಅಸಂಖ್ಯಾತ ನೇಕಾರರು ಮತ್ತು ಕುಶಲಕರ್ಮಿಗಳ ನೈಪುಣ್ಯವನ್ನು ಅನಾವರಣಗೊಳಿಸುತ್ತದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಸ್ಥಳೀಯ ಕೈಮಗ್ಗ ಉತ್ಪನ್ನಗಳಿಗೆ ಬೆಂಬಲ ನೀಡುವಂತೆ ಅವರು ಕರೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಯವರು,
"ಕೈಮಗ್ಗಗಳು ಭಾರತದ ವೈವಿಧ್ಯ ಹಾಗೂ ಅಸಂಖ್ಯಾತ ನೇಕಾರರು ಮತ್ತು ಕುಶಲಕರ್ಮಿಗಳ ನೈಪುಣ್ಯವನ್ನು ಅನಾವರಣಗೊಳಿಸುತ್ತದೆ. ರಾಷ್ಟ್ರೀಯ ಕೈಮಗ್ಗ ದಿನವು ʻನನ್ನ ಕೈಮಗ್ಗ, ನನ್ನ ಹೆಮ್ಮೆʼ (#MyHandloomMyPride) ಮನೋಭಾವವನ್ನು ಉತ್ತೇಜಿಸುವ ಮೂಲಕ ನಮ್ಮ ನೇಕಾರರಿಗೆ ಬೆಂಬಲವನ್ನು ಪುನರುಚ್ಚರಿಸುವ ಸಂದರ್ಭವಾಗಿದೆ. ಸ್ಥಳೀಯ ಕೈಮಗ್ಗ ಉತ್ಪನ್ನಗಳನ್ನು ಬೆಂಬಲಿಸೋಣ!" ಎಂದಿದ್ದಾರೆ.
Handlooms manifest India’s diversity and the dexterity of countless weavers and artisans. National Handloom Day is an occasion to reiterate support to our weavers by enhancing the spirit of #MyHandloomMyPride. Let us support local handloom products!
— Narendra Modi (@narendramodi) August 7, 2021
The last few years have seen a renewed interest in handlooms. Glad to see @mirabai_chanu support the spirit of #MyHandloomMyPride. I am confident the handloom sector will keep contributing to the building of an Aatmanirbhar Bharat. https://t.co/jm1UMXVtlm
— Narendra Modi (@narendramodi) August 7, 2021