ಕ್ರೈಸ್ತ ಸಮುದಾಯದ ಮುಖಂಡರು ಪ್ರಧಾನ ಮಂತ್ರಿಗೆ ಧನ್ಯವಾದ ಅರ್ಪಿಸಿದರು; ದೇಶದ ಬಗ್ಗೆ ಮೋದಿ ಹೊಂದಿರುವ ದೂರದೃಷ್ಟಿಯನ್ನು ಶ್ಲಾಘಿಸಿದರು
ರಾಷ್ಟ್ರವು ಕ್ರೈಸ್ತ ಸಮುದಾಯದ ಕೊಡುಗೆಯನ್ನು ಹೆಮ್ಮೆಯಿಂದ ಅಂಗೀಕರಿಸುತ್ತದೆ: ಪ್ರಧಾನಿ
ಬಡತನ ನಿರ್ಮೂಲನೆ ಕುರಿತ ಪೋಪ್ ಅವರ ಸಂದೇಶವು ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ಮಂತ್ರದೊಂದಿಗೆ ಅನುರಣಿಸುತ್ತದೆ: ಪ್ರಧಾನಿ
ಅಭಿವೃದ್ಧಿಯ ಪ್ರಯೋಜನಗಳು ಎಲ್ಲರಿಗೂ ತಲುಪುವಂತೆ ನಮ್ಮ ಸರ್ಕಾರ ಖಾತ್ರಿಪಡಿಸುತ್ತಿದೆ, ಯಾರೊಬ್ಬರನ್ನೂ ಬಿಟ್ಟಿಲ್ಲ: ಪ್ರಧಾನಿ

ಸ್ನೇಹಿತರೆ,

ಮೊದಲನೆಯದಾಗಿ, ಈ ಪ್ರಮುಖ ಹಬ್ಬದಂದು ನಿಮಗೆಲ್ಲರಿಗೂ, ಪ್ರಪಂಚದಾದ್ಯಂತದ ಜನರಿಗೆ ಮತ್ತು ವಿಶೇಷವಾಗಿ ಕ್ರೌಸ್ತ ಸಮುದಾಯಕ್ಕೆ ಅನೇಕ, ಅನೇಕ ಶುಭಾಶಯಗಳನ್ನು ಕೋರಲು ನಾನು ಬಯಸುತ್ತೇನೆ. ಮೆರ್ರಿ ಕ್ರಿಸ್ಮಸ್!

ಈ ವಿಶೇಷ ಮತ್ತು ಪವಿತ್ರ ಸಂದರ್ಭದಲ್ಲಿ ನೀವೆಲ್ಲರೂ ನನ್ನ ನಿವಾಸದಲ್ಲಿ ಸೇರಿರುವುದು ನನಗೆ ಅತೀವ ಸಂತಸ ತಂದಿದೆ. ಇಂಡಿಯನ್ ಮೈನಾರಿಟಿ ಫೌಂಡೇಶನ್ ಕ್ರಿಸ್‌ಮಸ್ ಅನ್ನು ಒಟ್ಟಿಗೆ ಆಚರಿಸಲು ಪ್ರಸ್ತಾಪಿಸಿದಾಗ, ನಾನು ಅದನ್ನು ನನ್ನ ಸ್ಥಳದಲ್ಲಿ ಏಕೆ ಆಚರಿಸಬಾರದು ಎಂದು ಸೂಚಿಸಿದೆ. ಆದ್ದರಿಂದ, ಇದು ನನಗೆ ತುಂಬಾ ಸಂತೋಷದ ಸಂದರ್ಭವಾಗಿದೆ. ಅನಿಲ್ ಜಿ ಅವರು ತುಂಬಾ ಸಹಾಯ ಮಾಡಿದ್ದಾರೆ, ನಾನು ಅವರಿಗೆ ವಿಶೇಷವಾಗಿ ಕೃತಜ್ಞನಾಗಿದ್ದೇನೆ. ಹಾಗಾಗಿ ಆಚರಣೆಗೆ ಖುಷಿಯಿಂದ ಒಪ್ಪಿಕೊಂಡೆ. ಈ ಉಪಕ್ರಮಕ್ಕಾಗಿ ನಾನು ಮೈನಾರಿಟಿ ಫೌಂಡೇಶನ್‌ಗೆ ತುಂಬಾ ಕೃತಜ್ಞನಾಗಿದ್ದೇನೆ.

 

ಕ್ರೈಸ್ತ ಸಮುದಾಯದೊಂದಿಗಿನ ನನ್ನ ಸಂಬಂಧ ಹೊಸದೇನಲ್ಲ, ಇದು ತುಂಬಾ ಹಳೆಯದು, ಬಹಳ ನಿಕಟವಾದ ಸಂಪರ್ಕ ಇದಾಗಿದೆ, ನಾವು ಗಾಢ ಸಂಬಂಧವನ್ನು ಹೊಂದಿದ್ದೇವೆ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ನಾನು ಆಗಾಗ್ಗೆ ಕ್ರೈಸ್ತ ಸಮುದಾಯ ಮತ್ತು ಅವರ ಮುಖಂಡರೊಂದಿಗೆ ಸಂವಹನ ನಡೆಸುತ್ತಿದ್ದೆ. ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದ ಮಣಿನಗರದಲ್ಲಿ ಕ್ರೈಸ್ತ ಸಮುದಾಯದ ಜನಸಂಖ್ಯೆ ಹೆಚ್ಚಿದ್ದು, ಅವರ ಜತೆ ಸಹಜ ಬಾಂಧವ್ಯ ಹೊಂದಿದ್ದೆ. ಕೆಲವು ವರ್ಷಗಳ ಹಿಂದೆ, ನಾನು ಧರ್ಮಗುರು ಪೋಪ್ ಅವರನ್ನು ಭೇಟಿಯಾಗುವ ಅದೃಷ್ಟ ಪಡೆದಿದ್ದೆ. ಇದು ನಿಜವಾಗಿಯೂ ನನಗೆ ಸ್ಮರಣೀಯ ಕ್ಷಣವಾಗಿತ್ತು. ಈ ಭೂಮಿಯನ್ನು ಉತ್ತಮ ಸ್ಥಳವನ್ನಾಗಿ ಮಾಡುವ ಗುರಿಯೊಂದಿಗೆ ನಾವು ಸಾಮಾಜಿಕ ಸಾಮರಸ್ಯ, ಜಾಗತಿಕ ಸಹೋದರತ್ವ, ಹವಾಮಾನ ಬದಲಾವಣೆ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳನ್ನು ದೀರ್ಘಕಾಲ ಚರ್ಚಿಸಿದ್ದೇವೆ.

 

ಸ್ನೇಹಿತರೆ,

ನಾವು ಯೇಸುಕ್ರಿಸ್ತನ ಜನ್ಮದಿನ ಆಚರಿಸುವ ದಿನವೇ ಕ್ರಿಸ್ಮಸ್ ಆಗಿದೆ. ಅವರ ಜೀವನ, ಸಂದೇಶ ಮತ್ತು ಮೌಲ್ಯಗಳನ್ನು ನೆನಪಿಸಿಕೊಳ್ಳುವ ಸಂದರ್ಭವೂ ಹೌದು. ಯೇಸು ಸಹಾನುಭೂತಿ ಮತ್ತು ಸೇವೆಯ ಮೌಲ್ಯಗಳಿಂದಲೇ ಜೀವಿಸಿದನು. ಎಲ್ಲರಿಗೂ ನ್ಯಾಯ ಸಿಗುವ ಸಮಾಜ ನಿರ್ಮಾಣ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮಾಜಕ್ಕಾಗಿ ಅವರು ಶ್ರಮಿಸಿದರು. ಈ ಮೌಲ್ಯಗಳು ನಮ್ಮ ರಾಷ್ಟ್ರೀಯ ಅಭಿವೃದ್ಧಿಯ ಪಯಣದಲ್ಲಿ ಮಾರ್ಗದರ್ಶಿ ಬೆಳಕಿನಂತೆ ಕಾರ್ಯ ನಿರ್ವಹಿಸುತ್ತವೆ.

 

ಸ್ನೇಹಿತರೆ,

ಸಾಮಾಜಿಕ ಜೀವನದ ವಿವಿಧ ಹರವುಗಳಲ್ಲಿ ನಮ್ಮನ್ನು ಒಂದುಗೂಡಿಸುವ ಸಾಮಾನ್ಯ ಮೌಲ್ಯಗಳನ್ನು ನಾವು ಕಾಣುತ್ತೇವೆ. ಉದಾಹರಣೆಗೆ, ಇತರರ ಸೇವೆಗಾಗಿ ದೇವರು ನಮಗೆ ನೀಡಿದ ಉಡುಗೊರೆಗಳು ಮತ್ತು ಸಾಮರ್ಥ್ಯಗಳನ್ನು ಬಳಸುವುದನ್ನು ಪವಿತ್ರ ಬೈಬಲ್ ಒತ್ತಿಹೇಳುತ್ತದೆ. ಇದು 'ಸೇವಾ ಪರಮೋ ಧರ್ಮಃ' (ಸೇವೆಯನ್ನು ಅತ್ಯುನ್ನತ ಕರ್ತವ್ಯವೆಂದು ಪರಿಗಣಿಸಲಾಗಿದೆ) ಬಗ್ಗೆ ಪವಿತ್ರ ಬೈಬಲ್‌ನಲ್ಲಿ ಸತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಸತ್ಯವು ನಮಗೆ ವಿಮೋಚನೆಯ ಮಾರ್ಗ ತೋರಿಸುತ್ತದೆ ಎಂದು ಹೇಳಲಾಗುತ್ತದೆ. ಕಾಕತಾಳೀಯವಾಗಿ, ಅಂತಿಮ ಸತ್ಯವನ್ನು ಅರ್ಥ ಮಾಡಿಕೊಳ್ಳುವ ಗಮನವು ಎಲ್ಲಾ ಪವಿತ್ರ ಉಪನಿಷತ್ತುಗಳಲ್ಲಿಯೂ ಕಂಡುಬರುತ್ತದೆ. ಇದು ಸ್ವಯಂ-ವಿಮೋಚನೆಯ ಗುರಿ ಹೊಂದಿದೆ. ನಮ್ಮ ಹಂಚಿಕೆಯ ಮೌಲ್ಯಗಳು ಮತ್ತು ಪರಂಪರೆಯ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ನಾವು ಒಟ್ಟಿಗೆ ಮುಂದುವರಿಯಬಹುದು. ಸಹಯೋಗ, ಸಾಮರಸ್ಯ ಮತ್ತು 'ಸಬ್ಕಾ ಪ್ರಯಾಸ್' (ಸಾಮೂಹಿಕ ಪ್ರಯತ್ನ) ಮನೋಭಾವವು 21 ನೇ ಶತಮಾನದ ಆಧುನಿಕ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ.

ಸ್ನೇಹಿತರೆ,

ಪೋಪ್ ಅವರು ತಮ್ಮ ಕ್ರಿಸ್ಮಸ್ ಭಾಷಣದಲ್ಲಿ, ಬಡತನ ತೊಡೆದುಹಾಕಲು ಕೆಲಸ ಮಾಡುವವರಿಗೆ ಪ್ರಾರ್ಥಿಸಿದರು, ಅವರಿಗೆ ಆಶೀರ್ವಾದ ಬಯಸಿದರು. ಬಡತನವು ವ್ಯಕ್ತಿಯ ಘನತೆಯನ್ನು ಕುಗ್ಗಿಸುತ್ತದೆ ಎಂದು ಅವರು ನಂಬಿದ್ದರು. ಧರ್ಮಗುರು ಪೋಪ್ ಅವರ ಈ ಮಾತುಗಳು ನಮ್ಮ ಅಭಿವೃದ್ಧಿ ಮಂತ್ರದಲ್ಲಿ ಅಂತರ್ಗತವಾಗಿರುವ ಭಾವನೆಯನ್ನು ಪ್ರತಿಬಿಂಬಿಸುತ್ತವೆ. ನಮ್ಮ ಮಂತ್ರ 'ಸಬ್ಕಾ ಸಾಥ್-ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ-ಸಬ್ಕಾ ಪ್ರಯಾಸ್' ಆಗಿದೆ.

ಸರ್ಕಾರವಾಗಿ, ಅಭಿವೃದ್ಧಿಯ ಪ್ರಯೋಜನಗಳು ಎಲ್ಲರಿಗೂ ತಲುಪುವುದನ್ನು ನಾವು ಖಾತ್ರಿಪಡಿಸುತ್ತಿದ್ದೇವೆ. ಇದರಿಂದ ಯಾರನ್ನೂ ಹೊರಗಿಡುವ ಪ್ರಶ್ನೆಯೇ ಇಲ್ಲ. ಕ್ರೈಸ್ತ  ಸಮುದಾಯದ ಅನೇಕ ಸದಸ್ಯರು, ವಿಶೇಷವಾಗಿ ಬಡವರು ಮತ್ತು ನಿರ್ಲಕ್ಷಿತರು  ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ನಾವು ಮೀನುಗಾರಿಕೆಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದಾಗ, ಕ್ರೈಸ್ತ ಸಮುದಾಯದ ಅನೇಕ ಸದಸ್ಯರು, ವಿಶೇಷವಾಗಿ ಮೀನುಗಾರ ಸಮುದಾಯದ ಸಹೋದರರು ಮತ್ತು ಸಹೋದರಿಯರು ನಮ್ಮ ಹೆಜ್ಜೆಯನ್ನು ಸಾರ್ವಜನಿಕವಾಗಿ ಮೆಚ್ಚಿದರು. ಅವರು ನನ್ನನ್ನು ಸನ್ಮಾನಿಸಿದರು.

 

ಸ್ನೇಹಿತರೆ,

ಈ ಕ್ರಿಸ್‌ಮಸ್ ಸಂದರ್ಭದಲ್ಲಿ, ದೇಶಕ್ಕಾಗಿ ಕ್ರೈಸ್ತ ಸಮುದಾಯದ ಕೊಡುಗೆಯನ್ನು ಭಾರತವು ಹೆಮ್ಮೆಯಿಂದ ಗುರುತಿಸುತ್ತದೆ ಎಂದು ಹೇಳಲು ಬಯಸುತ್ತೇನೆ. ಸ್ವಾತಂತ್ರ್ಯ ಚಳವಳಿಯಲ್ಲಿ ಕ್ರೈಸ್ತ ಸಮುದಾಯವು ನಿರ್ಣಾಯಕ ಪಾತ್ರ ವಹಿಸಿದೆ. ಕ್ರೈಸ್ತ  ಸಮುದಾಯದ ಅನೇಕ ಚಿಂತಕರು ಮತ್ತು ಮುಖಂಡರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅಸಹಕಾರ ಚಳವಳಿಯ ಪರಿಕಲ್ಪನೆಯು ಸೇಂಟ್ ಸ್ಟೀಫನ್ಸ್ ಕಾಲೇಜಿನ ಪ್ರಾಂಶುಪಾಲ ಸುಸಿಲ್ ಕುಮಾರ್ ರುದ್ರ ಅವರ ಮಾರ್ಗದರ್ಶನದಲ್ಲಿ ನಡೆಯಿತು ಎಂದು ಮಹಾತ್ಮ ಗಾಂಧಿ ಅವರೇ ಉಲ್ಲೇಖಿಸಿದ್ದಾರೆ.

ಸ್ನೇಹಿತರೆ,

ಸಮಾಜಕ್ಕೆ ಮಾರ್ಗದರ್ಶನ ನೀಡುವಲ್ಲಿ ಕ್ರೈಸ್ತ ಸಮುದಾಯವು ನಿರಂತರವಾಗಿ ಪ್ರಮುಖ ಪಾತ್ರ ವಹಿಸಿದೆ. ಕ್ರೈಸ್ತ ಸಮುದಾಯವು ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈ ಸಮುದಾಯವು ಯಾವಾಗಲೂ ಬಡ ಮತ್ತು ನಿರ್ಲಕ್ಷಿತರ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ಕ್ರೈಸ್ತ ಸಂಸ್ಥೆಗಳು ಶಿಕ್ಷಣ ಮತ್ತು ಆರೋಗ್ಯದಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಭಾರತದಾದ್ಯಂತ ಗಮನಾರ್ಹ ಕೊಡುಗೆಗಳನ್ನು ನೀಡುತ್ತಲೇ ಬಂದಿವೆ.

ಸ್ನೇಹಿತರೆ,

2047ರ ವೇಳೆಗೆ ‘ವಿಕ್ಷಿತ್ ಭಾರತ್’ ನಿರ್ಮಿಸುವ ಗುರಿಯೊಂದಿಗೆ, ನಾವು ನಮ್ಮ ಅಭಿವೃದ್ಧಿ ಪಯಣವನ್ನು ತ್ವರಿತ ಗತಿಯಲ್ಲಿ ಮುನ್ನಡೆಸುತ್ತಿದ್ದೇವೆ, ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಅಭಿವೃದ್ಧಿಯ ಈ ಪಯಣದಲ್ಲಿ ನಮ್ಮ ಪ್ರಮುಖ ಮಿತ್ರರಾದ ನಮ್ಮ ಯುವಕರು. ನಿರಂತರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸದೃಢವಾಗಿರುವುದು ಮತ್ತು ಆರೋಗ್ಯವಾಗಿರುವುದು ಅತ್ಯಗತ್ಯ. ಈ ಗುರಿ ಸಾಧಿಸಲು ಹಲವಾರು ಅಭಿಯಾನಗಳು ನಡೆಯುತ್ತಿವೆ, ಉದಾಹರಣೆಗೆ ಫಿಟ್ ಇಂಡಿಯಾ, ಸಿರಿಧಾನ್ಯಗಳ ಬಳಕೆ, ಪೋಷಣೆಯತ್ತ ಗಮನ ಹರಿಸುವುದು, ಮಾನಸಿಕ ಆರೋಗ್ಯದ ಅರಿವು ಮತ್ತು ಮಾದಕ ದ್ರವ್ಯ ವಿರೋಧಿ ಆಂದೋಲನ... ಇವೆಲ್ಲವೂ ಸಾಮೂಹಿಕ ಚಳುವಳಿಗಳಾಗಿವೆ. ಈ ವಿಷಯಗಳ ಬಗ್ಗೆ ಅರಿವು ಮೂಡಿಸಲು ನಾನು ಕ್ರೈಸ್ತ ಸಮುದಾಯದ ನಾಯಕರನ್ನು, ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳಿಗೆ ಸಂಬಂಧಿಸಿದವರನ್ನು ಒತ್ತಾಯಿಸುತ್ತೇನೆ.

 

ಸ್ನೇಹಿತರೆ,

ಕ್ರಿಸ್ಮಸ್ ಸಂದರ್ಭದಲ್ಲಿ ಉಡುಗೊರೆಗಳನ್ನು ನೀಡುವ ಸಂಪ್ರದಾಯವಿದೆ. ನಾನು ಇದೀಗ ನಿಜವಾದ ಪವಿತ್ರ ಉಡುಗೊರೆ ಸ್ವೀಕರಿಸಿದ್ದೇನೆ. ಆದ್ದರಿಂದ, ಈ ಸಂದರ್ಭದಲ್ಲಿ ಭವಿಷ್ಯದ ಪೀಳಿಗೆಗೆ ನಾವು ಹೇಗೆ ಉತ್ತಮ ಮತ್ತು ಸುಂದರ ಪೃಥ್ವಿ(ಗ್ರಹ)ಯನ್ನು ಉಡುಗೊರೆಯಾಗಿ ನೀಡಬಹುದು ಎಂಬುದನ್ನು ಪರಿಗಣಿಸೋಣ. ಸುಸ್ಥಿರತೆ ಈಗಿನ ಅಗತ್ಯ. ಸುಸ್ಥಿರ ಜೀವನಶೈಲಿಯನ್ನು ಜೀವಿಸುವುದು ಮಿಷನ್ ಲೈಫ್‌ನ ಕೇಂದ್ರ ಸಂದೇಶವಾಗಿದೆ. ಇದು ಭಾರತ ನೇತೃತ್ವದ ಅಂತಾರಾಷ್ಟ್ರೀಯ ಚಳುವಳಿಯಾಗಿದೆ.

ಈ ಅಭಿಯಾನವು ಗ್ರಹದ ಪರವಾದ ಜೀವನಶೈಲಿ ಅಳವಡಿಸಿಕೊಳ್ಳಲು ಗ್ರಹದ ಪರ ಜನರನ್ನು ಪ್ರೇರೇಪಿಸುತ್ತದೆ. ಹಸಿರು ಬಣ್ಣವನ್ನು ತರುವ ಬಗ್ಗೆ ಸಮಾಪ್ತಿ ಜಿ ಅವರು ಸಣ್ಣ ಪುಸ್ತಕದಲ್ಲಿ ಸಲಹೆ ನೀಡಿರುವುದು ಕೂಡ ಒಂದು ಮಾರ್ಗವಾಗಿದೆ. ಉದಾಹರಣೆಗೆ, ಮರುಬಳಕೆ ಮತ್ತು ಪುನರ್ಬಳಕೆ, ಜೈವಿಕ ವಿಘಟನೀಯ ವಸ್ತುಗಳನ್ನು ಬಳಸುವುದು, ಸಿರಿಧಾನ್ಯ - ಶ್ರೀ ಅನ್ನವನ್ನು ನಮ್ಮ ಆಹಾರದ ಭಾಗವಾಗಿ ಅಳವಡಿಸಿಕೊಳ್ಳುವುದು, ನಮ್ಮ ದೈನಂದಿನ ಜೀವನದಲ್ಲಿ ಕನಿಷ್ಠ ಇಂಗಾಲದ ಹೆಜ್ಜೆಗುರುತು ಹೊಂದಿರುವ ಉತ್ಪನ್ನಗಳನ್ನು ಖರೀದಿಸುವುದು ಮತ್ತು ಗಮನಾರ್ಹ ಸಕಾರಾತ್ಮಕ ಪರಿಣಾಮಗಳನ್ನು ತರುವಂತಹ ಅಭ್ಯಾಸಗಳನ್ನು ನಾವು ಅಳವಡಿಸಿಕೊಳ್ಳಬಹುದು. ಸಾಮಾಜಿಕ ಪ್ರಜ್ಞೆಯುಳ್ಳ ಕ್ರೈಸ್ತ ಸಮುದಾಯವು ನಾಯಕತ್ವ ಸ್ವೀಕರಿಸಿ, ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಾನು ನಂಬುತ್ತೇನೆ.

ಸ್ನೇಹಿತರೆ,

ಇನ್ನೊಂದು ಅಂಶವೆಂದರೆ, ವೋಕಲ್ ಫಾರ್ ಲೋಕಲ್. ನಾವು ಸ್ಥಳೀಯ ಉತ್ಪನ್ನಗಳನ್ನು ಪ್ರಚಾರ ಮಾಡಿದಾಗ, ನಾವು ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳಿಗೆ ರಾಯಭಾರಿಗಳಾದಾಗ, ಅದು ರಾಷ್ಟ್ರ ಸೇವೆಯ ಒಂದು ರೂಪವಾಗಿದೆ. ವೋಕಲ್ ಫಾರ್ ಲೋಕಲ್ ಮಂತ್ರದ ಯಶಸ್ಸು ಲಕ್ಷಾಂತರ ಸಣ್ಣ ಉದ್ಯಮಿಗಳನ್ನು ಉದ್ಯೋಗ ಮತ್ತು ಸ್ವಯಂ-ಉದ್ಯೋಗಕ್ಕೆ ಸಂಪರ್ಕಿಸಿದೆ. ಆದ್ದರಿಂದ, ಸ್ಥಳೀಯರಿಗೆ ಗಾಯನವಾಗಲು ಮಾರ್ಗದರ್ಶನ ಮತ್ತು ಮುನ್ನಡೆಸುವುದನ್ನು ಮುಂದುವರಿಸಲು ನಾನು ಕ್ರೈಸ್ತ ಸಮುದಾಯವನ್ನು ಒತ್ತಾಯಿಸುತ್ತೇನೆ.

 

ಸ್ನೇಹಿತರೆ,

ಮತ್ತೊಮ್ಮೆ, ಈ ಹಬ್ಬದ ಋತುವು ಒಂದು ರಾಷ್ಟ್ರವಾಗಿ ನಮ್ಮನ್ನು ಬಲಪಡಿಸುತ್ತದೆ ಮತ್ತು ಎಲ್ಲಾ ದೇಶವಾಸಿಗಳನ್ನು ಹತ್ತಿರಕ್ಕೆ ತರುತ್ತದೆ ಎಂದು ನಾವು ಬಯಸುತ್ತೇವೆ. ಈ ಹಬ್ಬವು ನಮ್ಮ ವೈವಿಧ್ಯತೆಯಲ್ಲಿ ನಮ್ಮನ್ನು ಒಂದುಗೂಡಿಸುವ ಬಾಂಧವ್ಯ ಬಲಪಡಿಸಲಿ!

ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು! ನಮ್ಮೊಂದಿಗೆ ಸೇರಲು ನೀವೆಲ್ಲಾ ಸಮಯ ಮೀಸಲಿಟ್ಟಿದ್ದಕ್ಕಾಗಿ ನಾನು ನಿಮಗೆ ಕೃತಜ್ಞನಾಗಿದ್ದೇನೆ, ವಿಶೇಷವಾಗಿ ಇಳಿ ವಯಸ್ಸಿನಲ್ಲಿ ಮುಂಬೈನಿಂದ ಬಂದಿರುವವರು. ನಿಮ್ಮಲ್ಲಿ ಅನೇಕರಿಂದ ನಾನು ನಿರಂತರವಾಗಿ ಆಶೀರ್ವಾದ ಮತ್ತು ಮಾರ್ಗದರ್ಶನವನ್ನು ಪಡೆಯುತ್ತೇನೆ, ಆದರೆ ಇಂದು ನಿಮ್ಮೆಲ್ಲರನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿದೆ.

ನಾನು ಮತ್ತೊಮ್ಮೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ತಮ್ಮ ಧ್ವನಿ ಮತ್ತು ಭಾವನೆಗಳಿಂದ ಈ ಹಬ್ಬವನ್ನು ಅತ್ಯಂತ ವಿಶೇಷವಾಗಿಸಿರುವ ಈ ಮಕ್ಕಳಿಗೆ ನಾನು ವಿಶೇಷ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಈ ಮಕ್ಕಳಿಗೆ ನನ್ನ ಹೃತ್ಪೂರ್ವಕ ಆಶೀರ್ವಾದಗಳು!

ಧನ್ಯವಾದಗಳು!

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s organic food products export reaches $448 Mn, set to surpass last year’s figures

Media Coverage

India’s organic food products export reaches $448 Mn, set to surpass last year’s figures
NM on the go

Nm on the go

Always be the first to hear from the PM. Get the App Now!
...
Prime Minister lauds the passing of amendments proposed to Oilfields (Regulation and Development) Act 1948
December 03, 2024

The Prime Minister Shri Narendra Modi lauded the passing of amendments proposed to Oilfields (Regulation and Development) Act 1948 in Rajya Sabha today. He remarked that it was an important legislation which will boost energy security and also contribute to a prosperous India.

Responding to a post on X by Union Minister Shri Hardeep Singh Puri, Shri Modi wrote:

“This is an important legislation which will boost energy security and also contribute to a prosperous India.”