ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮೇಘಾಲಯ ಮುಖ್ಯಮಂತ್ರಿ ಶ್ರೀ ಕಾನ್ರಾಡ್ ಕೆ ಸಂಗ್ಮಾ ಮತ್ತು ಅವರ ಸಚಿವರ ತಂಡದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದರು. ಇಂದು ಪ್ರಮಾಣ ವಚನ ಸ್ವೀಕರಿಸಿದವರನ್ನು ಶ್ರೀ ಮೋದಿ ಅಭಿನಂದಿಸಿದರು.
ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ;
“@SangmaConrad ಶ್ರೀ ಸಂಗ್ಮಾ ಕಾನ್ರಾಡ್ ಜಿ ಮತ್ತು ಅವರ ಸಚಿವರ ತಂಡದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದೆನು. ಇಂದು ಪ್ರಮಾಣ ವಚನ ಸ್ವೀಕರಿಸಿದವರಿಗೆಲ್ಲರಿಗೂ ಅಭಿನಂದನೆಗಳು. ಮೇಘಾಲಯವನ್ನು ಬೆಳವಣಿಗೆಯ ಹೊಸ ಎತ್ತರಕ್ಕೆ ಕೊಂಡೊಯ್ಯುವ ಅವರ ಪ್ರಯತ್ನಕ್ಕೆ ಶುಭಾಶಯಗಳು.”
Attended the oath taking ceremony of Shri @SangmaConrad Ji and his ministerial team. Congratulations to those who took oath. Best wishes to them in their pursuit of taking Meghalaya to new heights of growth. pic.twitter.com/n0m2HQ4cFN
— Narendra Modi (@narendramodi) March 7, 2023