ಎರಡನೇ ಭಾರತ-ಕಾರಿಕಾಮ್ ಶೃಂಗಸಭೆ

Published By : Admin | November 21, 2024 | 02:00 IST

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಪ್ರಸ್ತುತ ಕಾರಿಕಾಮ್ ಒಕ್ಕೂಟದ ಅಧ್ಯಕ್ಷರಾದ ಗ್ರೆನಡಾದ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಡಿಕಾನ್ ಮಿಚೆಲ್ ಅವರು 20 ನವೆಂಬರ್ 2024 ರಂದು ಜಾರ್ಜ್‌ಟೌನ್‌ ನಲ್ಲಿ ನಡೆದ 2ನೇ ಭಾರತ-ಕಾರಿಕಾಮ್ ಶೃಂಗಸಭೆಯ ಅಧ್ಯಕ್ಷತೆ ವಹಿಸಿದ್ದರು. ಶೃಂಗಸಭೆಯನ್ನು ಸೌಜನ್ಯದಿಂದ ಆಯೋಜಿಸಿದ್ದಕ್ಕಾಗಿ ಗಯಾನಾ ಅಧ್ಯಕ್ಷರಾದ ಘನತೆವೆತ್ತ ಶ್ರೀ ಇರ್ಫಾನ್ ಅಲಿ ಅವರನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು.

ಮೊದಲ ಭಾರತ-ಕಾರಿಕಾಮ್ ಶೃಂಗಸಭೆಯು 2019 ರಲ್ಲಿ ನ್ಯೂಯಾರ್ಕ್‌ ನಲ್ಲಿ ನಡೆಯಿತು.  ಗಯಾನಾ ಅಧ್ಯಕ್ಷ ಮತ್ತು ಗ್ರೆನಡಾದ ಪ್ರಧಾನ ಮಂತ್ರಿ ಜೊತೆಗೆ, ಶೃಂಗಸಭೆಯಲ್ಲಿ ಭಾಗವಹಿಸಿದ ಇತರರ ವಿವರ ಹೀಗಿದೆ:

 (i) ಡೊಮಿನಿಕಾದ ಅಧ್ಯಕ್ಷ ಘನತೆವೆತ್ತ ಸಿಲ್ವಾನಿ ಬರ್ಟನ್ ಮತ್ತು ಡೊಮಿನಿಕಾದ ಪ್ರಧಾನ ಮಂತ್ರಿ, ಘನತೆವೆತ್ತ ರೂಸ್ವೆಲ್ಟ್ ಸ್ಕೆರಿಟ್;
 (ii) ಸುರಿನಾಮ್ ಅಧ್ಯಕ್ಷ ಘನತೆವೆತ್ತ  ಚಂದ್ರಿಕಾಪರ್ಸಾದ್ ಸಂತೋಖಿ;
 (iii) ಟ್ರಿನಿಡಾಡ್ ಮತ್ತು ಟೊಬಾಗೋದ ಪ್ರಧಾನಮಂತ್ರಿ ಘನತೆವೆತ್ತ ಡಾ. ಕೀತ್ ರೌಲಿ;
 (iv) ಬಾರ್ಬಡೋಸ್‌ನ ಪ್ರಧಾನ ಮಂತ್ರಿ, ಘನತೆವೆತ್ತ  ಮಿಯಾ ಅಮೋರ್ ಮಾಟ್ಲಿ;
 (v) ಆಂಟಿಗುವಾ ಮತ್ತು ಬಾರ್ಬುಡಾದ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಗ್ಯಾಸ್ಟನ್ ಬ್ರೌನ್;
 (vi) ಗ್ರೆನಡಾದ ಪ್ರಧಾನ ಮಂತ್ರಿ ಘನತೆವೆತ್ತ  ಡಿಕಾನ್ ಮಿಚೆಲ್;
 (vii) ಬಹಾಮಾಸ್‌ ನ ಪ್ರಧಾನಮಂತ್ರಿ ಮತ್ತು ಹಣಕಾಸು ಸಚಿವರಾದ ಘನತೆವೆತ್ತ ಫಿಲಿಪ್ ಎಡ್ವರ್ಡ್ ಡೇವಿಸ್, ಕೆ.ಸಿ.
 (viii) ಸೇಂಟ್ ಲೂಸಿಯಾದ ಪ್ರಧಾನಮಂತ್ರಿ ಘನತೆವೆತ್ತ ಫಿಲಿಪ್ ಜೆ ಪಿಯರ್
 (ix) ಸೇಂಟ್ ವಿನ್ಸೆಂಟ್ ಪ್ರಧಾನ ಮಂತ್ರಿ ಘನತೆವೆತ್ತ  ರಾಲ್ಫ್ ಎವೆರಾರ್ಡ್ ಗೊನ್ಸಾಲ್ವೆಸ್
 (x) ಬಹಾಮಾಸ್‌ನ ಪ್ರಧಾನ ಮಂತ್ರಿ ಘನತೆವೆತ್ತ ಫಿಲಿಪ್ ಎಡ್ವರ್ಡ್ ಡೇವಿಸ್
 (xi) ಬೆಲೀಜ್‌ನ ವಿದೇಶಾಂಗ ಮಂತ್ರಿ ಘನತೆವೆತ್ತ ಫ್ರಾನ್ಸಿಸ್ ಫೊನ್ಸೆಕಾ
 (xii) ಜಮೈಕಾದ ವಿದೇಶಾಂಗ ಸಚಿವ ಘನತೆವೆತ್ತ ಕಾಮಿನಾ ಸ್ಮಿತ್
 (xiii) ಸೇಂಟ್ ಕಿಟ್ಸ್ ಮತ್ತು ನೆವಿಸ್ ವಿದೇಶಾಂಗ ಸಚಿವ ಘನತೆವೆತ್ತ  ಡಾ. ಡೆನ್ಸಿಲ್ ಡಗ್ಲಾಸ್

 2. ಕಾರಿಕಾಮ್ ದೇಶಗಳ ಜನನಾಯಕರೊಂದಿಗೆ ತಮ್ಮ ಆಳವಾದ ಒಗ್ಗಟ್ಟನ್ನು ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಈ ಪ್ರದೇಶದಲ್ಲಿ ಬೆರಿಲ್ ಚಂಡಮಾರುತದಿಂದ ಉಂಟಾದ ವಿನಾಶದ ಬಗ್ಗೆ ತಮ್ಮ ಸಹಾನುಭೂತಿಗಳನ್ನು ತಿಳಿಸಿದರು.  ಇತ್ತೀಚಿನ ವರ್ಷಗಳಲ್ಲಿನ ಸವಾಲುಗಳು ಮತ್ತು ಘರ್ಷಣೆಗಳಿಂದ ಜಾಗತಿಕ ದಕ್ಷಿಣ ದೇಶಗಳು ಹೆಚ್ಚು ಪ್ರಭಾವಿತವಾಗಿವೆ ಎಂದು ಹೇಳಿದರು.

 

|

ಕಾರಿಕಾಮ್ ದೇಶಗಳಿಗೆ ವಿಶ್ವಾಸಾರ್ಹ ಪಾಲುದಾರರಾಗಿ ಭಾರತದ ದೃಢವಾದ ಬದ್ಧತೆಯನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು.  ಈ ಒಕ್ಕೂಟದ ಸದಸ್ಯ ದೇಶಗಳಿಗೆ ಭಾರತದ ಅಭಿವೃದ್ಧಿ ಸಹಕಾರ ಬೆಂಬಲವು ಕಾರಿಕಾಮ್ ದೇಶಗಳ ಅಗತ್ಯತೆಗಳು ಮತ್ತು ಆದ್ಯತೆಗಳನ್ನು ಆಧರಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು.

 3. ಭಾರತದ ನಿಕಟ ಅಭಿವೃದ್ಧಿ ಸಹಭಾಗಿತ್ವವನ್ನು ಮತ್ತಷ್ಟು ನಿರ್ಮಿಸಲು ಮತ್ತು ಪ್ರದೇಶದ ಜನರೊಂದಿಗೆ ಬಲವಾದ ಜನರ ಸಂಬಂಧವನ್ನು ನಿರ್ಮಿಸಲು, ಏಳು ಪ್ರಮುಖ ಕ್ಷೇತ್ರಗಳಲ್ಲಿ ಕಾರಿಕಾಮ್ ದೇಶಗಳಿಗೆ ಸಹಾಯವನ್ನು ನೀಡುವುದಾಗಿ ಪ್ರಧಾನಮಂತ್ರಿಯವರು ಹೇಳಿದರು.  ಈ ಪ್ರದೇಶಗಳು ಕಾರಿಕಾಮ್ ಸಂಕ್ಷೇಪಣದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆ ಮತ್ತು ಭಾರತ ಮತ್ತು ಕಾರಿಕಾಮ್ ದೇಶಗಳ ಗುಂಪಿನ ನಡುವಿನ ಸ್ನೇಹದ ನಿಕಟ ಬಾಂಧವ್ಯಗಳನ್ನು ವರ್ಧಿಸುತ್ತವೆ.  

ಆ ಕ್ಷೇತ್ರಗಳೆಂದರೆ:

 ● ಸಿ: ಸಾಮರ್ಥ್ಯ ನಿರ್ಮಾಣ
 ● ಎ: ಕೃಷಿ ಮತ್ತು ಆಹಾರ ಭದ್ರತೆ
 ● ಆರ್: ನವೀಕರಿಸಬಹುದಾದ ಶಕ್ತಿ ಮತ್ತು ಹವಾಮಾನ ಬದಲಾವಣೆ
 ● ಐ: ನಾವೀನ್ಯತೆ, ತಂತ್ರಜ್ಞಾನ ಮತ್ತು ವ್ಯಾಪಾರ
 ● ಸಿ: ಕ್ರಿಕೆಟ್ ಮತ್ತು ಸಂಸ್ಕೃತಿ
 ● ಒ: ಸಾಗರ ಆರ್ಥಿಕತೆ ಮತ್ತು ಕಡಲ ಭದ್ರತೆ
 ● ಎಂ: ಔಷಧ ಮತ್ತು ಆರೋಗ್ಯ

 4. ಸಾಮರ್ಥ್ಯ ವರ್ಧನೆಯ ಮೇಲೆ, ಮುಂದಿನ ಐದು ವರ್ಷಗಳಲ್ಲಿ ಕಾರಿಕಾಮ್ ದೇಶಗಳಿಗೆ ಒಂದು ಸಾವಿರ ಐಟಿಇಸಿ ಸ್ಲಾಟ್‌ಗಳನ್ನು ಪ್ರಧಾನಮಂತ್ರಿಯವರು ಘೋಷಿಸಿದರು.  ಆಹಾರ ಭದ್ರತೆಯ ಕ್ಷೇತ್ರದಲ್ಲಿ, ಈ ದೇಶಗಳಿಗೆ ತಂತ್ರಜ್ಞಾನ ನಿರ್ಣಾಯಕ ಸವಾಲಾಗಿದೆ - ಡ್ರೋನ್‌ ಗಳು, ಡಿಜಿಟಲ್ ಕೃಷಿ, ಕೃಷಿ ಯಾಂತ್ರೀಕರಣ ಮತ್ತು ಮಣ್ಣು ಪರೀಕ್ಷೆ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಭಾರತದ ಅನುಭವವನ್ನು ಪ್ರಧಾನಮಂತ್ರಿಯವರು ಹಂಚಿಕೊಂಡರು.

 

|

ಸರ್ಗಸ್ಸಮ್ ಕಡಲಕಳೆ / ಕಸ ಕೆರಿಬಿಯನ್ ಪ್ರವಾಸೋದ್ಯಮಕ್ಕೆ ಒಂದು ಪ್ರಮುಖ ಸವಾಲನ್ನು ಒಡ್ಡುತ್ತದೆ, ಕಡಲಕಳೆಯನ್ನು ಗೊಬ್ಬರವಾಗಿ ಪರಿವರ್ತಿಸಲು ಸಹಾಯ ಮಾಡಲು ಭಾರತವು ಸಂತೋಷಪಡುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

 5. ನವೀಕರಿಸಬಹುದಾದ ಇಂಧನ ಮತ್ತು ಹವಾಮಾನ ಬದಲಾವಣೆಯ ಕ್ಷೇತ್ರಗಳಲ್ಲಿ ಭಾರತ ಮತ್ತು ಕಾರಿಕಾಮ್ ನಡುವಿನ ಸಹಯೋಗವನ್ನು ವರ್ಧಿಸಲು ಕರೆ ನೀಡಿದ ಪ್ರಧಾನಮಂತ್ರಿಯವರು, ಅಂತರರಾಷ್ಟ್ರೀಯ ಸೌರ ಒಕ್ಕೂಟ, ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟ, ಮಿಷನ್ ಲೈಫ್ ಮತ್ತು ಗ್ಲೋಬಲ್‌ ಜೈವಿಕ ಇಂಧನ ಒಕ್ಕೂಟ ನಂತಹ ಭಾರತದ ನೇತೃತ್ವದ ಜಾಗತಿಕ ಉಪಕ್ರಮಗಳಿಗೆ ಸೇರಲು ಸದಸ್ಯರನ್ನು ಒತ್ತಾಯಿಸಿದರು.  

 6. ಭಾರತದಲ್ಲಿನ ನಾವೀನ್ಯತೆ, ತಂತ್ರಜ್ಞಾನ ಮತ್ತು ವ್ಯಾಪಾರದಿಂದ ಉಂಟಾದ ಪರಿವರ್ತಕ ಬದಲಾವಣೆಗಳ ಬಗ್ಗೆ ಮಾತನಾಡುತ್ತಾ, ಪ್ರಧಾನಮಂತ್ರಿಯವರು ಭಾರತದ ಸಾರ್ವಜನಿಕ ಸೇವೆಯ ವಿತರಣೆಯನ್ನು ಹೆಚ್ಚಿಸಲು ಕಾರಿಕಾಮ್ ನಲ್ಲಿನ ದೇಶಗಳಿಗೆ ಸಲಹೆ ನೀಡಿದರು, ಈ ನಿಟ್ಟಿನಲ್ಲಿ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಕ್ಲೌಡ್-ಆಧಾರಿತ ಡಿಜಿ ಲಾಕರ್ ಮತ್ತು ಯುಪಿಐ ಮಾದರಿಗಳ ವಿವರ ನೀಡಿದರು.

 7. ಕಾರಿಕಾಮ್ ಮತ್ತು ಭಾರತವು ನಿಕಟ ಸಾಂಸ್ಕೃತಿಕ ಮತ್ತು ಕ್ರಿಕೆಟ್ ಸಂಬಂಧಗಳನ್ನು ಹಂಚಿಕೊಳ್ಳುತ್ತವೆ.  ಈ ನಿಟ್ಟಿನಲ್ಲಿ ಕಾರಿಕಾಮ್ ದೇಶಗಳ 11 ಯುವ ಮಹಿಳಾ ಕ್ರಿಕೆಟಿಗರಿಗೆ ಭಾರತದಲ್ಲಿ ತರಬೇತಿ ನೀಡುವುದಾಗಿ ಪ್ರಧಾನಮಂತ್ರಿಯವರು ಘೋಷಿಸಿದರು.  ಅವರು ಮುಂದಿನ ವರ್ಷ ಸದಸ್ಯ ರಾಷ್ಟ್ರಗಳಲ್ಲಿ "ಭಾರತೀಯ ಸಂಸ್ಕೃತಿಯ ದಿನಗಳನ್ನು" ಆಯೋಜಿಸಲು ಸಲಹೆ ನೀಡಿ ವಿಷಯವನ್ನು ಪ್ರಸ್ತಾಪಿಸಿದರು.

 8. ಸಾಗರ ಆರ್ಥಿಕತೆ ಮತ್ತು ಕಡಲ ಭದ್ರತೆಯನ್ನು ಹೆಚ್ಚಿಸಲು, ಕೆರಿಬಿಯನ್ ಸಮುದ್ರದಲ್ಲಿ ಕಡಲ ಡೊಮೇನ್ ಮ್ಯಾಪಿಂಗ್ ಮತ್ತು ಹೈಡ್ರೋಗ್ರಫಿಯಲ್ಲಿ ಕಾರಿಕಾಮ್ ಒಕ್ಕೂಟದ ಸದಸ್ಯ ದೇಶಗಳೊಂದಿಗೆ ಕೆಲಸ ಮಾಡಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು.

 

|

 9. ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ಸೇವೆಯೊಂದಿಗೆ ಭಾರತದ ಯಶಸ್ಸನ್ನು ಪ್ರಧಾನಮಂತ್ರಿ ಎತ್ತಿ ತೋರಿಸಿದರು.  ಜನ್ ಔಷಧಿ ಕೇಂದ್ರಗಳ ಮೂಲಕ ಜೆನೆರಿಕ್ ಔಷಧವನ್ನು ಲಭ್ಯವಾಗುವಂತೆ ಮಾಡುವ ಭಾರತದ ಮಾದರಿಯನ್ನು ಅವರು ಉದಾಹರಣೆ ಸಹಿತ ಮಾಹಿತಿ ನೀಡಿದರು.  ಕಾರಿಕಾಮ್ ದೇಶಗಳ  ಜನರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಯೋಗ ತಜ್ಞರನ್ನು ಕಳುಹಿಸುವುದಾಗಿ ಪ್ರಧಾನಮಂತ್ರಿಯವರು ಘೋಷಿಸಿದರು.

 10. ಕಾರಿಕಾಮ್ ಒಕ್ಕೂಟದ ನಾಯಕರು ಭಾರತ ಮತ್ತು ಕಾರಿಕಾಮ್ ನಡುವಿನ ಪಾಲುದಾರಿಕೆಯನ್ನು ಬಲಪಡಿಸುವ ಪ್ರಧಾನಮಂತ್ರಿಯವರ ಏಳು ಅಂಶಗಳ ಯೋಜನೆಯನ್ನು ಸ್ವಾಗತಿಸಿದರು.

ಭಾರತದ ಗ್ಲೋಬಲ್ ಸೌತ್‌ ನಾಯಕತ್ವ  ಮತ್ತು ಸಣ್ಣ ದ್ವೀಪ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಿಗೆ ಹವಾಮಾನ ನ್ಯಾಯಕ್ಕಾಗಿ ಭಾರತದ ಬಲವಾದ ಬೆಂಬಲವನ್ನು ಕಾರಿಕಾಮ್ ಒಕ್ಕೂಟದ ನಾಯಕರು ಶ್ಲಾಘಿಸಿದರು. ಜಾಗತಿಕ ಸಂಸ್ಥೆಗಳ ಸುಧಾರಣೆಗೆ ಕಾರಿಕಾಮ್ ಒಕ್ಕೂಟದ ನಾಯಕರು ಕರೆ ನೀಡಿದರು ಮತ್ತು ಈ ನಿಟ್ಟಿನಲ್ಲಿ ಭಾರತದೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದಾರೆ ಎಂದು ಕಾರಿಕಾಮ್ ಒಕ್ಕೂಟದ ನಾಯಕರು ತಿಳಿಸಿದರು.

11. ಜಾಗತಿಕ ದಕ್ಷಿಣದ ಕಳವಳಗಳಿಗೆ ಧ್ವನಿ ನೀಡಲು ಭಾರತ ದೃಢವಾಗಿ ನಿಂತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.  ಮುಂದಿನ ಭಾರತ-ಕಾರಿಕಾಮ್ ಶೃಂಗಸಭೆಯನ್ನು ಭಾರತದಲ್ಲಿ ಆಯೋಜಿಸಲಾಗುವುದು ಎಂದು ಪ್ರಧಾನಮಂತ್ರಿಯವರು ಘೋಷಿಸಿದರು.  

ಶೃಂಗಸಭೆಯನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ  ಅಧ್ಯಕ್ಷ ಇರ್ಫಾನ್ ಅಲಿ, ಪ್ರಧಾನಮಂತ್ರಿ ಡಿಕನ್ ಮಿಚೆಲ್ ಮತ್ತು ಕ್ಯಾರಿಕಾಮ್ ಸೆಕ್ರೆಟರಿಯೇಟ್ ಅವರುಗಳಿಗೆಲ್ಲಾ  ಪ್ರಧಾನಮಂತ್ರಿಯವರು ಧನ್ಯವಾದಗಳನ್ನು ಅರ್ಪಿಸಿದರು.

 12. ಆರಂಭಿಕ ಅಧಿವೇಶನ ಮತ್ತು ಮುಕ್ತಾಯದ ಅಧಿವೇಶನಗಳ ಅವಧಿಯಲ್ಲಿ ಪ್ರಧಾನಮಂತ್ರಿಯವರ ಭಾಷಣಗಳನ್ನು ಈ ಕೆಳಗಿನ ಕೊಂಡಿಗಳಲ್ಲಿ ವೀಕ್ಷಿಸಬಹುದು:

2ನೇ ಭಾರತ-ಕಾರಿಕಾಮ್ ಶೃಂಗಸಭೆಯಲ್ಲಿ ಆರಂಭಿಕ ಅಧಿವೇಶನದ ಭಾಷಣ 

 2ನೇ ಭಾರತ-ಕಾರಿಕಾಮ್ ಶೃಂಗಸಭೆಯಲ್ಲಿ ಮುಕ್ತಾಯದ ಅಧಿವೇಶನದ ಭಾಷಣ

 

  • Yash Wilankar January 29, 2025

    Namo 🙏
  • Vivek Kumar Gupta January 20, 2025

    नमो ..🙏🙏🙏🙏🙏
  • Vivek Kumar Gupta January 20, 2025

    नमो ...............................🙏🙏🙏🙏🙏
  • கார்த்திக் January 01, 2025

    🏵️🏵️🏵️🏵️🏵️🏵️🏵️🏵️🏵️🏵️🏵️🏵️🏵️🏵️🏵️ 🙏🏾Wishing All a very Happy New Year 🙏 🌺🌺🌺🌺🌺🌺🌺🌺🌺🌺🌺🌺🌺🌺🌺
  • Yogendra Nath Pandey Lucknow Uttar vidhansabha December 18, 2024

    नमो
  • ram Sagar pandey December 09, 2024

    🌹🙏🏻🌹जय श्रीराम🙏💐🌹जय श्रीकृष्णा राधे राधे 🌹🙏🏻🌹जय माता दी 🚩🙏🙏🌹🌹🙏🙏🌹🌹जय श्रीकृष्णा राधे राधे 🌹🙏🏻🌹🌹🌹🙏🙏🌹🌹🌹🙏🏻🌹जय श्रीराम🙏💐🌹
  • Preetam Gupta Raja December 09, 2024

    जय श्री राम
  • கார்த்திக் December 08, 2024

    🌺ஜெய் ஸ்ரீ ராம்🌺जय श्री राम🌺જય શ્રી રામ🌹 🌺ಜೈ ಶ್ರೀ ರಾಮ್🌺ଜୟ ଶ୍ରୀ ରାମ🌺Jai Shri Ram 🌹🌹 🌺জয় শ্ৰী ৰাম🌺ജയ് ശ്രീറാം 🌺 జై శ్రీ రామ్ 🌹🌸
  • JYOTI KUMAR SINGH December 08, 2024

    🙏
  • parveen saini December 06, 2024

    Namo
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Economic Survey: India leads in mobile data consumption/sub, offers world’s most affordable data rates

Media Coverage

Economic Survey: India leads in mobile data consumption/sub, offers world’s most affordable data rates
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 1 ಫೆಬ್ರವರಿ 2025
February 01, 2025

Budget 2025-26 Viksit Bharat’s Foundation Stone: Inclusive, Innovative & India-First Policies under leadership of PM Modi