ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ಸೋಮನಾಥ ಟ್ರಸ್ಟ್ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು. ಟ್ರಸ್ಟಿಗಳು ಟ್ರಸ್ಟ್ ನ ಮಾಜಿ ಅಧ್ಯಕ್ಷ ದಿವಂಗತ ಶ್ರೀ ಕೇಶುಭಾಯ್ ಪಟೇಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಮುಂದಿನ ದಿನಗಳಲ್ಲಿ ಟ್ರಸ್ಟ್ ಅನ್ನು ಮುನ್ನಡೆಸಲು ಹೊಸ ಅಧ್ಯಕ್ಷರನ್ನಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಟ್ರಸ್ಟಿಗಳು ಅವಿರೋಧವಾಗಿ ಆಯ್ಕೆ ಮಾಡಿದರು. ಪ್ರಧಾನಮಂತ್ರಿಗಳು ಹೊಸ ಜವಾಬ್ದಾರಿಯನ್ನು ಸ್ವೀಕರಿಸಿದರು ಮತ್ತು ಸೋಮನಾಥ್ ತಂಡದ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಅವರು ಎಲ್ಲರೂ ಒಟ್ಟಾಗಿ ಟ್ರಸ್ಟ್ ಮೂಲಕ ಮೂಲಸೌಕರ್ಯವನ್ನು ಮತ್ತಷ್ಟು ಸುಧಾರಿಸಲು, ವಸತಿ ವ್ಯವಸ್ಥೆಗಳನ್ನು ವೃದ್ಧಿಸಲು ಮನರಂಜನಾ ಸೌಕರ್ಯಗಳನ್ನು ಸ್ಥಾಪಿಸಲು ಕಾರ್ಯನಿರ್ವಹಿಸಬೇಕು ಹಾಗೂ ಅದು ನಮ್ಮ ಶ್ರೇಷ್ಠ ಪರಂಪರೆಯೊಂದಿಗೆ ಭಕ್ತಾದಿಗಳನ್ನು ಬೆಸೆಯಲು ಬಲಿಷ್ಠ ಸಂಪರ್ಕ ವ್ಯವಸ್ಥೆ ಸ್ಥಾಪನೆಗೆ ಸಹಕಾರಿಯಾಗಲಿದೆ ಎಂದರು. ಸದ್ಯ ನಡೆಯುತ್ತಿರುವ ಕಾಮಗಾರಿಗಳು ಮತ್ತು ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ಸಭೆಯಲ್ಲಿ ನಡೆಸಲಾಯಿತು.
ಈ ಹಿಂದೆ ಟ್ರಸ್ಟ್ ನ ಅಧ್ಯಕ್ಷತೆಯನ್ನು ಹಲವು ಗಣ್ಯರು ವಹಿಸಿದ್ದರು. ಅವರುಗಳಲ್ಲಿ ಗೌರವಾನ್ವಿತ ಜಾಮ್ ಸಾಹೇಬ್ ದಿಗ್ವಿಜಯ ಸಿಂಗ್ ಜಿ, ಶ್ರೀ ಕನೈಲಾಲ್ ಮುನ್ಷಿ, ಭಾರತದ ಮಾಜಿ ಪ್ರಧಾನಮಂತ್ರಿ ಶ್ರೀ ಮೊರಾರ್ಜಿ ದೇಸಾಯಿ, ಶ್ರೀ ಜಯಕೃಷ್ಣ ಹರಿವಲ್ಲಭ, ಶ್ರೀ ದಿನೇಶ್ ಭಾಯ್ ಷಾ, ಶ್ರೀ ಪ್ರಸನ್ನವದನ್ ಮೆಹ್ತಾ ಮತ್ತು ಶ್ರೇ ಕೇಶುಭಾಯ್ ಪಟೇಲ್.