ರಾಣಿ ಲಕ್ಷ್ಮಿಬಾಯಿ, ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮತ್ತು ಹೋರಾಟಗಾರ್ತಿಯರಿಗೆ ನಮನ ಸಲ್ಲಿಸಿದರು; ಮೇಜರ್‌ ಧ್ಯಾನ್‌ಚಂದ್‌ ಅವರನ್ನು ಸ್ಮರಿಸಿದರು
ಎನ್‌ಸಿಸಿ ಹಳೆಯ ವಿದ್ಯಾರ್ಥಿಗಳ ಸಂಘದ ಮೊದಲ ಸದಸ್ಯರಾಗಿ ಪ್ರಧಾನಿ ತಮ್ಮ ಹೆಸರನ್ನು ನೊಂದಣಿ ಮಾಡಿಸಿಕೊಂಡರು
ಒಂದೆಡೆ ನಮ್ಮ ದೇಶದ ಸುರಕ್ಷಾ ಪಡೆಗಳು ಸದೃಢಗೊಳ್ಳುತ್ತಿವೆ. ಅವುಗಳ ಸಾಮರ್ಥ್ಯ ಹೆಚ್ಚುತ್ತಿದೆ. ಇನ್ನೊಂದೆಡೆ ಭವಿಷ್ಯದಲ್ಲಿ ದೇಶದ ಸುರಕ್ಷೆಗಾಗಿ ಸೇವೆ ಸಲ್ಲಿಸಲು ಯುವಪಡೆಯನ್ನು ಸಿದ್ಧಗೊಳಿಸುವ ವೇದಿಕೆಯೂ ಸಜ್ಜಾಗುತ್ತಿದೆ
ಸೈನಿಕ ಶಾಲೆಗಳಲ್ಲಿ ಹೆಣ್ಣುಮಕ್ಕಳ ಪ್ರವೇಶಕ್ಕೆ ಸರ್ಕಾರ ಅವಕಾಶವನ್ನು ನೀಡಿದ್ದು, ಪ್ರವೇಶ ಪ್ರಕ್ರಿಯೆಗಳು ಆರಂಭವಾಗಿವೆ. ಈ ಶೈಕ್ಷಣಿಕ ವರ್ಷದಿಂದ ದೇಶದ 33 ಸೈನಿಕ ಶಾಲೆಗಳಲ್ಲಿ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿವೆ
ಸುದೀರ್ಘಕಾಲದವರೆಗೂ ಭಾರತವು ಶಸ್ತ್ರಾಸ್ತ್ರಗಳ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಕೊಳ್ಳುವ ದೇಶವಾಗಿತ್ತು. ಇದೀಗ ಭಾರತದಲ್ಲಿಯೇ ತಯಾರಿಸಿ, ವಿಶ್ವಕ್ಕಾಗಿ ತಯಾರಿಸಿ ಎಂಬ ಸೂತ್ರವನ್ನು ಅಪ್ಪಿದೆ

ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ರಕ್ಷಾ ಸಂಪರ್ಪಣ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮವನ್ನು ಉತ್ತರ ಪ್ರದೇಶದ ಝಾನ್ಸಿಯಲ್ಲಿ ಆಯೋಜಿಸಲಾಗಿತ್ತು. ದೇಶದ ಭದ್ರತಾಪಡೆಗಳಿಗೆ ಹೊಸ ಯೋಜನೆಗಳನ್ನು ಘೋಷಿಸುತ್ತ, ಝಾನ್ಸಿಯ ಕೋಟೆ ಆವರಣದಲ್ಲಿ ಅದ್ಧೂರಿ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಹೊಸ ಹೆಜ್ಜೆಗಳ ಕುರಿತು ಮಾತನಾಡಿದರು. ಎನ್‌ಸಿಸಿಯ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಆರಂಭಿಸುವುದೂ ಇವುಗಳಲ್ಲಿ ಒಂದಾಗಿತ್ತು.  ಪ್ರಧಾನಿ ನರೇಂದ್ರಮೋದಿ ಅವರು ಈ ಸಂಘಕ್ಕೆ ತಾವೇ ಮೊದಲ ಸದಸ್ಯರಾಗಿ ಹೆಸರು ನೊಂದಾಯಿಸಿದರು. ಎನ್‌ಸಿಸಿ ಅಭ್ಯರ್ಥಿಗಳಿಗೆ  ರಾಷ್ಟ್ರೀಯ ಸಿಮ್ಯುಲೆಷನ್‌ ತರಬೇತಿ ಕಾರ್ಯಕ್ರಮದ ಆರಂಭವನ್ನು ಘೋಷಿಸಲಾಯಿತು. ಸಮರ ವೀರರಿಗೆ ಹುತಾತ್ಮರಾದವರಿಗೆ ರಾಷ್ಟ್ರೀಯ ಸಮರ ಸ್ಮಾರಕದಲ್ಲಿ ನಮನ ಸಲ್ಲಿಸಲು ಕಿಯಾಸ್ಕ್‌ ಅನ್ನು ಸಮರ್ಪಿಸಲಾಯಿತು. ರಾಷ್ಟ್ರೀಯ ಸಮರ ಸ್ಮರಣೆಯ ಮೊಬೈಲ್‌ ಆ್ಯಪ್‌ ಅನ್ನು ಆರಂಭಿಸಲಾಯಿತು. ಡಿಆರ್‌ಡಿಒ ವಿನ್ಯಾಸಗೊಳಿಸಿರುವ, ಅಭಿವೃದ್ಧಿ ಪಡಿಸಿರುವ ವಿದ್ಯುನ್ಮಾನ ಸಮರ ಸ್ಯೂಟ್‌ ಶಕ್ತಿ ಅನ್ನು ಭಾರತೀಯ ನೌಕೆಗಳಿಗೆ ನೀಡಲಾಯಿತು. ಹಗುರ ಸಮರ ಹೆಲಿಕಾಪ್ಟರ್‌, ಡ್ರೋನ್‌ಗಳನ್ನು ಸಮರ್ಪಿಸಲಾಯಿತು. ಉತ್ತರ ಪ್ರದೇಶದ ಕೈಗಾರಿಕಾ ಕಾರಿಡಾರ್‌ನಲ್ಲಿರುವ ಭಾರತ್‌ ಡೈನಾಮಿಕ್ಸ್‌ ಲಿಮಿಟೆಡ್‌ಗೆ 400 ಕೋಟಿ ಮೌಲ್ಯದ ನೂತನ ಕಾರ್ಯಗಳಿಗೆ ಶಿಲಾನ್ಯಾಸ ನೆರವೇರಿಸಿದರು. 

ಝಾನ್ಸಿಯ ಗರೌಟಾ ಪ್ರದೇಶದಲ್ಲಿ 600 ಮೆಗಾ ವ್ಯಾಟ್‌ ಅಲ್ಟ್ರಾಮೆಗಾ ಸೌರ ಶಕ್ತಿಯ ಇಂಧನ ಪಾರ್ಕ್‌ಗೆ ಶಿಲಾನ್ಯಾಸ ನೆರವೇರಿಸಿದರು. ಇದನ್ನು 3000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಯ ಮೂಲಕ ಕೈಗೆಟಕುವ ಬೆಲೆಯಲ್ಲಿ ವಿದ್ಯುತ್‌ ಒದಗಿಸಲಾಗುವುದು. ಜೊತೆಗೆ ಸುಸ್ಥಿರವಾದ ಪೂರೈಕೆಯನ್ನೂ ನೀಡಲಾಗುತ್ತದೆ.  ಝಾನ್ಸಿಯಲ್ಲಿ ಅಟಲ್‌ ಏಕತಾ ಪಾರ್ಕ್‌ ಅನ್ನೂ ಸಹ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದರು. ಇದನ್ನು ನಮ್ಮ ಮಾಜಿ ಪ್ರಧಾನಿ ಶ್ರೀ ಅಟಲ್‌ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ಹನ್ನೊಂದು ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 40ಸಾವಿರ ಚದುರ ಮೀಟರ್‌ ವ್ಯಾಪ್ತಿ ಪ್ರದೇಶದಲ್ಲಿ ಇದು ಹರಡಿಕೊಂಡಿದೆ. ಇದರಲ್ಲಿ ಒಂದು ಸುಸಜ್ಜಿತ ಗ್ರಂಥಾಲಯ, ಅಟಲ್‌ ಬಿಹಾರಿ ವಾಜಪೇಯಿ ಅವರ ಪ್ರತಿಮೆಯನ್ನೂ ಒಳಗೊಂಡಿದೆ. ಏಕತೆಯ ಪ್ರತಿಮೆಯನ್ನು ನಿರ್ಮಿಸಿರುವ ಶ್ರೀ ರಾಮ ಸುತಾರ್‌ ಅವರು ಈ ಪ್ರತಿಮೆಯನ್ನು ತಯಾರಿಸಿದ್ದಾರೆ.

ಈ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಣಿ ಲಕ್ಷ್ಮಿಬಾಯಿ ಅವರ ಜನ್ಮೋತ್ಸವ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಎರಡೂ ಆಚರಣೆಗೆ ಈ ಭೂಮಿ ಸಾಕ್ಷಿಯಾಗುತ್ತಿದೆ ಎಂದರು. ಜೊತೆಗೆ ಇಂದು ಸದೃಢ ಹಾಗೂ ಸಶಕ್ತ ಭಾರತವೊಂದು ಸ್ವರೂಪಗೊಳ್ಳುತ್ತಿದೆ. ನಾನು, ಕಾಶಿಯನ್ನು ಪ್ರತಿನಿಧಿಸುತ್ತಿರುವುದು, ಝಾನ್ಸಿರಾಣಿ ಲಕ್ಷ್ಮೀಬಾಯಿ ಅವರ ಜನ್ಮಸ್ಥಳವನ್ನು ಪ್ರತಿನಿಧಿಸುತ್ತಿರುವ ಬಗ್ಗೆ ನನಗೆ ಹೆಮ್ಮೆ ಇದೆ ಅಂದರು.

ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಕಾರ್ತಿಕ್‌ ಪೂರ್ಣಿಮೆ, ದೇವ ದೀಪಾವಳಿ ಹಾಗೂ ಪ್ರಕಾಶ್‌ ಪೂರ್ವ ಗುರುನಾನಕ್‌ ಜಯಂತಿಯ ಶುಭ ಹಾರೈಸಿದರು. ಸಮರಸೇನಾನಿಗಳನ್ನು ಸ್ಮರಿಸಿದ ಪ್ರಧಾನಮಂತ್ರಿ ಸ್ವಾತಂತ್ರ್ಯ ಹೋರಾಟದ ನಾಯಕ, ನಾಯಕರಿಯರಿಗೆ ನಮನಗಳನ್ನು ಸಲ್ಲಿಸಿದರು. ಅವರ ತ್ಯಾಗವನ್ನು ಕೊಂಡಾಡಿದರು. ಈ ಭೂಮಿಯು ಶೌರ್ಯ ಮತ್ತು ತ್ಯಾಗದ ಕತೆಗಳಿಗೆ ವೇದಿಕೆಯಾಗಿದೆ. ವೀರಾಂಗನೆ ಝಲಕಾರಿ ಬಾಯಿ ಅವರ ಸೇನಾ ಶಕ್ತಿಯನ್ನು ಕಂಡಿದೆ. ನಾನು, ಈ ವೀರಾಂಗನೆಯರ ಪಾದಕ್ಕೆ ಶಿರಬಾಗಿ ನಮಿಸುವೆ. 1857ರ ಸ್ವತಂತ್ರ ಸೇನಾನಿಗಳ ಶಾರ್ಯಕ್ಕೆ, ಚಾಂದೇಲರಿಗೆ, ಬುಂದೇಲರಿಗೆ ತಲೆಬಾಗಿ ನಮಿಸುವೆ. ಭಾರತದ ಶೌರ್ಯಪರಂಪರೆಯನ್ನು ಅಮರ ವೀರಕಥೆಗಳ ಸಂಸ್ಕೃತಿ ಇರುವ ಭೂಮಿ ಇದಾಗಿದೆ. ಭಾರತೀಯರೆಲ್ಲರಿಗೂ ಹೆಮ್ಮೆ ಮೂಡಿಸುವಂಥ ಕತೆಗಳಿವೆ. ಬುಂದೇಲಖಂಡ ಭೂಮಿಯ ಹೆಮ್ಮೆಗೆ ನಾನು ಹಣೆಮುಟ್ಟಿ ನಮಿಸುವೆ. ಅಲ್ಹಾಉದಾಲರ ಶೌರ್ಯದ ಕತೆಗಳು ಈಗಲೂ ತ್ಯಾಗದ ಪ್ರತೀಕವಾಗಿವೆ. ಮಾತೃಭೂಮಿಯ ರಕ್ಷಣೆಯಲ್ಲಿ ಅವರ ಕತೆಗಳು ಎಂದೆಂದಿಗೂ ಅಮರವಾಗಿವೆ ಎಂದು ಶೌರ್ಯ ಮತ್ತು ತ್ಯಾಗದ ಪರಂಪರೆಯನ್ನು ನಿರೂಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಝಾನ್ಸಿಯ ಪುತ್ರ ಮೇಜರ್‌ ಧ್ಯಾನ್‌ ಚಂದ್‌ ಅವರನ್ನು ಸ್ಮರಿಸಿದರು. ಕ್ರೀಡೆಯಲ್ಲಿ ಅತ್ಯುತ್ಕೃಷ್ಟ ಸಾಧನೆಗೈದವರಿಗೆ ನೀಡುವ ಪ್ರಶಸ್ತಿಗಳನ್ನು ಧ್ಯಾನ್‌ ಚಂದ್‌ ಹೆಸರಿಗೆ ಮರು ನಾಮಕರಣ ಮಾಡಿರುವುದನ್ನು ನೆನಪಿಸಿಕೊಂಡರು.

ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇನ್ನೊಂದು ವಿಷಯದತ್ತ ಗಮನಸೆಳೆದರು. ನಮ್ಮ ಭದ್ರತಾ ಪಡೆಗಳ ಸಾಮರ್ಥ್ಯ ಹೆಚ್ಚುತ್ತಿದೆ. ಜೊತೆಗೆ ಸದೃಢಗೊಳ್ಳುತ್ತಿದೆ. ಆದರೆ ಅದೇ ರೀತಿಯಾಗಿ ಸಮರ್ಥನೀಯ ಯುವಪಡೆಯೊಂದನ್ನು ಸಿದ್ಧಪಡಿಸಲಾಗುತ್ತಿದೆ. ಇವೆರಡೂ ಸಮಾನಾಂತರವಾಗಿ ಸಿದ್ಧವಾಗುತ್ತಿದ್ದು, ದೇಶದ ಸುರಕ್ಷತೆಗೆ ಭವಿಷ್ಯದ ಸೇನಾನಿಗಳು ಸಿದ್ಧರಾಗುತ್ತಿದ್ದಾರೆ. ಇನ್ನು ಆರಂಭವಾಗಲಿರುವ ನೂರು ಸೈನಿಕ ಶಾಲೆಗಳು ದೇಶವನ್ನು ಅತ್ಯಂತ ಸದೃಢ ಕೈಗೆ ಒಪ್ಪಿಸುವಂಥ ಯುವಪಡೆಯನ್ನು ನಿರ್ಮಿಸಲಿದೆ. ಈಗಾಗಲೇ ಸೈನಿಕ ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಪ್ರವೇಶ ನೀಡಲು ಆರಂಭಿಸಲಾಗಿದೆ. ದೇಶದ ಮೂವತ್ತುಮೂರು ಶಾಲೆಗಳಲ್ಲಿಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ರಾಣಿ ಲಕ್ಷ್ಮೀಬಾಯಿಯಂಥ ಶೂರ ಮಹಿಳೆಯರಾಗಿ ನಮ್ಮ ಹೆಣ್ಣುಮಕ್ಕಳು ಹೊರಹೊಮ್ಮುತ್ತಾರೆ.  ಇವರು ದೇಶದ ಭದ್ರತೆ, ಸುರಕ್ಷೆ ಹಾಗೂ ಅಭಿವೃದ್ಧಿಯನ್ನು ತಮ್ಮ ಹೆಗಲಿನ ನೊಗಕ್ಕೆ ಒಡ್ಡುತ್ತಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎನ್‌ಸಿಸಿಯ ಹಳೆಯ ವಿದ್ಯಾರ್ಥಿಗಳ ಸಂಘಕ್ಕೆ ಮೊದಲ ಸದಸ್ಯರಾಗಿ ತಮ್ಮ ಹೆಸರನ್ನು ನೊಂದಾಯಿಸಿದರು. ಮತ್ತು ಸಂಘಕ್ಕೆ ಸೇರುವ ಎಲ್ಲ ಹಳೆಯ ವಿದ್ಯಾರ್ಥಿಗಳು ದೇಶಕ್ಕೆ ತಮ್ಮಿಂದ ಆದಂತೆ ಸಾಧ್ಯವಿದ್ದಂತೆ ಸೇವೆ ಸಲ್ಲಿಸಲು ಎಲ್ಲರಿಗೂ ಕರೆ ನೀಡಿದರು.

ಐತಿಹಾಸಿಕ ಝಾನ್ಸಿ ಕೋಟೆಯ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಮಾತನಾಡುತ್ತ, ಭಾರತವು ಶೌರ್ಯದ ಕೊರತೆಯಿಂದ ಯಾವತ್ತೂ ಯಾವ ಯುದ್ಧಗಳನ್ನೂ ಸೋತಿಲ್ಲ. ಒಂದು ವೇಳೆ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಬಳಿ ಸಾಕಷ್ಟು ಸಂಪನ್ಮೂಲ ಮತ್ತು ಶಸ್ತ್ರಾಸ್ತ್ರಗಳಿದ್ದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಥನವೇ ವಿಭಿನ್ನವಾಗಿರುತ್ತಿತ್ತು. ಸುದೀರ್ಘ ಕಾಲದವರೆಗೂ ಭಾರತವು ಶಸ್ತ್ರಾಸ್ತ್ರಗಳ ಮಾರುಕಟ್ಟೆಯಲ್ಲಿ ಅತಿ ದೊಡ್ಡ ಖರೀದಿದಾರ ದೇಶವಾಗಿತ್ತು. ಆದರೆ ಇದೀಗ ನಮ್ಮ ಸೂತ್ರ ಬದಲಾಗಿದೆ. ಮೇಡ್‌ ಇನ್‌ ಇಂಡಿಯಾ ಹಾಗೂ ಮೇಡ್‌ ಫಾರ್‌ ವರ್ಡ್‌ ಅಂದ್ರೆ ಭಾರತದಲ್ಲಿ ತಯಾರಿಸಿ, ಭಾರತದಿಂದ ವಿಶ್ವಕ್ಕಾಗಿ ತಯಾರಿಸಿ ಎಂಬ ಮಂತ್ರ ಇಂದಿನದ್ದಾಗಿದೆ ಎಂದು ಹೇಳಿದರು.  ಸದ್ಯ ಭಾರತವು ಈ ನಿಟ್ಟಿನಲ್ಲಿ ಆತ್ಮನಿರ್ಭರವಾಗುತ್ತಲಿದೆ, ಸ್ವಾವಲಂಬಿಯಾಗುವ ಈ ನಿಟ್ಟಿನಲ್ಲಿ ಝಾನ್ಸಿಯು ಮಹತ್ವದ ಪಾತ್ರವಹಿಸಲಿದೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ರಾಷ್ಟ್ರ ರಕ್ಷ ಸಂಪರ್ಪಣ್ ಪರ್ವ್‌ದಂಥ ಕಾರ್ಯಕ್ರಮಗಳು ಸುರಕ್ಷೆಯ ನಿಟ್ಟಿನಲ್ಲಿ ಆತ್ಮನಿರ್ಭರವಾಗುವ ಅವಕಾಶಗಳನ್ನು ಸೃಷ್ಟಿಸುತ್ತವೆ. ಅಂಥ ಪರಿಸರ ನಿರ್ಮಿಸುತ್ತವೆ. ನಾವು ನಮ್ಮ ದೇಶದ ನಾಯಕ, ನಾಯಕಿಯರ ಶೌರ್ಯದ ಕಥನಗಳನ್ನು ವಿಜ್ರಂಭಣೆಯಿಂದ ಸಂಭ್ರಮಿಸಬೇಕು ಎಂದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s Space Sector: A Transformational Year Ahead in 2025

Media Coverage

India’s Space Sector: A Transformational Year Ahead in 2025
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಡಿಸೆಂಬರ್ 2024
December 24, 2024

Citizens appreciate PM Modi’s Vision of Transforming India