Quoteಪ್ರಮುಖ ಸರ್ಕಾರಿ ಯೋಜನೆಗಳ ಪರಿಪೂರ್ಣತೆ ಖಚಿತಪಡಿಸಿಕೊಳ್ಳಲು 'ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ' ಅನಾವರಣ ಮಾಡಲಾಗಿದೆ
Quoteಸುಮಾರು 24,000 ಕೋಟಿ ರೂಪಾಯಿ ಬಜೆಟ್‌ನೊಂದಿಗೆ ಪ್ರಧಾನ ಮಂತ್ರಿ ಜಂಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಪಿಎಂ-ಜನ್ಮನ್ ಪ್ರಾರಂಭ
Quoteಪಿಎಂ-ಕಿಸಾನ್ ಅಡಿ, ಸುಮಾರು 18,000 ಕೋಟಿ ರೂಪಾಯಿ ಮೊತ್ತದ 15ನೇ ಕಂತು ಬಿಡುಗಡೆ
Quoteಜಾರ್ಖಂಡ್‌ನಲ್ಲಿ ಸುಮಾರು 7,200 ಕೋಟಿ ರೂ. ಮೊತ್ತದ ಯೋಜನೆಗಳು ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಶಿಲಾನ್ಯಾಸ
Quoteವಿಕ್ಷಿತ್ ಭಾರತ್ ಸಂಕಲ್ಪವನ್ನು ಪ್ರತಿಜ್ಞಾವಿಧಿ ಮುನ್ನಡೆಸುತ್ತದೆ
Quote"ಭಗವಾನ್ ಬಿರ್ಸಾ ಮುಂಡಾ ಅವರ ಹೋರಾಟಗಳು ಮತ್ತು ತ್ಯಾಗಗಳು ಅಸಂಖ್ಯಾತ ಭಾರತೀಯರಿಗೆ ಸ್ಫೂರ್ತಿ ನೀಡುತ್ತವೆ"
Quote"2 ಐತಿಹಾಸಿಕ ಉಪಕ್ರಮಗಳು - 'ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ' ಮತ್ತು 'ಪಿಎಂ ಜಂಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ'ವನ್ನು ಇಂದು ಜಾರ್ಖಂಡ್‌ನಿಂದ ಆರಂಭಿಸಲಾಗುತ್ತಿದೆ"
Quote"ಭಾರತದ ಅಭಿವೃದ್ಧಿಯ ಮಟ್ಟವು ಅಮೃತ ಕಾಲದ 4 ಆಧಾರಸ್ತಂಭಗಳನ್ನು ಬಲಪಡಿಸುವ ಸಾಮರ್ಥ್ಯವನ್ನು ಅವಲಂಬಿಸಿದೆ - ಮಹಿಳಾ ಶಕ್ತಿ, ಯುವ ಶಕ್ತಿ, ಕೃಷಿ ಶಕ್ತಿ ಮತ್ತು ನಮ್ಮ ಬಡ ಮತ್ತು ಮಧ್ಯಮ ವರ್ಗದ ಶಕ್ತಿ"
Quote" ಸೌಲಭ್ಯವಂಚಿತರಿಗೆ ಸವಲತ್ತು ಒದಗಿಸುವುದನ್ನು ಮೋದಿ ತಮ್ಮ ಆದ್ಯತೆಯನ್ನಾಗಿ ಮಾಡಿಕೊಂಡಿದ್ದಾರೆ"
Quote"ನಾನು ಸೌಲಭ್ಯವಂಚಿತರಿಗೆ ನೀಡಬೇಕಾದ ಋಣ ತೀರಿಸಲು ಭಗವಾನ್ ಬಿರ್ಸಾ ಮುಂಡಾ ಅವರ ಭೂಮಿಗೆ ಬಂದಿದ್ದೇನೆ"
Quote"ದೇಶದ ಯಾವುದೇ ನಾಗರಿಕರಿಗೆ ತಾರತಮ್ಯದ ಎಲ್ಲಾ ಸಾಧ್ಯತೆಗಳನ್ನು ತೊಡೆದುಹಾಕಿದಾಗ ಮಾತ್ರ ನಿಜವಾದ ಜಾತ್ಯತೀತತೆ ಬರುತ್ತದೆ"
Quoteಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯಂದು ಇಂದಿನಿಂದ ಪ್ರಾರಂಭವಾಗುವ 'ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ' ಮುಂದಿನ ವರ್ಷ ಜನವರಿ 26ರ ವರೆಗೆ ಮುಂದುವರಿಯಲಿದೆ"

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಾರ್ಖಂಡ್‌ನ ಖುಂಟಿಯಲ್ಲಿ ಜಂಜಾತಿಯಾ ಗೌರವ್ ದಿವಸ್-2023 ಆಚರಣೆ ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರು ‘ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ’ ಮತ್ತು ಪ್ರಧಾನ ಮಂತ್ರಿಗಳ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ ಅಭಿವೃದ್ಧಿ ಮಿಷನ್ ಗೆ ಚಾಲನೆ ನೀಡಿದರು. ನಂತರ ಅವರು ಪಿಎಂ-ಕಿಸಾನ್ ಯೋಜನೆಯ 15ನೇ ಕಂತಿನ ಅನುದಾನ ಬಿಡುಗಡೆ ಮಾಡಿದರು. ಶ್ರೀ ಮೋದಿ ಅವರು ಜಾರ್ಖಂಡ್‌ನಲ್ಲಿ ರೈಲು, ರಸ್ತೆ, ಶಿಕ್ಷಣ, ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದಂತಹ ಬಹು ವಲಯಗಳಲ್ಲಿ 7,200 ಕೋಟಿ ರೂಪಾಯಿ ಮೊತ್ತದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಅವರು ವಸ್ತುಪ್ರದರ್ಶನ ವೀಕ್ಷಿಸಿದರು.

 

|

ಈ ಸಂದರ್ಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ವೀಡಿಯೊ ಸಂದೇಶವನ್ನು ಪ್ರಸಾರ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರು ವಿಕ್ಷಿತ್ ಭಾರತ್ ಸಂಕಲ್ಪ್ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮವನ್ನು ಮುನ್ನಡೆಸಿದರು.

ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮಸ್ಥಳವಾದ ಉಲಿಹಾತು ಗ್ರಾಮ ಮತ್ತು ರಾಂಚಿಯ ಬಿರ್ಸಾ ಮುಂಡಾ ಸ್ಮಾರಕ ಪಾರ್ಕ್ ಮತ್ತು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ ಸಂದರ್ಭವನ್ನು ಉಲ್ಲೇಖಿಸಿ, ಪ್ರಧಾನಿ ಇಂದು ಮುಂಜಾನೆ ತಮ್ಮ ಭಾಷಣ ಆರಂಭಿಸಿದರು. 2 ವರ್ಷಗಳ ಹಿಂದೆ ಇದೇ ದಿನ ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯ ಉದ್ಘಾಟಿಸಿದ್ದನ್ನು ಅವರು ಸ್ಮರಿಸಿದರು. ಶ್ರೀ ಮೋದಿ ಅವರು ಜಂಜಾತಿಯಾ ಗೌರವ್ ದಿವಸ್ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ತಮ್ಮ ಶುಭಾಶಯಗಳನ್ನು ತಿಳಿಸಿದರು. ಜಾರ್ಖಂಡ್‌ನ ಸಂಸ್ಥಾಪನಾ ದಿನದ ಶುಭಾಶಯಗಳನ್ನು ತಿಳಿಸಿದ ಪ್ರಧಾನಿ, ಜಾರ್ಖಂಡ್ ರಾಜ್ಯ ರಚನೆಯಲ್ಲಿ ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಕೊಡುಗೆಗಳನ್ನು ಪ್ರಸ್ತಾಪಿಸಿದರು. ರೈಲು, ರಸ್ತೆ, ಶಿಕ್ಷಣ, ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ವಿವಿಧ ಕ್ಷೇತ್ರಗಳಲ್ಲಿ ಇಂದಿನ ಅಭಿವೃದ್ಧಿ ಯೋಜನೆಗಳನ್ನು ಮುನ್ನಡೆಸುತ್ತಿರುವ ಜಾರ್ಖಂಡ್‌ನ ಜನರನ್ನು ಅವರು ಅಭಿನಂದಿಸಿದರು. ಜಾರ್ಖಂಡ್ ಈಗ ರಾಜ್ಯದಲ್ಲಿ 100 ಪ್ರತಿಶತ ವಿದ್ಯುದ್ದೀಕೃತ ರೈಲು ಮಾರ್ಗಗಳನ್ನು ಹೊಂದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಬುಡಕಟ್ಟು ಜನಾಂಗದ ಹೆಮ್ಮೆಗಾಗಿ ಭಗವಾನ್ ಬಿರ್ಸಾ ಮುಂಡಾ ಅವರ ಸ್ಫೂರ್ತಿದಾಯಕ ಹೋರಾಟವನ್ನು ಉಲ್ಲೇಖಿಸಿದ ಪ್ರಧಾನಿ, ಅಸಂಖ್ಯಾತ ಬುಡಕಟ್ಟು ವೀರರೊಂದಿಗೆ ಜಾರ್ಖಂಡ್ ಭೂಮಿಯ ಒಡನಾಟವನ್ನು ಸ್ಮರಿಸಿದರು. ತಿಲ್ಕಾ ಮಾಂಝಿ, ಸಿಧು ಕನ್ಹು, ಚಾಂದ್ ಭೈರವ್, ಫುಲೋ ಜಾನೋ, ನೀಲಾಂಬರ್, ಪೀತಾಂಬರ, ಜಾತ್ರಾ ತಾನಾ ಭಗತ್, ಆಲ್ಬರ್ಟ್ ಎಕ್ಕಾ ಅವರಂತಹ ಅನೇಕ ವೀರರು ಈ ನಾಡನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಆದಿವಾಸಿ ಯೋಧರು ದೇಶದ ಮೂಲೆ ಮೂಲೆಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದರು. ಮಂಗರ್ ಧಾಮದ ಗೋವಿಂದ ಗುರು, ಮಧ್ಯಪ್ರದೇಶದ ತಾಂತ್ಯ ಭಿಲ್, ಭೀಮಾ ನಾಯಕ್, ಛತ್ತೀಸ್‌ಗಢದ ಹುತಾತ್ಮ ವೀರ ನಾರಾಯಣ ಸಿಂಗ್, ವೀರ್ ಗುಂಡಾಧುರ್, ರಾಣಿ ಗೈಡಿನ್ಲಿಯು ಅವರ ಹೋರಾಟ ಅಸಾಧಾರಣ ಎಂದು ಪ್ರಧಾನಿ ಹೇಳಿದರು. ಮಣಿಪುರ, ತೆಲಂಗಾಣದ ವೀರ್ ರಾಮ್‌ಜಿ ಗೊಂಡ್, ಆಂಧ್ರ ಪ್ರದೇಶದ ಅಲ್ಲೂರಿ ಸೀತಾರಾಮ್ ರಾಜು, ಗೊಂಡ ಪ್ರದೇಶದ ರಾಣಿ ದುರ್ಗಾವತಿ ಅವರಂತಹ ಮಹಾನ್ ವ್ಯಕ್ತಿಗಳ ನಿರ್ಲಕ್ಷ್ಯ ಮಾಡಲಾಯಿತು ಎಂದು ವಿಷಾದ ವ್ಯಕ್ತಪಡಿಸಿದ ಪ್ರಧಾನಿ, ಅಮೃತ ಮಹೋತ್ಸವದ ಸಂದರ್ಭದಲ್ಲಿ ಈ ವೀರರನ್ನು ಸ್ಮರಿಸುವುದಕ್ಕೆ ಸಂತೃಪ್ತಿ ತಂದಿದೆ ಎಂದರು.

 

|

ಜಾರ್ಖಂಡ್‌ನೊಂದಿಗಿನ ತಮ್ಮ ವೈಯಕ್ತಿಕ ಸಂಪರ್ಕದ ಬಗ್ಗೆ ಮಾತನಾಡಿದ ಪ್ರಧಾನಿ, ಆಯುಷ್ಮಾನ್ ಯೋಜನೆಯನ್ನು ಜಾರ್ಖಂಡ್‌ನಿಂದ ಆರಂಭಿಸಲಾಗಿದೆ. ಇಂದು ಜಾರ್ಖಂಡ್‌ನಿಂದ 2 ಐತಿಹಾಸಿಕ ಉಪಕ್ರಮಗಳನ್ನು ಆರಂಭಿಸಲಾಗುತ್ತಿದೆ. ಮೊದಲ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯು ಸರ್ಕಾರದ ಪರಿಪೂರ್ಣತೆ(ಸ್ಯಾಚುರೇಶನ್) ಗುರಿಗಳ ಮಾಧ್ಯಮವಾಗಿದ. ಪ್ರಧಾನಮಂತ್ರಿ ಜಂಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನವು ಅಳಿವಿನ ಅಂಚಿನಲ್ಲಿರುವ ಬುಡಕಟ್ಟು ಸಮುದಾಯಗಳನ್ನು ರಕ್ಷಿಸುತ್ತದೆ ಮತ್ತು ಅವುಗಳನ್ನು ಪೋಷಿಸಲಿದೆ ಎಂದರು.

'ವಿಕ್ಷಿತ್ ಭಾರತದ 4 ಅಮೃತ ಸ್ತಂಭಗಳು ಅಥವಾ ಅಭಿವೃದ್ಧಿ ಹೊಂದಿದ ಭಾರತದ 4 ಆಧಾರಸ್ತಂಭಗಳಾದ ಮಹಿಳಾ ಶಕ್ತಿ ಅಥವಾ ನಾರಿ ಶಕ್ತಿ, ಭಾರತದ ಆಹಾರ ಉತ್ಪಾದಕರು(ಕೃಷಿಕರು), ದೇಶದ ಯುವಕರು ಮತ್ತು ಕೊನೆಯದಾಗಿ ಭಾರತದ ನವ-ಮಧ್ಯಮ ವರ್ಗ ಮತ್ತು ಬಡವರ ಮೇಲೆ ಗಮನ ಕೇಂದ್ರೀಕರಿಸುವ ಅಗತ್ಯವಿದೆ. ಭಾರತದ ಅಭಿವೃದ್ಧಿಯ ಮಟ್ಟವು ಅಭಿವೃದ್ಧಿಯ ಈ ಆಧಾರಸ್ತಂಭಗಳನ್ನು ಬಲಪಡಿಸುವ ನಮ್ಮ ಸಾಮರ್ಥ್ಯವನ್ನು ಅವಲಂಬಿಸಿದೆ. ಪ್ರಸ್ತುತ ಸರ್ಕಾರವು ಕಳೆದ 9 ವರ್ಷಗಳಲ್ಲಿ 4 ಆಧಾರಸ್ತಂಭಗಳನ್ನು ಬಲಪಡಿಸಲು ಮಾಡಿದ ಶ್ರಮ ಮತ್ತು ಕೆಲಸಗಳ ಬಗ್ಗೆ ಪ್ರಧಾನಿ ಮೋದಿ ತೃಪ್ತಿ ವ್ಯಕ್ತಪಡಿಸಿದರು.

 

|

13 ಕೋಟಿಗೂ ಹೆಚ್ಚು ಜನರನ್ನು ಬಡತನದಿಂದ ಮೇಲೆತ್ತುವಲ್ಲಿ ಸರ್ಕಾರದ ಮಹತ್ವದ ಸಾಧನೆ ಮಾಡಿದೆ. 2014ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ನಮ್ಮ ಸೇವಾ ಕಾಲ ಪ್ರಾರಂಭವಾಯಿತು, ದೇಶದ ಹೆಚ್ಚಿನ ಜನಸಂಖ್ಯೆಯು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಅಂದಿನ ಸರಕಾರಗಳ ನಿರ್ಲಕ್ಷ್ಯ ಧೋರಣೆಯಿಂದ ಬಡವರು ಭರವಸೆ ಕಳೆದುಕೊಂಡಿದ್ದಾರೆ. "ಈಗಿನ ಸರ್ಕಾರವು ಸೇವಾ ಮನೋಭಾವದಿಂದ ಕೆಲಸ ಮಾಡಲು ಪ್ರಾರಂಭಿಸಿದೆ". ಬಡವರು ಮತ್ತು ಸೌಲಭ್ಯವಂಚಿತರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸುವ ಮೂಲಕ ಸರ್ಕಾರ, ಅವರ ಕಲ್ಯಾಣಕ್ಕೆ ಪ್ರಮುಖ ಆದ್ಯತೆ ನೀಡಿದೆ. ಪರಿವರ್ತನೆಗೆ ಸರ್ಕಾರದ ಧೋರಣೆ ಮನ್ನಣೆ ನೀಡಿದೆ. 2014ರ ಮೊದಲು, ಗ್ರಾಮಗಳಲ್ಲಿ ಸ್ವಚ್ಛತೆಯ ವ್ಯಾಪ್ತಿಯು ಕೇವಲ 40 ಪ್ರತಿಶತ ಮಾತ್ರ ಇತ್ತು. ಆದರೆ ಇಂದು ರಾಷ್ಟ್ರವು ಪರಿಪೂರ್ಣತೆಯ ಗುರಿ ಹೊಂದಿದೆ. 2014ರ ನಂತರದ ಇತರ ಸಾಧನೆಗಳ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ಎಲ್‌ಪಿಜಿ ಸಂಪರ್ಕಗಳು ಇಂದು ಶೇಕಡ 50-55ರಷ್ಟು ಹಳ್ಳಿಗಳಿಂದ ಸರಿಸುಮಾರು 100 ಪ್ರತಿಶತಕ್ಕೆ ಏರಿಕೆ ಕಂಡಿದೆ. ಶೇಕಡ 55ರಿಂದ 100ರಷ್ಟು ಮಕ್ಕಳಿಗೆ ಜೀವ ಉಳಿಸುವ ಲಸಿಕೆಗಳನ್ನು ನೀಡಲಾಗುತ್ತಿದೆ. ನೀರಿನ ಸಂಪರ್ಕವನ್ನು ಪ್ರತಿಶತ 70 ಕುಟುಂಬಗಳಿಗೆ ಒದಗಿಸಲಾಗಿದೆ. ಸ್ವಾತಂತ್ರ್ಯದ ನಂತರದ 10 ದಶಕಗಳಲ್ಲಿ 17 ಪ್ರತಿಶತ  ಕುಟುಂಬಗಳು ಮಾತ್ರ ಈ ಸೌಲಭ್ಯ ಹೊಂದಿದ್ದವು.. "ಮೋದಿ ಸೌಲಭ್ಯವಂಚಿತರನ್ನು ತಮ್ಮ ಆದ್ಯತೆಯನ್ನಾಗಿ ಮಾಡಿದ್ದಾರೆ". ಬಡತನ ಮತ್ತು ಸಂಕಷ್ಟದ ಅವರ ವೈಯಕ್ತಿಕ ಅನುಭವದ ಕಾರಣದಿಂದ ಸೌಲಭ್ಯವಂಚಿತ ಜನರ ಬಗ್ಗೆ ತಮ್ಮ ಬಾಂಧವ್ಯ ಹೆಚ್ಚಾಗಿದೆ. ಹಾಗಾಗಿ, ಅವರೇ ನಮ್ಮ ಸರ್ಕಾರದ ಆದ್ಯತೆಯಾಗಿದ್ದಾರೆ. "ನಾನು ಸೌಲಭ್ಯವಂಚಿತರಿಗೆ ನೀಡಬೇಕಾದ ಋಣ ತೀರಿಸಲು ಭಗವಾನ್ ಬಿರ್ಸಾ ಮುಂಡಾ ಅವರ ಈ ಭೂಮಿಗೆ ಬಂದಿದ್ದೇನೆ" ಎಂದು ಪ್ರಧಾನಿ ಹೇಳಿದರು.

ಸುಲಭವಾಗಿ ಗುರಿಗಳನ್ನು ಸಾಧನೆ ಮಾಡುವ ಪ್ರಲೋಭನೆಯನ್ನು ಸರ್ಕಾರ ಪ್ರತಿರೋಧಿಸಿದೆ, ದೀರ್ಘಕಾಲ ಬಾಕಿ ಉಳಿದಿರುವ ಸಮಸ್ಯೆಗಳ ಪರಿಹಾರಕ್ಕೆ ಸರಕಾರಾ ಗಮನ ನೀಡಿದೆ. ಕರಾಳ ಯುಗದಲ್ಲಿ ಬದುಕಲು ಶಾಪಗ್ರಸ್ತವಾಗಿದ್ದ 18,000 ಹಳ್ಳಿಗಳಿಗೆ ವಿದ್ಯುದ್ದೀಕರಣ ಮಾಡಲಾಗಿದೆ ಎಂದು ಪ್ರಧಾನಿ ಉದಾಹರಣೆ ನೀಡಿದರು. ಕೆಂಪುಕೋಟೆಯಿಂದ ಮಾಡಿದ ಘೋಷಣೆಯ ಪ್ರಕಾರ ವಿದ್ಯುದ್ದೀಕರಣವನ್ನು ಕಾಲಮಿತಿಯಲ್ಲಿ ಮಾಡಲಾಗಿದೆ. ಹಿಂದುಳಿದ ಜಿಲ್ಲೆಗಳೆಂದು ಗುರುತಿಸಲ್ಪಟ್ಟ 110 ಜಿಲ್ಲೆಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಜೀವನ ಸೌಕರ್ಯದ ಪ್ರಮುಖ ನಿಯತಾಂಕಗಳನ್ನು ಮೇಲಕ್ಕೆ ಎತ್ತಲಾಗಿದೆ. ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮವು ಈ ಜಿಲ್ಲೆಗಳಲ್ಲಿ ಪರಿವರ್ತನೀಯ ಬದಲಾವಣೆಗಳನ್ನು ತಂದಿದೆ. ಈ ಜಿಲ್ಲೆಗಳು ಗರಿಷ್ಠ ಬುಡಕಟ್ಟು ಜನಸಂಖ್ಯೆಯನ್ನು ಹೊಂದಿವೆ. "ಆಕಾಂಕ್ಷಿತ ಜಿಲ್ಲಾ ಕಾರ್ಯಕ್ರಮದ ಯಶಸ್ಸನ್ನು ಮಹತ್ವಾಕಾಂಕ್ಷೆಯ ಬ್ಲಾಕ್‌ಗಳಿಗೆ ವಿಸ್ತರಿಸಲಾಗುತ್ತಿದೆ" ಎಂದು ಅವರು ಹೇಳಿದರು.

“ದೇಶದ ಯಾವುದೇ ನಾಗರಿಕರಿಗೆ ಆಗುವ ತಾರತಮ್ಯದ ಎಲ್ಲಾ ಸಾಧ್ಯತೆಗಳನ್ನು ತೊಡೆದುಹಾಕಿದಾಗ ಮಾತ್ರ ನಿಜವಾದ ಜಾತ್ಯತೀತತೆ ಬರುತ್ತದೆ”. ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನವು ಒಂದೇ ಅಳತೆಯಲ್ಲಿ ಎಲ್ಲರಿಗೂ ತಲುಪಿದಾಗ ಮಾತ್ರ ಸಾಮಾಜಿಕ ನ್ಯಾಯ ಖಾತ್ರಿಪಡಿಸಿದಂತಾಗುತ್ತದೆ. ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯ ಇಂದಿನಿಂದ ಪ್ರಾರಂಭವಾಗುವ 'ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ' ಮುಂದಿನ ವರ್ಷ ಜನವರಿ 26ರ ವರೆಗೆ ನಡೆಯಲಿದೆ. "ಈ ಪ್ರಯಾಣದಲ್ಲಿ, ಸರ್ಕಾರವು ಕಾರ್ಯಾಚರಣೆ  ಮಾದರಿಯಲ್ಲಿ ದೇಶದ ಪ್ರತಿಯೊಂದು ಹಳ್ಳಿಗೆ ಹೋಗುತ್ತದೆ. ಪ್ರತಿಯೊಬ್ಬ ಬಡ ಮತ್ತು ವಂಚಿತ ವ್ಯಕ್ತಿಯನ್ನು ಸರ್ಕಾರಿ ಯೋಜನೆಗಳ ಫಲಾನುಭವಿಯನ್ನಾಗಿ ಮಾಡುತ್ತದೆ" ಎಂದು ಪ್ರಧಾನಮಂತ್ರಿ ಹೇಳಿದರು.

 

|

2018ರಲ್ಲಿ ಗ್ರಾಮ ಸ್ವರಾಜ್ ಅಭಿಯಾನ ಆಯೋಜಿಸಿದ್ದನ್ನು ಪ್ರಧಾನ ಮಂತ್ರಿ ಅವರು ನೆನಪಿಸಿಕೊಂಡರು, ಅಲ್ಲಿ ಸರ್ಕಾರದ 7 ಪ್ರಮುಖ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು 1 ಸಾವಿರ ಸರ್ಕಾರಿ ಅಧಿಕಾರಿಗಳನ್ನು ಹಳ್ಳಿಗಳಿಗೆ ಕಳುಹಿಸಲಾಗಿತ್ತು. ಹಾಗೆಯೇ, ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯು ಅಷ್ಟೇ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರತಿಯೊಬ್ಬ ಬಡವರಿಗೂ ಉಚಿತ ರೇಷನ್ ಕಾರ್ಡ್, ಉಜ್ವಲ ಯೋಜನೆಯಿಂದ ಗ್ಯಾಸ್ ಸಂಪರ್ಕ, ಮನೆಗಳಿಗೆ ವಿದ್ಯುತ್ ಸರಬರಾಜು, ನಲ್ಲಿ ನೀರಿನ ಸಂಪರ್ಕ, ಆಯುಷ್ಮಾನ್ ಕಾರ್ಡ್ ಮತ್ತು ಪಕ್ಕಾ ಮನೆಗಾಗಿ ಪಡಿತರ ಚೀಟಿ ಹೊಂದುವ ದಿನವನ್ನು ನಾನು ಎದುರು ನೋಡುತ್ತಿದ್ದೇನೆ. ಪ್ರತಿಯೊಬ್ಬ ರೈತರು ಮತ್ತು ಕಾರ್ಮಿಕರು ಪಿಂಚಣಿ ಯೋಜನೆಗಳಿಗೆ ಸೇರಿಕೊಳ್ಳಲಿದ್ದಾರೆ. ಯುವಕರು ತಮ್ಮ ಕನಸುಗಳನ್ನು ನನಸಾಗಿಸಲು ಮುದ್ರಾ ಯೋಜನೆಯನ್ನು ಪಡೆದುಕೊಳ್ಳುವ ಅವರ ದೃಷ್ಟಿಯನ್ನು ಪ್ರಧಾನಿ ಮೋದಿ ಮತ್ತಷ್ಟು ವಿವರಿಸಿದರು. "ವೀಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯು ಭಾರತದ ಬಡವರು, ವಂಚಿತರು, ಮಹಿಳೆಯರು, ಯುವಕರು ಮತ್ತು ರೈತರಿಗೆ ಮೋದಿ ನೀಡುವ ಭರವಸೆಯಾಗಿದೆ" ಎಂದರು.

ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪದ ಭದ್ರ ಬುನಾದಿಯೇ ಪಿಎಂ ಜನ್ಮನ್ ಅಥವಾ ಪಿಎಂ ಜಂಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನವಾಗಿದೆ. ಬುಡಕಟ್ಟು ಸಮುದಾಯಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ, ಪ್ರತ್ಯೇಕ ಬಜೆಟ್‌ ಮೀಸಲಿಟ್ಟಿದ್ದು  ಅಟಲ್‌ ಜಿ ಅವರ ಸರ್ಕಾರ. ಗಿರಿಜನರ ಕಲ್ಯಾಣಕ್ಕೆ ಹಿಂದಿನ ಬಜೆಟ್‌ಗಿಂತ 6 ಪಟ್ಟು ಅನುದಾನ ಹೆಚ್ಚಿಸಲಾಗಿದೆ. ಪಿಎಂ ಜನ್ಮನ್ ಅಡಿ, ಸರ್ಕಾರವು ಬುಡಕಟ್ಟು ಗುಂಪುಗಳು ಮತ್ತು ಪ್ರಾಚೀನ ಬುಡಕಟ್ಟುಗಳಿಗೆ ಪ್ರಯೋಜನ ಒದಗಿಸಲಿದೆ. ಅವರಲ್ಲಿ ಹೆಚ್ಚಿನವರು ಇನ್ನೂ ಅರಣ್ಯಗಳಲ್ಲಿ ವಾಸಿಸುತ್ತಿದ್ದಾರೆ. ದೇಶದ 22 ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಾಸಿಸುವ ಲಕ್ಷ ಜನಸಂಖ್ಯೆ ಹೊಂದಿರುವ ಇಂತಹ 75 ಬುಡಕಟ್ಟು ಸಮುದಾಯಗಳು ಮತ್ತು ಆದಿಮಾನವ ಬುಡಕಟ್ಟುಗಳನ್ನು ಸರ್ಕಾರ ಗುರುತಿಸಿದೆ. "ಹಿಂದಿನ ಸರ್ಕಾರಗಳು ಬರೀಅಂಕಿಅಂಶಗಳನ್ನು ಕಲೆ ಹಾಕುವ ಕೆಲಸವನ್ನು ಮಾತ್ರ ಮಾಡಿದ್ದವು, ಆದರೆ ನಾನು ಜನರನ್ನು ಸಂಪರ್ಕಿಸಲು ಬಯಸುತ್ತೇನೆ, ಅಂಕಿಅಂಶಗಳನ್ನು ಅಲ್ಲ. ಈ ಗುರಿಯೊಂದಿಗೆ ಪಿಎಂ ಜನ್ಮನ್ ಇಂದು ಪ್ರಾರಂಭವಾಗಿದೆ”. ಈ ಬೃಹತ್ ಅಭಿಯಾನಕ್ಕೆ ಕೇಂದ್ರ ಸರ್ಕಾರ 24,000 ಕೋಟಿ ರೂಪಾಯಿ ವೆಚ್ಚ ಮಾಡಲಿದೆ ಎಂದು ಪ್ರಧಾನಿ ತಿಳಿಸಿದರು.

ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ, ಅವರು ಹೊಂದಿರುವ ಅಚಲ ಬದ್ಧತೆಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪ್ರಧಾನ ಮಂತ್ರಿ ಕೃತಜ್ಞತೆ ಸಲ್ಲಿಸಿದರು. ಮುರ್ಮು ಅವರು ಮಹಿಳಾ ನೇತೃತ್ವದ ಅಭಿವೃದ್ಧಿಯ ಸ್ಫೂರ್ತಿದಾಯಕ ಸಂಕೇತ ಎಂದು ಕರೆದರು. ಇತ್ತೀಚಿನ ವರ್ಷಗಳಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿ ಖಚಿತಪಡಿಸಿಕೊಳ್ಳಲು ಕೈಗೊಂಡ ಕ್ರಮಗಳನ್ನು ಪ್ರಧಾನ ಮಂತ್ರಿ ವಿವರಿಸಿದರು. "ನಮ್ಮ ಸರ್ಕಾರವು ಮಹಿಳೆಯರಿಗಾಗಿ ಅವರ ಜೀವನದ ಪ್ರತಿಯೊಂದು ಹಂತವನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಿದೆ". ಬೇಟಿ ಬಚಾವೋ ಬೇಟಿ ಪಢಾವೋ, ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳು, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಸೈನಿಕ ಶಾಲೆ ಮತ್ತು ಡಿಫೆನ್ಸ್ ಅಕಾಡೆಮಿಯಂತರ ವಿವಿಧ 70 ಮುಕ್ತ ಉಪಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಮುದ್ರಾ ಫಲಾನುಭವಿಗಳು ಮಹಿಳೆಯರು, ಸ್ವ-ಸಹಾಯ ಗುಂಪುಗಳಿಗೆ ದಾಖಲೆಯ ನೆರವು ಮತ್ತು ನಾರಿಶಕ್ತಿ ವಂದನ್ ಅಧಿನಿಯಮವು ಮಹಿಳೆಯರ ಜೀವನವನ್ನು ಪರಿವರ್ತಿಸುತ್ತಿದೆ. “ಇಂದು ಭಾಯಿ ದೂಜ್ ಪವಿತ್ರ ಹಬ್ಬ. ನಮ್ಮ ಸರ್ಕಾರವು ನಮ್ಮ ಸಹೋದರಿಯರ ಅಭಿವೃದ್ಧಿಯಲ್ಲಿನ ಪ್ರತಿಯೊಂದು ಅಡೆತಡೆಗಳನ್ನು ತೆಗೆದುಹಾಕುವುದನ್ನು ಮುಂದುವರಿಸುತ್ತದೆ ಎಂದು ನಿಮ್ಮ ಈ ಸಹೋದರ ದೇಶದ ಎಲ್ಲಾ ಸಹೋದರಿಯರಿಗೆ ಭರವಸೆ ನೀಡುತ್ತಿದ್ದಾನೆ. ಮಹಿಳಾ ಶಕ್ತಿಯ ಅಮೃತ ಸ್ತಂಭವು ಅಭಿವೃದ್ಧಿ ಹೊಂದಿದ ಭಾರತ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ” ಎಂದು ಪ್ರಧಾನ ಮಂತ್ರಿ ಹೇಳಿದರು.

 

|

ಅಭಿವೃದ್ಧಿ ಹೊಂದಿದ ಭಾರತದ ಪಯಣದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಸಾಮರ್ಥ್ಯವನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಬದ್ಧವಾಗಿದೆ, ಇದನ್ನು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯೇ ಸೂಚಿಸುತ್ತಿದೆ. ಈ ಯೋಜನೆಯಿಂದ ವಿಶ್ವಕರ್ಮ ಗೆಳೆಯರಿಗೆ ಆಧುನಿಕ ತರಬೇತಿ ಹಾಗೂ ಪರಿಕರಗಳನ್ನು ನೀಡಲಾಗುವುದು. ಈ ಯೋಜನೆಗೆ 13 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಇಂದು ಬಿಡುಗಡೆಯಾದ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 15ನೇ ಕಂತಿನ ಕುರಿತು ಮಾತನಾಡಿದ ಪ್ರಧಾನಿ, ಇದುವರೆಗೆ 2,75,000 ಕೋಟಿ ರೂಪಾಯಿ ಹಣವನ್ನು ರೈತರ ಖಾತೆಗಳಿಗೆ ನೇರವಾಗು ವರ್ಗಾಯಿಸಲಾಗಿದೆ. ಜಾನುವಾರು ಮತ್ತು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್, ಜಾನುವಾರುಗಳಿಗೆ ಉಚಿತ ಲಸಿಕೆ ನೀಡಲು ಸರ್ಕಾರ 15,000 ಕೋಟಿ ರೂಪಾಯಿ ವೆಚ್ಚ, ಮೀನು ಸಾಕಾಣಿಕೆ ಉತ್ತೇಜಿಸಲು ಮತ್ಸ್ಯ ಸಂಪದ ಯೋಜನೆಯಡಿ ಆರ್ಥಿಕ ನೆರವು ಮತ್ತು ದೇಶದಲ್ಲಿ 10 ಸಾವಿರ ಹೊಸ ರೈತ ಉತ್ಪಾದಕ ಸಂಘಗಳ ರಚನೆ ಮಾಡಲಾಗಿದೆ. ಮಾರುಕಟ್ಟೆಯನ್ನು ಹೆಚ್ಚು ಸುಲಭವಾಗಿಸುವ ಮೂಲಕ ರೈತರ ವೆಚ್ಚ ಕಡಿತಕ್ಕೆ ಕಾರಣವಾಗುತ್ತಿದೆ. 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ಆಚರಿಸಲಾಗುತ್ತಿದೆ. ಶ್ರೀ ಅನ್ನವನ್ನು ವಿದೇಶಿ ಮಾರುಕಟ್ಟೆಗಳಿಗೆ ಕೊಂಡೊಯ್ಯುವ ಸರ್ಕಾರದ ಪ್ರಯತ್ನಗಳ ಬಗ್ಗೆಯೂ ಪ್ರಧಾನಿ ಮೋದಿ ಪ್ರಸ್ತಾಪಿಸಿದರು.

 

|

ರಾಜ್ಯದಲ್ಲಿ ನಕ್ಸಲೀಯರ ಹಿಂಸಾಚಾರ ಕಡಿಮೆ ಮಾಡುವ ನಿಟ್ಟಿನಲ್ಲಿ ಜಾರ್ಖಂಡ್‌ನ ಸಮಗ್ರ ಅಭಿವೃದ್ಧಿಗೆ ಮನ್ನಣೆ ನೀಡಲಾಗಿದೆ. ರಾಜ್ಯ ರಚನೆಯಾಗಿ 25 ವರ್ಷಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಿದೆ. ಜಾರ್ಖಂಡ್‌ನಲ್ಲಿ 25 ಯೋಜನೆಗಳ ಸಂತೃಪ್ತಿ ಅಥವಾ ಪರಿಪೂರ್ಣತೆಯ ಗುರಿಯತ್ತ ಕೆಲಸ ಮಾಡಬೇಕು. ಇದು ರಾಜ್ಯದ ಅಭಿವೃದ್ಧಿಗೆ ಹೊಸ ಚೈತನ್ಯ ನೀಡುತ್ತದೆ ಮತ್ತು ಜೀವನ ಸೌಕರ್ಯವನ್ನು ಹೆಚ್ಚಿಸುತ್ತದೆ. "ಶಿಕ್ಷಣವನ್ನು ವಿಸ್ತರಿಸಲು ಮತ್ತು ಯುವಜನರಿಗೆ ಅವಕಾಶಗಳನ್ನು ಒದಗಿಸಲು ಸರ್ಕಾರವು ಬದ್ಧವಾಗಿದೆ". ಈ ದಿಸೆಯಲ್ಲಿ ಆಧುನಿಕ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. ಇದು ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಅಧ್ಯಯನ ಮಾಡಲು ಅನುವು ಮಾಡಿಕೊಡುತ್ತದೆ. ಕಳೆದ 9 ವರ್ಷಗಳಲ್ಲಿ ದೇಶಾದ್ಯಂತ 300ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು 5,500 ಹೊಸ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಡಿಜಿಟಲ್ ಇಂಡಿಯಾ ಅಭಿಯಾನ ಉತ್ತಮ ಕಾರ್ಯಕ್ರಮವಾಗಿದೆ. ಭಾರತವು 1 ಲಕ್ಷಕ್ಕಿಂತ ಹೆಚ್ಚಿನ ಸ್ಟಾರ್ಟಪ್‌ಗಳೊಂದಿಗೆ ವಿಶ್ವದ 3ನೇ ಅತಿದೊಡ್ಡ ಪರಿಸರ ವ್ಯವಸ್ಥೆಯಾಗಿದೆ. ರಾಂಚಿಯ ಐಐಎಂ ಕ್ಯಾಂಪಸ್ ಮತ್ತು ಧನ್‌ಬಾದ್‌ನ ಐಐಟಿ-ಐಎಸ್‌ಎಂನಲ್ಲಿ ಹೊಸ ಹಾಸ್ಟೆಲ್‌ಗಳ ಉದ್ಘಾಟನೆ ನೆರವೇರಿಸಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಅಮೃತ ಕಾಲದ 4 ಅಮೃತ ಸ್ತಂಭಗಳು ಅಂದರೆ ಭಾರತದ ಸ್ತ್ರೀಶಕ್ತಿ, ಯುವಶಕ್ತಿ, ಕೃಷಿ ಶಕ್ತಿ ಮತ್ತು ನಮ್ಮ ಬಡ ಮತ್ತು ಮಧ್ಯಮ ವರ್ಗದವರ ಶಕ್ತಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಭಾರತವನ್ನು ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿ, ಪ್ರಧಾನಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಜಾರ್ಖಂಡ್ ರಾಜ್ಯಪಾಲರಾದ ಶ್ರೀ ಸಿ.ಪಿ. ರಾಧಾಕೃಷ್ಣನ್, ಜಾರ್ಖಂಡ್ ಮುಖ್ಯಮಂತ್ರಿ ಶ್ರೀ ಹೇಮಂತ್ ಸೊರೆನ್ ಮತ್ತು ಕೇಂದ್ರ ಸಚಿವರು ಉಪಸ್ಥಿತರಿದ್ದರು.

ಹಿನ್ನೆಲೆ

ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ

 ಈ ಯೋಜನೆಗಳ ಪ್ರಯೋಜನಗಳು ಎಲ್ಲಾ ಉದ್ದೇಶಿತ ಫಲಾನುಭವಿಗಳಿಗೆ ಕಾಲಮಿತಿಯಲ್ಲಿ ತಲುಪುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಸರ್ಕಾರದ ಪ್ರಮುಖ ಯೋಜನೆಗಳ ಪರಿಪೂರ್ಣತೆ ಸಾಧಿಸುವುದು ಪ್ರಧಾನ ಮಂತ್ರಿ ಅವರ ನಿರಂತರ ಪ್ರಯತ್ನವಾಗಿದೆ. ಯೋಜನೆಗಳ ಪರಿಪೂರ್ಣತೆಯ ಈ ಗುರಿ ಸಾಧಿಸುವ ಪ್ರಮುಖ ಹೆಜ್ಜೆಯಾಗಿ, ಪ್ರಧಾನ ಮಂತ್ರಿ ಅವರು ಜಂಜಾತಿಯಾ ಗೌರವ್ ದಿವಸ್ ಸಂದರ್ಭದಲ್ಲಿ 'ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ' ಆರಂಭಿಸಿದರು.

 

|

ನೈರ್ಮಲ್ಯ ಸೌಲಭ್ಯಗಳು, ಅಗತ್ಯ ಹಣಕಾಸು ಸೇವೆಗಳು, ವಿದ್ಯುತ್ ಸಂಪರ್ಕಗಳು, ಎಲ್‌ಪಿಜಿ ಸಿಲಿಂಡರ್‌ಗಳ ಲಭ್ಯತೆ, ಬಡವರಿಗೆ ವಸತಿ, ಆಹಾರ ಭದ್ರತೆ, ಸಮರ್ಪಕ ಪೋಷಣೆ, ವಿಶ್ವಾಸಾರ್ಹ ಆರೋಗ್ಯ ರಕ್ಷಣೆಯಂತಹ ಕಲ್ಯಾಣ ಯೋಜನೆಗಳ ಅರಿವು ಮೂಡಿಸುವುದು ಮತ್ತು ಪ್ರಯೋಜನಗಳನ್ನು ಜನರಿಗೆ ತಲುಪಿಸುವುದು ಯಾತ್ರೆಯ ಗಮನ ಕೇಂದ್ರೀಕರಿಸುತ್ತದೆ. ಶುದ್ಧ ಕುಡಿಯುವ ನೀರು, ಇತ್ಯಾದಿ ಸಂಭಾವ್ಯ ಫಲಾನುಭವಿಗಳ ದಾಖಲಾತಿಯನ್ನು ಯಾತ್ರೆಯ ಸಮಯದಲ್ಲಿ ಖಚಿತಪಡಿಸಿದ ವಿವರಗಳ ಮೂಲಕ ಮಾಡಲಾಗುತ್ತದೆ.

ಜಾರ್ಖಂಡ್‌ನ ಖುಂಟಿಯಲ್ಲಿ 'ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ'ಯ ಆರಂಭ ಗುರುತಿಸುವ ಐಇಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ವ್ಯಾನ್‌ಗಳಿಗೆ ಪ್ರಧಾನ ಮಂತ್ರಿ ಚಾಲನೆ ನೀಡಿದರು. ಯಾತ್ರೆಯು ಆರಂಭದಲ್ಲಿ ಗಮನಾರ್ಹ ಬುಡಕಟ್ಟು ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆಗಳಿಂದ ಪ್ರಾರಂಭವಾಗಿ, 2024 ಜನವರಿ 25ರ ವೇಳೆಗೆ ಮತ್ತು ದೇಶದಾದ್ಯಂತ ಎಲ್ಲಾ ಜಿಲ್ಲೆಗಳನ್ನು ಒಳಗೊಳ್ಳಲಿದೆ.

ಪಿಎಂ ಪಿವಿಟಿಜಿ ಮಿಷನ್

ಕಾರ್ಯಕ್ರಮ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರು ಈ ರೀತಿಯ ಮೊದಲ ಉಪಕ್ರಮ  ಪ್ರಾರಂಭಿಸಿದರು - 'ಪ್ರಧಾನ ಮಂತ್ರಿಗಳ ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳ (ಪಿಎಂ-ಪಿವಿಟಿಜಿ) ಅಭಿವೃದ್ಧಿ ಮಿಷನ್'. ಸುಮಾರು 28 ಲಕ್ಷ ಜನಸಂಖ್ಯೆ ಹೊಂದಿರುವ 22,544 ಹಳ್ಳಿಗಳಲ್ಲಿ (220 ಜಿಲ್ಲೆಗಳು) ವಾಸಿಸುವ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 75 ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳಿವೆ.

ಈ ಬುಡಕಟ್ಟು ಜನಾಂಗದವರು ಚದುರಿದ, ದೂರದ ಮತ್ತು ಪ್ರವೇಶಿಸಲಾಗದ ವಾಸಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ. ಆಗಾಗ್ಗೆ ಅರಣ್ಯ ಪ್ರದೇಶಗಳಲ್ಲಿರುತ್ತಾರೆ. ಆದ್ದರಿಂದ ರಸ್ತೆ ಮತ್ತು ಟೆಲಿಕಾಂ ಸಂಪರ್ಕ, ವಿದ್ಯುತ್, ಸುರಕ್ಷಿತ ವಸತಿ, ಮುಂತಾದ ಮೂಲಭೂತ ಸೌಲಭ್ಯಗಳೊಂದಿಗೆ ವಿಶೇಷ ದುರ್ಬಲ ಬುಡಕಟ್ಟು ಕುಟುಂಬಗಳು ಮತ್ತು ವಾಸಸ್ಥಳಗಳನ್ನು ಅಗತ್ಯ ಸೌಲಭ್ಯಗಳೊಂದಿಗೆ ಪರಿಪೂರ್ಣಗೊಳಿಸಲು ಸುಮಾರು 24,000 ಕೋಟಿ ರೂ. ಬಜೆಟ್‌ನೊಂದಿಗೆ ಮಿಷನ್ ಯೋಜಿಸಲಾಗಿದೆ. ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ, ಶಿಕ್ಷಣ, ಆರೋಗ್ಯ ಮತ್ತು ಪೋಷಣೆಯ ಸುಧಾರಿತ ಪ್ರವೇಶ ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಒದಗಿಸಲಾಗುತ್ತದೆ.

ಹೆಚ್ಚುವರಿಯಾಗಿ, ಪ್ರತ್ಯೇಕವಾಗಿ, ಪಿಎಂ-ಜೆಎವೈ ರಕ್ತಹೀನತೆ(ಕುಡಗೋಲು ಕೋಶ) ರೋಗ ನಿವಾರಣೆ, ಟಿಬಿ ನಿವಾರಣೆ, 100% ಪ್ರತಿರಕ್ಷಣೆ, ಪಿಎಂ ಸುರಕ್ಷಿತ್ ಮಾತೃತ್ವ ಯೋಜನೆ, ಪಿಎಂ ಮಾತೃ ವಂದನಾ ಯೋಜನೆ, ಪಿಎಂ ಪೋಶಣ್, ಪಿಎಂ ಜನ್ ಧನ್ ಯೋಜನೆ ಇತ್ಯಾದಿಗಳಿಗೆ ಪರಿಪೂರ್ಣತೆ ಖಾತ್ರಿಪಡಿಸಲಾಗುತ್ತದೆ.

ಪಿಎಂ-ಕಿಸಾನ್ ಗೆ 15ನೇ ಕಂತು ಮತ್ತು ಇತರ ಅಭಿವೃದ್ಧಿ ಉಪಕ್ರಮಗಳು

ರೈತರ ಕಲ್ಯಾಣಕ್ಕಾಗಿ ಪ್ರಧಾನ ಮಂತ್ರಿ ಅವರ ಬದ್ಧತೆಯ ಮತ್ತೊಂದು ಉದಾಹರಣೆ ಪ್ರದರ್ಶಿಸುವ ಒಂದು ಹಂತದಲ್ಲಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿ, 15ನೇ ಕಂತಿನ ಮೊತ್ತದ ಸುಮಾರು 18,000 ಕೋಟಿ ರೂ.ಗಳನ್ನು ನೇರ ನಗದು ವರ್ಗಾವಣೆ ಮೂಲಕ ಬಿಡುಗಡೆ ಮಾಡಲಾಗಿದೆ. 8 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ. ಯೋಜನೆಯಡಿ ಇಲ್ಲಿಯವರೆಗೆ 14 ಕಂತುಗಳಲ್ಲಿ ರೈತರ ಖಾತೆಗೆ 2.62 ಲಕ್ಷ ಕೋಟಿ ರೂ. ವರ್ಗಾವಣೆಯಾಗಿದೆ.

ರೈಲು, ರಸ್ತೆ, ಶಿಕ್ಷಣ, ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದಂತಹ ಬಹು ವಲಯಗಳ 7200 ಕೋಟಿ ರೂ. ಮೊತ್ತದ ಯೋಜನೆಗಳನ್ನು ಪ್ರಧಾನಿ ಅವರು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಪ್ರಧಾನ ಮಂತ್ರಿ ಅವರು ಶಂಕುಸ್ಥಾಪನೆ ಮಾಡಿದ ಯೋಜನೆಗಳು - ಎನ್ಎಚ್133ರ ಮಹಾಗಾಮಾ - ಹಂಸ್ದಿಹಾ ವಿಭಾಗದ 52 ಕಿಮೀ ಉದ್ದದ ಚತುಷ್ಪಥ ರಸ್ತೆ ಅಭಿವೃದ್ಧಿ ಒಳಗೊಂಡಿವೆ. ಎನ್ಎಚ್114 ಎ ಬಸುಕಿನಾಥ್ - ದಿಯೋಘರ್ ವಿಭಾಗದ 45 ಕಿಮೀ ವಿಸ್ತಾರದ 4 ಲೇನಿಂಗ್, ಕೆಡಿಎಚ್-ಪುರ್ನಾದ್ಹಿ ಕಲ್ಲಿದ್ದಲು ನಿರ್ವಹಣೆ ಘಟಕ, ಐಐಐಟಿ ರಾಂಚಿಯ ಹೊಸ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಟ್ಟಡ.

ಉದ್ಘಾಟನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಾಗುವ ಯೋಜನೆಗಳು – ಐಐಎಂ ರಾಂಚಿಯ ಹೊಸ ಕ್ಯಾಂಪಸ್ ಒಳಗೊಂಡಿವೆ, ಐಐಟಿ ಐಎಸ್‌ಎಂ ಧನ್‌ಬಾದ್‌ನ ಹೊಸ ಹಾಸ್ಟೆಲ್, ಬೊಕಾರೊದಲ್ಲಿ ಪೆಟ್ರೋಲಿಯಂ ತೈಲ ಮತ್ತು ಲೂಬ್ರಿಕೆಂಟ್ಸ್ (ಪಿಒಎಲ್) ಡಿಪೋ, ಹತಿಯಾ-ಪಕ್ರಾ ವಿಭಾಗ, ತಲ್ಗೇರಿಯಾ - ಬೊಕಾರೊ ವಿಭಾಗ ಮತ್ತು ಜರಂಗ್ಡಿಹ್-ಪತ್ರಾಟು ವಿಭಾಗವನ್ನು ದ್ವಿಗುಣಗೊಳಿಸುವ ಹಲವಾರು ರೈಲ್ವೆ ಯೋಜನೆಗಳು. ಇದಲ್ಲದೆ, ಜಾರ್ಖಂಡ್ ರಾಜ್ಯದಲ್ಲಿ 100% ರೈಲ್ವೆ ವಿದ್ಯುದ್ದೀಕರಣದ ಸಾಧನೆಯನ್ನು ಪ್ರಧಾನಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

  • krishangopal sharma Bjp January 12, 2025

    नमो नमो 🙏 जय भाजपा 🙏🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌹🌷🌷🌷🌷🌹🌷🌷🌷🌹🌷🌷🌹🌷🌷🌹🌷🌹🌷🌷🌹🌷🌹🌹🌷🌹🌷🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹
  • krishangopal sharma Bjp January 12, 2025

    नमो नमो 🙏 जय भाजपा 🙏🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌹🌷🌷🌷🌷🌹🌷🌷🌷🌹🌷🌷🌹🌷🌷🌹🌷🌹🌷🌷🌹🌷🌹🌹🌷🌹🌷🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷
  • krishangopal sharma Bjp January 12, 2025

    नमो नमो 🙏 जय भाजपा 🙏🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌹🌷🌷🌷🌷🌹🌷🌷🌷🌹🌷🌷🌹🌷🌷🌹🌷🌹🌷🌷🌹🌷🌹🌹🌷🌹🌷🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹
  • Jitender Kumar BJP Haryana State President November 15, 2024

    BJP National
  • Jitender Kumar BJP Haryana State President November 15, 2024

    BJP National 🙏🇮🇳
  • ANKUR SHARMA September 07, 2024

    नया भारत-विकसित भारत..!! मोदी है तो मुमकिन है..!! 🇮🇳🙏
  • Reena chaurasia August 29, 2024

    बीजेपी
  • Shrvan Kumar April 30, 2024

    🙏जय श्री राम 🙏 👍लक्ष्य ४४४+भाजपा🎉 🪔 फिर एक बार मोदी सरकार 🪔 🙏भारत लक्ष्य अंत्योदय 🙏 अर्थात हमारे समाज के अंतिम पंक्ति मैं बैठे हुए इंसान को सभी सुविधाएं मिलें सभी समस्याओं का निवारण हो उसके लिए स्थाई निश्चित अनुभवी योग्य सरकार चाहिए। जिसका सर्वश्रेष्ठ उदाहरण स्वच्छ भारत से शुरू होकर घर घर जल बिजली सौर ऊर्जा ज्वाला उज्जवला से निखरती हुई गरीब कल्याण से किसान निधि के साथ आपके आवास स्वास्थ्य से मुद्रा योजना के माध्यम से लघु उद्योगों की तरक्की के साथ GST जैसी सुस्पष्ट प्रणाली से कर दाताओं की गुणवत्ता प्रदान करने की महत्त्व पूर्ण योग दान यशश्वी मोदी सरकार ने पिछले 25 वर्षो से गुजरात से शुरू होकर जब माननीय यशश्वी प्रधान मंत्री श्री नरेंद्र मोदी जी गुजरात के मुख्यमंत्री के रूप में गुजरात को देश का सर्वश्रेष्ठ राज्य स्थापित किया जनता समझ गई की यही नमो देश को विश्व गुरु बना सकता है और बार बार मोदी सरकार फिर एक बार मोदी सरकार अबकी बार 444पार विशेष अगले अंक में जय श्री राम जय भाजपा तय भाजपा फिर एक बार मोदी सरकार क्योंकि सबको है मोदी की दरकार क्योंकि मोदी है कामदार नामदार करते हमारे राजा महाराजाओं की बुराई भूल गए शहजादे क्यों छुपाते औरंगजेब के अत्याचार एकम भारतभूमिश्च मित्रम
  • Manoj Pandey April 19, 2024

    Jay Maa Bharati
  • Manoj Pandey April 19, 2024

    Best PM Modi Ji
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India's first microbiological nanosat, developed by students, to find ways to keep astronauts healthy

Media Coverage

India's first microbiological nanosat, developed by students, to find ways to keep astronauts healthy
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 20 ಫೆಬ್ರವರಿ 2025
February 20, 2025

Citizens Appreciate PM Modi's Effort to Foster Innovation and Economic Opportunity Nationwide