ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯದವರು ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ 15,000ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.
ಪ್ರಧಾನಮಂತ್ರಿ ಅವರನ್ನು ಭಾರತೀಯ ಸಮುದಾಯವು ಅತ್ಯಂತ ಪ್ರೀತಿ, ಗೌರವ, ಆದರ, ಉತ್ಸಾಹದಿಂದ ಬರಮಾಡಿಕೊಂಡಿತು. ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು, ಜಗತ್ತಿನ ಎರಡು ಮಹಾನ್ ಪ್ರಜಾಪ್ರಭುತ್ವಗಳ ರಾಷ್ಟ್ರಗಳ ನಡುವೆ ಬಾಂಧವ್ಯವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುವ ಭಾರತೀಯ ಅಮೆರಿಕನ್ ಸಮುದಾಯದಿಂದ ಭಾರತ-ಯುಎಸ್ ಸಂಬಂಧವು ಇನ್ನಷ್ಟು ಸದೃಢವಾಗಿರುವುದು ಕಾಣುತ್ತಿದೆ. ಹಿಂದಿನ ದಿನ ಡೆಲವೇರ್‌ನಲ್ಲಿರುವ ನಿವಾಸದಲ್ಲಿ ಅಮೆರಿಕ ಅಧ್ಯಕ್ಷ ಬಿಡೆನ್ ಅವರೊಂದಿಗಿನ ಭೇಟಿ ಬಗ್ಗೆಯೂ ಪ್ರಧಾನ ಮಂತ್ರಿಗಳು ಪ್ರಸ್ತಾಪಿಸಿದರು. ಈ ವಿಶೇಷ ಸಂದರ್ಭವು ಭಾರತೀಯ ಸಮುದಾಯವು ಸಂಯುಕ್ತ ರಾಷ್ಟ್ರಗಳೊಂದಿಗಿನ ನಂಬಿಕೆ- ವಿಶ್ವಾಸಾರ್ಹತೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಶ್ಲಾಘಿಸಿದರು.
2047ರ ಹೊತ್ತಿಗೆ ವಿಕಸಿನ ಭಾರತ ನಿರ್ಮಾಣದ ತಮ್ಮ ದೂರದೃಷ್ಟಿ ಕುರಿತಂತೆಯೂ ಪ್ರಧಾನಮಂತ್ರಿಗಳು ಪ್ರಸ್ತಾಪಿಸಿದರು. ಮಾನವ ಇತಿಹಾಸದಲ್ಲಿ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಕ್ರಿಯೆಯು ತಮಗೆ ಮೂರನೇ ಬಾರಿಗೆ ಆಡಳಿತ ನಡೆಸಲು ಅವಕಾಶ ನೀಡಿದೆ ಎಂದು ಹೆಮ್ಮೆಯಿಂದ ಪ್ರಸ್ತಾಪಿಸಿದ ಅವರು, ಭಾರತದ ಪ್ರಗತಿಗಾಗಿ ಎಂದೆಂದಿಗೂ ಹೆಚ್ಚಿನ ಸಮರ್ಪಣೆಯೊಂದಿಗೆ ಕೆಲಸ ಮಾಡಲು ಬದ್ಧನಾಗಿದ್ದೇನೆ. ಭಾರತದಲ್ಲಿ ಕಳೆದ ಒಂದು ದಶಕದಲ್ಲಿ ಪರಿವರ್ತನೆಯ ಬದಲಾವಣೆಗಳನ್ನು ಉಲ್ಲೇಖಿಸಿದ ಅವರು- ಮುಂದಿನ ಪೀಳಿಗೆಯವರಿಗೆ ಮೂಲಸೌಕರ್ಯಗಳ ಕಲ್ಪಿಸುವುದರಿಂದ ಹಿಡಿದು 250 ದಶಲಕ್ಷ ಜನರನ್ನು ಬಡತನದಿಂದ ಮೇಲೆ ತರುವವರೆಗೆ, ಭಾರತದ ಆರ್ಥಿಕ ಬೆಳವಣಿಗೆ ಮತ್ತು 10ನೇ ಅತಿದೊಡ್ಡ ಆರ್ಥಿಕತೆಯಿಂದ 5ನೇ ಅತಿ ದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿ ಹೊರಹೊಮ್ಮಿರುವುದನ್ನು ಕಾಣಬಹುದು. ಜತೆಗೆ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯ ಸ್ಥಾನವನ್ನು ಪಡೆಯುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಜನರ ಆಶೋತ್ತರಗಳಿಗೆ ಸ್ಪಂದಿಸಿ ಅವುಗಳನ್ನು ಪೂರೈಸಲು ಅಗತ್ಯವಾದ ಸುಧಾರಣೆಗಳನ್ನು ತರಲು ಸರ್ಕಾರ ಬದ್ಧತೆಯನ್ನು ಪ್ರದರ್ಶಿಸುತ್ತಿದೆ ಎಂದು ಪ್ರಧಾನಮಂತ್ರಿಗಳು ಒತ್ತಿ ಹೇಳಿದರು. ಆವಿಷ್ಕಾರ, ಉದ್ಯಮಶೀಲತೆ, ನವೋದ್ಯಮಗಳು, ಆರ್ಥಿಕ ಒಳಗೊಳ್ಳುವಿಕೆ ಮತ್ತು ಡಿಜಿಟಲ್ ಸಬಲೀಕರಣವು ಬೆಳವಣಿಗೆ ಮತ್ತು ಸಮೃದ್ಧಿಯನ್ನು ಉತ್ತೇಜಿಸುವ ಮೂಲಕ ದೇಶದಲ್ಲಿ ಹೊಸ ಚೈತನ್ಯವನ್ನು ಮೂಡಿಸಿದೆ ಎಂದು ಅವರು ಉಲ್ಲೇಖಿಸಿದರು. ಹಾಗೆಯೇ ತಳಮಟ್ಟದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿ ಮತ್ತು ಹಸಿರು ಪರಿವರ್ತನೆಯ ಪರಿಣಾಮವನ್ನು ಅವರು ಒತ್ತಿ ಹೇಳಿದರು.
ಜಾಗತಿಕ ಬೆಳವಣಿಗೆ, ಸಮೃದ್ಧಿ, ಶಾಂತಿ ಮತ್ತು ಭದ್ರತೆ, ಹವಾಮಾನ ಬದಲಾವಣೆಯ ಕ್ರಮ, ನಾವೀನ್ಯತೆ, ಪೂರೈಕೆ ಮತ್ತು ಮೌಲ್ಯ ಸರಪಳಿಗಳು ಮತ್ತು ಜಾಗತಿಕ ಕೌಶಲ್ಯ-ಅಂತರವನ್ನು ತುಂಬುವಲ್ಲಿ ಭಾರತವು ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಪ್ರಧಾನ ಮಂತ್ರಿಗಳು ಭಾಷಣದಲ್ಲಿ ಪ್ರಸ್ತಾಪಿಸಿದರು. ಭಾರತದ ಧ್ವನಿ ಇಂದು ಜಾಗತಿಕ ರಂಗದಲ್ಲಿ ಆಳವಾಗಿ ಮತ್ತು ಪ್ರಖರವಾಗಿ ಪ್ರತಿಧ್ವನಿಸಿದೆ ಎಂದೂ ಅವರು ಹೇಳಿದರು.
ಅಮೆರಿಕ ಸಂಯುಕ್ತ ರಾಷ್ಟ್ರಗಳಲ್ಲಿ ಬೋಸ್ಟನ್ ಮತ್ತು ಲಾಸ್ ಏಂಜಲೀಸ್‌ನಲ್ಲಿ ಎರಡು ಹೊಸ ಭಾರತೀಯ ರಾಯಭಾರ ಕಚೇರಿಗಳು ಹಾಗೂ ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ತಮಿಳು ಅಧ್ಯಯನಕ್ಕಾಗಿ ತಿರುವಳ್ಳುವರ್ ಪೀಠವನ್ನು ತೆರೆಯುವ ಯೋಜನೆಯನ್ನು ಪ್ರಧಾನ ಮಂತ್ರಿಗಳು ಘೋಷಿಸಿದರು. ಈ ಉಪಕ್ರಮಗಳು ಭಾರತ ಮತ್ತು ಅಮೆರಿಕ ಸಂಯುಕ್ತ ರಾಷ್ಟ್ರಗಳಲ್ಲಿರುವ ಚದುರಿದ ಭಾಗಗಳ ನಡುವಿನ ಜೀವಂತ ಕೊಂಡಿಯನ್ನು ಮತ್ತಷ್ಟು ಬಲಪಡಿಸುತ್ತದೆ. ಭಾರತೀಯ ವೈವಿಧ್ಯದ ಸಮುದಾಯವು ತನ್ನ ಬಲವಾದ ಸಮಾವೇಶದ ಶಕ್ತಿಯೊಂದಿಗೆ, ಭಾರತ ಮತ್ತು ಯುಎಸ್ ನಡುವೆ ನಿಕಟ ಸಂಬಂಧಗಳನ್ನು ಬೆಳೆಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂಬ ಆಶಾಭಾವನೆ ಇದೆ ಎಂದು ಹೇಳಿದರು.
Click here to read full text speech
Indian Diaspora has always been the country's strongest brand ambassadors. pic.twitter.com/1S85Xjdy4m
— PMO India (@PMOIndia) September 22, 2024
डायवर्सिटी को समझना, जीना, उसे अपने जीवन में उतारना...ये हमारे संस्कारों में है। pic.twitter.com/AQf8p0Bljv
— PMO India (@PMOIndia) September 22, 2024
भाषा अनेक हैं, लेकिन भाव एक है... और वो भाव है- भारतीयता। pic.twitter.com/STBOpaYnMQ
— PMO India (@PMOIndia) September 22, 2024
For the world, AI stands for Artificial Intelligence. But I believe AI also represents the America-India spirit: PM @narendramodi pic.twitter.com/B7Y2Ue29uj
— PMO India (@PMOIndia) September 22, 2024
These five pillars together will build a Viksit Bharat... pic.twitter.com/KRTlYuNIaY
— PMO India (@PMOIndia) September 22, 2024
मेरा मन और मिशन एकदम क्लीयर रहा है...
— PMO India (@PMOIndia) September 22, 2024
मैं स्वराज्य के लिए जीवन नहीं दे पाया... लेकिन मैंने तय किया सुराज और समृद्ध भारत के लिए जीवन समर्पित करूंगा: PM @narendramodi pic.twitter.com/U4EPBVg423
Today, India is a land of opportunities. It no longer waits for opportunities; it creates them. pic.twitter.com/E0UAncfzoa
— PMO India (@PMOIndia) September 22, 2024
India no longer follows; it forges new systems and leads from the front. pic.twitter.com/6ywujcBprk
— PMO India (@PMOIndia) September 22, 2024
Today, our partnerships are expanding globally. pic.twitter.com/1s6BQR5Uzv
— PMO India (@PMOIndia) September 22, 2024
Today, when India speaks on the global platform, the world listens. pic.twitter.com/ItATxrq4Dh
— PMO India (@PMOIndia) September 22, 2024