ಅಖಿಲ ಭಾರತ 82ನೇ ಪೀಠಸೀನಾಧಿಕಾರಿಗಳ ಸಮ್ಮೇಳನವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಉದ್ಘಾಟನಾ ಭಾಷಣ ಮಾಡಿದರು. ಸಮಾರಂಭದಲ್ಲಿ ಲೋಕಸಭಾಧ್ಯಕ್ಷರು, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ, ರಾಜ್ಯಸಭೆ ಉಪ ಸಭಾಪತಿ ಅವರು ಉಪಸ್ಥಿತರಿದ್ದರು.
ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಭಾರತಕ್ಕೆ ಕೇವಲ ಒಂದು ವ್ಯವಸ್ಥೆಯಲ್ಲ, ಭಾರತದಲ್ಲಿ ಪ್ರಜಾಪ್ರಭುತ್ವ ನಮ್ಮ ಸ್ವಭಾವ ಮತ್ತು ಜೀವನದ ಭಾಗವಾಗಿದೆ. ನಾವು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು, ಮುಂಬರುವ ವರ್ಷಗಳಲ್ಲಿ ಅಸಾಧಾರಣ ಗುರಿಗಳನ್ನು ತಲುಪಬೇಕು. ಈ ನಿರ್ಣಗಳನ್ನು ಸಾಕಾರಗೊಳಿಸಲು “ಎಲ್ಲರ ಪ್ರಯತ್ನ” ಅಗತ್ಯವಾಗಿದೆ ಎಂದರು. ಭಾರತದ ಒಕ್ಕೂಟ ವ್ಯವಸ್ಥೆ ಬಗ್ಗೆ ಮಾತನಾಡಿದರು. ಇದಕ್ಕೆ ಎಲ್ಲಾ ರಾಜ್ಯಗಳ ದೊಡ್ಡ ಪ್ರಯತ್ನ ಅಗತ್ಯವಾಗಿದೆ. “ಎಲ್ಲರ ಪ್ರಯತ್ನ” [ಸಬ್ಕಾ ಪ್ರಯಾಸ್]ದ ಮಹತ್ವ ಕುರಿತು ಪ್ರಧಾನಮಂತ್ರಿ ಅವರು ಬೆಳಕು ಚೆಲ್ಲಿದರು. ಈಶಾನ್ಯ ರಾಜ್ಯಗಳಲ್ಲಿ ದಶಕಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ ಅಥವಾ ದಶಕಗಳಿಂದ ಬಾಕಿ ಉಳಿದಿದ್ದ ದೊಡ್ಡ ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಇಂತಹ ಹಲವು ಕಾರ್ಯಕ್ರಮಗಳನ್ನು ಕೆಲ ವರ್ಷಗಳಿಂದ ಅನುಷ್ಠಾನಗೊಳಿಸಲಾಗಿದೆ. ಇದನ್ನು ಎಲ್ಲರ ಪ್ರಯತ್ನದಿಂದ ಸಾಧಿಸಲಾಗಿದೆ. ಕೊರೋನಾ ವಿರುದ್ಧದ ಹೋರಾಟ “ಎಲ್ಲರ ಪ್ರಯತ್ನಕ್ಕೆ” ಅತ್ಯುತ್ತಮ ಉದಾಹಣೆಯಾಗಿದೆ ಎಂದರು.
ನಮ್ಮ ಶಾಸಕಾಂಗದಲ್ಲಿನ ಸದನಗಳ ಸಂಪ್ರದಾಯಗಳು ಮತ್ತು ವ್ಯವಸ್ಥೆಗಳು ಅಂತರ್ಗತವಾಗಿ ಭಾರತೀಯವಾಗಿರಬೇಕು ಎಂದು ಪ್ರಧಾನಮಂತ್ರಿ ಅವರು ಒತ್ತಾಯಿಸಿದರು. ನಮ್ಮ ಸರ್ಕಾರದ ನೀತಿ ಮತ್ತು ಕಾನೂನುಗಳು “ಏಕ್ ಭಾರತ್ ಶ‍್ರೇಷ್ಠ ಭಾರತ್ “ ಭಾವನೆಗಳನ್ನು ಬಲಗೊಳಿಸುತ್ತದೆ. “ಎಲ್ಲಕ್ಕಿಂತ ಮುಖ್ಯವಾಗಿ ಸದನದಲ್ಲಿ ನಮ್ಮ ಸ್ವಂತ ನಡಾವಳಿಕೆ ಭಾರತೀಯ ಮೌಲ್ಯಗಳಿಗೆ ಅನುಗುಣವಾಗಿ ಇರಬೇಕು. ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ನಮ್ಮದು ಸಂಪೂರ್ಣವಾಗಿ ವೈವಿದ್ಯಮಯ ದೇಶ. “ಸಹಸ್ರಾರು ವರ್ಷಗಳ ಅಭಿವೃದ್ಧಿಯಲ್ಲಿ ನಾವು ವೈವಿದ್ಯತೆಯ ಮನಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದೇವೆ. ಭವ್ಯವಾದ ಏಕತೆ, ಮುರಿಯದ ಮತ್ತು ದೈವಿಕ ವ್ಯವಸ್ಥೆಯನ್ನು ಇದು ಪ್ರತಿನಿಧಿಸುತ್ತದೆ. ಈ ಅಖಂಡ ಏಕತೆಯ ಹರಿವು ನಮ್ಮ ವೈವಿದ್ಯತೆಯನ್ನು ಗೌರವಿಸುತ್ತದೆ ಮತ್ತು ಇದನ್ನು ಸಂರಕ್ಷಿಸುತ್ತದೆ ಎಂದು ಅವರು ಹೇಳಿದರು.
“ವರ್ಷದಲ್ಲಿ 3 ರಿಂದ 4 ದಿನಗಳನ್ನು ಸದನಕ್ಕಾಗಿ ಸಾರ್ವಜನಿಕ ಪ್ರತಿನಿಧಿಗಳು ಮೀಸಲಿಟ್ಟರೆ ಸಮಾಜಕ್ಕೆ ವಿಶೇಷವಾದದ್ದನ್ನು ಕೊಡಬಹುದು, ಸಾಮಾಜಿಕ ಜೀವನ ಕುರಿತು ದೇಶಕ್ಕೆ ಮಾಹಿತಿ ನೀಡಬಹುದು” ಇದರಿಂದ ಇತರೆ ಸಾರ್ವಜನಿಕ ಪ್ರತಿನಿಧಿಗಳು, ಸಮಾಜದ ಇತರೆ ಜನ ಇದರಿಂದ ಹೆಚ್ಚು ಕಲಿಯಬಹುದು ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ಗುಣಮಟ್ಟದ ಚರ್ಚೆಗಳಿಗೆ ಪ್ರತ್ಯೇಕ ಸಮಯ ನಿಗದಿ ಮಾಡಬಹುದೇ ಎಂದು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಇಂತಹ ಚರ್ಚೆಗಳಲ್ಲಿ ಘನತೆ ಮತ್ತು ಗಾಂಭೀರ್ಯತೆಯ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಾಗುತ್ತದೆ ಎಂದು ಅವರು ಹೇಳಿದರು. ಯಾರು ಯಾರ ಮೇಲೂ ರಾಜಕೀಯ ನಿಂದನೆ ಮಾಡುವುದು ಸರಿಯಲ್ಲ. ಸದನದಲ್ಲಿ ಆರೋಗ್ಯಕರ ಸಮಯ ಮತ್ತು ಆರೋಗ್ಯಕರ ದಿನವಾಗಿ ಇಂತಹ ಚರ್ಚೆಗಳು ರೂಪುಗೊಳ್ಳಬೇಕು ಎಂದರು.
“ಒಂದು ರಾಷ್ಟ್ರ, ಒಂದು ಶಾಸಕಾಂಗ ವೇದಿಕೆ” ಕುರಿತ ಕಲ್ಪನೆ ನೀಡಿದ ಪ್ರಧಾನಮಂತ್ರಿ ಅವರು, “ಇಂತಹ ಪೋರ್ಟಲ್ ಸಂಸದೀಯ ವ್ಯವಸ್ಥೆಗೆ ತಾಂತ್ರಿಕ ಪುಷ್ಠಿಯನ್ನಷ್ಟೇ ನೀಡುವುದಿಲ್ಲ. ಜತೆಗೆ ದೇಶದ ಎಲ್ಲಾ ಪ್ರಜಾತಂತ್ರ ವ್ಯವಸ್ಥೆಯ ಘಟಕಗಳನ್ನು ಸಂಪರ್ಕಿಸುವ ಕೆಲಸ ಮಾಡುತ್ತದೆ” ಎಂದು ಹೇಳಿದರು.
ಮುಂದಿನ 25 ವರ್ಷ ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಇದಕ್ಕಾಗಿ ಸಂಸದೀಯ ಪಟುಗಳು ಕರ್ತವ್ಯ, ಕರ್ತವ್ಯ, ಕರ್ತವ್ಯ ಎಂಬ ಒಂದೇ ಮಂತ್ರವನ್ನು ಅರಿತುಕೊಳ್ಳಬೇಕು ಎಂದು ಒತ್ತಾಯಿಸಿದರು.
भारत के लिए लोकतन्त्र सिर्फ एक व्यवस्था नहीं है।
— PMO India (@PMOIndia) November 17, 2021
लोकतन्त्र तो भारत का स्वभाव है, भारत की सहज प्रकृति है: PM @narendramodi
हमें आने वाले वर्षों में, देश को नई ऊंचाइयों पर लेकर जाना है, असाधारण लक्ष्य हासिल करने हैं।
— PMO India (@PMOIndia) November 17, 2021
ये संकल्प ‘सबके प्रयास’ से ही पूरे होंगे।
और लोकतन्त्र में, भारत की संघीय व्यवस्था में जब हम ‘सबका प्रयास’ की बात करते हैं तो सभी राज्यों की भूमिका उसका बड़ा आधार होती है: PM
चाहे पूर्वोत्तर की दशकों पुरानी समस्याओं का समाधान हो,
— PMO India (@PMOIndia) November 17, 2021
दशकों से अटकी-लटकी विकास की तमाम बड़ी परियोजनाओं को पूरा करना हो,
ऐसे कितने ही काम हैं जो देश ने बीते सालों में किए हैं, सबके प्रयास से किए हैं।
अभी सबसे बड़ा उदाहरण हमारे सामने कोरोना का भी है: PM @narendramodi
हमारे सदन की परम्पराएँ और व्यवस्थाएं स्वभाव से भारतीय हों,
— PMO India (@PMOIndia) November 17, 2021
हमारी नीतियाँ, हमारे कानून भारतीयता के भाव को, ‘एक भारत, श्रेष्ठ भारत’ के संकल्प को मजबूत करने वाले हों,
सबसे महत्वपूर्ण, सदन में हमारा खुद का भी आचार-व्यवहार भारतीय मूल्यों के हिसाब से हो
ये हम सबकी ज़िम्मेदारी है: PM
हमारा देश विविधताओं से भरा है।
— PMO India (@PMOIndia) November 17, 2021
अपनी हजारों वर्ष की विकास यात्रा में हम इस बात को अंगीकृत कर चुके हैं कि विविधता के बीच भी, एकता की भव्य और दिव्य अखंड धारा बहती है।
एकता की यही अखंड धारा, हमारी विविधता को संजोती है, उसका संरक्षण करती है: PM
क्या साल में 3-4 दिन सदन में ऐसे रखे जा सकते हैं जिसमें समाज के लिए कुछ विशेष कर रहे जनप्रतिनिधि अपना अनुभव बताएं, अपने समाज जीवन के इस पक्ष के बारे में भी देश को बताएं।
— PMO India (@PMOIndia) November 17, 2021
आप देखिएगा, इससे दूसरे जनप्रतिनिधियों के साथ ही समाज के अन्य लोगों को भी कितना कुछ सीखने को मिलेगा: PM
हम Quality Debate के लिए भी अलग से समय निर्धारित करने के बारे में सोच सकते हैं क्या?
— PMO India (@PMOIndia) November 17, 2021
ऐसी डिबेट जिसमें मर्यादा का, गंभीरता का पूरी तरह से पालन हो, कोई किसी पर राजनीतिक छींटाकशी ना करे।
एक तरह से वो सदन का सबसे Healthy समय हो, Healthy Day हो: PM @narendramodi
मेरा एक विचार ‘वन नेशन वन लेजिस्लेटिव प्लेटफॉर्म’ का है।
— PMO India (@PMOIndia) November 17, 2021
एक ऐसा पोर्टल जो न केवल हमारी संसदीय व्यवस्था को जरूरी technological boost दे, बल्कि देश की सभी लोकतान्त्रिक इकाइयों को जोड़ने का भी काम करे: PM @narendramodi
अगले 25 वर्ष, भारत के लिए बहुत महत्वपूर्ण हैं।
— PMO India (@PMOIndia) November 17, 2021
इसमें हम एक ही मंत्र को चरितार्थ कर सकते हैं क्या - कर्तव्य, कर्तव्य, कर्तव्य: PM @narendramodi