Quoteಶ್ರೀ ರಾಮಮಂದಿರ ಪ್ರತಿಷ್ಠಾನೆಗಾಗಿ ಶುಭಾಶಯ ತಿಳಿಸಿದ ಶ್ರೀಲಂಕಾ ಅಧ್ಯಕ್ಷರು
Quote“ಭಾರತದ ಯುನಿಫೈಡ್‌ ಪೇಮೆಂಟ್ಸ್ ಇಂಟರ್ಫೇಸ್‌ -ಯುಪಿಐ ಇದೀಗ ಹೊಸ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದೆ – ಪಾಲುದಾರರನ್ನು ಒಟ್ಟುಗೂಡಿಸಿದ ಭಾರತ”
Quote“ಭಾರತದಲ್ಲಿ ಡಿಜಿಟಲ್‌ ಮೂಲ ಸೌಕರ್ಯ ಕ್ರಾಂತಿಕಾರಕ ಬದಲಾವಣೆ ತಂದಿದೆ”
Quote“ ʼನೆರೆಹೊರೆಯವರು ಮೊದಲುʼ ಎನ್ನುವುದು ಭಾರತದ ನೀತಿ. ನಮ್ಮ ಸಮುದ್ರ ವಲಯದ ದೃಷ್ಟಿಕೋನ ಎಸ್.ಎ.ಜಿ.ಎ.ಆರ್‌ ಆಗಿದೆ – ಅಂದರೆ ಭದ್ರತೆ ಮತ್ತು ಎಲ್ಲಾ ವಲಯಗಳ ಪ್ರಗತಿ”
Quote“‍ಯುಪಿಐ ನೊಂದಿಗೆ ಶ್ರೀಲಂಕಾ ಮತ್ತು ಮಾರಿಷಸ್‌ ಬೆಸೆದುಕೊಂಡಿರುವುದರಿಂದ ಎರಡೂ ದೇಶಗಳಿಗೂ ಅನುಕೂಲ ಹಾಗೂ ಡಿಜಿಟಲ್‌ ಮೂಲ ಸೌಕರ್ಯಕ್ಕೆ ಪುಷ್ಟಿ ದೊರೆಯಲಿದೆ”
Quote“ನೇಪಾಳ, ಭೂತಾನ್‌, ಸಿಂಗಾಪೂರ್‌ ಮತ್ತು ಏಷ್ಯಾದ ಗಲ್ಪ್‌ ನ ಯುಎಇ ನಂತರ ಇದೀಗ ಮಾರಿಷಸ್‌ ಸೇರ್ಪಡೆಯಾಗಿದೆ. ಆಫ್ರಿಕಾದಲ್ಲೂ ರುಪೇ ಕಾರ್ಡ್‌ ಪರಿಚಯಿಸುತ್ತಿದ್ದೇವೆ”
Quote“ಅದು ನೈಸರ್ಗಿಕ ವಿಪತ್ತು ಆಗಿರಬಹುದು, ಆರೋಗ್ಯಕ್ಕೆ ಸಂಬಂಧಿಸಿದ್ದಾಗಿರಬಹುದು, ಆರ್ಥಿಕತೆ ಅಥವಾ ಅಂತರರಾಷ್ಟ್ರೀಯ ಬದಲಾವಣೆಯೇ ಆಗಿರಬಹುದು, ಮೊದಲು ಪ್ರತಿಕ್ರಿಯೆ ನೀಡುತ್ತಿರುವುದು ಭಾರತ ಹಾಗೂ ಇದು ಕೂಡ ಮುಂದುವರೆಯಲಿದೆ”

‍ಶ್ರೀಲಂಕಾ ಅಧ್ಯಕ್ಷ ಶ್ರೀ ರನಿಲ್‌ ವಿಕ್ರಮಸಿಂಘೆ ಮತ್ತು ಮಾರಿಷಸ್‌ ಪ್ರಧಾನಿ ಶ್ರೀ ಪ್ರವೀಂದ್‌ ಜುಗ್ನಾಥ್‌ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀಲಂಕಾ ಮತ್ತು ಮಾರಿಷಸ್‌ ನಲ್ಲಿ ಯುನೈಫೈಡ್‌ ಪೇಮೆಂಟ್‌ ಇಂಟರ್ಪೇಸ್‌ [ಯುಪಿಐ] ಸೇವೆಗಳನ್ನು ಜಂಟಿಯಾಗಿ ಉದ್ಘಾಟಿಸಿದರು ಮತ್ತು ವಿಡಿಯೋ ಕಾನ್ಪರೆನ್ಸ್‌ ಮೂಲಕ ಮಾರಿಷಸ್‌ ನಲ್ಲಿ ರುಪೇ ಕಾರ್ಡ್‌ ಸೇವೆಗಳಿಗೆ ಚಾಲನೆ ನೀಡಿದರು.  

ಮಾರಿಷಸ್‌ ಪ್ರಧಾನಿ ‍ಶ್ರೀ ಪ್ರವೀಂದ್‌ ಜುಗ್ನಾಥ್‌ ಮಾತನಾಡಿ ಮಾರಿಷಸ್‌ ನಲ್ಲಿ ಕೋ ಬ್ರ್ಯಾಂಡೆಡ್‌ ನ ರುಪೇ ಕಾರ್ಡ್‌ ಮಾರಿಷಸ್‌ ನ ದೇಶೀಯ ಕಾರ್ಡ್‌ ಆಗಲಿದೆ. ಇಂದಿನ ಈ ಹೊಸ ಉಪಕ್ರಮದಿಂದ ಈ ಎರಡೂ ದೇಶಗಳ ಜನರಿಗೆ ಅತಿ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ ಎಂದು ಅವರು ಹೇಳಿದರು.  

ಅಯೋಧ್ಯೆ ಧಾಮದಲ್ಲಿ ಶ್ರೀರಾಮಮಂದಿರ ಸ್ಥಾಪನೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಶ್ರೀಲಂಕಾ ಅಧ್ಯಕ್ಷ ‍ಶ್ರೀ ರನಿಲ್‌ ವಿಕ್ರಮಸಿಂಘೆ ಅಭಿನಂದಿಸಿದರು. ಅಲ್ಲದೇ ಉಭಯ ದೇಶಗಳ ನಡುವಿನ ಶತಮಾನಗಳ ಆರ್ಥಿಕ ಬಾಂಧವ್ಯ ಕುರಿತಂತೆ ಒತ್ತಿ ಹೇಳಿದರು. ಎರಡೂ ದೇಶಗಳ ನಡುವಿನ ಆವೇಗ ಮತ್ತು ಸಂಬಂಧದ ಗಾಢತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅಧ್ಯಕ್ಷರು ಆಶಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಭಾರತ, ಶ್ರೀಲಂಕಾ ಮತ್ತು ಮಾರಿಷಸ್‌ ನಂತಹ ಮೂರು ಸ್ನೇಹಶೀಲ ರಾಷ್ಟ್ರಗಳಿಗೆ ಇದು ಅತ್ಯಂತ ವಿಶೇಷವಾದ ದಿನವಾಗಿದ್ದು, ಐತಿಹಾಸಿಕ ಬಾಂಧವ್ಯದಿಂದ ಅತ್ಯಾಧುನಿಕ ಡಿಜಿಟಲ್‌ ಸಂಪರ್ಕದವರೆಗೆ ಸಂಬಂಧ ಪ್ರಗತಿ ಹೊಂದುವಂತಾಗಿದೆ. ಜನರ ಅಭಿವೃದ್ಧಿಯಲ್ಲಿ ಸರ್ಕಾರದ ಈ ಬದ್ಧತೆ ಪ್ರಮುಖ ಪುರಾವೆಯಾಗಿದೆ. ಹಣಕಾಸು ತಂತ್ರಜ್ಞಾನದ ಸಂಪರ್ಕದಿಂದ ಬರುವ ದಿನಗಳಲ್ಲಿ ಗಡಿಯಾಚೆಯ ವಹಿವಾಟು ಮತ್ತು ಸಂಪರ್ಕ ಬಲಗೊಳ್ಳಲಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. “ಭಾರತದ ಯುಪಿಐ ಅಥವಾ ಯುನೈಟೆಡ್‌ ಪೇಮೆಂಟ್ಸ್‌ ಇಂಟರ್ಫೇಸ್‌ ಇಂದು ಹೊಸ ಪಾತ್ರ ವಹಿಸುತ್ತಿದ್ದು, ಭಾರತದೊಂದಿಗೆ ಪಾಲುದಾರರನ್ನು ಒಗ್ಗೂಡಿಸುತ್ತಿದೆ” ಎಂದರು.   

 

|

ಸಾರ್ವಜನಿಕ ಡಿಜಿಟಲ್ ಮೂಲ ಸೌಕರ್ಯ ಭಾರತದಲ್ಲಿ ಕ್ರಾಂತಿಕಾರ ಬದಲಾವಣೆಗಳನ್ನು ತಂದಿದ್ದು, ದೇಶದ ಸಣ್ಣ ಹಳ್ಳಿಯ ವ್ಯಾಪಾರಿಗಳು ಕೂಡ ಯುಪಿಐ ವಹಿವಾಟು ಮತ್ತು ಡಿಜಿಟಲ್‌ ಪಾವತಿ ಮಾಡುತ್ತಿದ್ದಾರೆ. ಯುಪಿಐ ವಹಿವಾಟುಗಳನ್ನು ತ್ವರಿತಗೊಳಿಸುವ ಮತ್ತು ಮನವರಿಕೆ ಮಾಡಿಕೊಡುವ ಕುರಿತಂತೆ ಮಾತನಾಡಿದ ಪ್ರಧಾನಮಂತ್ರಿಯವರು, ಕಳೆದ ವರ್ಷ 100 ಶತಕೋಟಿ ಯುಪಿಐ ವಹಿವಾಟುಗಳು ನಡೆದಿದ್ದು, ಇದರ ಮೊತ್ತ ಎರಡು ಲಕ್ಷ ಕೋಟಿ ರೂಪಾಯಿ ಇಲ್ಲವೆ ಶ್ರೀಲಂಕಾದ 8 ಟ್ರಿಲಿಯನ್‌ ಡಾಲರ್‌ ಇಲ್ಲವೆ ಮಾರಿಷಸ್‌ ನ ಒಂದು ಟ್ರಿಲಿಯನ್‌ ಡಾಲರ್‌ ಆಗಿದೆ ಎಂದು ಹೇಳಿದರು. ಬ್ಯಾಂಕ್‌ ಖಾತೆಗಳು, ಆಧಾರ್‌ ಮತ್ತು ಮೊಬೈಲ್‌ ಫೋನ್‌ ಗಳ ಜಿಇಎಂ ಟ್ರಿನಿಟಿ ಮೂಲಕ 34 ಲಕ್ಷ ಕೋಟಿ ರೂಪಾಯಿ  ಅಥವಾ 400 ಶತಕೋಟಿ ಅಮೆರಿಕ ಡಾಲರ್‌ ಮೊತ್ತ ಫಲಾನುಭವಿಗಳ ಖಾತೆಗಳಿಗೆ ವರ್ಗಾಯಿಸಿರುವುದನ್ನು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. ಭಾರತ ಕೋವಿನ್‌ ವೇದಿಕೆ ಮೂಲಕ ಜಗತ್ತಿನ ಅತಿ ದೊಡ್ಡ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಿತ್ತು. “ತಂತ್ರಜ್ಞಾನವನ್ನು ಬಳಸುವುದರಿಂದ ಪಾರದರ್ಶಕತೆ ತರಬಹುದು, ಭ್ರಷ್ಟಾಚಾರ ತಗ್ಗಿಸಬಹುದು ಮತ್ತು ಎಲ್ಲರನ್ನೊಳಗೊಳ್ಳುವ ಸಮಾಜ ನಿರ್ಮಿಸಬಹುದು” ಎಂದು ಪ್ರಧಾನಮಂತ್ರಿಯವರು ಹೇಳಿದರು.   

“ ʼನೆರೆಹೊರೆಯವರು ಮೊದಲುʼ ಎನ್ನುವುದು ಭಾರತದ ನೀತಿಯಾಗಿದೆ. ನಮ್ಮ ಸಮುದ್ರ ವಲಯದ ದೃಷ್ಟಿಕೋನ ಎಸ್.ಎ.ಜಿ.ಎ.ಆರ್‌ ಆಗಿದೆ – ಅಂದರೆ ಭದ್ರತೆ ಮತ್ತು ಎಲ್ಲಾ ವಲಯಗಳ ಪ್ರಗತಿ”. ನೆರೆ ಹೊರೆಯವರನ್ನು ಪ್ರತ್ಯೇಕಿಸಿ ಭಾರತ ಅಭಿವೃದ್ಧಿಯನ್ನು ಎಂದಿಗೂ ನೋಡುವುದಿಲ್ಲ” ಎಂದರು.

‍ಶ್ರೀ ಲಂಕಾ ಅಧ್ಯಕ್ಷರು ಕಳೆದ ಬಾರಿ ಭೇಟಿ ನೀಡಿದಾಗ ಅಭಿವೃದ್ಧಿ ದೃಷ್ಟಿಕೋನವನ್ನು ಅಳವಡಿಸಿಕೊಂಡ ವಿಚಾರವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಹಣಕಾಸು ವಲಯದ ಸಂಪರ್ಕವನ್ನು ಬಲಗೊಳಿಸುವುದರ ಪರಿಣಾಮವನ್ನು ಒತ್ತಿ ಹೇಳಿದರು. ಜಿ20 ಶೃಂಗ ಸಭೆಯ ಸಂದರ್ಭದಲ್ಲಿ ವಿಶೇಷ ಅತಿಥಿಯಾಗಿದ್ದ ಪ್ರಧಾನಿ ಶ್ರೀ ಪ್ರವೀಂದ್‌ ಜುಗ್ನಾಥ್‌ ಅವರೊಂದಿಗಿನ ವಿಶೇಷ ಚರ್ಚೆಗಳನ್ನು ನೆನಪು ಮಾಡಿಕೊಂಡರು.   

 

|

ಶ್ರೀಲಂಕಾ ಮತ್ತು ಮಾರಿಷಸ್‌ ನೊಂದಿಗೆ ಯುಪಿಐ ಸಂಪರ್ಕದಿಂದ ವಿಶ್ವಾಸ ವರ್ಧನೆಯಾಗಲಿದೆ ಮತ್ತು ಡಿಜಿಟಲ್‌ ಪರಿವರ್ತನೆಗೆ ಪುಷ್ಟಿ ದೊರೆಯಲಿದೆ. ಸ್ಥಳೀಯ ಆರ್ಥಿಕತೆಯಲ್ಲಿ ಸಾಕಾರಾತ್ಮಕ ಬದಲಾವಣೆ ಕಾಣದಲಿದೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ. ಭಾರತೀಯ ಪ್ರವಾಸಿಗರು ಯುಪಿಐ ಸಂಪರ್ಕ ಹೊಂದಿರುವ ತಾಣಗಳಿಗೆ ಪ್ರವಾಸ ಕೈಗೊಳ್ಳಲು ಆದ್ಯತೆ ನೀಡಬಹುದು ಎನ್ನುವ ವಿಶ್ವಾಸವಿದೆ. ಭಾರತೀಯ ಮೂಲದ ಶ್ರೀಲಂಕಾ ಮತ್ತು ಮಾರಿಷಸ್‌ ಜನರಿಗೆ ಹಾಗೂ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.  

“‍ಯುಪಿಐ ನೊಂದಿಗೆ ಶ್ರೀಲಂಕಾ ಮತ್ತು ಮಾರಿಷಸ್‌ ಬೆಸೆದುಕೊಂಡಿರುವುದರಿಂದ ಎರಡೂ ದೇಶಗಳಿಗೂ ಅನುಕೂಲ ಹಾಗೂ ಡಿಜಿಟಲ್‌ ಮೂಲ ಸೌಕರ್ಯಕ್ಕೆ ಪುಷ್ಟಿ ದೊರೆಯಲಿದೆ”
“ನೇಪಾಳ, ಭೂತಾನ್‌, ಸಿಂಗಾಪೂರ್‌ ಮತ್ತು ಏಷ್ಯಾದ ಗಲ್ಪ್‌ ನ ಯುಎಇ ನಂತರ ಇದೀಗ ಮಾರಿಷಸ್‌ ಸೇರ್ಪಡೆಯಾಗಿದೆ. ಆಫ್ರಿಕಾದಲ್ಲೂ ರುಪೇ ಕಾರ್ಡ್‌ ಪರಿಚಯಿಸುತ್ತಿದ್ದೇವೆ”. ಇದರಿಂದ ಕಠಿಣವಾದ ಕರೆನ್ಸಿ ಖರೀದಿಸುವುದು ತಗ್ಗಬಹುದು. ಯುಪಿಐ ಮತ್ತು ರುಪೇ ಕಾರ್ಡ್‌ ವ್ಯವಸ್ಥೆ ಸಕಾಲದಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ವೆಚ್ಚ ಕಡಿತಗೊಳಿಸಲಿದೆ ಮತ್ತು ನಮ್ಮದೇ ಕರೆನ್ಸಿಯಲ್ಲಿ ಪಾವತಿ ಸುಗಮಗೊಳ್ಳಲಿದೆ. ಮುಂಬರುವ ಸಮಯದಲ್ಲಿ ಗಡಿಯಾಚೆಯ ಪಾವತಿ ಸೌಲಭ್ಯ ದೊರೆಯಲಿದೆ. ವ್ಯಕ್ತಿಯಿಂದ ವ್ಯಕ್ತಿಗೆ [ಪಿ2ಪಿ] ಪಾವತಿ ಸೌಲಭ್ಯ ಲಭಿಸಲಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.  

ಇಂದಿನ ಹೊಸ ಉಪಕ್ರಮ ಜಾಗತಿಕ ದಕ್ಷಿಣದ ಸಹಕಾರದ ಸಂಕೇತವಾಗಿದೆ. “ ಇದು ನಮ್ಮ ಬಾಂಧವ್ಯ ಕೇವಲ ವಹಿವಾಟು ಅಲ್ಲ, ಇದು ಐತಿಹಾಸಿಕ ಬಾಂಧವ್ಯವಾಗಿದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು. ಈ ಮೂರು ರಾಷ್ಟ್ರಗಳ ನಡುವೆ ಜನರಿಂದ ಜನರ ನಡುವಿನ ಬಾಂಧವ್ಯ ಬಲವರ್ಧನೆಗೊಳಿಸಲು ಸಹಕಾರಿಯಾಗಲಿದೆ. ಕಳೆದ ಹತ್ತು ವರ್ಷಗಳಿಂದ ನೆರೆ ಹೊರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇವೆ. “ಅದು ನೈಸರ್ಗಿಕ ವಿಪತ್ತು ಆಗಿರಬಹುದು, ಆರೋಗ್ಯಕ್ಕೆ ಸಂಬಂಧಿಸಿದ್ದಾಗಿರಬಹುದು, ಆರ್ಥಿಕತೆ ಅಥವಾ ಅಂತರರಾಷ್ಟ್ರೀಯ ಬದಲಾವಣೆಯೇ ಆಗಿರಬಹುದು, ಜಾಗತಿಕವಾಗಿ ಮೊದಲು ಪ್ರತಿಕ್ರಿಯೆ ನೀಡುತ್ತಿರುವುದು ಭಾರತ ಹಾಗೂ ಇದು ಬರುವ ದಿನಗಳಲ್ಲಿ ಮುಂದುವರೆಯಲಿದೆ” ಎಂದು ಹೇಳಿದರು. ಜಾಗತಿಕ ದಕ್ಷಿಣದ ಕಳವಳಗಳತ್ತ ವಿಶೇಷ ಗಮನಹರಿಸಿದ್ದು, ಜಿ20 ಅಧ್ಯಕ್ಷತೆ ಸಮಯದಲ್ಲೂ ಆದ್ಯತೆ ನೀಡಲಾಗಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಭಾರತದ ಡಿಜಿಟಲ್‌ ಸಾರ್ವಜನಿಕ ಮೂಲ ಸೌಕರ್ಯದ ಪ್ರಯೋಜನಗಳನ್ನು ಜಾಗತಿಕ ದಕ್ಷಿಣದಲ್ಲಿರುವ ದೇಶಗಳಿಗೆ ವಿಸ್ತರಿಸಲು ಸಾಮಾಜಿಕ ಪರಿಣಾಮ ಬೀರುವ ನಿಧಿ ಸ್ಥಾಪಿಸುವ ಕುರಿತು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು.

 

|

ಇಂದು ಹೊಸ ಉಪಕ್ರಮ ಜಾರಿಗೊಳಿಸುವ ಕುರಿತು ವಿಶೇಷ ಮುತುವರ್ಜಿ ವಹಿಸಿದ ಅಧ್ಯಕ್ಷ ಶ್ರೀ ರನಿಲ್‌ ವಿಕ್ರಮಸಿಂಘೆ ಹಾಗೂ ಪ್ರಧಾನಮಂತ್ರಿ ಶ್ರೀ ಪ್ರವೀಂದ್‌ ಜುಗ್ನಾಥ್‌ ಅವರಿಗೆ ಪ್ರಧಾನಮಂತ್ರಿಯವರು ಕೃತಜ್ಞತೆ ಸಲ್ಲಿಸಿದರು. ಯಶಸ್ವಿಯಾಗಿ ಕಾರ್ಯಕ್ರಮ ಆಯೋಜಿಸಲು ಕಾರಣರಾದ ಕೇಂದ್ರೀಯ ಬ್ಯಾಂಕ್ ಗಳು ಮತ್ತು ಮೂರು ರಾಜ್ಯಗಳ ಸಂಸ್ಥೆಗಳಿಗೆ ಧನ್ಯವಾದ ಸಲ್ಲಿಸಿದರು.

ಹಿನ್ನೆಲೆ

ಭಾರತ ಹಣಕಾಸು ತಂತ್ರಜ್ಞಾನ ಮತ್ತು ಡಿಜಿಟಲ್‌ ಮೂಲ ಸೌಕರ್ಯ ವಲಯದಲ್ಲಿ ನಾಯಕನಾಗಿ ಹೊರ ಹೊಮ್ಮಿದೆ. ಭಾರತದ ಅಭಿವೃದ್ಧಿ ಅನುಭವಗಳು ಮತ್ತು ನಾವೀನ್ಯತೆಯನ್ನು ಸಹಭಾಗಿ ದೇಶಗಳೊಂದಿಗೆ ಹಂಚಿಕೊಳ್ಳಲು ಉತ್ಸುಕವಾಗಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದ್ದಾರೆ. ಶ್ರೀಲಂಕಾ ಮತ್ತು ಮಾರಿಷಸ್‌ ನೊಂದಿಗೆ ಜನರಿಂದ ಜನರ ನಡುವೆ ಬಾಂಧವ್ಯ ಮತ್ತು ದೃಢವಾದ ಸಾಂಸ್ಕೃತಿಕತೆಗೆ ಭಾರತ ಪುಷ್ಟಿ ನೀಡಿದೆ. ಈ ಸೇವೆಗಳ ಆರಂಭದಿಂದ ಹೆಚ್ಚಿನ ಪ್ರಮಾಣದ ಜನರಿಗೆ ಅನುಕೂಲವಾಗಲಿದ್ದು, ತ್ವರಿತ ಮತ್ತು ತಡೆರಹಿತ ಡಿಜಿಟಲ್‌ ವಹಿವಾಟು ನಡೆಸಲು ಸಹಕಾರಿಯಾಗಲಿದೆ ಹಾಗೂ  ದೇಶಗಳೊಂದಿಗೆ ಡಿಜಿಟಲ್‌ ಸಂಪರ್ಕವನ್ನು ವೃದ್ಧಿಸಲು ಸಾಧ್ಯವಾಗಲಿದೆ.

ಇದರಿಂದ ಯುಪಿಐ ಸೇವೆಗಳು ದೊರೆಯಲಿದ್ದು, ಶ್ರೀಲಂಕಾ ಮತ್ತು ಮಾರಿಷಸ್‌ ಗೆ ಭಾರತೀಯರು ಪ್ರವಾಸ ಕೈಗೊಂಡ ಸಂದರ್ಭದಲ್ಲಿ, ಇಲ್ಲವೆ ಮಾರಿಷನ್‌ ಮತ್ತು ‍ಶ್ರೀಲಂಕಾ ದೇಶದವರು ಭಾರತಕ್ಕೆ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅನುಕೂಲವಾಗಲಿದೆ. ಮಾರಿಷಸ್‌ ನಲ್ಲಿ ರುಪೇ ಕಾರ್ಡ್‌ ಸೇವೆ ವಿಸ್ತರಣೆಯಿಂದ ಮಾರಿಷಸ್‌ ರುಪೇ ಕಾರ್ಯವಿಧಾನದ ಆಧಾರದ ಮೇಲೆ ಕಾರ್ಡ್‌ ಗಳನ್ನು ವಿತರಿಸಲು ಮಾರಿಷಸ್‌ ಬ್ಯಾಂಕ್‌ ಗಳಿಗೆ ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಮಾರಿಷಸ್‌ ನಲ್ಲಿ ಹೊಸಹತುಗಳಿಗಾಗಿ ರುಪೇ ಕಾರ್ಡ್‌ ಬಳಕೆಯನ್ನು ಸುಲಭಗೊಳಿಸಲಿದೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

  • Reena chaurasia September 06, 2024

    राम
  • Govind April 14, 2024

    sir please help me 🙏😭🙏😭😭🙏😭🙏🙏 please
  • Pradhuman Singh Tomar April 13, 2024

    BJP
  • Pawan Jain April 13, 2024

    नमो नमो
  • Vivek Kumar Gupta April 09, 2024

    नमो .........................🙏🙏🙏🙏🙏
  • Vivek Kumar Gupta April 09, 2024

    नमो .............................🙏🙏🙏🙏🙏
  • ROYALINSTAGREEN April 05, 2024

    i request you can all bjp supporter following my Instagram I'd _Royalinstagreen 🙏🙏
  • Harish Awasthi March 17, 2024

    मोदी है तो मुमकिन है
  • advaitpanvalkar March 10, 2024

    जय हिंद जय महाराष्ट्र
  • advaitpanvalkar March 10, 2024

    जय हिंद जय महाराष्ट्र
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Over 100K internships on offer in phase two of PM Internship Scheme

Media Coverage

Over 100K internships on offer in phase two of PM Internship Scheme
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 20 ಫೆಬ್ರವರಿ 2025
February 20, 2025

Citizens Appreciate PM Modi's Effort to Foster Innovation and Economic Opportunity Nationwide