“ಮೇರೆ ಸಪ್ನೊ ಕಾ ಭಾರತ್“ ಮತ್ತು “ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅಸಮಾನ್ಯ ನಾಯಕರು” ಕುರಿತ ಆಯ್ದ ಪ್ರಬಂಧಗಳ ಅನಾವರಣ
ಎಂಎಸ್ ಎಂ ಇ ತಂತ್ರಜ್ಞಾನ ಕೇಂದ್ರ ಮತ್ತು ಬಯಲು ರಂಗಮಂದಿರದೊಂದಿಗೆ ಸಭಾಂಗಣವಿರುವ ಪುರುಂತಲೈವರ್ ಕಾಮರಾಜರ್ ಮಣಿಮಂಟಪ ಉದ್ಘಾಟನೆ
“ಭಾರತದ ಜನಸಂಖ್ಯೆ ಹರೆಯದ್ದಾಗಿದೆ ಮತ್ತು ಭಾರತದ ಮನಸ್ಸು ಕೂಡ ಯುವತ್ವದಿಂದ ಕೂಡಿದೆ. ಭಾರತದ ಸಾಮರ್ಥ್ಯದಲ್ಲಿ ಮತ್ತು ಅದರ ಕನಸುಗಳಲ್ಲಿ ಯುವಕರಿದ್ದಾರೆ. ಭಾರತವು ತನ್ನ ಆಲೋಚನೆ ಮತ್ತು ಅದರ ಪ್ರಜ್ಞೆಯಲ್ಲೂ ಹೊಸತನದಿಂದ ಕೂಡಿದೆ”
“ಭಾರತವು ತನ್ನ ಯುವಶಕ್ತಿಯನ್ನು ಜನಸಂಖ್ಯೆಯ ಲಾಭಾಂಶ ಮತ್ತು ಅಭಿವೃದ್ಧಿಯ ಚಾಲನಾಶಕ್ತಿ ಎಂದು ಪರಿಗಣಿಸುತ್ತದೆ”
“ಭಾರತದ ಯುವಕರು ಕಠಿಣ ಪರಿಶ್ರಮ ಸಾಮರ್ಥ್ಯವನ್ನು ಹೊಂದಿದ್ದಾರೆ ಮತ್ತು ಭವಿಷ್ಯದ ಬಗ್ಗೆ ಸ್ಪಷ್ಟತೆ ಹೊಂದಿದ್ದಾರೆ. ಹಾಗಾಗಿಯೇ ಭಾರತ ಇಂದು ಏನು ಹೇಳುತ್ತದೆಯೋ ಜಗತ್ತು ಅದನ್ನು ನಾಳಿನ ಧ್ವನಿಯೆಂದು ಪರಿಗಣಿಸುತ್ತದೆ”
“ನಮ್ಮ ಯುವಕರು ಸಾಮರ್ಥ್ಯವು ಹಳೆಯ ಏಕಾತನತೆಯಿಂದ ಹೊರೆಯಾಗುವುದಿಲ್ಲ. ಈ ಯುವಕರು ಹೊಸ ಸವಾಲುಗಳಿಗೆ ಅನುಗುಣವಾಗಿ ತನ್ನನ್ನು ಮತ್ತು ಸಮಾಜವನ್ನು ವಿಕಸನಗೊಳಿಸಬಹುದು”
“ಇಂದಿನ ಯುವಕರು ‘ಮಾಡಬಹುದು(ಕೆನ್ ಡೂ)‘ ಮನೋಭಾವ ಹೊಂದಿದ್ದು, ಅದೇ ಪ್ರತಿ ಪೀಳಿಗೆಯ ಸ್ಪೂರ್ತಿಗೆ ಮೂಲವಾಗಿದೆ”
“ಭಾರತೀಯ ಯುವಕರು ಜಾಗತಿಕ ಸಮೃದ್ಧಿಯ ಸಂಹಿತೆ ಬರೆಯುತ್ತಿದ್ದಾರೆ”
“ನವ ಭಾರತದ ಮಂತ್ರ- ಸ್ಪರ್ಧಿಸಿ ಮತ್ತು ಗೆಲ್ಲಿ, ತೊಡಗಿಸಿಕೊಳ್ಳಿ ಮತ್ತು ಗೆಲ್ಲಿ, ಒಗ್ಗೂಡಿ ಮತ್ತು ಯುದ್ಧದಲ್ಲಿ ಗೆಲುವು ಸಾಧಿಸಿ”
ಸೂಕ್ತ ಮನ್ನಣೆ ಸಿಗದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಸಂಶೋಧನೆ ಮಾಡಲು ಮತ್ತು ಅವರ ಬಗ್ಗೆ ಬರೆಯಲು ಪ್ರಧಾನಿ ಕರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪುದುಚೇರಿಯಲ್ಲಿ 25ನೇ ರಾಷ್ಟ್ರೀಯ ಯುವ ಉತ್ಸವನ್ನು ಉದ್ಘಾಟಿಸಿದರು. ಇಂದು ಸ್ವಾಮಿ ವಿವೇಕಾನಂದರ ಜಯಂತಿಯನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ. ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ ಅವರು “ಮೇರೆ ಸಪ್ನೊ ಕಾ ಭಾರತ್ “ ಮತ್ತು  “ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅಸಮಾನ್ಯ ನಾಯಕರು” ಕುರಿತ ಆಯ್ದ ಪ್ರಬಂಧಗಳ ಅನಾವರಣಗೊಳಿಸಿದರು.  ಈ ಪ್ರಬಂಧಗಳನ್ನು ಎರಡು ವಿಷಯಗಳ ಮೇಲೆ ಸುಮಾರು 1 ಲಕ್ಷಕ್ಕೂ ಅಧಿಕ ಯುವಕರು ಸಲ್ಲಿಸಿದ ಪ್ರಬಂಧಗಳಲ್ಲಿ ಆಯ್ಕೆ ಮಾಡಲಾಗಿದೆ. ಅಲ್ಲದೆ, ಪ್ರಧಾನಮಂತ್ರಿ ಅವರು ಸುಮಾರು 122 ಕೋಟಿ ರೂ. ವೆಚ್ಚದಲ್ಲಿ ಎಂಎಸ್ ಎಂಇ ಸಚಿವಾಲಯ ಪುದುಚೇರಿಯಲ್ಲಿ ನಿರ್ಮಿಸಿರುವ ತಾಂತ್ರಿಕ ಕೇಂದ್ರವನ್ನು ಉದ್ಘಾಟಿಸಿದರು. ಜೊತೆಗೆ ಪುದುಚೇರಿ ಸರ್ಕಾರ 23 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಬಯಲು ರಂಗಮಂದಿರವನ್ನು ಒಳಗೊಂಡ ಸಭಾಂಗಣ ಪರುಂತಲೈವರ್ ಕಾಮರಾಜರ್ ಮಣಿಮಂಟಪವನ್ನು ಉದ್ಘಾಟಿಸಿದರು. ಕೇಂದ್ರ ಸಚಿವರಾದ ಶ್ರೀ ಅನುರಾಗ್ ಸಿಂಗ್ ಠಾಕೂರ್, ಶ್ರೀ ನಾರಾಯಣ ರಾಣೆ, ಶ್ರೀ ಭಾನು ಪ್ರತಾಪ್ ಸಿಂಗ್ ವರ್ಮ  ಮತ್ತು ಶ್ರೀ ನಿಶಿತ್ ಪ್ರಾಮಾಣಿಕ್, ಲೆಫ್ಟಿನೆಂಟ್ ಗೌರ್ನರ್ ಡಾ.ತಮಿಳಸೈ ಸೌಂದರ್ ರಾಜನ್ ಮತ್ತು ಪುದುಚೇರಿ ಮುಖ್ಯಮಂತ್ರಿ ಶ್ರೀ ಎನ್. ರಂಗಸ್ವಾಮಿ, ರಾಜ್ಯ ಸಚಿವರು ಮತ್ತು ಸಂಸದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ರಾಷ್ಟ್ರೀಯ ಯುವ ದಿನದಂದು ರಾಷ್ಟ್ರಕ್ಕೆ ಶುಭ ಕೋರಿದರು. ಸ್ವಾಮಿ ವಿವೇಕಾನಂದರಿಗೆ ನಮಿಸಿದ ಪ್ರಧಾನಮಂತ್ರಿ, ಈ ವರ್ಷದ ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ಅವರ ಜನ್ಮ ದಿನವು ಹೆಚ್ಚು ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.

ಶ್ರೀ ಅರವಿಂದರ 150ನೇ ಜನ್ಮದಿನಾಚರಣೆ ಮತ್ತು ಮಹಾಕವಿ ಸುಬ್ರಹ್ಮಣ್ಯ ಭಾರತಿ ಅವರ 100ನೇ ಪುಣ್ಯತಿಥಿ ಇದೇ ವರ್ಷದಲ್ಲಿ ನಡೆಯಲಿರುವುದರಿಂದ ಈ ವರ್ಷಕ್ಕೆ ಹೆಚ್ಚಿನ  ಮಹತ್ವವಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. “ಈ ಇಬ್ಬರು ಜ್ಞಾನಿಗಳು ಅಥವಾ ಖುಷಿಗಳು ಪುದುಚೇರಿಯೊಂದಿಗೆ ವಿಶೇಷ ಸಂಬಂಧ ಹೊಂದಿದ್ದಾರೆ. ಇಬ್ಬರೂ ಪರಸ್ಪರ ತಮ್ಮ ಸಾಹಿತ್ಯಿಕ ಮತ್ತು ಆಧ್ಯಾತ್ಮಿಕ ಪಯಣದಲ್ಲಿ ಪಾಲುದಾರರಾಗಿದ್ದಾರೆ” ಎಂದು ಪ್ರಧಾನಮಂತ್ರಿ ಹೇಳಿದರು.

ಪ್ರಾಚೀನ ದೇಶದ ಯುವ ಜನಾಂಗದ ಕುರಿತು ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು ವಿಶ್ವ ಇಂದು ಭಾರತದೆಡೆಗೆ ಭರವಸೆ ಮತ್ತು ನಂಬಿಕೆಯಿಂದ ನೋಡುತ್ತಿದೆ ಎಂದರು. ಏಕೆಂದರೆ, ಭಾರತದ ಜನಸಂಖ್ಯೆ ಯುವ ಜನಾಂಗದಿಂದ ಕೂಡಿದೆ ಮತ್ತು ಭಾರತದ ಮನಸ್ಸು ಕೂಡ ಹರೆಯದಿಂದ ಕೂಡಿದೆ. ಭಾರತದ ಸಾಮರ್ಥ್ಯದಲ್ಲಿ ಮತ್ತು ಅದರ ಕನಸುಗಳಲ್ಲಿ ಯುವಕರಿದ್ದಾರೆ. ಭಾರತವು ತನ್ನ ಆಲೋಚನೆಗಳಲ್ಲಿ ಮತ್ತು ಅದರ ಆಂತಃಕರಣ (ಪ್ರಜ್ಞೆಯಲ್ಲಿ)ದಲ್ಲಿ ಯುವತನವನ್ನು ಹೊಂದಿದೆ. ಭಾರತದ ಚಿಂತನೆ ಮತ್ತು ತತ್ವಶಾಸ್ತ್ರವು ಸದಾ ಬದಲಾವಣೆಯನ್ನು ಸ್ವೀಕರಿಸಿದೆ ಮತ್ತು ಅದರ ಪ್ರಾಚೀನತೆಯಲ್ಲಿ ಆಧುನಿಕತೆಯೂ ಇದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಗತ್ಯದ ಸಂದರ್ಭಗಳಲ್ಲೆಲ್ಲಾ ದೇಶದ ಯುವಕರು ಮುಂದೆ ಬರುತ್ತಿದ್ದಾರೆ ಎಂದರು. ರಾಷ್ಟ್ರೀಯ ಪ್ರಜ್ಞೆ ವಿಭಜನೆಗೊಂಡಾಗಲೆಲ್ಲಾ ಶಂಕರರಂತಹ ಯುವಕರು ಮುಂದೆ ಬಂದು ಆದಿ ಶಂಕರಾಚಾರ್ಯರ ರೂಪದಲ್ಲಿ ದೇಶವನ್ನು ಒಗ್ಗಟ್ಟಿನ ದಾರದಲ್ಲಿ ಹೊಲಿದು ಒಗ್ಗೂಡಿಸುತ್ತಾರೆ. ಸಂಕಷ್ಟಗಳ ಸಂದರ್ಭಗಳಲ್ಲಿ, ಗುರು ಗೋವಿಂದ್ ಸಿಂಗ್ ಅವರ ಸಾಹಿಬ್ಜಾದೆಯಂತಹ ಯುವಕರ ತ್ಯಾಗಗಳು ನಮಗೆ ಇಂದಿಗೂ ಮಾರ್ಗದರ್ಶನ ನೀಡುತ್ತವೆ. ತನ್ನ ಸ್ವಾತಂತ್ರ್ಯಕ್ಕಾಗಿ ಭಾರತವು ತ್ಯಾಗದ ಅವಶ್ಯಕತೆಯಿದ್ದಾಗ, ಯುವ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಮತ್ತು ನೇತಾಜಿ ಸುಭಾಸ್ ದೇಶಕ್ಕಾಗಿ ಮುಂದೆ ಬಂದು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ದೇಶಕ್ಕೆ ಆಧ್ಯಾತ್ಮಿಕ ಪುನರುಜ್ಜೀವನದ ಅಗತ್ಯವಿದ್ದಾಗ ಅರವಿಂದೋ ಮತ್ತು ಸುಬ್ರಮಣಯನ್ ಭಾರತಿ ಅವರಂತಹ ಜ್ಞಾನಿಗಳು ಕಾಣಿಸಿಕೊಳ್ಳುತ್ತಾರೆ ಎಂದು ಪ್ರಧಾನಮಂತ್ರಿ ಹೇಳಿದರು.

ಭಾರತದ ಯುವಜನಾಂಗ ಜನಸಂಖ್ಯೆಯ ಹೆಚ್ಚಿನ  ಭಾಗವಾಗಿರುವ ಜೊತೆಗೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹೊಂದಿದ್ದು, ಅವರ ಪ್ರಜಾಸತ್ತಾತ್ಮಕ ಲಾಭಾಂಶವೂ ಹೋಲಿಸಲಾಗದು ಎಂದು ಪ್ರಧಾನಿ ಹೇಳಿದರು. ಭಾರತವು ತನ್ನ ಯುವಕರನ್ನು ಜನಸಂಖ್ಯಾ ಲಾಭಾಂಶ ಮತ್ತು ಅಭಿವೃದ್ಧಿ ಚಾಲಕ ಶಕ್ತಿಯೆಂದೇ ಪರಿಗಣಿಸುತ್ತದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ಇಂದು ಭಾರತದ ಯುವಜನತೆ ತಂತ್ರಜ್ಞಾನದ ಮೋಡಿ ಮಾಡಿರುವುದೇ ಅಲ್ಲದೆ, ಪ್ರಜಾಪ್ರಭುತ್ವದ ಪ್ರಜ್ಞೆಯನ್ನೂ ಮೈಗೂಡಿಸಿಕೊಂಡಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಭಾರತದ ಯುವಕರು ಇಂದು ಕಠಿಣ ಪರಿಶ್ರಮದ ಸಾಮರ್ಥ್ಯ ಹೊಂದಿರುವ ಜೊತೆಗೆ ಭವಿಷ್ಯದ ಬಗ್ಗೆಯೂ ಸ್ಪಷ್ಟತೆ ಹೊಂದಿದ್ದಾರೆ. ಆದ್ದರಿಂದಲೇ ಇಂದು ಭಾರತ ಹೇಳುವುದನ್ನು ವಿಶ್ವ ನಾಳೆಯ ಧ್ವನಿ ಎಂದು ಪರಿಗಣಿಸುತ್ತದೆ ಎಂದು ಹೇಳಿದರು.

ಸ್ವಾತಂತ್ರ್ಯದ ಸಮಯದಲ್ಲಿ ಯುವ ಪೀಳಿಗೆ ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಲು ಒಂದು ಕ್ಷಣವೂ ಹಿಂಜರಿಯಲಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಆದರೆ ಇಂದಿನ ಯುವ ಜನಾಂಗ ದೇಶಕ್ಕಾಗಿ ಬದುಕಬೇಕು ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಬೇಕು. ಯುವಕರ ಸಾಮರ್ಥ್ಯಕ್ಕೆ ಹಳೆಯ  ಏಕತಾನತೆ ಹೊರೆಯಾಗುವುದಿಲ್ಲ, ಅವುಗಳನ್ನು ಹೇಗೆ ಬದಲಾಯಿಸಬೇಕೆಂಬುದು ಅವರಿಗೆ ತಿಳಿದಿದೆ ಎಂದು ಪ್ರಧಾನಿ ಹೇಳಿದರು. ಈ ಯುವಕರು ಹೊಸ ಸವಾಲುಗಳು, ಹೊಸ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮನ್ನು ಮತ್ತು ಸಮಾಜವನ್ನು ವಿಕಸನಗೊಳಿಸಬಹುದು ಮತ್ತು ಹೊಸದನ್ನು ಸೃಷ್ಟಿಸಬಹುದು. ಇಂದಿನ ಯುವಪೀಳಿಗೆಯಲ್ಲಿ ‘ಮಾಡಬಲ್ಲೆನು(ಕೆನ್ ಡೂ)’ ಎಂಬ ಮನೋಭಾವ ಇದ್ದು, ಅದು ಪ್ರತಿ ಪೀಳಿಗೆಗೆ ಸ್ಫೂರ್ತಿಯ ಸೆಲೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಭಾರತದ ಯುವಕರು ಇಂದು ಜಾಗತಿಕ ಸಮೃದ್ಧಿಯ ಸಂಹಿತೆಯನ್ನು ಬರೆಯುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಶ್ಲಾಘಿಸಿದರು. ವಿಶ್ವದಾದ್ಯಂತ ಯೂನಿಕಾರ್ನ್ ಪೂರಕ ವ್ಯವಸ್ಥೆಯಲ್ಲಿ ಭಾರತೀಯ ಯುವಕರ ಶಕ್ತಿಯನ್ನು ಪರಿಗಣಿಸಬೇಕಾಗಿದ್ದು. ಭಾರತವು ಇಂದು 50,000 ಕ್ಕೂ ಅಧಿಕ ನವೋದ್ಯಮಗಳಿಗೆ ಪೂರಕ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಅದರಲ್ಲಿ 10 ಸಾವಿರಕ್ಕೂ ಅಧಿಕ ನವೋದ್ಯಮಗಳು ಸಾಂಕ್ರಾಮಿಕದ ಸವಾಲಿನ ಅವಧಿಯಲ್ಲಿಯೇ ಆರಂಭವಾಗಿವೆ ಎಂಬುದು ಗಮನಿಸಲೇಬೇಕಾದ ಅಂಶವಾಗಿದೆ. ‘ನವ ಭಾರತ - ಸ್ಪರ್ಧಿಸಿ ಮತ್ತು ಗೆಲ್ಲಿ’ ಎಂಬ ಮಂತ್ರವನ್ನು ಪ್ರಧಾನಮಂತ್ರಿ ನೀಡಿದರು. ಅಂದರೆ, ತೊಡಗಿಸಿಕೊಳ್ಳಿ ಮತ್ತು ಗೆಲ್ಲಿರಿ. ಒಗ್ಗೂಡಿ ಯುದ್ಧವನ್ನು ಗೆಲ್ಲಿರಿ ಎಂದು. ಯುವಜನರು ಲಸಿಕೆ ಅಭಿಯಾನದಲ್ಲಿ ಭಾಗವಹಿಸುವುದು ಅವರಲ್ಲಿನ ಗೆಲ್ಲುವ ಛಲ ಮತ್ತು ಯುವಕರಲ್ಲಿ ಹೊಣೆಗಾರಿಕೆಗೆ ಪ್ರಜ್ಞೆ ಮೂಡಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿನ ದೇಶದ ಕ್ರೀಡಾಳುಗಳ ಸಾಧನೆಯನ್ನು ಉಲ್ಲೇಖಿಸಿದರು.

ಸರ್ಕಾರ ಗಂಡು ಮತ್ತು ಹೆಣ್ಣುಮಕ್ಕಳು ಇಬ್ಬರೂ ಸಮಾನರೆಂದು ನಂಬುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಆ ಚಿಂತನೆಯೊಂದಿಗೆ ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಮದುವೆಗೆ  ಅರ್ಹ ವಯಸ್ಸನ್ನು 21 ವರ್ಷಕ್ಕೆ ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ. ಹೆಣ್ಣುಮಕ್ಕಳು ತಮ್ಮ ವೃತ್ತಿಯನ್ನೂ ಸಹ ಕೈಗೊಳ್ಳಬಹದು, ಅವರಿಗೆ ಹೆಚ್ಚು ಸಮಯ ಸಿಗುತ್ತದೆ, ಆ ನಿಟ್ಟಿನಲ್ಲಿ ಇದು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.

ನಾವು ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಹೋರಾಟಗಾರರನ್ನು ಕಂಡಿದ್ದೇವೆ, ಆದರೆ ಅವರ ಕೊಡುಗೆಗೆ ಅರ್ಹವಾದ ಮನ್ನಣೆ ದೊರಕಲಿಲ್ಲ ಎಂದು ಪ್ರಧಾನಿ ಹೇಳಿದರು. ಅಂತಹ ಗಣ್ಯರ ಕುರಿತು ನಮ್ಮ ಯುವಕರು ಎಷ್ಟು ಸಂಶೋಧಿಸುತ್ತಾರೋ, ಎಷ್ಟು ಬರೆಯುತ್ತಾರೋ ಅಷ್ಟೂ ದೇಶದ ಮುಂದಿನ ಪೀಳಿಗೆಯಲ್ಲಿ ಜಾಗೃತಿ ಹೆಚ್ಚಾಗಲಿದೆ ಎಂದು ಅವರು ಹೇಳಿದರು. ಸ್ಥಳೀಯ ಉತ್ಪನ್ನಗಳಿಗೆ ಧ್ವನಿಯಾಗುವಂತೆ ಮತ್ತು ಸ್ವಚ್ಚತಾ ಅಭಿಯಾನಕ್ಕೆ ಸಹಕರಿಸುವಂತೆ ಅವರು ಯುವಕರಿಗೆ ಕರೆ ನೀಡಿದರು.

ರಾಷ್ಟ್ರೀಯ ಯುವಜನ ಉತ್ಸವದ ಉದ್ದೇಶ ರಾಷ್ಟ್ರ ನಿರ್ಮಾಣಕ್ಕಾಗಿ ಭಾರತದ ಯುವಜನರ ಮನಸ್ಸನ್ನು ರೂಪಿಸುವುದು ಮತ್ತು ಅವರನ್ನು ಒಗ್ಗಟ್ಟಿನ ಶಕ್ತಿಯಾಗಿ ಪರಿವರ್ತಿಸುವುದಾಗಿದೆ.  ಇದು ಸಾಮಾಜಿಕ ಒಗ್ಗಟ್ಟು ಮತ್ತು ಬೌದ್ಧಿಕ ಮತ್ತು ಸಾಂಸ್ಕೃತಿಕ ಏಕೀಕರಣದ ಬಹುದೊಡ್ಡ ಕೆಲಸಗಳಲ್ಲಿ ಒಂದಾಗಿದೆ. ಇದು ಭಾರತದ ವೈವಿಧ್ಯಮಯ ಸಂಸ್ಕೃತಿಗಳನ್ನು ಒಂದೆಡೆ ತರಲು ಮತ್ತು ಅವುಗಳನ್ನು 'ಏಕ್ ಭಾರತ್, ಶ್ರೇಷ್ಠ ಭಾರತ' ಜೊತೆ ಏಕತಾ ತಂತುವಿನೊಂದಿಗೆ ಬೆಸೆಯುವ ಗುರಿಯನ್ನು ಹೊಂದಿದೆ.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi