Quoteಮಧ್ಯಪ್ರದೇಶ ರಾಜ್ಯಾದ್ಯಂತ ನೀರಾವರಿ, ವಿದ್ಯುತ್, ರಸ್ತೆ, ರೈಲು, ನೀರು ಸರಬರಾಜು, ಕಲ್ಲಿದ್ದಲು ಮತ್ತು ಕೈಗಾರಿಕಾ ವಲಯಗಳಿಗೆ ಸೇರಿದ ಸುಮಾರು 17,000 ಕೋಟಿ ರೂಪಾಯಿ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ದೇಶಕ್ಕೆ ಸಮರ್ಪಣೆ
Quoteಮಧ್ಯಪ್ರದೇಶದಲ್ಲಿ ಸೈಬರ್ ತೆಹಸಿಲ್ ಯೋಜನೆ ಪ್ರಾರಂಭ
Quote"ಮಧ್ಯಪ್ರದೇಶದ ಡಬಲ್ ಎಂಜಿನ್ ಸರ್ಕಾರವು ಜನರ ಕಲ್ಯಾಣಕ್ಕೆ ಬದ್ಧವಾಗಿದೆ"
Quote"ರಾಜ್ಯಗಳು ಅಭಿವೃದ್ಧಿ ಹೊಂದಿದಾಗ ಮಾತ್ರ ಭಾರತ ಅಭಿವೃದ್ಧಿ ಹೊಂದುತ್ತದೆ"
Quoteಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಹಾದಿಯಲ್ಲಿರುವಾಗ ಉಜ್ಜಯಿನಿಯ ವಿಕ್ರಮಾದಿತ್ಯ ವೈದಿಕ ಗಡಿಯಾರವು 'ಕಾಲ ಚಕ್ರ'ಕ್ಕೆ ಸಾಕ್ಷಿಯಾಗಲಿದೆ"
Quote"ಡಬಲ್ ಇಂಜಿನ್ ಸರ್ಕಾರವು ಎರಡು ಪಟ್ಟು ವೇಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದೆ"
Quote"ಗ್ರಾಮಗಳನ್ನು ಆತ್ಮನಿರ್ಭರ್ ಮಾಡಲು ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ"
Quote"ನಾವು ಮಧ್ಯಪ್ರದೇಶದ ನೀರಾವರಿ ಕ್ಷೇತ್ರದಲ್ಲಿ ಕ್ರಾಂತಿ ಕಾಣುತ್ತಿದ್ದೇವೆ"
Quote"ಕಳೆದ 10 ವರ್ಷಗಳಲ್ಲಿ, ಇಡೀ ವಿಶ್ವದಲ್ಲಿ ಭಾರತದ ಖ್ಯಾತಿ ಸಾಕಷ್ಟು ಹೆಚ್ಚಾಗಿದೆ"
Quote"ಯುವಕರ ಕನಸುಗಳನ್ನು ನನಸು ಮಾಡುವುದೇ ಮೋದಿ ಅವರ ಸಂಕಲ್ಪ"

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ‘ವಿಕ್ಷಿತ್ ಭಾರತ್ ವಿಕ್ಷಿತ್ ಮಧ್ಯಪ್ರದೇಶ’ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಮಧ್ಯಪ್ರದೇಶ ರಾಜ್ಯಾದ್ಯಂತ ಸುಮಾರು 17,000 ಕೋಟಿ ರೂಪಾಯಿ ಮೊತ್ತದ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿ,  ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಎಲ್ಲಾ ಯೋಜನೆಗಳು ನೀರಾವರಿ, ವಿದ್ಯುತ್, ರಸ್ತೆ, ರೈಲು, ನೀರು ಸರಬರಾಜು, ಕಲ್ಲಿದ್ದಲು ಮತ್ತು ಕೈಗಾರಿಕೆ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿವೆ. ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರು ಮಧ್ಯಪ್ರದೇಶದಲ್ಲಿ ಸೈಬರ್ ತೆಹಸಿಲ್ ಯೋಜನೆಗೆ ಚಾಲನೆ ನೀಡಿದರು.

ಮಧ್ಯಪ್ರದೇಶದ ದಿಂಡೋರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆದ ಸಾವು ನೋವುಗಳಿಗೆ ಸಂತಾಪ ಸೂಚಿಸಿದ ಪ್ರಧಾನಿ, ಅಪಘಾತದಲ್ಲಿ ಗಾಯಗೊಂಡವರಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದರು. "ಈ ದುಃಖದ ಸಮಯದಲ್ಲಿ ನಾನು ಮಧ್ಯಪ್ರದೇಶದ ಜನರ ಪರವಾಗಿ ನಿಲ್ಲುತ್ತೇನೆ" ಎಂದರು.

ವಿಕಸಿತ ಭಾರತ ಸಂಕಲ್ಪದೊಂದಿಗೆ ರಾಜ್ಯದ ಎಲ್ಲಾ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳಿಂದ ಲಕ್ಷಾಂತರ ನಾಗರಿಕರು ಈ ಕಾರ್ಯಕ್ರಮದೊಂದಿಗೆ ಸಂಬಂಧ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇತರ ರಾಜ್ಯಗಳ ಜನರು ಇದೇ ರೀತಿಯ ನಿರ್ಣಯಗಳನ್ನು ಒಪ್ಪಿಕೊಂಡಿದ್ದಾರೆ. ರಾಜ್ಯಗಳು ವಿಕಸಿತವಾದಾಗ ಮಾತ್ರ ಭಾರತವು ವಿಕಸಿತವಾಗಲಿದೆ ಎಂದು ಹೇಳಿದರು.

 

|

ನಾಳೆ ಮಧ್ಯಪ್ರದೇಶದಲ್ಲಿ 9 ದಿನಗಳ ವಿಕ್ರಮೋತ್ಸವದ ಆರಂಭ ಪ್ರಸ್ತಾಪಿಸಿದ ಪ್ರಧಾನಿ, ಪ್ರಸ್ತುತ ಬೆಳವಣಿಗೆಗಳ ಜತೆಗೆ ರಾಜ್ಯದ ಭವ್ಯ ಪರಂಪರೆಯನ್ನು ಇದು ಆಚರಿಸುತ್ತದೆ. ಉಜ್ಜಯಿನಿಯಲ್ಲಿ ಸ್ಥಾಪಿಸಲಾದ ವೈದಿಕ ಗಡಿಯಾರವು ಸರ್ಕಾರವು ಪರಂಪರೆ ಮತ್ತು ಅಭಿವೃದ್ಧಿಗೆ ಪುರಾವೆಯಾಗಿದೆ. "ಬಾಬಾ ಮಹಾಕಲ್ ನಗರವು ಒಂದು ಕಾಲದಲ್ಲಿ ಪ್ರಪಂಚದ ಸಮಯದ ಲೆಕ್ಕಾಚಾರದ ಕೇಂದ್ರವಾಗಿತ್ತು, ಆದರೆ ಅದರ ಪ್ರಾಮುಖ್ಯತೆಯನ್ನು ಮರೆತುಬಿಡಲಾಯಿತು" ಎಂದು ವಿಷಾದಿಸಿದ ಪ್ರಧಾನಿ, ಈ ನಿರ್ಲಕ್ಷ್ಯವನ್ನು ಹೋಗಲಾಡಿಸಲು ಸರ್ಕಾರವು ಉಜ್ಜಯಿನಿಯಲ್ಲಿ ವಿಶ್ವದ ಮೊದಲ ವಿಕ್ರಮಾದಿತ್ಯ ವೈದಿಕ ಗಡಿಯಾರ ಮರುಸ್ಥಾಪಿಸಿದೆ.  ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಹಾದಿಯಲ್ಲಿರುವಾಗ ಅದು ‘ಕಾಲ ಚಕ್ರ’ಕ್ಕೆ ಸಾಕ್ಷಿಯಾಗಲಿದೆ ಎಂದರು.

ಕುಡಿಯುವ ನೀರು, ನೀರಾವರಿ, ವಿದ್ಯುತ್, ರಸ್ತೆಗಳು, ಕ್ರೀಡಾ ಸಂಕೀರ್ಣಗಳು ಮತ್ತು ಸಮುದಾಯ ಭವನಗಳನ್ನು ಒಳಗೊಂಡ ಇಂದಿನ ಕಾರ್ಯಕ್ರಮಕ್ಕೆ ಸಂಬಂಧಿಸಿದ 17,000 ಕೋಟಿ ರೂಪಾಯಿ ಮೊತ್ತದ ಬಹುಅಭಿವೃದ್ಧಿ ಯೋಜನೆಗಳನ್ನು ಗಮನಿಸಿದ ಪ್ರಧಾನಿ, ಮಧ್ಯಪ್ರದೇಶದ 30 ನಿಲ್ದಾಣಗಳಲ್ಲಿ ಆಧುನೀಕರಣದ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ. "ಡಬಲ್ ಇಂಜಿನ್ ಸರ್ಕಾರವು 2 ಪಟ್ಟು ವೇಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದೆ" ಎಂದು ಪ್ರಧಾನಮಂತ್ರಿ ಹೇಳಿದರು.

ಮೋದಿ ಅವರ ಭರವಸೆಯಲ್ಲಿ ರಾಷ್ಟ್ರದ ನಂಬಿಕೆ ಇಟ್ಟುಕೊಂಡಿರುವುದಕ್ಕೆ ಪ್ರಧಾನಿ ಕೃತಜ್ಞತೆ ಸಲ್ಲಿಸಿದರು. ಅಭಿವೃದ್ಧಿ ವಿಷಯದಲ್ಲಿ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನ ಮಂತ್ರಿ,  ಸರ್ಕಾರವು 3ನೇ ಅಧಿಕಾರಾವಧಿಯಲ್ಲಿ ಭಾರತವನ್ನು 3ನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ಸಂಕಲ್ಪ ತೊಟ್ಟಿದೆ ಎಂದರು.

 

|

ಕೃಷಿ, ಕೈಗಾರಿಕೆ ಮತ್ತು ಪ್ರವಾಸೋದ್ಯಮ ಉತ್ತೇಜನಕ್ಕೆ ಡಬಲ್ ಇಂಜಿನ್ ಸರ್ಕಾರ ಒತ್ತು ನೀಡಿದೆ. ನರ್ಮದಾ ನದಿಯಲ್ಲಿ 3 ಪ್ರಮುಖ ನೀರಿನ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದು ಬುಡಕಟ್ಟು ಪ್ರದೇಶಗಳಲ್ಲಿನ ನೀರಾವರಿ ಸಮಸ್ಯೆಗಳನ್ನು ಪರಿಹರಿಸುವುದು ಮಾತ್ರವಲ್ಲದೆ, ಕುಡಿಯುವ ನೀರಿನ ಸಮಸ್ಯೆಯನ್ನು ಸಹ ನಿಭಾಯಿಸುತ್ತದೆ. "ನಾವು ಮಧ್ಯಪ್ರದೇಶದ ನೀರಾವರಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಸಾಕ್ಷಿಯಾಗುತ್ತಿದ್ದೇವೆ", ಕೆನ್-ಬೇಟ್ವಾ ನದಿ ಜೋಡಣೆ ಯೋಜನೆಯು ಬುಂದೇಲ್‌ಖಂಡ್ ಪ್ರದೇಶದ ಲಕ್ಷಾಂತರ ಕುಟುಂಬಗಳ ಜೀವನ ಪರಿವರ್ತಿಸುತ್ತದೆ. ರೈತರ ಜಮೀನುಗಳಿಗೆ ನೀರು ಕೊಂಡೊಯ್ಯುವುದೇ ದೊಡ್ಡ ಸೇವೆ. 2014ರ ಹಿಂದಿನ 10 ವರ್ಷಗಳ ಅವಧಿಗೆ ಇಂದಿನ ನೀರಾವರಿ ಕ್ಷೇತ್ರವನ್ನು ಹೋಲಿಕೆ ಮಾಡಿದ ಪ್ರಧಾನ ಮಂತ್ರಿ, ದೇಶದಲ್ಲಿ ಸಣ್ಣ ನೀರಾವರಿಯನ್ನು ಹಿಂದಿನ 90 ಲಕ್ಷ ಹೆಕ್ಟೇರ್‌ಗಳಿಗೆ ಹೋಲಿಸಿದರೆ ಇಂದು 40 ಲಕ್ಷ ಹೆಕ್ಟೇರ್‌ಗಳಿಗೆ ವಿಸ್ತರಿಸಲಾಗಿದೆ. "ಇದು ಪ್ರಸ್ತುತ ಸರ್ಕಾರದ ಆದ್ಯತೆಗಳು ಮತ್ತು ಅದರ ಪ್ರಗತಿಯ ಪ್ರಮಾಣವನ್ನು ತೋರಿಸುತ್ತದೆ" ಎಂದರು.

ಸಣ್ಣ ರೈತರ ಮತ್ತೊಂದು ಗಂಭೀರ ಸಮಸ್ಯೆ ಅಂದರೆ ಶೇಖರಣಾ ಕೊರತೆಯನ್ನು ನೀಗಿಸುವುದಾಗಿದೆ. ಇತ್ತೀಚೆಗೆ ಆರಂಭಿಸಲಾದ 'ವಿಶ್ವದ ಅತಿದೊಡ್ಡ ಶೇಖರಣಾ ಯೋಜನೆ' ಪ್ರಸ್ತಾಪಿಸಿದ ಅವರು, ಮುಂದಿನ ದಿನಗಳಲ್ಲಿ ಸಾವಿರಾರು ದೊಡ್ಡ ಗೋದಾಮುಗಳು ನಿರ್ಮಾಣವಾಗಲಿದ್ದು, ದೇಶದಲ್ಲಿ 700 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಹೊಸ ಸಂಗ್ರಹಣಾ ಸಾಮರ್ಥ್ಯ ಇರಲಿದೆ. ಇದಕ್ಕಾಗಿ ಸರ್ಕಾರ 1.25 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ ಎಂದರು.

ಸಹಕಾರಿ ಸಂಘಗಳ ಮೂಲಕ ಗ್ರಾಮಗಳನ್ನು ಆತ್ಮನಿರ್ಭರ್ ಮಾಡುವ ಸರ್ಕಾರದ ಸಂಕಲ್ಪವನ್ನು ಪ್ರಧಾನಿ ಪುನರುಚ್ಚರಿಸಿದರು. ಹಾಲು ಉತ್ಪಾದನೆ ಮತ್ತು ಕಬ್ಬು ಬೆಳೆಯುವ ಪ್ರದೇಶಗಳಿಂದ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳು ಮತ್ತು ಮೀನುಗಾರಿಕೆಯಂತಹ ಕ್ಷೇತ್ರಗಳಿಗೆ ಸಹಕಾರಿ ಪ್ರಯೋಜನಗಳು ವಿಸ್ತರಿಸುತ್ತಿವೆ.  ಗ್ರಾಮೀಣ ಆದಾಯ ಹೆಚ್ಚಿಸುವ ಉದ್ದೇಶದಿಂದ ಲಕ್ಷಾಂತರ ಹಳ್ಳಿಗಳಲ್ಲಿ ಸಹಕಾರ ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.

ಪ್ರಧಾನ ಮಂತ್ರಿಗಳ ಸ್ವಾಮಿತ್ವ ಯೋಜನೆ ಮೂಲಕ ಗ್ರಾಮೀಣ ಆಸ್ತಿ ವಿವಾದಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಶೇಕಡ 100ರಷ್ಟು ಹಳ್ಳಿಗಳನ್ನು ಡ್ರೋನ್ ಮೂಲಕ ಸಮೀಕ್ಷೆ ಮಾಡಲಾಗಿದೆ. ಇದುವರೆಗೆ 20 ಲಕ್ಷಕ್ಕೂ ಹೆಚ್ಚು ಸ್ವಾಮಿತ್ವ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಈ ಯೋಜನೆಯನ್ನು ಉತ್ತಮವಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ಮಧ್ಯಪ್ರದೇಶ ಸರ್ಕಾರವನ್ನು ಪ್ರಧಾನಿ ಶ್ಲಾಘಿಸಿದರು.

ಮಧ್ಯಪ್ರದೇಶದ 55 ಜಿಲ್ಲೆಗಳಲ್ಲಿ ಸೈಬರ್ ತೆಹಸಿಲ್ ಯೋಜನೆಯ ಪ್ರಾರಂಭ ಉಲ್ಲೇಖಿಸಿದ ಪ್ರಧಾನಿ, ಇದು ಹೆಸರುಗಳ ವರ್ಗಾವಣೆ ಮತ್ತು ನೋಂದಣಿ ಸಂಬಂಧಿತ ಸಮಸ್ಯೆಗಳಿಗೆ ಡಿಜಿಟಲ್ ಪರಿಹಾರಗಳನ್ನು ಒದಗಿಸುತ್ತದೆ, ಇದರಿಂದಾಗಿ ಜನರಿಗೆ ಸಮಯ ಮತ್ತು ವೆಚ್ಚ ಉಳಿಯುತ್ತದೆ ಎಂದು ತಿಳಿಸಿದರು.

ಮಧ್ಯಪ್ರದೇಶವನ್ನು ಕೈಗಾರಿಕೆಗಳಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಒಂದನ್ನಾಗಿ ಮಾಡುವ ಯುವಜನರ ಆಶಯಕ್ಕೆ ಸಮ್ಮತಿ ಸೂಚಿಸಿದ ಪ್ರಧಾನಿ, ಪ್ರಸ್ತುತ ಸರ್ಕಾರವು ಹೊಸ ಅವಕಾಶಗಳನ್ನು ಸೃಷ್ಟಿಸುವಲ್ಲಿ ಯಾವುದೇ ಅವಕಾಶವನ್ನು ಬಿಡುತ್ತಿಲ್ಲ ಎಂದು ರಾಜ್ಯದ ಮೊದಲ ಬಾರಿಯ ಮತದಾರರಿಗೆ ಭರವಸೆ ನೀಡಿದರು. "ಯುವಕರ ಕನಸುಗಳನ್ನು ನನಸು ಮಾಡುವುದೇ ಮೋದಿ ಅವರ ಸಂಕಲ್ಪ". ಆತ್ಮನಿರ್ಭರ್ ಭಾರತ್ ಮತ್ತು ಮೇಕ್ ಇನ್ ಇಂಡಿಯಾದಲ್ಲಿ ಮಧ್ಯಪ್ರದೇಶವು ಆಧಾರಸ್ತಂಭವಾಗಲಿದೆ. ಸಿತಾಪುರ್, ಮೊರೆನಾದಲ್ಲಿ ಮೆಗಾ ಲೆದರ್ ಮತ್ತು ಪಾದರಕ್ಷೆ ಕ್ಲಸ್ಟರ್, ಇಂದೋರ್‌ನ ಸಿದ್ಧ ಉಡುಪು ಉದ್ಯಮಕ್ಕಾಗಿ ಜವಳಿ ಪಾರ್ಕ್, ಮಂದಸೌರ್‌ನಲ್ಲಿ ಕೈಗಾರಿಕಾ ಪಾರ್ಕ್ ವಿಸ್ತರಣೆ ಮತ್ತು ಧಾರ್ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಈ ದೂರದೃಷ್ಟಿಯನ್ನು ಸಾಕಾರಗೊಳಿಸಲು ತೆಗೆದುಕೊಂಡ ಕ್ರಮಗಳಂತೆ ಕೈಗಾರಿಕಾ ಪಾರ್ಕ್, ಆಟಿಕೆ ರಫ್ತು ಹೆಚ್ಚಳಕ್ಕೆ ಕಾರಣವಾದ ಭಾರತದ ಆಟಿಕೆ ಉತ್ಪಾದನೆ ಉತ್ತೇಜಿಸಲು ಸರ್ಕಾರದ ಉತ್ತೇಜನ ನೀಡಿದೆ. ಈ ಪ್ರದೇಶದಲ್ಲಿ ಇಂದಿನ ಅಭಿವೃದ್ಧಿ ಯೋಜನೆಗಳಿಂದಾಗಿ ಬುಧ್ನಿಯಲ್ಲಿ ಆಟಿಕೆ ತಯಾರಿಸುವ ಸಮುದಾಯಕ್ಕೆ ಬಹು ಅವಕಾಶಗಳನ್ನು ಸೃಷ್ಟಿಸಲಾಗುವುದು ಎಂದು ಹೇಳಿದರು.

 

|

ಸಮಾಜದ ನಿರ್ಲಕ್ಷಿತ ವರ್ಗಗಳ ಬಗ್ಗೆ ಕಾಳಜಿ ವಹಿಸುವ ಅವರ ಬದ್ಧತೆಗೆ ಅನುಗುಣವಾಗಿ ಪ್ರಧಾನ ಮಂತ್ರಿ ಅವರು ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಲಭ್ಯವಿರುವ ಪ್ರತಿಯೊಂದು ವೇದಿಕೆಯಿಂದ ಈ ಕಲಾವಿದರ ನಿಯಮಿತ ಉತ್ತೇಜನ ಮತ್ತು ವಿದೇಶಿ ಗಣ್ಯರಿಗೆ ಅವರ ಉಡುಗೊರೆಗಳು ಯಾವಾಗಲೂ ಗುಡಿ ಕೈಗಾರಿಕೆಯ ಉತ್ಪನ್ನಗಳನ್ನು ಒಳಗೊಂಡಿವೆ. ಅವರ 'ವೋಕಲ್ ಸೆ ಲೋಕಲ್' ಪ್ರಚಾರವು ಸ್ಥಳೀಯ ಕುಶಲಕರ್ಮಿಗಳ ಉತ್ಪನ್ನಗಳನ್ನು ಉತ್ತೇಜಿಸುತ್ತದೆ ಎಂದರು.

ಕಳೆದ 10 ವರ್ಷಗಳಲ್ಲಿ ಭಾರತದ ಬೆಳವಣಿಗೆಯ ವಿವರ ನೀಡಿದ ಪ್ರಧಾನ ಮಂತ್ರಿ ಅವರು, ಹೂಡಿಕೆ ಮತ್ತು ಪ್ರವಾಸೋದ್ಯಮದಿಂದ ನೇರ ಪ್ರಯೋಜನಗಳು ಸಿಗುತ್ತಿವೆ. ಮಧ್ಯಪ್ರದೇಶ ಪ್ರವಾಸೋದ್ಯಮದಲ್ಲಿ ಇತ್ತೀಚಿಗೆ ಪ್ರಗತಿಯನ್ನು ಕಾಣುತ್ತಿದೆ. ಓಂಕಾರೇಶ್ವರ ಮತ್ತು ಮಾಮಲೇಶ್ವರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. 2028ರಲ್ಲಿ ಆದಿ ಗುರು ಶಂಕರಾಚಾರ್ಯ ಮತ್ತು ಉಜ್ಜಯಿನಿ ಸಿಂಹಸ್ಥರ ಸ್ಮರಣಾರ್ಥ ಓಂಕಾರೇಶ್ವರದಲ್ಲಿ ಮುಂಬರುವ ಏಕತಮ್ ಧಾಮ್ ಪ್ರವಾಸೋದ್ಯಮ ಬೆಳವಣಿಗೆಗೆ ವೇಗವರ್ಧಕವಾಗಿದೆ. ಇಚ್ಛಾಪುರದಿಂದ ಇಂದೋರ್‌ನ ಓಂಕಾರೇಶ್ವರದವರೆಗೆ ಚತುಷ್ಪಥ ರಸ್ತೆ ನಿರ್ಮಾಣದಿಂದ ಭಕ್ತರಿಗೆ ಮತ್ತಷ್ಟು ಅನುಕೂಲವಾಗಲಿದೆ. ಇಂದು ಉದ್ಘಾಟನೆಗೊಂಡ ರೈಲ್ವೆ ಯೋಜನೆಗಳು ಮಧ್ಯಪ್ರದೇಶದ ಸಂಪರ್ಕವನ್ನು ಮತ್ತಷ್ಟು ಬಲಪಡಿಸುತ್ತದೆ. ಸಂಪರ್ಕ ಸುಧಾರಿಸಿದಾಗ, ಅದು ಕೃಷಿ, ಪ್ರವಾಸೋದ್ಯಮ ಅಥವಾ ಉದ್ಯಮವಾಗಿರಲಿ, ಮೂರೂ ಕ್ಷೇತ್ರಗಳಿಗೂ  ಪ್ರಯೋಜನವಾಗುತ್ತದೆ.

ಕಳೆದ 10 ವರ್ಷಗಳಲ್ಲಿ ಮಹಿಳೆಯರ ಅಭಿವೃದ್ಧಿಗೆ ಅಡ್ಡಿಯಾಗಿರುವ ಎಲ್ಲಾ ಸಮಸ್ಯೆಗಳನ್ನು ನಿಭಾಯಿಸಲು ಸರ್ಕಾರ ನಡೆಸಿರುವ ಪ್ರಯತ್ನಗಳ ಬಗ್ಗೆ ಗಮನ ಸೆಳೆದ ಪ್ರಧಾನಿ, ಮುಂದಿನ 5 ವರ್ಷಗಳಲ್ಲಿ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಅಭೂತಪೂರ್ವ ಸಬಲೀಕರಣಕ್ಕೆ ಸಾಕ್ಷಿಯಾಗಲಿದೆ. ಅವರು ಪ್ರತಿ ಹಳ್ಳಿಯಲ್ಲಿ ಲಖ್ಪತಿ ದೀದಿಗಳಾಗಲಿದ್ದಾರೆ ಮತ್ತು ಹೊಸ ಕೃಷಿ ಕ್ರಾಂತಿ ತರಲು ಡ್ರೋನ್ ದೀದಿಗಳಾಗಲಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಲಾಗುವುದು. ಅವರ ಕಲ್ಯಾಣಕ್ಕಾಗಿ ಮಾಡಿದ ಕೆಲಸಗಳಿಂದಾಗಿ ಕಳೆದ 10 ವರ್ಷಗಳಲ್ಲಿ ಹಳ್ಳಿಗಳಿಂದ ಕುಟುಂಬಗಳ ಆದಾಯದಲ್ಲಿ ಹೆಚ್ಚಳವಾಗಿದೆ. "ವರದಿಯ ಪ್ರಕಾರ, ಹಳ್ಳಿಗಳ ಆದಾಯವು ನಗರಗಳಿಗಿಂತ ವೇಗವಾಗಿ ಹೆಚ್ಚುತ್ತಿದೆ". ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಮಧ್ಯಪ್ರದೇಶವೂ ಇದೇ ರೀತಿ ಹೊಸ ಎತ್ತರಕ್ಕೆ ಏರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿ, ಪ್ರಧಾನಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.  

ಹಿನ್ನೆಲೆ

ಮಧ್ಯಪ್ರದೇಶದಲ್ಲಿ 5,500 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ನೀರಾವರಿ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳಲ್ಲಿ ನರ್ಮದಾ ಮೇಲ್ದಂಡೆ ಯೋಜನೆ, ರಾಘವಪುರ ವಿವಿಧೋದ್ದೇಶ ಯೋಜನೆ ಮತ್ತು ಬಸನಿಯಾ ವಿವಿಧೋದ್ದೇಶ ಯೋಜನೆಗಳು ಸೇರಿವೆ. ಈ ಯೋಜನೆಗಳು ದಿಂಡೋರಿ, ಅನುಪ್ಪುರ್ ಮತ್ತು ಮಂಡ್ಲಾ ಜಿಲ್ಲೆಗಳಲ್ಲಿ 75,000 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ನೀಡುತ್ತವೆ. ಈ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಮತ್ತು ಕುಡಿಯುವ ನೀರನ್ನು ಹೆಚ್ಚಿಸುತ್ತವೆ. ರಾಜ್ಯದಲ್ಲಿ 800 ಕೋಟಿಗೂ ಹೆಚ್ಚು ಮೊತ್ತದ ಎರಡು ಸಣ್ಣ ನೀರಾವರಿ ಯೋಜನೆಗಳನ್ನು ಪ್ರಧಾನಿ ಅವರು ದೇಶಕ್ಕೆ ಸಮರ್ಪಿಸಿದರು. ಇವುಗಳಲ್ಲಿ ಪರಸ್ದೋಹ್ ಸಣ್ಣ ನೀರಾವರಿ ಯೋಜನೆ ಮತ್ತು ಔಲ್ಲಿಯ ಸಣ್ಣ ನೀರಾವರಿ ಯೋಜನೆಗಳು ಸೇರಿವೆ. ಈ ಸೂಕ್ಷ್ಮ ನೀರಾವರಿ ಯೋಜನೆಗಳು ಬೇತುಲ್ ಮತ್ತು ಖಾಂಡ್ವಾ ಜಿಲ್ಲೆಗಳಲ್ಲಿ 26,000 ಹೆಕ್ಟೇರ್‌ಗಿಂತ ಹೆಚ್ಚಿನ ಭೂಮಿಗೆ ನೀರಾವರಿ ಅಗತ್ಯಗಳನ್ನು ಪೂರೈಸುತ್ತವೆ.

2,200 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದಲ್ಲಿ ನಿರ್ಮಿಸಲಾದ 3 ರೈಲ್ವೆ ಯೋಜನೆಗಳನ್ನು ಪ್ರಧಾನ ಮಂತ್ರಿ ಅವರು ದೇಶಕ್ಕೆ ಸಮರ್ಪಿಸಿದರು. ಇವುಗಳಲ್ಲಿ ವಿರಂಗನ ಲಕ್ಷ್ಮೀಬಾಯಿ ಝಾನ್ಸಿ - ಜಖ್ಲೌನ್ ಮತ್ತು ಧೌರಾ - ಅಗಾಸೋಡ್ ಮಾರ್ಗದಲ್ಲಿ 3ನೇ ಸಾಲಿನ ಯೋಜನೆಗಳು ಸೇರಿವೆ. ಹೊಸ ಸುಮಾವೊಲಿ-ಜೋರಾ ಅಲಾಪುರ್ ರೈಲು ಮಾರ್ಗದಲ್ಲಿ ಗೇಜ್ ಪರಿವರ್ತನೆ ಯೋಜನೆ ಮತ್ತು ಪೊವರ್ಖೇಡ-ಜುಝರ್‌ಪುರ ರೈಲು ಮಾರ್ಗದ ಮೇಲ್ಸೇತುವೆ ಯೋಜನೆ. ಈ ಯೋಜನೆಗಳು ರೈಲು ಸಂಪರ್ಕ ಸುಧಾರಿಸುತ್ತದೆ ಮತ್ತು ಈ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.

 

|

ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡುವುದಕ್ಕಾಗಿ, ಮಧ್ಯಪ್ರದೇಶದಾದ್ಯಂತ ಸುಮಾರು 1,000 ಕೋಟಿ ರೂಪಾಯಿ ಮೊತ್ತದ ಬಹು ಕೈಗಾರಿಕಾ ಯೋಜನೆಗಳಿಗೆ ಪ್ರಧಾನ ಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಯೋಜನೆಗಳು ಮೊರೆನಾ ಜಿಲ್ಲೆಯ ಸೀತಾಪುರದಲ್ಲಿ ಮೆಗಾ ಲೆದರ್, ಪಾದರಕ್ಷೆಗಳು ಮತ್ತು ಪರಿಕರಗಳ ಕ್ಲಸ್ಟರ್ ಒಳಗೊಂಡಿವೆ. ಇಂದೋರ್‌ನಲ್ಲಿ ಗಾರ್ಮೆಂಟ್ ಉದ್ಯಮಕ್ಕಾಗಿ ಪ್ಲಗ್ ಮತ್ತು ಪ್ಲೇ ಪಾರ್ಕ್, ಇಂಡಸ್ಟ್ರಿಯಲ್ ಪಾರ್ಕ್ ಮಂಡಸೌರ್ (ಜಗ್ಗಖೇಡಿ ಹಂತ-2) ಮತ್ತು ಧಾರ್ ಜಿಲ್ಲೆಯ ಪಿತಂಪುರದ ಕೈಗಾರಿಕಾ ಪಾರ್ಕ್ ಮೇಲ್ದರ್ಜೆಗೇರಿಸುವುದು.

ಜಯಂತ್ OCP CHP ಸಿಲೋ, NCL ಸಿಂಗ್ರೌಲಿ ಮತ್ತು ದುಧಿಚುವಾ OCP CHP-ಸಿಲೋ ಸೇರಿದಂತೆ 1,000 ಕೋಟಿಗೂ ಹೆಚ್ಚು ಮೌಲ್ಯದ ಕಲ್ಲಿದ್ದಲು ವಲಯದ ಯೋಜನೆಗಳನ್ನು ಪ್ರಧಾನ ಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು.

ಮಧ್ಯಪ್ರದೇಶದಲ್ಲಿ ವಿದ್ಯುತ್ ವಲಯ ಬಲಪಡಿಸುವ ಮೂಲಕ ಪನ್ನಾ, ರೈಸೆನ್, ಛಿಂದ್ವಾರಾ ಮತ್ತು ನರ್ಮದಾಪುರಂ ಜಿಲ್ಲೆಗಳಲ್ಲಿ 6 ಉಪಕೇಂದ್ರಗಳಿಗೆ  ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಈ ಉಪಕೇಂದ್ರಗಳು ರಾಜ್ಯದ 11 ಜಿಲ್ಲೆಗಳಾದ ಭೋಪಾಲ್, ಪನ್ನಾ, ರೈಸೆನ್, ಛಿಂದ್ವಾರಾ, ನರ್ಮದಾಪುರಂ, ವಿದಿಶಾ, ಸಾಗರ್, ದಾಮೋಹ್, ಛತ್ತರ್‌ಪುರ, ಹರ್ದಾ ಮತ್ತು ಸೆಹೋರ್ ಪ್ರದೇಶದ ಜನರಿಗೆ ಪ್ರಯೋಜನ ನೀಡುತ್ತವೆ. ಮಂಡಿದೀಪ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳಿಗೂ ಈ ಉಪಕೇಂದ್ರಗಳು ಪ್ರಯೋಜನಕಾರಿಯಾಗಲಿವೆ.

ಅಮೃತ್ 2.0 ಅಡಿ  ಸುಮಾರು 880 ಕೋಟಿ ರೂಪಾಯಿ ಮೌಲ್ಯದ ವಿವಿಧ ಯೋಜನೆಗಳಿಗೆ ಮತ್ತು ರಾಜ್ಯಾದ್ಯಂತ ಹಲವಾರು ಜಿಲ್ಲೆಗಳಲ್ಲಿ ನೀರು ಸರಬರಾಜು ವ್ಯವಸ್ಥೆಗಳ ಬಲವರ್ಧನೆ ಮತ್ತು ಇತರೆ ಯೋಜನೆಗಳಿಗೆ ಪ್ರಧಾನ ಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನ ಮಂತ್ರಿ ಅವರು ಖಾರ್ಗೋನೆಯಲ್ಲಿ ನೀರು ಪೂರೈಕೆ ಹೆಚ್ಚಿಸುವ ರಾಷ್ಟ್ರೀಯ ಯೋಜನೆಯನ್ನು ಸಮರ್ಪಿಸಿದರು.

ಸರ್ಕಾರಿ ಸೇವೆಗಳ ವಿತರಣೆ ಸುಧಾರಿಸುವ ಒಂದು ಹೆಜ್ಜೆಯಾಗಿ, ಮಧ್ಯಪ್ರದೇಶದ ಸೈಬರ್ ತೆಹಸಿಲ್ ಯೋಜನೆಯು ಕಾಗದರಹಿತ, ಮುಖರಹಿತ, ಸಂಪೂರ್ಣ ಖಸ್ರಾದ ಮಾರಾಟ-ಖರೀದಿಯ ರೂಪಾಂತರವನ್ನು ಆನ್‌ಲೈನ್‌ನಲ್ಲಿ ವಿಲೇವಾರಿ ಮಾಡುವುದು ಮತ್ತು ಕಂದಾಯ ದಾಖಲೆಗಳ ದಾಖಲೆ ತಿದ್ದುಪಡಿಯನ್ನು ಖಚಿತಪಡಿಸುತ್ತದೆ. ರಾಜ್ಯದ ಎಲ್ಲಾ 55 ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿರುವ ಈ ಯೋಜನೆಯು ಇಡೀ ಮಧ್ಯಪ್ರದೇಶಕ್ಕೆ ಒಂದೇ ಕಂದಾಯ ನ್ಯಾಯಾಲಯ ಒದಗಿಸುತ್ತದೆ. ಇದು ಅರ್ಜಿದಾರರಿಗೆ ಅಂತಿಮ ಆದೇಶದ ಪ್ರಮಾಣೀಕೃತ ಪ್ರತಿಯನ್ನು ಸಂವಹನ ಮಾಡಲು ಇಮೇಲ್/ ವಾಟ್ಸ್ ಆಪ್ ಅನ್ನು ಸಹ ಬಳಸುತ್ತದೆ.

ಪ್ರಧಾನ ಮಂತ್ರಿ ಅವರು ಮಧ್ಯಪ್ರದೇಶದ ಹಲವಾರು ಪ್ರಮುಖ ರಸ್ತೆ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಇತರ ಯೋಜನೆಗಳ ಜತೆಗೆ. ಈ ಯೋಜನೆಗಳ ಅನಾವರಣವು ಮಧ್ಯಪ್ರದೇಶದಲ್ಲಿ ಮೂಲಸೌಕರ್ಯ, ಸಾಮಾಜಿಕ ಆರ್ಥಿಕ ಅಭಿವೃದ್ಧಿ ಮತ್ತು ಜೀವನ ಸೌಕರ್ಯಗಳಿಗೆ ಪ್ರಮುಖ ಉತ್ತೇಜನ ಒದಗಿಸುವ ಪ್ರಧಾನ ಮಂತ್ರಿ ಅವರ ದೃಷ್ಟಿಕೋನಕ್ಕೆ ಪೂರಕವಾಗಿದೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

  • krishangopal sharma Bjp January 07, 2025

    नमो नमो 🙏 जय भाजपा 🙏🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌷🌷🌹🌷🌷🌹🌷
  • krishangopal sharma Bjp January 07, 2025

    नमो नमो 🙏 जय भाजपा 🙏🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌷🌷🌹🌷🌷🌹🌷🌷
  • krishangopal sharma Bjp January 07, 2025

    नमो नमो 🙏 जय भाजपा 🙏🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌷🌷🌹🌷🌷🌹🌷🌷🌷
  • Reena chaurasia August 31, 2024

    बीजेपी
  • Jitender Kumar Haryana BJP State President August 09, 2024

    is Sandhya Maurya alive ?
  • Jitender Kumar Haryana BJP State President August 09, 2024

    🇮🇳
  • Jitender Kumar Haryana BJP State President July 04, 2024

    uwudlove2knowme@yahoo.com
  • Jitender Kumar Haryana BJP State President July 04, 2024

    officialmailforjk@gmail.com
  • Jitender Kumar BJP May 22, 2024

    jitender kumar email id kumarjitender90561@gnail.com j0817725@gmail.com officialmailforjk@gmail.com
  • Pradhuman Singh Tomar April 30, 2024

    BJP
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Centre approves direct procurement of chana, mustard and lentil at MSP

Media Coverage

Centre approves direct procurement of chana, mustard and lentil at MSP
NM on the go

Nm on the go

Always be the first to hear from the PM. Get the App Now!
...
PM speaks with HM King Philippe of Belgium
March 27, 2025

The Prime Minister Shri Narendra Modi spoke with HM King Philippe of Belgium today. Shri Modi appreciated the recent Belgian Economic Mission to India led by HRH Princess Astrid. Both leaders discussed deepening the strong bilateral ties, boosting trade & investment, and advancing collaboration in innovation & sustainability.

In a post on X, he said:

“It was a pleasure to speak with HM King Philippe of Belgium. Appreciated the recent Belgian Economic Mission to India led by HRH Princess Astrid. We discussed deepening our strong bilateral ties, boosting trade & investment, and advancing collaboration in innovation & sustainability.

@MonarchieBe”