"ಭಾರತದ ಸೆಮಿಕಂಡಕ್ಟರ್ ವಲಯವು ಉದ್ಯಮವನ್ನು ಪರಿವರ್ತಿಸುವ ಸುಧಾರಣೆ ಮತ್ತು ಪ್ರಗತಿಯೊಂದಿಗೆ ಕ್ರಾಂತಿ ಸೃಷ್ಟಿಸುವ ತುತ್ತತುದಿಯಲ್ಲಿದೆ"
"ಇಂದಿನ ಭಾರತವು ಇಡೀ ವಿಶ್ವಕ್ಕೆ ಆತ್ಮವಿಶ್ವಾಸ ಪ್ರೇರೇಪಿಸುತ್ತಿದೆ. ಚಿಪ್ ಗಳು ಅಲಭ್ಯವಾದಾಗ, ನೀವು ಭಾರತದ ಮೇಲೆ ಬಾಜಿ ಕಟ್ಟಬಹುದು"
"ಭಾರತದ ಸೆಮಿಕಂಡಕ್ಟರ್ ಉದ್ಯಮವು ವಿಶೇಷ ಡಯೋಡ್‌ಗಳನ್ನು ಹೊಂದಿದೆ, ಅಲ್ಲಿ ಶಕ್ತಿಯು ಎರಡೂ ದಿಕ್ಕುಗಳಲ್ಲಿ ಹರಿಯುತ್ತಿದೆ"
"ಭಾರತವು 3 ಆಯಾಮದ ಶಕ್ತಿ ಹೊಂದಿದೆ. ಅವುಗಳೆಂದರೆ ಪ್ರಸ್ತುತ ಸುಧಾರಣಾವಾದಿ ಸರ್ಕಾರ, ದೇಶದ ಬೆಳೆಯುತ್ತಿರುವ ಉತ್ಪಾದನಾ ನೆಲೆ ಮತ್ತು ತಂತ್ರಜ್ಞಾನದ ಪ್ರವೃತ್ತಿಗಳ ಬಗ್ಗೆ ತಿಳಿದಿರುವ ರಾಷ್ಟ್ರದ ಮಹತ್ವಾಕಾಂಕ್ಷೆಯ ಮಾರುಕಟ್ಟೆ"
"ಈ ಸಣ್ಣ ಚಿಪ್ ಭಾರತದಲ್ಲಿ ಕೊನೆಯ ಮೈಲಿ ವಿತರಣೆ ಖಚಿತಪಡಿಸಿಕೊಳ್ಳಲು ದೊಡ್ಡ ಕೆಲಸಗಳನ್ನು ಮಾಡುತ್ತಿದೆ"
"ವಿಶ್ವದ ಪ್ರತಿಯೊಂದು ವಿದ್ಯುನ್ಮಾನ ಸಾಧನವು ಭಾರತ ನಿರ್ಮಿತ ಚಿಪ್ ಹೊಂದಿರಬೇಕು ಎಂಬುದು ನಮ್ಮ ಕನಸು"
"ಜಾಗತಿಕ ಸೆಮಿಕಂಡಕ್ಚರ್ ಉದ್ಯಮ ಚಾಲನೆ ಮಾಡುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತದೆ"
" ವಿದ್ಯುನ್ಮಾನ ಸರಕುಗಳ 100% ಉತ್ಪಾದನೆ ಭಾರತದಲ್ಲೇ ಆಗಬೇಕು ಎಂಬುದು ನಮ್ಮ ಗುರಿಯಾಗಿದೆ"
"ಮೊಬೈಲ್ ತಯಾರಿಕೆ, ಎಲೆಕ್ಟ್ರಾನಿಕ್ಸ್ ಅಥವಾ ಸೆಮಿಕಂಡಕ್ಟರ್ ಆಗಿರಲಿ, ನಮ್ಮ ಗಮನವು ಸ್ಪಷ್ಟವಾಗಿದೆ - ನಾವು ಬಿಕ್ಕಟ್ಟಿನ ಸಮಯದಲ್ಲಿ ಸುಮ್ಮನಿರಲ್ಲ ಅಥವಾ ವಿರಮಿಸಲ್ಲ. ಆದರೆ ಮುಂದೆ ಸಾಗುವ ಜಗತ್ತನ್ನು ನಿರ್ಮಿಸಲು ಬಯಸುತ್ತೇವೆ"

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ಇಂಡಿಯಾ ಎಕ್ಸ್‌ಪೋ ಮಾರ್ಟ್‌ನಲ್ಲಿ ಆಯೋಜಿಸಿರುವ ಸೆಮಿಕಾನ್ ಇಂಡಿಯಾ-2024 ಸಮ್ಮೇಳನ ಉದ್ಘಾಟಿಸಿದರು. ಶ್ರೀ ಮೋದಿ ಅವರು ಈ ಸಂದರ್ಭದಲ್ಲಿ ವಸ್ತುಪ್ರದರ್ಶನ ವೀಕ್ಷಿಸಿದರು. ಸೆಪ್ಟೆಂಬರ್ 11ರಿಂದ 13ರ ವರೆಗೆ 3 ದಿನಗಳ ಕಾಲ ನಡೆಯುವ ಸಮ್ಮೇಳನವು ಭಾರತದ ಸೆಮಿಕಂಡಕ್ಟರ್ ಕಾರ್ಯತಂತ್ರ ಮತ್ತು ನೀತಿಗಳನ್ನು ಪ್ರದರ್ಶಿಸಲಿತ್ತದೆ, ಇದು ಸೆಮಿಕಂಡಕ್ಟರ್ ವಲಯದಲ್ಲಿ ಭಾರತವನ್ನು ಜಾಗತಿಕ ಗಮ್ಯತಾಣವಾಗಿ ರೂಪಿಸಲಿದೆ.

 

ನಂತರ ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಜಾಗತಿಕ ಸೆಮಿಕಂಡಕ್ಟರ್ ಉದ್ಯಮಕ್ಕೆ ಸಂಬಂಧಿಸಿದ ಕಾರ್ಯಕ್ರಮ ಆಯೋಜಿಸಿದ ವಿಶ್ವದ 8ನೇ ದೇಶ ಭಾರತವಾಗಿದೆ ಎಂದು ಅವರು, ಸೆಮಿಕಾನ್ ಇಂಡಿಯಾದ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. “ಇದು ಸರಿಯಾದ ಸಮಯದಲ್ಲೇ ಭಾರತದಲ್ಲಿ ಜರುಗುತ್ತಿದೆ. ನೀವು ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲೇ ಇದ್ದೀರಿ". "21ನೇ ಶತಮಾನದ ಭಾರತದಲ್ಲಿ ಚಿಪ್ ಗಳಿಗೆ ಎಂದಿಗೂ ಕೊರತೆ ಆಗುವುದಿಲ್ಲ". ಇಂದಿನ ಭಾರತವು ಜಗತ್ತಿಗೆ ಭರವಸೆ ನೀಡುತ್ತಿದೆ, "ಚಿಪ್ಸ್ ಕೊರತೆಯಾದಾಗ ನೀವು ಭಾರತದ ಮೇಲೆ ಬಾಜಿ ಕಟ್ಟಬಹುದು" ಎಂದರು.

ಶಕ್ತಿ(ವಿದ್ಯುಚ್ಛಕ್ತಿ) ಒಂದು ದಿಕ್ಕಿನಲ್ಲಿ ಮಾತ್ರ ಹರಿಯುವಂತೆ, ಸೆಮಿಕಂಡಕ್ಟರ್ ಉದ್ಯಮ ಮತ್ತು ಡಯೋಡ್ ನಡುವಿನ ಸಂಪರ್ಕದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಿ, ಭಾರತದ ಸೆಮಿಕಂಡಕ್ಟರ್ ಉದ್ಯಮವು ವಿಶೇಷ ಡಯೋಡ್‌ಗಳನ್ನು ಹೊಂದಿದ್ದು, ಅಲ್ಲಿ ಶಕ್ತಿಯು ಎರಡೂ ದಿಕ್ಕುಗಳಲ್ಲಿ ಹರಿಯುತ್ತದೆ ಎಂದರು. ಕೈಗಾರಿಕೆಗಳು ಹೂಡಿಕೆ ಮತ್ತು ಮೌಲ್ಯವನ್ನು ಸೃಷ್ಟಿಸಿದರೆ, ಮತ್ತೊಂದೆಡೆ ಸರ್ಕಾರವು ಸ್ಥಿರವಾದ ನೀತಿಗಳನ್ನು ರೂಪಿಸುತ್ತಾ ವ್ಯವಹಾರವನ್ನು ಸುಲಭಗೊಳಿಸುತ್ತಿದೆ. ಸೆಮಿಕಂಡಕ್ಟರ್ ಉದ್ಯಮದಲ್ಲಿ ಬಳಸಲಾಗುವ ಇಂಟಿಗ್ರೇಟೆಡ್ ಸರ್ಕ್ಯೂಟ್‌ನೊಂದಿಗೆ ಸಮಾನಾಂತರವಾಗಿ ಭಾರತವು ಸಮಗ್ರ ಪರಿಸರ ವ್ಯವಸ್ಥೆಯನ್ನು ಒದಗಿಸುತ್ತದೆ. ಭಾರತದ ವಿನ್ಯಾಸಕರ ಬಹು-ಚರ್ಚಿತ ಪ್ರತಿಭೆಯನ್ನು ಎತ್ತಿ ತೋರಿಸಿದೆ. ಡಿಸೈನಿಂಗ್ ಜಗತ್ತಿಗೆ ಭಾರತದ ಕೊಡುಗೆ 20 ಪ್ರತಿಶತವಿದ್ದು, ನಿರಂತರವಾಗಿ ಬೆಳೆಯುತ್ತಿದೆ. ಭಾರತವು 85,000 ತಂತ್ರಜ್ಞರು, ಎಂಜಿನಿಯರ್‌ಗಳು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ(ಆರ್&ಡಿ) ತಜ್ಞರಿರುವ ಸೆಮಿಕಂಡಕ್ಟರ್ ಕಾರ್ಯಪಡೆ ಅಥವಾ ನೌಕರ ಪಡೆ ರೂಪಿಸುತ್ತಿದೆ. "ಭಾರತವು ತನ್ನ ವಿದ್ಯಾರ್ಥಿಗಳು ಮತ್ತು ವೃತ್ತಿಪರರ ಉದ್ಯಮವನ್ನು ಸಿದ್ಧಗೊಳಿಸುವತ್ತ ಗಮನ ಹರಿಸಿದೆ". ಭಾರತದ ಸಂಶೋಧನಾ ಪರಿಸರ ವ್ಯವಸ್ಥೆಗೆ ಹೊಸ ದಿಕ್ಕು ಮತ್ತು ಶಕ್ತಿ ನೀಡುವ ಗುರಿ ಹೊಂದಿರುವ ಅನುಸಂಧನ್ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಮೊದಲ ಸಭೆ ನೆನಪಿಸಿಕೊಂಡ ಪ್ರಧಾನಿ, ಈ ಪ್ರತಿಷ್ಠಾನಕ್ಕೆ 1 ಟ್ರಿಲಿಯನ್ ರೂಪಾಯಿಯ ವಿಶೇಷ ಸಂಶೋಧನಾ ನಿಧಿ ಒದಗಿಸಲಾಗಿದೆ ಎಂದರು.

 

ಅಂತಹ ಉಪಕ್ರಮಗಳು ಸೆಮಿಕಂಡಕ್ಟರ್ ಉದ್ಯಮದ ವ್ಯಾಪ್ತಿ ಹೆಚ್ಚಿಸಲು ಮತ್ತು ವಿಜ್ಞಾನ ವಲಯದಲ್ಲಿ ನಾವೀನ್ಯತೆಗಳನ್ನು ಹೆಚ್ಚಿಸಲು ಬದ್ಧವಾಗಿದೆ. ಸೆಮಿಕಂಡಕ್ಟರ್ ಮೂಲಸೌಕರ್ಯಕ್ಕೆ ಸರ್ಕಾರ ಒತ್ತು ನೀಡಿದೆ. ಭಾರತವು ಪ್ರಸ್ತುತ ಸುಧಾರಣಾವಾದಿ ಸರ್ಕಾರ, ದೇಶದ ಬೆಳೆಯುತ್ತಿರುವ ಉತ್ಪಾದನಾ ನೆಲೆ ಮತ್ತು ತಂತ್ರಜ್ಞಾನದ ಪ್ರವೃತ್ತಿಗಳ ಬಗ್ಗೆ ತಿಳಿದಿರುವ ರಾಷ್ಟ್ರದ ಮಹತ್ವಾಕಾಂಕ್ಷೆಯ ಮಾರುಕಟ್ಟೆಯ 3 ಆಯಾಮಗಳ ದೈತ್ಯಶಕ್ತಿ ಹೊಂದಿದೆ. ಈ 3ಡಿ ಶಕ್ತಿಯ ನೆಲೆಯನ್ನು ಬೇರೆ ಇನ್ನೆಲ್ಲೂ  ಕಂಡುಹಿಡಿಯುವುದು ಕಷ್ಟ ಎಂದು ಪ್ರಧಾನಿ ಹೇಳಿದರು.

ಭಾರತದ ಮಹತ್ವಾಕಾಂಕ್ಷೆಯ ಮತ್ತು ತಂತ್ರಜ್ಞಾನ-ಆಧಾರಿತ ಸಮಾಜದ ಅನನ್ಯತೆ ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, ಭಾರತದಲ್ಲಿ ಚಿಪ್ ನ ಅರ್ಥವು ಕೇವಲ ತಂತ್ರಜ್ಞಾನಕ್ಕೆ ಸೀಮಿತವಾಗಿಲ್ಲ. ಆದರೆ ಅದು ಕೋಟ್ಯಂತರ ನಾಗರಿಕರ ಆಕಾಂಕ್ಷೆಗಳನ್ನು ಪೂರೈಸುವ ಸಾಧನವಾಗಿದೆ. ಭಾರತವು ಅಂತಹ ಚಿಪ್‌ಗಳ ದೊಡ್ಡ ಗ್ರಾಹಕ, ವಿಶ್ವದ ಅತ್ಯುತ್ತಮ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಅದರಿಂದಲೇ ನಿರ್ಮಿಸಲಾಗಿದೆ. "ಈ ಸಣ್ಣ ಚಿಪ್ ಭಾರತದಲ್ಲಿ ಅನತಿ ದೂರದ(ಕೊನೆಯ ಮೈಲಿ) ವಿತರಣೆ ಖಚಿತಪಡಿಸಿಕೊಳ್ಳಲು ದೊಡ್ಡ ಕೆಲಸಗಳನ್ನು ಮಾಡುತ್ತಿದೆ". ಕೊರೊನಾ ವೈರಸ್ ಬಿಕ್ಕಟ್ಟು ಎದುರಾದಾಗ ವಿಶ್ವದ ಬಲಿಷ್ಠ ಬ್ಯಾಂಕಿಂಗ್ ವ್ಯವಸ್ಥೆಗಳು ಕುಸಿದ ಘಟನೆಯನ್ನು ನೆನಪಿಸಿಕೊಂಡ ಶ್ರೀ ಮೋದಿ, ಆಗ ಭಾರತದಲ್ಲಿ ಬ್ಯಾಂಕುಗಳು ನಿರಂತರವಾಗಿ ಕಾರ್ಯ ನಿರ್ವಹಿಸಿದವು. "ಅದು ಭಾರತದ ಯುಪಿಐ, ರುಪೇ ಕಾರ್ಡ್, ಡಿಜಿ ಲಾಕರ್ ಅಥವಾ ಡಿಜಿ ಯಾತ್ರಾದಂತಹ ಬಹು ಡಿಜಿಟಲ್ ವೇದಿಕೆಗಳು ಭಾರತದ ಜನರ ದೈನಂದಿನ ಜೀವನದ ಸ್ವಾವಲಂಬಿಯಾಗಲು ಒಂದು ಭಾಗವಾದವು". ಭಾರತವು ಪ್ರತಿಯೊಂದು ವಲಯದಲ್ಲಿ ಉತ್ಪಾದನೆ ಹೆಚ್ಚಿಸುತ್ತಿದೆ, ಹಸಿರು ಪರಿವರ್ತನೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದೆ. ಡೇಟಾ ಸೆಂಟರ್‌ಗಳ ಬೇಡಿಕೆಯೂ ಹೆಚ್ಚುತ್ತಿದೆ. "ಜಾಗತಿಕ ಸೆಮಿಕಂಡಕ್ಟರ್ ಉದ್ಯಮ ಚಾಲನೆ ಮಾಡುವಲ್ಲಿ ಭಾರತವು ದೊಡ್ಡ ಪಾತ್ರ ವಹಿಸುತ್ತದೆ" ಎಂದು ಹೇಳಿದರು.

 

'ಚಿಪ್ಸ್ ಎಲ್ಲಿಯಾದರೂ ಬೀಳಲಿ' ಎಂಬ ಹಳೆಯ ಮಾತು ಇದೆ. ಅಂದರೆ ಏನು ನಡೆಯುತ್ತಿದೆಯೋ, ಅದು ಹಾಗೆಯೇ ಮುಂದುವರಿಯಲಿ. ಆದರೆ ಇಂದಿನ ಯುವ ಮತ್ತು ಮಹತ್ವಾಕಾಂಕ್ಷೆಯ ಭಾರತವು ಈ ಭಾವನೆಯನ್ನು ಅನುಸರಿಸುತ್ತಿಲ್ಲ. "ಭಾರತದ ಹೊಸ ಮಂತ್ರವು ಭಾರತದಲ್ಲಿ ಉತ್ಪಾದನೆಯಾಗುವ ಚಿಪ್‌ಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ". ಸೆಮಿಕಂಡಕ್ಟರ್ ಉತ್ಪಾದನೆ ಉತ್ತೇಜಿಸಲು ಸರ್ಕಾರ ಕೈಗೊಂಡ ಹಲವಾರು ಕ್ರಮಗಳನ್ನು ಪ್ರಸ್ತಾಪಿಸಿದ ಮೋದಿ, ಸೆಮಿಕಂಡಕ್ಟರ್ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಸರ್ಕಾರ 50% ಆರ್ಥಿಕ ಬೆಂಬಲ ನೀಡುತ್ತಿದೆ, ಈ ಪ್ರಯತ್ನದಲ್ಲಿ ರಾಜ್ಯ ಸರ್ಕಾರಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ನೀತಿಗಳಿಂದಾಗಿ ಭಾರತವು ಅತಿ ಕಡಿಮೆ ಸಮಯದಲ್ಲಿ 1.5 ಟ್ರಿಲಿಯನ್‌ ರೂ.ಗಿಂತ ಹೆಚ್ಚಿನ ಮೌಲ್ಯದ ಹೂಡಿಕೆ ಆಕರ್ಷಿಸಿ. ಇನ್ನೂ ಅನೇಕ ಯೋಜನೆಗಳು ಸರದಿ ಸಾಲಿನಲ್ಲಿವೆ. ಫ್ರಂಟ್-ಎಂಡ್ ಫ್ಯಾಬ್‌ಗಳು, ಡಿಸ್ ಪ್ಲೇ ಫ್ಯಾಬ್‌ಗಳು, ಸೆಮಿಕಂಡಕ್ಟರ್ ಪ್ಯಾಕೇಜಿಂಗ್ ಮತ್ತು ಪೂರೈಕೆ ಸರಪಳಿಯ ಇತರ ನಿರ್ಣಾಯಕ ಘಟಕಗಳಿಗೆ ಆರ್ಥಿಕ ಬೆಂಬಲ ಒದಗಿಸುವ ಸೆಮಿಕಾನ್ ಇಂಡಿಯಾ ಕಾರ್ಯಕ್ರಮದ ಸಮಗ್ರ ವಿಧಾನದ ಮೇಲೆ ಮೋದಿ ಬೆಳಕು ಚೆಲ್ಲಿದರು. "ವಿಶ್ವದ ಪ್ರತಿಯೊಂದು ಸಾಧನವು ಭಾರತೀಯ ನಿರ್ಮಿತ ಚಿಪ್ ಹೊಂದಿರಬೇಕು ಎಂಬುದು ನಮ್ಮ ಕನಸು". ಈ ವರ್ಷ ಕೆಂಪು ಕೋಟೆಯಲ್ಲಿ ಇದನ್ನು ಘೋಷಿಸಲಾಗಿದೆ.  ಸೆಮಿಕಂಡಕ್ಟರ್ ಉತ್ಪಾದನೆಯ ಪವರ್‌ಹೌಸ್(ಶಕ್ತಿಕೇಂದ್ರ) ಆಗಲು ಏನು ಬೇಕಾದರೂ ಮಾಡಲು ಸಿದ್ಧವಿರುವ ಭಾರತದ ಮಹತ್ವಾಕಾಂಕ್ಷೆಯನ್ನು ಅವರು ಪುನರುಚ್ಚರಿಸಿದರು.

ಸೆಮಿಕಂಡಕ್ಟರ್ ಉದ್ಯಮಕ್ಕೆ ಅಗತ್ಯವಾದ ನಿರ್ಣಾಯಕ ಖನಿಜಗಳನ್ನು ಭದ್ರಪಡಿಸಲು  ಸರ್ಕಾರ ಗಮನ ಹರಿಸಿದೆ. ದೇಶೀಯ ಉತ್ಪಾದನೆ ಮತ್ತು ಸಾಗರೋತ್ತರ ಸ್ವಾಧೀನ ಹೆಚ್ಚಿಸಲು ಇತ್ತೀಚೆಗೆ ಕ್ರಿಟಿಕಲ್ ಮಿನರಲ್ ಮಿಷನ್ ಸ್ಥಾಪನೆ ಘೋಷಿಸಲಾಗಿದೆ. ಸೀಮಾ ಸುಂಕ ವಿನಾಯಿತಿ ನೀಡಲಾಗಿದ್ದು, ನಿರ್ಣಾಯಕ ಖನಿಜಗಳ ಗಣಿಗಾರಿಕೆ ಹರಾಜಿನಲ್ಲಿ ಭಾರತವು ವೇಗವಾಗಿ ಕಾರ್ಯ ನಿರ್ವಹಿಸುತ್ತಿದೆ. ಐಐಟಿಗಳ ಸಹಯೋಗದೊಂದಿಗೆ ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯಲ್ಲಿ ಸೆಮಿಕಂಡಕ್ಟರ್ ಸಂಶೋಧನಾ ಕೇಂದ್ರ ಸ್ಥಾಪಿಸುವ ಯೋಜನೆಯನ್ನು ಶ್ರೀ ಮೋದಿ ಪ್ರಕಟಿಸಿದರು. ಇಂದಿನ ಹೈಟೆಕ್ ಚಿಪ್‌ಗಳು ಮಾತ್ರವಲ್ಲದೆ, ಮುಂದಿನ ಪೀಳಿಗೆಯ ಚಿಪ್‌ಗಳನ್ನು ಸಹ ಉತ್ಪಾದಿಸಲು. ಅಂತಾರಾಷ್ಟ್ರೀಯ ಸಹಭಾಗಿತ್ವ ಹೊಂದುವ ಕುರಿತು ಮಾತನಾಡಿದ ಪ್ರಧಾನಿ, ಇಂದು ಜಗತ್ತು 'ಸಿಲಿಕಾನ್ ರಾಜತಾಂತ್ರಿಕತೆಯ' ಯುಗಕ್ಕೆ ಸಾಗುತ್ತಿದೆ. ಭಾರತವು ಇಂಡೋ-ಪೆಸಿಫಿಕ್ ಆರ್ಥಿಕ ಮಾರ್ಗಸೂಚಿ ಪೂರೈಕೆ ಸರಪಳಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದೆ. ಅಲ್ಲದೆ, ಕೌನ್ಸಿಲ್ ಮತ್ತು ಕ್ವಾಡ್ ಸೆಮಿಕಂಡಕ್ಟರ್ ಸಪ್ಲೈ ಚೈನ್ ಇನಿಶಿಯೇಟಿವ್‌ನಲ್ಲಿ ಪ್ರಮುಖ ಪಾಲುದಾರನಾಗಿದೆ. ಹೆಚ್ಚುವರಿಯಾಗಿ, ಜಪಾನ್ ಮತ್ತು ಸಿಂಗಾಪುರದಂತಹ ದೇಶಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಸೆಮಿಕಂಡಕ್ಟರ್ ವಲಯದಲ್ಲಿ ಭಾರತವು ಅಮೆರಿಕ ಜತೆ ಸಹಕಾರ ಗಾಢಗೊಳಿಸುತ್ತಿದೆ ಎಂದು ಪ್ರಧಾನಿ ತಿಳಿಸಿದರು.

 

ಸೆಮಿಕಂಡಕ್ಟರ್‌ ಉತ್ಪಾದನೆ ಮೇಲೆ ಭಾರತ ನೀಡಿರುವ ಗಮನವನ್ನು ಪ್ರಶ್ನಿಸುವವರಿಗೆ ಡಿಜಿಟಲ್ ಇಂಡಿಯಾ ಮಿಷನ್‌ನ ಯಶಸ್ಸನ್ನು ಅಧ್ಯಯನ ಮಾಡುವಂತೆ ಪ್ರಧಾನಿ ಒತ್ತಾಯಿಸಿದರು. ಡಿಜಿಟಲ್ ಇಂಡಿಯಾ ಮಿಷನ್ ದೇಶಕ್ಕೆ ಪಾರದರ್ಶಕ, ಪರಿಣಾಮಕಾರಿ ಮತ್ತು ಸೋರಿಕೆ-ಮುಕ್ತ ಆಡಳಿತ ಒದಗಿಸುವ ಗುರಿ ಹೊಂದಿದೆ, ಅದರ ಗುಣಕ ಪರಿಣಾಮವನ್ನು ಇಂದು ಅನುಭವಿಸಬಹುದು. ಡಿಜಿಟಲ್ ಇಂಡಿಯಾ ಯಶಸ್ಸಿಗಾಗಿ, ಭಾರತದಲ್ಲಿ ಮೊಬೈಲ್ ಹ್ಯಾಂಡ್‌ಸೆಟ್‌ಗಳು ಮತ್ತು ಡೇಟಾವನ್ನು ಕೈಗೆಟುಕುವಂತೆ ಮಾಡಲು ಅಗತ್ಯ ಸುಧಾರಣೆಗಳು ಮತ್ತು ಮೂಲಸೌಕರ್ಯಗಳನ್ನು ಆರಂಭಿಸಲಾಗಿದೆ. ಒಂದು ದಶಕದ ಹಿಂದೆ ಭಾರತವು ಮೊಬೈಲ್ ಫೋನ್‌ಗಳ ಅತಿ ದೊಡ್ಡ ಆಮದುದಾರ ರಾಷ್ಟ್ರಗಳಲ್ಲಿ ಒಂದಾಗಿತ್ತು. ಆದರೆ ಇಂದು ಇದು ವಿಶ್ವದ 2ನೇ ಅತಿದೊಡ್ಡ ಮೊಬೈಲ್ ಫೋನ್‌ಗಳ ಉತ್ಪಾದಕ ಮತ್ತು ರಫ್ತುದಾರ ದೇಶವಾಗಿದೆ.  , ವಿಶೇಷವಾಗಿ 5-ಜಿ ಹ್ಯಾಂಡ್‌ಸೆಟ್ ಮಾರುಕಟ್ಟೆಯಲ್ಲಿ ಭಾರತವು ಈಗ ಜಾಗತಿಕ 5-ಜಿ ಹ್ಯಾಂಡ್‌ಸೆಟ್‌ಗಳಿಗೆ 2ನೇ ಅತಿದೊಡ್ಡ ಮಾರುಕಟ್ಟೆಯಾಗಿದೆ, 5-ಜಿ ತಂತ್ರಜ್ಞಾನ ಅನಾವರಣದ ಕೇವಲ 2 ವರ್ಷಗಳ ನಂತರ ಈ ಪ್ರಗತಿ ಉಂಟಾಗಿದೆ ಎಂದರು.

 

ಭಾರತದ ಎಲೆಕ್ಟ್ರಾನಿಕ್ಸ್ ವಲಯವು ಈಗ 150 ಶತಕೋಟಿ ಡಾಲರ್ ಗಿಂತ ಹೆಚ್ಚಿನ ಮೌಲ್ಯದ್ದಾಗಿದೆ. ಈ ದಶಕದ ಅಂತ್ಯದ ವೇಳೆಗೆ ದೇಶದ ಎಲೆಕ್ಟ್ರಾನಿಕ್ಸ್ ಕ್ಷೇತ್ರವನ್ನು  500 ಶತಕೋಟಿ ಡಾಲರ್ ಗೆ ಬೆಳೆಸುವ ಮತ್ತು 6 ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ದೊಡ್ಡ ಗುರಿ ಹೊಂದಲಾಗಿದೆ. ಈ ಬೆಳವಣಿಗೆಯು ಭಾರತದ ಸೆಮಿಕಂಡಕ್ಟರ್ ವಲಯಕ್ಕೆ ನೇರವಾಗಿ ಪ್ರಯೋಜನ ನೀಡುತ್ತದೆ. 100% ಎಲೆಕ್ಟ್ರಾನಿಕ್ ಉತ್ಪಾದನೆಯು ಭಾರತದಲ್ಲಿ ಆಗಬೇಕು ಎಂಬುದು ನಮ್ಮ ಗುರಿಯಾಗಿದೆ. ಭಾರತವು ಸೆಮಿಕಂಡಕ್ಟರ್ ಚಿಪ್ಸ್ ಮತ್ತು ಸಿದ್ಧಪಡಿಸಿದ ಉತ್ಪನ್ನವನ್ನು ಸಹ ತಯಾರಿಸುತ್ತದೆ" ಎಂದರು.

 

"ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯು ಕೇವಲ ಭಾರತದ ಸವಾಲುಗಳಿಗೆ ಮಾತ್ರವಲ್ಲದೆ, ಜಾಗತಿಕ ಸವಾಲುಗಳಿಗೂ ಪರಿಹಾರವಾಗಿದೆ". ವಿನ್ಯಾಸ  ಕ್ಷೇತ್ರದ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ಒಂದು ರೂಪಕ ಉಲ್ಲೇಖಿಸಿದರು-‘ಸೋಲಿನ ಏಕೈಕ ಅಂಶ’ - ಕೇವಲ ಒಂದೇ ಒಂದು ಬಿಡಿಭಾಗವನ್ನು ಇಡೀ ವ್ಯವಸ್ಥೆ ಅವಲಂಬಿಸಿದಾಗ ಅಲ್ಲಿ ಸಹಜವಾಗಿ ದೋಷ ಕಾಣಿಸಿಕೊಳ್ಳುತ್ತದೆ ಎಂದು ವಿನ್ಯಾಸ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಈ ತತ್ವವು ಪೂರೈಕೆ ಸರಪಳಿಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. "ಅದು ಕೋವಿಡ್ ಆಗಿರಲಿ ಅಥವಾ ಯುದ್ಧವಾಗಿರಲಿ, ಪೂರೈಕೆ ಸರಪಳಿ ಅಡೆತಡೆಗಳಿಂದ ಪ್ರಭಾವಿತವಾಗದ ಒಂದೇ ಒಂದು ಉದ್ಯಮವೂ ಇರಲಿಲ್ಲ". ಚೇತರಿಸಿಕೊಳ್ಳುವ ಪೂರೈಕೆ ಸರಪಳಿಯ ಪ್ರಾಮುಖ್ಯತೆಗೆ ಒತ್ತು ನೀಡಿದ ಅವರು, ವಿವಿಧ ಕ್ಷೇತ್ರಗಳು ಚೇತರಿಕೆ ಕಾಣುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿತು. ಪೂರೈಕೆ ಸರಪಳಿಗಳನ್ನು ರಕ್ಷಿಸುವ ಜಾಗತಿಕ ಕಾರ್ಯಾಚರಣೆಯಲ್ಲಿ ದೇಶವು ಪ್ರಮುಖ ಆಟಗಾರನಾಗಿ ಜವಾಬ್ದಾರಿ ನಿರ್ವಹಿಸಿತು ಎಂದರು.

 

ತಂತ್ರಜ್ಞಾನ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ನಡುವಿನ ಸಂಬಂಧ ಕುರಿತು ಮಾತನಾಡಿದ ಪ್ರಧಾನಿ, ತಂತ್ರಜ್ಞಾನದ ಸಕಾರಾತ್ಮಕ ಶಕ್ತಿಯು ಪ್ರಜಾಪ್ರಭುತ್ವದ ಮೌಲ್ಯಗಳೊಂದಿಗೆ ಸಂಯೋಜಿಸಲ್ಪಟ್ಟಾಗ ವರ್ಧಿಸುತ್ತದೆ. ತಂತ್ರಜ್ಞಾನದಿಂದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹಿಂತೆಗೆದುಕೊಳ್ಳುವುದರಿಂದ ತ್ವರಿತ ಸಮಯದಲ್ಲಿ ಹಾನಿಯಾಗುತ್ತದೆ. ಬಿಕ್ಕಟ್ಟಿನ ಸಮಯದಲ್ಲೂ ಕ್ರಿಯಾತ್ಮಕವಾಗಿ ಉಳಿಯುವ ಜಗತ್ತನ್ನು ರೂಪಿಸಲು ಭಾರತದ ಗಮನ ನೀಡಿದೆ. “ಮೊಬೈಲ್ ತಯಾರಿಕೆ ಆಗಿರಲಿ, ಎಲೆಕ್ಟ್ರಾನಿಕ್ಸ್ ಅಥವಾ ಸೆಮಿಕಂಡಕ್ಟರ್ ಉತ್ಪಾದನೆ ಆಗಿರಲಿ, ನಮ್ಮ ಗಮನವು ಸ್ಪಷ್ಟವಾಗಿದೆ.  ನಾವು ಎಲ್ಲೂ ನಿಲ್ಲದ ಅಥವಾ ವಿರಮಿಸದ ಜಗತ್ತನ್ನು ನಿರ್ಮಿಸಲು ಬಯಸುತ್ತೇವೆ. ಬಿಕ್ಕಟ್ಟಿನ ಸಮಯದಲ್ಲೂ ನಾವು ಮುಂದೆ ಸಾಗುತ್ತೇವೆ. ಜಾಗತಿಕ ಪ್ರಯತ್ನಗಳನ್ನು ಬಲಪಡಿಸುವ ಭಾರತದ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ, ಈ ಮಿಷನ್‌ನಲ್ಲಿ ಭಾಗಿಯಾಗಿರುವ ಎಲ್ಲಾ ಪಾಲುದಾರರಿಗೆ ತಮ್ಮ ಶುಭಾಶಯ ತಿಳಿಸಿ, ಭಾಷಣ ಮುಕ್ತಾಯಗೊಳಿಸಿದರು.

 

ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಶ್ರೀ ಜಿತಿನ್ ಪ್ರಸಾದ್, ಸೆಮಿ ಅಧ್ಯಕ್ಷ ಮತ್ತು ಸಿಇಒ  ಶ್ರೀ ಅಜಿತ್ ಮನೋಚಾ, ಟಾಟಾ ಎಲೆಕ್ಟ್ರಾನಿಕ್ಸ್ ಅಧ್ಯಕ್ಷ ಮತ್ತು ಸಿಇಒ ಡಾ ರಣಧೀರ್ ಠಾಕೂರ್, ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್‌ ಸಿಇಒ ಕರ್ಟ್ ಸಿವರ್ಸ್, ರೆನೆಸಾಸ್‌ ಸಿಇಒ, ಹಿಡೆತೋಶಿ ಶಿಬಾಟಾ ಮತ್ತು ಐಎಂಇಸಿ ಸಿಇಒ ಶ್ರೀ ಲುಕ್ ವ್ಯಾನ್ ಡೆನ್ ಹೋವ್ ಮತ್ತು ಇತರೆ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಹಿನ್ನೆಲೆ

ಸೆಮಿಕಂಡಕ್ಟರ್ ವಿನ್ಯಾಸ, ಉತ್ಪಾದನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಭಾರತವನ್ನು ಜಾಗತಿಕ ಗಣ್ಯತಾಣವಾಗಿ ರೂಪಿಸುವುದು ಪ್ರಧಾನ ಮಂತ್ರಿ ಅವರ ದೂದೃಷ್ಟಿಯಾಗಿದೆ. ಈ ದೃಷ್ಟಿಕೋನದ ಅಡಿ, ಸೆಮಿಕಾನ್ ಇಂಡಿಯಾ-2024 ಸಮ್ಮೇಳನನ್ನು ಸೆಪ್ಟೆಂಬರ್ 11ರಿಂದ 13ರ ವರೆಗೆ “ಸೆಮಿಕಂಡಕ್ಟರ್ ಭವಿಷ್ಯ ರೂಪಿಸುವುದು” ಎಂಬ ವಿಷಯದೊಂದಿಗೆ ಆಯೋಜಿಸಲಾಗಿದೆ. 3 ದಿನಗಳ ಸಮ್ಮೇಳನವು ಭಾರತದ ಸೆಮಿಕಂಡಕ್ಟರ್ ಕಾರ್ಯತಂತ್ರ ಮತ್ತು ನೀತಿಗಳನ್ನು ಪ್ರದರ್ಶಿಸುತ್ತದೆ. ಇದು ಜಾಗತಿಕ ಸೆಮಿಕಂಡಕ್ಟರ್ ವಲಯದ ಉನ್ನತ ನಾಯಕತ್ವದ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ಜಾಗತಿಕ ನಾಯಕರು, ಕಂಪನಿಗಳು ಮತ್ತು ಸೆಮಿಕಂಡಕ್ಟರ್ ಉದ್ಯಮದ ತಜ್ಞರನ್ನು ಒಟ್ಟುಗೂಡಿಸುತ್ತದೆ. ಸಮ್ಮೇಳನದಲ್ಲಿ 250ಕ್ಕೂ ಹೆಚ್ಚು ಪ್ರದರ್ಶಕರು ಮತ್ತು 150 ಭಾಷಣಕಾರರು ಭಾಗವಹಿಸುತ್ತಿದ್ದಾರೆ.

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
25% of India under forest & tree cover: Government report

Media Coverage

25% of India under forest & tree cover: Government report
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi