ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾರಿಯಪ್ಪ ಮೈದಾನದಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ಗಾರ್ಡ್ ಆಫ್ ಆನರ್ ಅನ್ನು ಪರಿಶೀಲಿಸಿದರು, ಹಾಗೆಯೇ ಎನ್‌ಸಿಸಿ ತುಕಡಿಗಳಿಂದ ಪಥ ಸಂಚಲನವನ್ನು ಪರಾಮರ್ಶಿಸಿದರು ಮತ್ತು ಎನ್‌ಸಿಸಿ ಕೆಡೆಟ್‌ಗಳು ಸೇನಾ ಚಟುವಟಿಕೆ, ಸ್ಲಿಥರಿಂಗ್, ಮೈಕ್ರೋಲೈಟ್ ಫ್ಲೈಯಿಂಗ್, ಪ್ಯಾರಾಸೈಲಿಂಗ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸುವುದನ್ನು ವೀಕ್ಷಿಸಿದರು. ಅತ್ಯುತ್ತಮ ಕೆಡೆಟ್‌ಗಳು ಪ್ರಧಾನಿಯವರಿಂದ ಪದಕ ಮತ್ತು ಲಾಠಿ(ಅಧಿಕಾರಿಯ ದಂಡ)ಯನ್ನೂ ಪಡೆದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ದೇಶವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವಾಗ ಆಚರಣೆಯಲ್ಲಿ ವಿಭಿನ್ನ ಮಟ್ಟದ ಉತ್ಸಾಹವನ್ನು ಗಮನಿಸಿದರು. ಪ್ರಧಾನಮಂತ್ರಿಯವರು ತಮ್ಮ ಎನ್‌ಸಿಸಿ ಸಂಪರ್ಕವನ್ನು ಹೆಮ್ಮೆಯಿಂದ ಸ್ಮರಿಸಿಕೊಂಡರು ಮತ್ತು ರಾಷ್ಟ್ರದ ಕಡೆಗೆ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಶಕ್ತಿಯನ್ನು ನೀಡಿದ್ದಕ್ಕಾಗಿ ಎನ್‌ಸಿಸಿ ಕೆಡೆಟ್ ಆಗಿ ಅವರ ತರಬೇತಿಯನ್ನು ತುಂಬಾ ಗೌರವಿಸಿದರು.
ರಾಷ್ಟ್ರ ನಿರ್ಮಾಣದಲ್ಲಿ ಲಾಲಾ ಲಜಪತ್ ರಾಯ್ ಮತ್ತು ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರ ಕೊಡುಗೆಗಾಗಿ ಪ್ರಧಾನಮಂತ್ರಿ ಅವರಿಗೆ ಗೌರವ ನಮನ ಸಲ್ಲಿಸಿದರು. ಇಂದು ಭಾರತದ ವೀರ ಪುತ್ರರಿಬ್ಬರದೂ ಜಯಂತಿ ಇದೆ.
ದೇಶವು ಹೊಸ ನಿರ್ಣಯಗಳೊಂದಿಗೆ ಮುನ್ನಡೆಯುತ್ತಿರುವ ಅವಧಿಯಲ್ಲಿ ದೇಶದಲ್ಲಿ ಎನ್‌ಸಿಸಿಯನ್ನು ಬಲಪಡಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ಪ್ರಧಾನಿ ಮಾತನಾಡಿದರು. ಇದಕ್ಕಾಗಿ ದೇಶದಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಮಿತಿಯನ್ನು ರಚಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ದೇಶದ ಗಡಿ ಭಾಗದಲ್ಲಿ 1 ಲಕ್ಷ ಹೊಸ ಕೆಡೆಟ್‌ಗಳನ್ನು ಸೃಷ್ಟಿಸಲಾಗಿದೆ ಎಂದರು.
ಹುಡುಗಿಯರು ಮತ್ತು ಮಹಿಳೆಯರಿಗಾಗಿ ರಕ್ಷಣಾ ಸಂಸ್ಥೆಗಳ ಬಾಗಿಲು ತೆರೆಯಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ಪ್ರಧಾನಮಂತ್ರಿ ಅವರು ವಿವರಿಸಿದರು. ಅವರು ಹೆಚ್ಚಿನ ಸಂಖ್ಯೆಯ ಬಾಲಕಿಯರ ಉಪಸ್ಥಿತಿಯನ್ನು ಗಮನಿಸಿದರು ಮತ್ತು ಇದು ರಾಷ್ಟ್ರದ ಮನೋಭಾವವನ್ನು ಬದಲಾಯಿಸುವ ಸಂಕೇತವಾಗಿದೆ ಎಂದು ಬಣ್ಣಿಸಿದರು.
"ದೇಶಕ್ಕೆ ನಿಮ್ಮ ಕೊಡುಗೆ ಬೇಕು ಮತ್ತು ಅದಕ್ಕೆ ಸಾಕಷ್ಟು ಅವಕಾಶಗಳಿವೆ" ಎಂದು ಅವರು ಬಾಲಕಿಯ ಕೆಡೆಟ್‌ಗಳಿಗೆ ಹೇಳಿದರು. ಇದೀಗ ದೇಶದ ಹೆಣ್ಣು ಮಕ್ಕಳು, ಸೈನಿಕ ಶಾಲೆಗಳಿಗೆ ಪ್ರವೇಶ ಪಡೆಯುತ್ತಿದ್ದು, ಮಹಿಳೆಯರು ಸೇನೆಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ಪಡೆಯುತ್ತಿದ್ದಾರೆ ಎಂದರು. ದೇಶದ ಹೆಣ್ಣು ಮಕ್ಕಳು ವಾಯುಸೇನೆಯಲ್ಲಿ ಯುದ್ಧ ವಿಮಾನಗಳನ್ನು ಹಾರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚು ಹೆಚ್ಚು ಹೆಣ್ಣು ಮಕ್ಕಳನ್ನು ಎನ್‌ಸಿಸಿಗೆ ಸೇರಿಸುವುದು ನಮ್ಮ ಪ್ರಯತ್ನವಾಗಬೇಕು ಎಂದು ಅವರು ಹೇಳಿದರು.
ಈ ಶತಮಾನದಲ್ಲಿ ಹೆಚ್ಚಾಗಿ ಜನಿಸಿದ ಕೆಡೆಟ್‌ಗಳ ಯುವ ವಿವರವನ್ನು ಗಮನಿಸಿದ ಪ್ರಧಾನಮಂತ್ರಿ ಅವರು ದೇಶವನ್ನು 2047 ರ ಕಡೆಗೆ ಕೊಂಡೊಯ್ಯುವಲ್ಲಿ ಅವರ ಪಾತ್ರವನ್ನು ಒತ್ತಿಹೇಳಿದರು. "ನಿಮ್ಮ ಪ್ರಯತ್ನಗಳು ಮತ್ತು ಸಂಕಲ್ಪಗಳು ಮತ್ತು ಆ ನಿರ್ಣಯಗಳ ನೆರವೇರಿಕೆಯು ಭಾರತದ ಸಾಧನೆ ಮತ್ತು ಯಶಸ್ಸು", ಎಂದು ಅವರು ಹೇಳಿದರು. ಯಾವ ಯುವ ಸಮೂಹ ರಾಷ್ಟ್ರಮೊದಲು ಎಂಬ ಚಿಂತನೆಯೊಂದಿಗೆ ಮುನ್ನಡೆಯುತ್ತದೆಯೋ ಆ ದೇಶವನ್ನು ಜಗತ್ತಿನ ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು. ಪ್ಲೇಫೀಲ್ಡ್ ಮತ್ತು ಸ್ಟಾರ್ಟಪ್ ಪರಿಸರದಲ್ಲಿ ಭಾರತದ ಯಶಸ್ಸು ಇದನ್ನು ಸ್ಪಷ್ಟವಾಗಿ ಉದಾಹರಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಮೃತ ಕಾಲ್‌ನಲ್ಲಿ ಅಂದರೆ ಇಂದಿನಿಂದ ಮುಂದಿನ 25 ವರ್ಷಗಳವರೆಗೆ, ಕೆಡೆಟ್‌ಗಳು ತಮ್ಮ ಆಕಾಂಕ್ಷೆಗಳು ಮತ್ತು ಕಾರ್ಯಗಳನ್ನು ದೇಶದ ಅಭಿವೃದ್ಧಿ ಮತ್ತು ನಿರೀಕ್ಷೆಗಳೊಂದಿಗೆ ಸಂಯೋಜಿಸುವಂತೆ ಪ್ರಧಾನಮಂತ್ರಿ ಅವರು ಒತ್ತಾಯಿಸಿದರು. ‘ಸ್ಥಳೀಯರಿಗೆ ಧ್ವನಿ’ ಅಭಿಯಾನದಲ್ಲಿ ಇಂದಿನ ಯುವಕರು ವಹಿಸಬಹುದಾದ ಪ್ರಮುಖ ಪಾತ್ರವನ್ನು ಪ್ರಧಾನಿ ಒತ್ತಿ ಹೇಳಿದರು. ಇಂದಿನ ಯುವಕರು ಭಾರತೀಯರ ಶ್ರಮ ಮತ್ತು ಬೆವರಿನಿಂದ ಸೃಷ್ಟಿಯಾದ ವಸ್ತುಗಳನ್ನು ಮಾತ್ರ ಬಳಸಲು ನಿರ್ಧರಿಸಿದರೆ, ಭಾರತದ ಭವಿಷ್ಯವನ್ನು ಬದಲಾಯಿಸಬಹುದು," ಎಂದು ಅವರು ಪ್ರತಿಪಾದಿಸಿದರು.
ಇಂದು ಒಂದೆಡೆ ಡಿಜಿಟಲ್ ತಂತ್ರಜ್ಞಾನ ಮತ್ತು ಮಾಹಿತಿಗೆ ಸಂಬಂಧಿಸಿದ ಉತ್ತಮ ಸಾಧ್ಯತೆಗಳಿದ್ದರೆ, ಮತ್ತೊಂದೆಡೆ ತಪ್ಪು ಮಾಹಿತಿಯ ಅಪಾಯಗಳಿವೆ ಎಂದು ಪ್ರಧಾನಿ ಅವರು ಎಚ್ಚರಿಸಿದರು. ನಮ್ಮ ದೇಶದ ಜನಸಾಮಾನ್ಯರು ಯಾವುದೇ ವದಂತಿಗಳಿಗೆ ಬಲಿಯಾಗದಿರುವುದು ಸಹ ಅಗತ್ಯ ಎಂದು ಅವರು ಒತ್ತಿ ಹೇಳಿದರು. ಇದಕ್ಕಾಗಿ ಎನ್ ಸಿಸಿ ಕೆಡೆಟ್ ಗಳು ಜಾಗೃತಿ ಅಭಿಯಾನ ನಡೆಸುವಂತೆ ಪ್ರಸ್ತಾಪಿಸಿದರು.
ಎನ್ ಸಿಸಿ ಅಥವಾ ಎನ್ ಎಸ್ ಎಸ್ ಇರುವ ಶಾಲಾ/ಕಾಲೇಜಿಗೆ ಡ್ರಗ್ಸ್ ತಲುಪಬಾರದು ಎಂದು ಪ್ರಧಾನಿ ಒತ್ತಿ ಹೇಳಿದರು. ಕೆಡೆಟ್‌ಗಳು ಮಾದಕ ವಸ್ತುಗಳಿಂದ ಮುಕ್ತರಾಗಬೇಕು ಮತ್ತು ಅದೇ ಸಮಯದಲ್ಲಿ ತಮ್ಮ ಕ್ಯಾಂಪಸ್ ಅನ್ನು ಮಾದಕ ವಸ್ತುಗಳಿಂದ ಮುಕ್ತವಾಗಿರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಎನ್‌ಸಿಸಿ-ಎನ್‌ಎಸ್‌ಎಸ್‌ನಲ್ಲಿಲ್ಲದ ಸ್ನೇಹಿತರನ್ನು ಸಹ ಈ ಕೆಟ್ಟ ಅಭ್ಯಾಸವನ್ನು ಬಿಡಲು ಸಹಾಯ ಮಾಡಿ ಎಂದು ಅವರು ಸಲಹೆ ನೀಡಿದರು.
ದೇಶದ ಸಾಮೂಹಿಕ ಪ್ರಯತ್ನಗಳಿಗೆ ಹೊಸ ಶಕ್ತಿ ನೀಡಲು ಕೆಲಸ ಮಾಡುತ್ತಿರುವ ಸೆಲ್ಫ್ 4 ಸೊಸೈಟಿ ಪೋರ್ಟಲ್‌ನೊಂದಿಗೆ ಸಂಬಂಧ ಹೊಂದುವಂತೆ ಪ್ರಧಾನಮಂತ್ರಿ ಕೆಡೆಟ್‌ಗಳನ್ನು ಕೋರಿದರು. 7 ಸಾವಿರಕ್ಕೂ ಹೆಚ್ಚು ಸಂಸ್ಥೆಗಳು ಮತ್ತು 2.25 ಲಕ್ಷ ಜನರು ಪೋರ್ಟಲ್‌ನೊಂದಿಗೆ ಸಂಬಂಧ ಹೊಂದಿದ್ದಾರೆ.
इस समय देश अपनी आज़ादी का अमृत महोत्सव मना रहा है।
— PMO India (@PMOIndia) January 28, 2022
और जब एक युवा देश, इस तरह के किसी ऐतिहासिक अवसर का साक्षी बनता है, तो उसके उत्सव में एक अलग ही उत्साह दिखता है।
यही उत्साह मैं अभी करियप्पा ग्राउंड में देख रहा हूं: PM @narendramodi
मुझे गर्व है कि मैं भी कभी आपकी तरह ही एनसीसी का सक्रिय कैडेट रहा हूँ।
— PMO India (@PMOIndia) January 28, 2022
मुझे एनसीसी में जो ट्रेनिंग मिली, जो जानने सीखने को मिला, आज देश के प्रति अपनी जिम्मेदारियों के निर्वहन में मुझे उससे असीम ताकत मिलती है: PM @narendramodi
आज जब देश नए संकल्पों के साथ आगे बढ़ रहा है, तब देश में एनसीसी को मजबूत करने के लिए भी हमारे प्रयास जारी हैं।
— PMO India (@PMOIndia) January 28, 2022
इसके लिए देश में एक हाई लेवेल रिव्यू कमेटी की स्थापना की गई है।
पिछले दो सालों में हमने देश के सीमावर्ती क्षेत्रों में 1 लाख नए कैडेट्स बनाए हैं: PM @narendramodi
अब देश की बेटियाँ सैनिक स्कूलों में एड्मिशन ले रही हैं।
— PMO India (@PMOIndia) January 28, 2022
सेना में महिलाओं को बड़ी जिम्मेदारियाँ मिल रही हैं।
एयरफोर्स में देश की बेटियाँ फाइटर प्लेन उड़ा रही हैं।
ऐसे में हमारा प्रयास होना चाहिए कि एनसीसी में भी ज्यादा से ज्यादा बेटियाँ शामिल हों: PM @narendramodi
आज इस समय जितने भी युवक-युवतियां NCC में हैं, NSS में हैं, उसमें से ज्यादातर इस शताब्दी में ही पैदा हुए हैं।
— PMO India (@PMOIndia) January 28, 2022
आपको ही भारत को 2047 तक लेकर जाना है।
इसलिए आपकी कोशिशें, आपके संकल्प, उन संकल्पों की सिद्धि, भारत की सिद्धि होगी, भारत की सफलता होगी: PM @narendramodi
जिस देश का युवा, राष्ट्र प्रथम की सोच के साथ आगे बढ़ने लगता है, उसे कोई दुनिया की कोई ताकत रोक नहीं सकती।
— PMO India (@PMOIndia) January 28, 2022
आज खेल के मैदान में, भारत की सफलता भी इसका एक बड़ा उदाहरण है: PM @narendramodi
आजादी के अमृतकाल में, आज से लेकर अगले 25 वर्ष, आपको अपनी प्रवृतियों को, अपने कार्यों को देश के विकास के साथ, देश की अपेक्षाओं के साथ जोड़ना है: PM @narendramodi
— PMO India (@PMOIndia) January 28, 2022
सभी युवा, वोकल फॉर लोकल के अभियान में बहुत बड़ी भूमिका निभा सकते हैं।
— PMO India (@PMOIndia) January 28, 2022
अगर भारत के युवा ठान लें कि जिस चीज के निर्माण में किसी भारतीय का श्रम लगा है, किसी भारतीय का पसीना बहा, सिर्फ वही चीज इस्तेमाल करेंगे, तो भारत का भाग्य बदल सकता है: PM @narendramodi
आज एक ओर डिजिटल टेक्नोलॉजी और इन्फॉर्मेशन से जुड़ी अच्छी संभावनाएं हैं, तो दूसरी ओर misinformation के खतरे भी हैं।
— PMO India (@PMOIndia) January 28, 2022
हमारे देश का सामान्य मानवी, किसी अफवाह का शिकार न हो ये भी जरूरी है।
NCC कैडेट्स इसके लिए एक जागरूकता अभियान चला सकते हैं: PM @narendramodi
जिस स्कूल-कॉलेज में NCC हो, NSS हो वहां पर ड्रग्स कैसे पहुंच सकती है।
— PMO India (@PMOIndia) January 28, 2022
आप कैडेट के तौर पर खुद ड्रग्स से मुक्त रहें और साथ ही साथ अपने कैंपस को भी ड्रग्स से मुक्त रखें।
आपके साथी, जो NCC-NSS में नहीं हैं, उन्हें भी इस बुरी आदत को छोड़ने में मदद करिए: PM @narendramodi