ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿನ್ನೆ ವಾರಾಣಸಿಯಲ್ಲಿ ಬಾಬಾ ವಿಶ್ವನಾಥ ಧಾಮ್ ಉದ್ಘಾಟನೆಯ ನಂತರ ತಮ್ಮ ಕಾರ್ಯಕ್ರಮಗಳನ್ನು ಮುಂದುವರಿಸಿದರು. ವಿಶೇಷ ಪೂಜೆ ನೆರವೇರಿಸಿದ ಅವರು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದರು. ನಂತರ ಸೋಮವಾರ ಸಂಜೆ ಪ್ರಧಾನಮಂತ್ರಿಯವರು ಗಂಗಾ ಆರತಿಯಲ್ಲಿ ಭಾಗವಹಿಸಿದರು.
ಗಂಗಾ ಆರತಿ ಕುರಿತು ಬಣ್ಣಿಸಿರುವ ಪ್ರಧಾನಮಂತ್ರಿಯವರು ಕಾಶಿಯ ಆರತಿಯು ಸದಾ ಹೃದಯದಲ್ಲಿ ಹೊಸ ಚೈತನ್ಯವನ್ನು ತುಂಬುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. “काशी की गंगा आरती हमेशा अंतर्मन को नई ऊर्जा से भर देती है। आज काशी का बड़ा सपना पूरा होने के बाद दशाश्वमेध घाट पर गंगा आरती में शामिल हुआ और मां गंगा को उनकी कृपा के लिए नमन किया। नमामि गंगे तव पाद पंकजम्।” ಎಂದು ಹೇಳಿದ್ದಾರೆ.
काशी की गंगा आरती हमेशा अंतर्मन को नई ऊर्जा से भर देती है।
— Narendra Modi (@narendramodi) December 13, 2021
आज काशी का बड़ा सपना पूरा होने के बाद दशाश्वमेध घाट पर गंगा आरती में शामिल हुआ और मां गंगा को उनकी कृपा के लिए नमन किया।
नमामि गंगे तव पाद पंकजम्। pic.twitter.com/pPnkjmgzxa
ನಂತರ ಪ್ರಧಾನಮಂತ್ರಿಯವರು ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳೊಂದಿಗೆ ವಿಸ್ತೃತ ಸಭೆ ನಡೆಸಿದರು.
"ಭಾರತದ ಬಿಜೆಪಿ @BJP4India ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳೊಂದಿಗೆ ಕಾಶಿಯಲ್ಲಿ ವಿಸ್ತೃತ ಸಭೆ ಈಗಷ್ಟೇ ಮುಕ್ತಾಯಗೊಂಡಿತು" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಕಾಶಿಯ ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ಪ್ರಧಾನಮಂತ್ರಿಯವರು ಪರಿಶೀಲಿಸಿದರು. ಈ ಕುರಿತು ಅವರು ಟ್ವೀಟ್ ಮಾಡಿರುವ ಅವರು, "ಕಾಶಿಯ ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಲಾಯಿತು. ಈ ಪವಿತ್ರ ನಗರಕ್ಕೆ ಅತ್ಯುತ್ತಮ ಮೂಲಸೌಕರ್ಯಗಳನ್ನು ಸೃಷ್ಟಿಸುವುದು ನಮ್ಮ ಪ್ರಯತ್ನವಾಗಿದೆ,” ಎಂದಿದ್ದಾರೆ.
Just concluded an extensive meeting in Kashi with @BJP4India Chief Ministers and Deputy Chief Ministers. pic.twitter.com/UCUsMndhwW
— Narendra Modi (@narendramodi) December 13, 2021
ಪ್ರಧಾನಮಂತ್ರಿಯವರು ರೈಲ್ವೆ ನಿಲ್ದಾಣಕ್ಕೂ ಭೇಟಿ ನೀಡಿದರು. ಈ ಕುರಿತು ಟ್ವೀಟ್ ಮಾಡಿರುವ ಅವರು, "ಮುಂದಿನ ನಿಲುಗಡೆ... ಬನಾರಸ್ ನಿಲ್ದಾಣ. ನಾವು ರೈಲು ಸಂಪರ್ಕವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಸ್ವಚ್ಛ, ಆಧುನಿಕ ಮತ್ತು ಪ್ರಯಾಣಿಕರ ಸ್ನೇಹಿ ರೈಲ್ವೆ ನಿಲ್ದಾಣಗಳನ್ನು ಖಾತರಿಪಡಿಸಲು ಕೆಲಸ ಮಾಡುತ್ತಿದ್ದೇವೆ,” ಎಂದಿದ್ದಾರೆ.
Inspecting key development works in Kashi. It is our endeavour to create best possible infrastructure for this sacred city. pic.twitter.com/Nw3JLnum3m
— Narendra Modi (@narendramodi) December 13, 2021
ಸಾರ್ವಜನಿಕರಿಗೆ ಅನಾನುಕೂಲತೆಯನ್ನು ಸಾಧ್ಯವಾದಷದ್ಟೂ ಕನಿಷ್ಠವಾಗಿರಿಸುವ ದೃಷ್ಟಿಯಿಂದ ಕೆಲಸ ಮಾಡುವುದು ಪ್ರಧಾನ ಮಂತ್ರಿಯವರ ಅಭ್ಯಾಸವಾಗಿದೆ. ಅದರಂತೆಯೇ ಅವರು ತಡರಾತ್ರಿಯಲ್ಲಿ ಅಭಿವೃದ್ಧಿ ಯೋಜನೆಗಳ ಪರಿಶೀಲನೆ ನಡೆಸಿದರು. ಸ್ವತಃ ಸ್ಥಳೀಯ ಸಂಸದರೂ ಆಗಿರುವ ಪ್ರಧಾನ ಮಂತ್ರಿಯವರು ತಮ್ಮ ಬಗ್ಗೆ ಅಪಾರ ಪ್ರೀತಿ ತೋರಿದ ಸ್ಥಳೀಯ ಜನರೊಂದಿಗೆ ಬೆರೆತರು.
Next stop…Banaras station. We are working to enhance rail connectivity as well as ensure clean, modern and passenger friendly railway stations. pic.twitter.com/tE5I6UPdhQ