Quote"ಸ್ಥಳೀಯ ಕಲ್ಯಾಣಕ್ಕಾಗಿ ಜಾಗತಿಕ ಸಹಕಾರ ನಮ್ಮ ಕರೆ"
Quote"ಕಾನೂನು ಜಾರಿ ನಮ್ಮ ಬಳಿ ಇಲ್ಲದಿರುವುದನ್ನು ಪಡೆಯಲು, ನಮ್ಮ ಬಳಿ ಇರುವುದನ್ನು ರಕ್ಷಿಸಲು, ನಾವು ರಕ್ಷಿಸಿದ್ದನ್ನು ಹೆಚ್ಚಿಸಲು ಮತ್ತು ಅದನ್ನು ಅತ್ಯಂತ ಅರ್ಹರಿಗೆ ವಿತರಿಸಲು ನೆರವಾಗುತ್ತದೆ"
Quote"ನಮ್ಮ ಪೊಲೀಸ್ ಪಡೆಗಳು ಜನರನ್ನು ರಕ್ಷಿಸುವುದಷ್ಟೇ ಅಲ್ಲದೆ ನಮ್ಮ ಪ್ರಜಾಪ್ರಭುತ್ವಕ್ಕೂ ಸೇವೆ ಸಲ್ಲಿಸುತ್ತವೆ"
Quote"ಬೆದರಿಕೆಗಳು ಜಾಗತಿಕವಾಗಿದ್ದಾಗ, ಸ್ಪಂದನೆ ಕೇವಲ ಸ್ಥಳೀಯವಾಗಿರಲು ಸಾಧ್ಯವಿಲ್ಲ! ಈ ಬೆದರಿಕೆಗಳನ್ನು ಮಣಿಸಲು ಜಗತ್ತು ಒಗ್ಗೂಡಲು ಇದು ಸಕಾಲ"
Quote"ಸುರಕ್ಷಿತ ಸ್ವರ್ಗದಂತಹ ತಾಣಗಳನ್ನು ನಿರ್ಮೂಲನೆ ಮಾಡಲು ಜಾಗತಿಕ ಸಮುದಾಯ ಇನ್ನೂ ವೇಗವಾಗಿ ಕೆಲಸ ಮಾಡುವ ಅಗತ್ಯವಿದೆ"
Quote"ಸಂವಹನ, ಸಹಯೋಗ ಮತ್ತು ಸಹಕಾರವು ಅಪರಾಧ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯನ್ನು ಮಣಿಸಬೇಕು"

ನವದೆಹಲಿಯಲ್ಲಿ ನಡೆದ 90ನೇ ಇಂಟರ್ ಪೋಲ್ ಮಹಾಧಿವೇಶನ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಎಲ್ಲ ಗಣ್ಯರಿಗೆ ಆತ್ಮೀಯ ಸ್ವಾಗತ ಕೋರಿದರು.

|

ಭಾರತವು ತನ್ನ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿದೆ, ಇದು ಜನರು ಮತ್ತು ಸಂಸ್ಕೃತಿಗಳ ಆಚರಣೆಯಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇಂಟರ್ ಪೋಲ್ ಬರುವ 2023ರಲ್ಲಿ ತನ್ನ ಶತಮಾನೋತ್ಸವ ಆಚರಿಸಲಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ಇದು ಆತ್ಮಾವಲೋಕನದ ಸಮಯವಾಗಿದ್ದು, ಭವಿಷ್ಯವನ್ನು ನಿರ್ಧರಿಸುವ ಸಮಯವೂ ಆಗಿದೆ ಎಂದು ಅವರು ಹೇಳಿದರು. ಸೋಲಿನಿಂದ ಕಲಿಯಲು ಮತ್ತು ಭವಿಷ್ಯದ ಬಗ್ಗೆ ಭರವಸೆಯಿಂದ ನೋಡಲು ಸಂತೋಷಪಡಲು ಮತ್ತು ಪ್ರತಿಬಿಂಬಿಸಲು ಇದು ಉತ್ತಮ ಸಮಯ ಎಂದು ಶ್ರೀ ಮೋದಿ ಹೇಳಿದರು.

|

ಭಾರತೀಯ ಸಂಸ್ಕೃತಿಯೊಂದಿಗೆ ಇಂಟರ್ ಪೋಲ್ ಸಿದ್ಧಾಂತದ ಸಂಬಂಧವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇಂಟರ್ ಪೋಲ್ ನ ಧ್ಯೇಯವಾಕ್ಯವಾದ 'ಸುರಕ್ಷಿತ ಜಗತ್ತಿನೊಂದಿಗೆ ಪೊಲೀಸರನ್ನು ಸಂಪರ್ಕಿಸುವುದು' ಮತ್ತು ವೇದಗಳಲ್ಲಿರುವ "ಆನೋ ಭದ್ರಾ ಕೃತವೋ ಯಂತು ವಿಶ್ವತಾಃ" ಅಂದರೆ ಉದಾತ್ತ ಚಿಂತನೆಗಳು ಎಲ್ಲ ದಿಕ್ಕುಗಳಿಂದ ಬರಲಿ ಎಂಬುದರ ಸಾಮ್ಯತೆಯನ್ನು ಉಲ್ಲೇಖಿಸಿ, ಇದು ಜಗತ್ತನ್ನು ಉತ್ತಮ ತಾಣವನ್ನಾಗಿ ಮಾಡಲು ಸಾರ್ವತ್ರಿಕ ಸಹಕಾರದ ಕರೆಯಾಗಿದೆ ಎಂದು ಅವರು ವಿವರಿಸಿದರು. ಭಾರತದ ವಿಶಿಷ್ಟ ಜಾಗತಿಕ ದೃಷ್ಟಿಕೋನದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರನ್ನು ಕಳುಹಿಸುವಲ್ಲಿ ಭಾರತವು ಪ್ರಮುಖ ಕೊಡುಗೆದಾರ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಪ್ರತಿಪಾದಿಸಿದರು. "ಭಾರತ ಸ್ವಾತಂತ್ರ್ಯವನ್ನು ಪಡೆಯುವ ಮೊದಲೇ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ನಾವು ತ್ಯಾಗ ಮಾಡಿದ್ದೇವೆ" ಎಂದು ಶ್ರೀ ಮೋದಿ ಹೇಳಿದರು. ಸಾವಿರಾರು ಭಾರತೀಯರು ವಿಶ್ವಯುದ್ಧಗಳಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಅವರು ಹೇಳಿದರು. ಕೋವಿಡ್ ಲಸಿಕೆಗಳು ಮತ್ತು ಹವಾಮಾನ ಗುರಿಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತವು ಯಾವುದೇ ರೀತಿಯ ಬಿಕ್ಕಟ್ಟಿನ ಸಂದರ್ಭದಲ್ಲಿ ಮುಂದಾಳತ್ವ ವಹಿಸಲು ಇಚ್ಛಾಶಕ್ತಿಯನ್ನು ತೋರಿಸಿದೆ ಎಂದು ತಿಳಿಸಿದರು. "ರಾಷ್ಟ್ರಗಳು ಮತ್ತು ಸಮಾಜಗಳು ಆಂತರಿಕವಾಗಿ ನೋಡುತ್ತಿದ್ದ ಸಮಯದಲ್ಲಿ, ಭಾರತವು ಹೆಚ್ಚಿನ ಅಂತಾರಾಷ್ಟ್ರೀಯ ಸಹಕಾರಕ್ಕೆ ಕರೆ ನೀಡಿತು. ಸ್ಥಳೀಯ ಕಲ್ಯಾಣಕ್ಕಾಗಿ ಜಾಗತಿಕ ಸಹಕಾರವು ನಮ್ಮ ಕರೆಯಾಗಿದೆ", ಎಂದು ಶ್ರೀ ಮೋದಿ ಹೇಳಿದರು.

|

ಪ್ರಪಂಚದಾದ್ಯಂತದ ಪೊಲೀಸ್ ಪಡೆಗಳು ಕೇವಲ ಜನರನ್ನು ಮಾತ್ರ ರಕ್ಷಿಸುತ್ತಿಲ್ಲ, ಜೊತೆಗೆ ಸಾಮಾಜ ಕಲ್ಯಾಣವನ್ನು ಹೆಚ್ಚಿಸುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದರು. "ಅವರು ಯಾವುದೇ ಬಿಕ್ಕಟ್ಟಿಗೆ ಸಮಾಜದ ಪ್ರತಿಕ್ರಿಯೆಯಲ್ಲಿ ಮುಂಚೂಣಿಯಲ್ಲಿರುತ್ತಾರೆ" ಎಂದು ಶ್ರೀ ಮೋದಿ ಹೇಳಿದರು. ಕೋವಿಡ್ ಬಿಕ್ಕಟ್ಟಿನ ಉದಾಹರಣೆಯನ್ನು ನೀಡಿದ ಪ್ರಧಾನಮಂತ್ರಿಯವರು, ಜನರಿಗೆ ಸಹಾಯ ಮಾಡಲು ಪೊಲೀಸ್ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟಿದ್ದರು ಎಂದು ಗಮನಸೆಳೆದರು. "ಅವರಲ್ಲಿ ಅನೇಕರು ಜನರ ಸೇವೆ ಮಾಡುತ್ತಲೇ ಬಲಿದಾನ ಸಹ ಮಾಡಿದರು" ಎಂದು ಅವರು ಹೇಳಿದರು.

ಭಾರತದ ಭೌಗೋಳಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತದ ಗಾತ್ರ ಮತ್ತು ವಿಶಾಲತೆಯ ಬಗ್ಗೆ ಮಾತನಾಡಿದರು. "ಭಾರತೀಯ ಪೊಲೀಸ್" "ಒಕ್ಕೂಟ ಮತ್ತು ರಾಜ್ಯ ಮಟ್ಟದಲ್ಲಿ, 900 ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಸುಮಾರು ಹತ್ತು ಸಾವಿರ ರಾಜ್ಯ ಕಾನೂನುಗಳನ್ನು ಜಾರಿಗೆ ತರಲು ಸಹಕರಿಸಿದೆ" ಎಂದು ಅವರು ಹೇಳಿದರು,  "ನಮ್ಮ ಪೊಲೀಸ್ ಪಡೆಗಳು ಸಂವಿಧಾನವು ಭರವಸೆ ನೀಡಿದ ಜನರ ವೈವಿಧ್ಯತೆ ಮತ್ತು ಹಕ್ಕುಗಳನ್ನು ಗೌರವಿಸುತ್ತಾ ಕೆಲಸ ಮಾಡುತ್ತವೆ. ಅವರು ಜನರನ್ನು ರಕ್ಷಿಸುವುದು ಮಾತ್ರವಲ್ಲದೆ ನಮ್ಮ ಪ್ರಜಾಪ್ರಭುತ್ವಕ್ಕೂ ಸೇವೆ ಸಲ್ಲಿಸುತ್ತಾರೆ" ಎಂದು ಅವರು ಹೇಳಿದರು. ಇಂಟರ್ ಪೋಲ್ ನ ಸಾಧನೆಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಇಂಟರ್ ಪೋಲ್ ಕಳೆದ 99 ವರ್ಷಗಳಿಂದ ಜಾಗತಿಕವಾಗಿ 195 ದೇಶಗಳಲ್ಲಿನ ಪೊಲೀಸ್ ಸಂಸ್ಥೆಗಳನ್ನು ಸಂಪರ್ಕಿಸಿದೆ ಮತ್ತು ಈ ಮಹೋನ್ನತ ಸಂದರ್ಭದ ನೆನಪಿಗಾಗಿ ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯವನ್ನು ಭಾರತ ಸರ್ಕಾರ ಬಿಡುಗಡೆ ಮಾಡುತ್ತಿದೆ ಎಂದು ಹೇಳಿದರು.

|

ಜಗತ್ತು ಎದುರಿಸುತ್ತಿರುವ ಭಯೋತ್ಪಾದನೆ, ಭ್ರಷ್ಟಾಚಾರ, ಮಾದಕ ದ್ರವ್ಯ ಕಳ್ಳಸಾಗಣೆ, ಕಳ್ಳಬೇಟೆ ಮತ್ತು ಸಂಘಟಿತ ಅಪರಾಧದಂತಹ ಅನೇಕ ಹೊರಹೊಮ್ಮುತ್ತಿರುವ ಹಾನಿಕಾರಕ ಜಾಗತೀಕರಣದ ಬೆದರಿಕೆಗಳ ಬಗ್ಗೆ ಪ್ರಧಾನಮಂತ್ರಿಯವರು ನೆನಪಿಸಿದರು. "ಈ ಅಪಾಯಗಳ ಬದಲಾವಣೆಯ ವೇಗವು ಮೊದಲಿಗಿಂತ ವೇಗವಾಗಿದೆ. ಬೆದರಿಕೆಗಳು ಜಾಗತಿಕವಾಗಿದ್ದಾಗ, ಸ್ಪಂದನೆಯು ಕೇವಲ ಸ್ಥಳೀಯವಾಗಿರಲು ಸಾಧ್ಯವಿಲ್ಲ! ಈ ಬೆದರಿಕೆಗಳನ್ನು ಮಣಿಸಲು ಜಗತ್ತು ಒಗ್ಗೂಡಲು ಇದು ಸಕಾಲ" ಎಂದು ಅವರು ಹೇಳಿದರು.

ಬಹುರಾಷ್ಟ್ರೀಯ ಭಯೋತ್ಪಾದನೆಯ ದುಷ್ಪರಿಣಾಮಗಳ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಜಗತ್ತು ಅದನ್ನು ಗುರುತಿಸುವ ಮೊದಲೇ ಭಾರತವು ಹಲವಾರು ದಶಕಗಳಿಂದ ಅದರ ವಿರುದ್ಧ ಹೋರಾಡುತ್ತಿದೆ ಎಂದು ಹೇಳಿದರು. "ಸುರಕ್ಷತೆ ಮತ್ತು ಭದ್ರತೆಯ ಬೆಲೆ ನಮಗೆ ತಿಳಿದಿತ್ತು. ನಮ್ಮ ಸಾವಿರಾರು ಜನರು ಈ ಹೋರಾಟದಲ್ಲಿ ಪ್ರಾಣ ತ್ಯಾಗವನ್ನು ಮಾಡಿದರು", ಎಂದು ಶ್ರೀ ಮೋದಿ ಹೇಳಿದರು. ಭಯೋತ್ಪಾದನೆ ವಿರುದ್ಧ ಕೇವಲ ಭೌತಿಕ ನೆಲೆಗಟ್ಟಿನಲ್ಲಿ ಮಾತ್ರ ಹೋರಾಟ ಮಾಡಿದರೆ ಸಾಲದು, ಜೊತೆಗೆ ಆನ್ ಲೈನ್ ಮೂಲಭೂತವಾದ ಮತ್ತು ಸೈಬರ್ ಮೂಲಕ ಬೆದರಿಕೆಗಳು ವೇಗವಾಗಿ ಹಬ್ಬುತ್ತಿವೆ ಎಂದು ಪ್ರಧಾನಮಂತ್ರಿ ವಿವರಿಸಿದರು. ಕೇವಲ ಒಂದು ಗುಂಡಿಯನ್ನು ಒತ್ತುವ ಮೂಲಕ ದಾಳಿಯನ್ನು ಮಾಡಬಹುದು ಅಥವಾ ಕಾಲಬುಡಕ್ಕೆ ತರಬಹುದು ಎಂದು ಪ್ರಧಾನಮಂತ್ರಿ ವಿವರಿಸಿದರು. ಅಂತಾರಾಷ್ಟ್ರೀಯ ಕಾರ್ಯತಂತ್ರಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಅಗತ್ಯವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, "ಪ್ರತಿಯೊಂದು ರಾಷ್ಟ್ರವೂ ಅವುಗಳ ವಿರುದ್ಧ ವ್ಯೂಹಾತ್ಮಕವಾಗಿ ಕೆಲಸ ಮಾಡುತ್ತಿದೆ. ಆದರೆ ನಮ್ಮ ಗಡಿಯೊಳಗೆ ನಾವು ಏನು ಮಾಡುತ್ತೇವೆಯೋ ಅದು ಇನ್ನು ಮುಂದೆ ಸಾಕಾಗುವುದಿಲ್ಲ." ಮುಂಚಿತವಾಗಿ ಪತ್ತೆಹಚ್ಚಿ, ಎಚ್ಚರಿಕೆ ನೀಡುವ ವ್ಯವಸ್ಥೆಗಳನ್ನು ಸ್ಥಾಪಿಸುವುದು, ಸಾರಿಗೆ ಸೇವೆಗಳನ್ನು ರಕ್ಷಿಸುವುದು, ಸಂವಹನ ಮೂಲಸೌಕರ್ಯಕ್ಕೆ ಭದ್ರತೆ, ನಿರ್ಣಾಯಕ ಮೂಲಸೌಕರ್ಯಕ್ಕೆ ಭದ್ರತೆ, ತಾಂತ್ರಿಕ ಮತ್ತು ತಂತ್ರಜ್ಞಾನದ ನೆರವು, ಗುಪ್ತಚರ ಮಾಹಿತಿ ವಿನಿಮಯ ಮತ್ತು ಇತರ ಹಲವಾರು ವಿಷಯಗಳನ್ನು ಹೊಸ ಹಂತಕ್ಕೆ ಕೊಂಡೊಯ್ಯಬೇಕು ಎಂದು ಅವರು ಸಲಹೆ ನೀಡಿದರು.

ಪ್ರಧಾನಮಂತ್ರಿಯವರು ಭ್ರಷ್ಟಾಚಾರದ ಅಪಾಯಗಳ ಬಗ್ಗೆ ವಿವರಿಸಿದರು. ಭ್ರಷ್ಟಾಚಾರ ಮತ್ತು ಆರ್ಥಿಕ ಅಪರಾಧಗಳು ಅನೇಕ ದೇಶಗಳ ನಾಗರಿಕರ ಕಲ್ಯಾಣಕ್ಕೆ ಹಾನಿಯುಂಟು ಮಾಡಿವೆ ಎಂದು ಅವರು ಹೇಳಿದರು. "ಭ್ರಷ್ಟರು" ಎಂದು ಹೇಳಿ ಮಾತು ಮುಂದುವರಿಸಿದ ಅವರು, "ಅಪರಾಧದಿಂದ ಬರುವ ಆದಾಯವನ್ನು ಪ್ರಪಂಚದ ವಿವಿಧ ಭಾಗಗಳಲ್ಲಿ ನಿಲ್ಲಿಸಲು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು. ಈ ಹಣವು ದೇಶದ ನಾಗರಿಕರಿಗೆ ಸೇರಿದ್ದು, ಅವರಿಂದಲೇ ಅದನ್ನು ತೆಗೆದುಕೊಳ್ಳಲಾಗಿದೆ" ಎಂದು ಹೇಳಿದರು. ಆಗಾಗ್ಗೆ, ಇದನ್ನು ವಿಶ್ವದ ಕೆಲವು ಬಡ ಜನರಿಂದ ತೆಗೆದುಕೊಳ್ಳಲಾಗಿದೆ. ಇದಲ್ಲದೆ, ಹಣವನ್ನು ಅನೇಕ ಹಾನಿಗಳಿಗೆ ಬಳಕೆ ಮಾಡಲಾಗುತ್ತದೆ ಎಂದರು.

|

ಸುರಕ್ಷಿತ ಸ್ವರ್ಗದಂತಹ ತಾಣಗಳನ್ನು ನಿರ್ಮೂಲನೆ ಮಾಡಲು ಜಾಗತಿಕ ಸಮುದಾಯವು ಇನ್ನೂ ವೇಗವಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. "ಭ್ರಷ್ಟರು, ಭಯೋತ್ಪಾದಕರು, ಮಾದಕ ದ್ರವ್ಯ ಮಾರಾಟಗಾರರು, ಕಳ್ಳಬೇಟೆ ತಂಡಗಳು ಅಥವಾ ಸಂಘಟಿತ ಅಪರಾಧಗಳಿಗೆ ಯಾವುದೇ ಸುರಕ್ಷಿತ ತಾಣಗಳು ಇರಲು ಸಾಧ್ಯವಿಲ್ಲ. ಒಂದೇ ಸ್ಥಳದಲ್ಲಿ ಜನರ ವಿರುದ್ಧದ ಇಂತಹ ಅಪರಾಧಗಳು ಪ್ರತಿಯೊಬ್ಬರ ವಿರುದ್ಧದ ಅಪರಾಧಗಳಾಗಿವೆ, ಮಾನವೀಯತೆಯ ವಿರುದ್ಧದ ಅಪರಾಧಗಳಾಗಿವೆ", ಎಂದು ಅವರು ಹೇಳಿದರು. "ಸಹಕಾರವನ್ನು ಹೆಚ್ಚಿಸಲು ಪೊಲೀಸ್ ಮತ್ತು ಕಾನೂನು ಜಾರಿ ಸಂಸ್ಥೆಗಳು ಕಾರ್ಯವಿಧಾನಗಳು ಮತ್ತು ಶಿಷ್ಟಾಚಾರಗಳನ್ನು ರೂಪಿಸುವ ಅಗತ್ಯವಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ದೇಶಭ್ರಷ್ಟ ಅಪರಾಧಿಗಳಿಗೆ ರೆಡ್ ಕಾರ್ನರ್ ನೋಟಿಸ್ ಗಳನ್ನು ತ್ವರಿತಗೊಳಿಸುವ ಮೂಲಕ ಇಂಟರ್ ಪೋಲ್ ಸಹಾಯ ಮಾಡುತ್ತದೆ. "ಸುರಕ್ಷಿತ ಮತ್ತು ಸುಭದ್ರ ಜಗತ್ತು ನಮ್ಮ ಹಂಚಿಕೆಯ ಜವಾಬ್ದಾರಿಯಾಗಿದೆ. ಶಿಷ್ಟ ಶಕ್ತಿಗಳು ಸಹಕರಿಸಿದಾಗ, ದುಷ್ಟ ಅಪರಾಧಿಕ ಶಕ್ತಿಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ." ಎಂದರು

ಭಾರತವನ್ನು ಸುರಕ್ಷಿತವಾಗಿಡಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ವೀರರಿಗೆ ಗೌರವ ಸಲ್ಲಿಸಲು ನವದೆಹಲಿಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವುದನ್ನು ಪರಿಗಣಿಸುವಂತೆ ಪ್ರಧಾನಮಂತ್ರಿಯವರು ಎಲ್ಲಾ ಗಣ್ಯರಿಗೆ ಮನವಿ ಮಾಡಿದರು. 90ನೇ ಇಂಟರ್ ಪೋಲ್ ಮಹಾಧಿವೇಶನವು ಅಪರಾಧ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯನ್ನು ಹತ್ತಿಕ್ಕಲು ಪರಿಣಾಮಕಾರಿ ಮತ್ತು ಯಶಸ್ವಿ ವೇದಿಕೆಯಾಗಿದೆ ಎಂದು ಸಾಬೀತುಪಡಿಸುತ್ತದೆ ಎಂಬ ಭರವಸೆಯನ್ನು ಪ್ರಧಾನಮಂತ್ರಿಯವರು ವ್ಯಕ್ತಪಡಿಸಿದರು. "ಸಂವಹನ, ಸಹಯೋಗ ಮತ್ತು ಸಹಕಾರವು ಅಪರಾಧ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯನ್ನು ಮಣಿಸಬೇಕು" ಎಂದು ಪ್ರಧಾನಮಂತ್ರಿ ಅವರು ತಮ್ಮ ಭಾಷಣ ಮುಗಿಸಿದರು.

|

ಇದಕ್ಕೂ ಮುನ್ನ ಸ್ಥಳಕ್ಕೆ ಆಗಮಿಸಿದ ಪ್ರಧಾನಮಂತ್ರಿಯವರನ್ನು ಇಂಟರ್ ಪೋಲ್ ಅಧ್ಯಕ್ಷರು ಕಾರ್ಯಕಾರಿ ಸಮಿತಿಗೆ ಪರಿಚಯಿಸಿದರು. ನಂತರ ಪ್ರಧಾನಮಂತ್ರಿಯವರು ಗುಂಪು ಛಾಯಾಚಿತ್ರಕ್ಕೆ ತೆಗೆಸಿಕೊಂಡರು ಮತ್ತು ಇಂಟರ್ ಪೋಲ್ ಶತಮಾನೋತ್ಸವ ವೇದಿಕೆ ವೀಕ್ಷಿಸಿದರು. ಇದರ ನಂತರ ಪ್ರಧಾನಮಂತ್ರಿಯವರು ಟೇಪು ಕತ್ತರಿಸುವ ಮೂಲಕ ಮತ್ತು ರಾಷ್ಟ್ರೀಯ ಪೊಲೀಸ್ ಪಾರಂಪರಿಕ ಪ್ರದರ್ಶನವನ್ನು ಉದ್ಘಾಟಿಸಿದರು ಮತ್ತು ಅಲ್ಲಿ ಒಂದು ಸುತ್ತು  ಹಾಕಿ ವೀಕ್ಷಿಸಿದರು. 

ವೇದಿಕೆಗೆ ಆಗಮಿಸಿದ ಪ್ರಧಾನಮಂತ್ರಿಯವರು ದ್ವಾರದಲ್ಲೇ ಐಟಿಬಿಪಿ ತುಕಡಿಯ ಪಥಸಂಚಲನಕ್ಕೆ ಸಾಕ್ಷಿಯಾದರು. ಇದರ ನಂತರ ಭಾರತದ ರಾಷ್ಟ್ರಗೀತೆ ಮತ್ತು ಇಂಟರ್ ಪೋಲ್ ಗೀತೆ ಮೊಳಗಿತು. ಪ್ರಧಾನಮಂತ್ರಿಯವರಿಗೆ ಇಂಟರ್ ಪೋಲ್ ನ ಅಧ್ಯಕ್ಷರು ಕುಬ್ಜ ಗಿಡವನ್ನು ಉಡುಗೊರೆಯಾಗಿ ನೀಡಿದರು. ತದನಂತರ, ಪ್ರಧಾನಮಂತ್ರಿಯವರು 90ನೇ ಇಂಟರ್ ಪೋಲ್ ಮಹಾಸಭೆಯ ಅಂಗವಾಗಿ ಸ್ಮರಣಾರ್ಥ ಅಂಚೆ ಚೀಟಿ ಮತ್ತು 100 ರೂ.ಗಳ ನಾಣ್ಯವನ್ನು ಬಿಡುಗಡೆ ಮಾಡಿದರು.

|

ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ, ಇಂಟರ್ ಪೋಲ್ ಅಧ್ಯಕ್ಷ ಶ್ರೀ ಅಹ್ಮದ್ ನಾಸಿರ್ ಅಲ್ ರೈಸ್, ಇಂಟರ್ ಪೋಲ್ ಪ್ರಧಾನ ಕಾರ್ಯದರ್ಶಿ ಶ್ರೀ ಜುರ್ಗೆನ್ ಸ್ಟಾಕ್ ಮತ್ತು ಸಿಬಿಐ ನಿರ್ದೇಶಕ ಶ್ರೀ ಸುಬೋಧ್ ಕುಮಾರ್ ಜೈಸ್ವಾಲ್ ಉಪಸ್ಥಿತರಿದ್ದರು.

ಹಿನ್ನೆಲೆ
ಇಂಟರ್ ಪೋಲ್ ನ 90ನೇ ಮಹಾಧಿವೇಶನವು ಅಕ್ಟೋಬರ್ 18 ರಿಂದ 21 ರವರೆಗೆ ನಡೆಯುತ್ತಿದೆ. ಸಚಿವರು, ದೇಶಗಳ ಪೊಲೀಸ್ ಮುಖ್ಯಸ್ಥರು, ರಾಷ್ಟ್ರೀಯ ಕೇಂದ್ರೀಯ ಬ್ಯೂರೋಗಳ ಮುಖ್ಯಸ್ಥರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ 195 ಇಂಟರ್ಪೋಲ್ ಸದಸ್ಯ ರಾಷ್ಟ್ರಗಳ ನಿಯೋಗ ಸಭೆಯಲ್ಲಿ ಭಾಗವಹಿಸುತ್ತಿವೆ. ಮಹಾಧಿವೇಶನವು ಇಂಟರ್ ಪೋಲ್ ನ ಅತ್ಯುನ್ನತ ಆಡಳಿತ ಮಂಡಳಿಯಾಗಿದ್ದು, ಅದರ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ವರ್ಷಕ್ಕೊಮ್ಮೆ ಸಭೆ ಸೇರುತ್ತದೆ.

|

ಸುಮಾರು 25 ವರ್ಷಗಳ ನಂತರ ಇಂಟರ್ ಪೋಲ್ ಮಹಾಸಭೆಯು ಭಾರತದಲ್ಲಿ ನಡೆಯುತ್ತಿದೆ - ಇದು ಕೊನೆಯ ಬಾರಿಗೆ 1997 ರಲ್ಲಿ ನಡೆದಿತ್ತು. ಭಾರತದ ಸ್ವಾತಂತ್ರ್ಯದ 75 ನೇ ವರ್ಷದ ಆಚರಣೆಯೊಂದಿಗೆ 2022ರಲ್ಲಿ ನವದೆಹಲಿಯಲ್ಲಿ ಇಂಟರ್ ಪೋಲ್ ನ ಮಹಾಸಭೆಯನ್ನು ಆಯೋಜಿಸುವ ಭಾರತದ ಪ್ರಸ್ತಾಪವನ್ನು ಸಾಮಾನ್ಯ ಸಭೆಯು ಪ್ರಚಂಡ ಬಹುಮತದೊಂದಿಗೆ ಅಂಗೀಕರಿಸಿತು. ಈ ಕಾರ್ಯಕ್ರಮವು ಭಾರತದ ಕಾನೂನು ಮತ್ತು ಸುವ್ಯವಸ್ಥೆಯ ಪಾಲನೆಯಲ್ಲಿನ ಅತ್ಯುತ್ತಮ ರೂಢಿಗಳನ್ನು ಇಡೀ ವಿಶ್ವಕ್ಕೆ ಪ್ರದರ್ಶಿಸುವ ಅವಕಾಶವನ್ನು ಒದಗಿಸುತ್ತದೆ

 

 

 

 

 

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

  • Pratham Varsh in 1973 October 21, 2022

    हिजड़ों ने भाषण दिए लिंग-बोध पर, वेश्याओं ने कविता पढ़ी आत्म-शोध पर। महिलाओं का दैहिक शोषण करने वाले नेता ने भाषण दिया नारी अस्मिता पर। भ्रष्ट अधिकारियों ने शुचिता और पारदर्शिता पर उद्बोधन दिया। विश्वविद्यालय मैं कभी ना पढ़ाने वाले प्रोफेसर कर्म योग पर व्याख्यान दे रहे हैं। असल मे दोष इनका नहीं है। इस देश की प्रजा प्रधानमंत्री को मंदिर में पूजा करते देखने की आदी नहीं है। *इस देश ने एडविना माउंटबेटन की कमर में हाथ डाल कर नाचते प्रधानमंत्री को देखा है।* इस देश ने *मजारों पर चादर चढ़ाते प्रधानमंत्री को देखा है।* यह जनता प्रधानमंत्री को पार्टी अध्यक्ष के सामने नतमस्तक होते देखती आयी है। *मंदिर में भगवान के समक्ष नतमस्तक प्रधानमंत्री को लोग कैसे सहन करें ?* बिहार के एक बिना अखबार के पत्रकार मंदिर से निकल कर सूर्य को प्रणाम करते प्रधानमंत्री का उपहास उड़ा रहे हैं। एक महान लेखक जिनका सबसे बड़ा प्रशंसक भी उनकी चार किताबों का नाम नहीं जानता, *प्रधानमंत्री के भगवा चादर की आलोचना कर रहा है।* एक कवियित्री जो अपनी कविता से अधिक मंच पर चढ़ने के पूर्व सवा घण्टे तक मेकप करने के लिए जानी जाती हैं, *प्रधानमंत्री के पहाड़ी परिधान की आलोचना कर रही हैं।* *भारत के इतिहास में आलोचना कभी इतनी निर्लज्ज नहीं रही* ना ही बुद्धिजीविता इतनी लज्जाहीन हुई कि गांधीवाद के स्वघोषित योद्धा भी* *बंगाल की हिंसा के लिए ममता बनर्जी का समर्थन करें।* क्या कोई व्यक्ति इतना हताश हो सकता है कि किसी की पूजा की आलोचना करे ? *क्या इस देश का प्रधानमंत्री अपनी आस्था के अनुसार ईश्वर की आराधना भी नहीं कर सकता ?* क्या बनाना चाहते हैं देश को आप ? सेक्युलरिज्म की यही परिभाषा गढ़ी है आपने ? एक हिन्दू नेता का टोपी पहनना उतना ही बड़ा ढोंग है, जितना किसी ईसाई का तिलक लगाना। लेकिन जो लोग इस ढोंग को भी बर्दाश्त कर लेते हैं, उनसे भी *प्रधानमंत्री की शिव आराधना बर्दाश्त नहीं हो रही।* संविधान की प्रस्तावना में वर्णित "धर्म, आस्था और विश्वास की स्वतंत्रता" का यही मूल्य है आपकी दृष्टि में ? व्यक्ति विरोध में अंधे हो चुके मूर्खों की यह टुकड़ी चाह कर भी नहीं समझ पा रही कि *मोदी एक व्यक्ति भर हैं,* *आज नहीं तो कल हार जाएगा* कल कोई और था, कल कोई और आएगा। *देश न इंदिरा पर रुका था,* *न मोदी पर रुकेगा।* समय को इस बूढ़े से जो करवाना था वह करा चुका। मोदी ने भारतीय राजनीति की दिशा बदल दी है। मोदी ने *ईसाई पति की पत्नी से* महाकाल मंदिर में रुद्राभिषेक करवाया है। मोदी ने *मिश्रित DNA वाले इसाई को हिन्दू बाना धारण करने के लिए मजबूर कर दिया है।* मोदी ने *ब्राम्हणिक वैदिक के विरोध मे राजनीतिक यात्रा शुरू करनेवाले से शिवार्चन करवाया है। मोदी ने रामभक्तों पर गोली चलवाने वाले के पुत्र से राममंदिर का चक्कर लगवाया है। *हिन्दुओं में हिन्दुत्व की चेतना जगानेवाले* *मोदी के बाद* *अब वही आएगा* जो *मोदी से भी बड़ा मोदी होगा।* *"मोदी नाम केवलम"* का जाप करने वाले *मूर्ख जन्मान्ध विरोधियों, अब मोदी आये न आये, तुम्हारे दिन कभी नहीं आएंगें।* अब ऐसी कोई सरकार नहीं आएगी जो घर बैठा कर मलीदा खिलाये! *जय जय श्रीराम*
  • Markandey Nath Singh October 20, 2022

    विकसित भारत
  • अनन्त राम मिश्र October 20, 2022

    जय श्रीराम
  • अनन्त राम मिश्र October 20, 2022

    जय हो
  • Akash Gupta BJP October 19, 2022

    PM addresses 90th Interpol General Assembly in Pragati Maidan, New Delhi
  • लादू लाल जाट जाट October 19, 2022

    8824038053
  • jagdeep bharat October 19, 2022

    bhut bhut shubkamnaye Manniya sarkar
  • Jayakumar G October 19, 2022

    Aatmanirbhar Bharat🇮🇳🇮🇳🙏🙏🙏🙏jai
  • Poonam October 19, 2022

    but when local intelligence will be able to work honestly the globally organized threats can be handled with less efforts .
  • RatishTiwari October 19, 2022

    भारत माता की जय जय जय
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Job opportunities for women surge by 48% in 2025: Report

Media Coverage

Job opportunities for women surge by 48% in 2025: Report
NM on the go

Nm on the go

Always be the first to hear from the PM. Get the App Now!
...
Japan-India Business Cooperation Committee delegation calls on Prime Minister Modi
March 05, 2025
QuoteJapanese delegation includes leaders from Corporate Houses from key sectors like manufacturing, banking, airlines, pharma sector, engineering and logistics
QuotePrime Minister Modi appreciates Japan’s strong commitment to ‘Make in India, Make for the World

A delegation from the Japan-India Business Cooperation Committee (JIBCC) comprising 17 members and led by its Chairman, Mr. Tatsuo Yasunaga called on Prime Minister Narendra Modi today. The delegation included senior leaders from leading Japanese corporate houses across key sectors such as manufacturing, banking, airlines, pharma sector, plant engineering and logistics.

Mr Yasunaga briefed the Prime Minister on the upcoming 48th Joint meeting of Japan-India Business Cooperation Committee with its Indian counterpart, the India-Japan Business Cooperation Committee which is scheduled to be held on 06 March 2025 in New Delhi. The discussions covered key areas, including high-quality, low-cost manufacturing in India, expanding manufacturing for global markets with a special focus on Africa, and enhancing human resource development and exchanges.

Prime Minister expressed his appreciation for Japanese businesses’ expansion plans in India and their steadfast commitment to ‘Make in India, Make for the World’. Prime Minister also highlighted the importance of enhanced cooperation in skill development, which remains a key pillar of India-Japan bilateral ties.