Quote"ನಿರ್ಣಯಗಳನ್ನು ನವೀಕರಿಸುವ ದಿನ ಇದಾಗಿದೆ"
Quote"ಭಾರತದಲ್ಲಿ ಶಸ್ತ್ರಾಸ್ತ್ರಗಳನ್ನು ಸ್ವಾಧೀನಕ್ಕಾಗಿ ಬಳಸುವುದಿಲ್ಲ; ಅವುಗಳನ್ನು ನಮ್ಮ ರಕ್ಷಣೆಗಾಗಿ ಬಳಸಲಾಗುತ್ತದೆ"
Quote"ರಾಮನ 'ಮರ್ಯಾದಾ' (ಗಡಿಗಳು) ಜತೆಗೆ ನಮ್ಮ ಗಡಿಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದು ನಮಗೆ ತಿಳಿದಿದೆ"
Quote"ಶ್ರೀರಾಮನ ಜನ್ಮಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯವು ಶತಮಾನಗಳ ಕಾಯುವಿಕೆಯ ನಂತರ ಭಾರತೀಯರಾದ ನಮ್ಮ ತಾಳ್ಮೆಯ ವಿಜಯದ ಸಂಕೇತವಾಗಿದೆ"
Quote"ನಾವು ರಾಮನ ಪರಿಕಲ್ಪನೆಗಳ ಭಾರತವನ್ನು ನಿರ್ಮಿಸಬೇಕಾಗಿದೆ"
Quote"ಭಾರತವು ಇಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಅತ್ಯಂತ ವಿಶ್ವಾಸಾರ್ಹ ಪ್ರಜಾಪ್ರಭುತ್ವವಾಗಿ ಹೊರಹೊಮ್ಮುತ್ತಿದೆ"
Quote"ಸಮಾಜದಲ್ಲಿರುವ ಅನಿಷ್ಟ ಮತ್ತು ತಾರತಮ್ಯ ಕೊನೆಗೊಳಿಸಲು ನಾವು ಸಂಕಲ್ಪ ತೊಡಬೇಕು"

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ದ್ವಾರಕಾದಲ್ಲಿಂದು ರಾಮ್ ಲೀಲಾ ಮತ್ತು ರಾವಣ ದಹನ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಜಯದಶಮಿಯು ಅನ್ಯಾಯದ ವಿರುದ್ಧ ನ್ಯಾಯದ ವಿಜಯದ ಹಬ್ಬವಾಗಿದೆ, ಅಹಂಕಾರದ ಮೇಲೆ ವಿನಯ ಮತ್ತು ಕೋಪದ ಮೇಲೆ ತಾಳ್ಮೆಯ ಹಬ್ಬವಾಗಿದೆ. ಇದು ಸಂಕಲ್ಪಗಳನ್ನು ನವೀಕರಿಸುವ ದಿನವೂ ಆಗಿದೆ ಎಂದು ಹೇಳಿದರು.

 

|

ಚಂದ್ರಯಾನದ ಯಶಸ್ವೀ ಉಡಾವಣೆಯ 2 ತಿಂಗಳ ನಂತರ ನಾವು ಈ ಬಾರಿ ವಿಜಯ ದಶಮಿ ಆಚರಿಸುತ್ತಿದ್ದೇವೆ. ಈ ದಿನದಂದು ಶಾಸ್ತ್ರಪೂಜಾ ಸಂಪ್ರದಾಯ ಉಲ್ಲೇಖಿಸಿದ ಪ್ರಧಾನಿ, ಭಾರತದಲ್ಲಿ ಶಸ್ತ್ರಾಸ್ತ್ರಗಳನ್ನು ಸ್ವಾಧೀನಕ್ಕಾಗಿ ಬಳಸುವುದಿಲ್, ಅವುಗಳನ್ನು ನಮ್ಮ ರಕ್ಷಣೆಗಾಗಿ ಬಳಸಲಾಗುತ್ತಿದೆ. ಶಕ್ತಿ ಪೂಜೆ ಎಂದರೆ ಸಮಸ್ತ ಸೃಷ್ಟಿಯ ಸುಖ, ಕ್ಷೇಮ, ಜಯ, ಕೀರ್ತಿಯನ್ನು ಹಾರೈಸುವುದಾಗಿದೆ. ಭಾರತೀಯ ತತ್ತ್ವಶಾಸ್ತ್ರದ ಶಾಶ್ವತ ಮತ್ತು ಆಧುನಿಕ ಅಂಶಗಳು ಅನನ್ಯವಾಗಿವೆ. "ನಮಗೆ ರಾಮನ 'ಮರ್ಯಾದಾ' (ಗಡಿಗಳು) ಜತೆಗೆ ನಮ್ಮ ಗಡಿಗಳನ್ನು ಹೇಗೆ ರಕ್ಷಿಸಬೇಕು ಎಂಹುದು ತಿಳಿದಿದೆ" ಎಂದು ಪ್ರಧಾನಿ ಮೋದಿ ಹೇಳಿದರು.

 

|

"ಭಗವಾನ್ ರಾಮನ ಜನ್ಮಸ್ಥಳದಲ್ಲಿ ನಿರ್ಮಿಸಲಾಗುತ್ತಿರುವ ದೇವಾಲಯವು ಶತಮಾನಗಳ ಕಾಯುವಿಕೆಯ ನಂತರ ಭಾರತೀಯರಾದ ನಮ್ಮ ತಾಳ್ಮೆಯ ವಿಜಯದ ಸಂಕೇತವಾಗಿದೆ". ಮುಂದಿನ ರಾಮನವಮಿಯಂದು ದೇವಾಲಯದ ಪ್ರಾರ್ಥನೆಗಳು ಇಡೀ ಜಗತ್ತಿನಲ್ಲಿ ಸಂತೋಷ ಹರಡುತ್ತವೆ. "ಭಗವಾನ್ ಶ್ರೀ ರಾಮ್ ಬಸ್ ಆನೆ ಹೈ ವಾಲೇ ಹೈ", ಭಗವಾನ್ ರಾಮನ ಆಗಮನವು ಸನ್ನಿಹಿತವಾಗಿದೆ. ರಾಮಚರಿತಮಾನಸದಲ್ಲಿ ವಿವರಿಸಿರುವ ಆಗಮನ ಲಕ್ಷಣಗಳನ್ನು ನೆನಪಿಸಿಕೊಂಡ ಪ್ರಧಾನಿ, ಭಾರತದ ಆರ್ಥಿಕತೆ 5ನೇ ಅತಿದೊಡ್ಡ ಆರ್ಥಿಕತೆಯಾಗುತ್ತಿರುವುದು, ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿರುವುದು, ಹೊಸ ಸಂಸತ್ತಿನ ಕಟ್ಟಡ, ನಾರಿ ಶಕ್ತಿ ವಂದನ್ ಅಧಿನಿಯಮ್ ಮುಂತಾದ ಇದೇ ರೀತಿಯ ಅನೇಕ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿದರು. "ಭಾರತವು ಇಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಅತ್ಯಂತ ವಿಶ್ವಾಸಾರ್ಹ ಪ್ರಜಾಪ್ರಭುತ್ವವಾಗಿ ಹೊರಹೊಮ್ಮುತ್ತಿದೆ". ಭಗವಾನ್ ರಾಮನು ಅಂತಹ ಮಂಗಳಕರ ಕಾರ್ಯಕ್ರಮಗಳ ಅಡಿ ಬರುತ್ತಿರುವಾಗ, "ಒಂದು ರೀತಿಯಲ್ಲಿ, ಸ್ವಾತಂತ್ರ್ಯದ 75 ವರ್ಷಗಳ ನಂತರ, ಭಾರತದ ಭವಿಷ್ಯ ಅಥವಾ ಅದೃಷ್ಟವು ಈಗ ಮೇಲೇರಲಿದೆ ಅಥವಾ ಉಜ್ವಲವಾಗಲಿದೆ" ಎಂದು ಹೇಳಿದರು.

 

|
|
|

ಸಮಾಜದ ಸಾಮರಸ್ಯ, ಜಾತೀಯತೆ ಮತ್ತು ಪ್ರಾದೇಶಿಕತೆ ಮತ್ತು ಭಾರತದ ಅಭಿವೃದ್ಧಿಯ ಬದಲಿಗೆ ಸ್ವಾರ್ಥದ ಚಿಂತನೆಯನ್ನು ಹಾಳು ಮಾಡುವ ರೋಗಕಾರಕ  ಶಕ್ತಿಗಳ ವಿರುದ್ಧ ಜಾಗರೂಕರಾಗಿರಬೇಕು. ಸಮಾಜದಲ್ಲಿರುವ ಅನಿಷ್ಟ ಮತ್ತು ತಾರತಮ್ಯ ತೊಡೆದುಹಾಕಲು ನಾವು ಸಂಕಲ್ಪ ತೊಡಬೇಕು ಎಂದು ಅವರು ಹೇಳಿದರು.

 

|

ಭಾರತಕ್ಕೆ ಮುಂದಿನ 25 ವರ್ಷಗಳ ಮಹತ್ವವನ್ನು ಪ್ರಧಾನಿ ಪುನರುಚ್ಚರಿಸಿದರು. “ನಾವು ರಾಮನ ಪರಿಕಲ್ಪನೆಗಳ ಭಾರತವನ್ನು ನಿರ್ಮಿಸಬೇಕಾಗಿದೆ. ಅಭಿವೃದ್ಧಿ ಹೊಂದಿದ ಭಾರತ, ಇದು ಸ್ವಾವಲಂಬಿ, ಅಭಿವೃದ್ಧಿ ಹೊಂದಿದ ಭಾರತ, ಇದು ವಿಶ್ವ ಶಾಂತಿಯ ಸಂದೇಶ ನೀಡುತ್ತದೆ, ಅಭಿವೃದ್ಧಿ ಹೊಂದಿದ ಭಾರತ, ಅದರ ಕನಸುಗಳನ್ನು ನನಸಾಗಿಸಲು ಎಲ್ಲರಿಗೂ ಸಮಾನ ಹಕ್ಕುಗಳಿವೆ, ಅಭಿವೃದ್ಧಿ ಹೊಂದಿದ ಭಾರತದಲ್ಲಿ ಜನರು ಸಮೃದ್ಧಿ ಮತ್ತು ತೃಪ್ತಿಯ ಭಾವನೆ ಅನುಭವಿಸುತ್ತಾರೆ. ಇದು ರಾಮ್ ರಾಜ್ ಅವರ ದೃಷ್ಟಿ” ಎಂದು ಪ್ರಧಾನಿ ಹೇಳಿದರು.

 

|

ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ನೀರು ಉಳಿತಾಯ, ಡಿಜಿಟಲ್ ವಹಿವಾಟು, ಸ್ವಚ್ಛತೆ, ವೋಕಲ್ ಫಾರ್ ಲೋಕಲ್, ಗುಣಮಟ್ಟದ ಉತ್ಪನ್ನಗಳ ತಯಾರಿಕೆ, ವಿದೇಶದ ಬಗ್ಗೆ ಯೋಚಿಸುವ ಮೊದಲು ದೇಶವನ್ನು ನೋಡುವುದು, ನೈಸರ್ಗಿಕ ಕೃಷಿಗೆ ಉತ್ತೇಜನ, ಸಿರಿಧಾನ್ಯ ಬೆಳೆಗಳನ್ನು ಉತ್ತೇಜಿಸುವುದು ಮತ್ತು ಅಳವಡಿಸಿಕೊಳ್ಳುವುದು, ಫಿಟ್ನೆಸ್ ಸೇರಿದಂತೆ ಪ್ರಮುಖ 10 ನಿರ್ಣಯಗಳನ್ನು ಕೈಗೊಳ್ಳುವಂತೆ ಪ್ರಧಾನಮಂತ್ರಿ ಕರೆ ನೀಡಿದರು. ಅಂತಿಮವಾಗಿ "ನಾವು ಒಬ್ಬ ಬಡವನ ಮನೆಯ ಸದಸ್ಯರಾಗುವ ಮೂಲಕ ಕನಿಷ್ಠ ಒಂದು ಬಡ ಕುಟುಂಬದ ಸಾಮಾಜಿಕ ಸ್ಥಾನಮಾನ ಹೆಚ್ಚಿಸಬೇಕಿದೆ. ದೇಶದಲ್ಲಿ ಮೂಲಸೌಕರ್ಯಗಳು, ಮನೆ, ವಿದ್ಯುತ್, ಗ್ಯಾಸ್, ನೀರು, ಚಿಕಿತ್ಸೆ ಸೌಲಭ್ಯಗಳಿಲ್ಲದ  ಒಬ್ಬನೇ ಒಬ್ಬ ಬಡವ ದೇಶದಲ್ಲಿಲ್ಲ ಎಂಬುದನ್ನು ಖಾತ್ರಪಡಿಸುವ ತನಕ ನಾವು ವಿರಮಿಸಬಾರದು” ಎಂದು ಪ್ರಧಾನಿ ಕರೆ ನೀಡಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

  • Sukhdev Rai 2047 Sunny Enclave Kharar Punjab October 12, 2024

    🪟🪟🪟🪟🪟🪟🪟🪟🪟🪟🪟🪟🪟🪟🪟🪟🪟🪟🪟🪟🪟🪟🪟🪟🪟🪟🪟🪟🪟🪟
  • P.Ramesh Kanthan Ex.Mc October 26, 2023

    excellent sir... salute you 💚🧡🪷🙏
  • Babaji Namdeo Palve October 26, 2023

    Jai Hind Jai Bharat Bharat Mata Kee Jai सर नमस्कार भारत देश हा एक कृषिप्रधान देश आहे आणि हे देशा तील शेतकऱ्यांन साठी जरूरी आहे सर जय हिंद जय भारत
  • Babaji Namdeo Palve October 26, 2023

    Good morning Sir Jai Hind Jai Bharat Bharat Mata Kee Jai
  • Mahendra singh Solanki Loksabha Sansad Dewas Shajapur mp October 26, 2023

    किसानों के लिए किफायती उर्वरक सुनिश्चित कर रही मोदी सरकार! रबी सीजन 2023-24 (1 अक्टूबर, 2023 से 31 मार्च, 2024 तक) के लिए P&K उर्वरकों हेतु NBS दरों को केंद्रीय कैबिनेट की स्वीकृति। #CabinetDecisions
  • 6264394274 October 26, 2023

    SamelNetam
  • Premlata Singh October 26, 2023

    विजय दशमी का पर्व देश वासियो को बहुत बहुत मुबारक
  • Premlata Singh October 26, 2023

    राम नाम पर पूजा नरेंद्र मोदी 2024मे फिर से प्रधानमंत्री बने इसके लिए महीला मोर्चा ने किया हवन ,और कन्या पूजन किया गया ।
  • Atul Kumar Mishra October 26, 2023

    नमो नमो 💐💐🙏🙏
  • Ranjitbhai taylor October 26, 2023

    हमारे प्रधानमंत्री श्री ने विजयादशमी पर देशवाशियो को देश आत्मनिर्भर बनें ईस लिए १० संकल्प दिये है यह सरकार का ही दायित्व है यह मानना नहीं है लेकिन हमें सब मिलकर सिद्ध करेंगे तो देश झड़प से विकसित देश बनेगा । अभिनंदन सर
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Rs 1,555 crore central aid for 5 states hit by calamities in 2024 gets government nod

Media Coverage

Rs 1,555 crore central aid for 5 states hit by calamities in 2024 gets government nod
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 19 ಫೆಬ್ರವರಿ 2025
February 19, 2025

Appreciation for PM Modi's Efforts in Strengthening Economic Ties with Qatar and Beyond