ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು ನಾಗರಿಕ ಪೌರತ್ವ ಕಾಯ್ದೆ ಬಗ್ಗೆ ಸವಿಸ್ತಾರವಾಗಿ ವಿವರ ನೀಡಿದರು. ಈ ಕಾಯ್ದೆಯಿಂದ ಭಾರತದ ಯಾವುದೇ ಪ್ರಜೆಗೂ ತೊಂದರೆ ಆಗುವುದಿಲ್ಲ ಎಂದು ಸದನಕ್ಕೆ ಭರವಸೆ ನೀಡಿದರು.
ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿಯವರು ಹಿಂದಿನ ಸರ್ಕಾರಗಳ ಚಿಂತನಾ ಪ್ರಕ್ರಿಯೆಗಳು ಕೂಡ ಇದೇ ರೀತಿಯಲ್ಲಿದ್ದವು ಎಂದು ಉಲ್ಲೇಖಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರನ್ನು ಉಲ್ಲೇಖಿಸಿ, ಅವರು ಕೂಡ ನೆರೆ ರಾಷ್ಟ್ರಗಳಿಂದ ಬಂದಿರುವ ಅಲ್ಪಸಂಖ್ಯಾತ ನಿರಾಶ್ರಿತರಿಗೆ ಭಾರತ ಸುರಕ್ಷತೆಯನ್ನು ಖಾತ್ರಿಪಡಿಸಲು ಅಗತ್ಯಬಿದ್ದರೆ ಕಾನೂನು ತಿದ್ದುಪಡಿ ಮಾಡುವುದರ ಪರವಾಗಿದ್ದರು ಎಂದರು.
ಕೆಲವು ರಾಜಕೀಯ ಪಕ್ಷಗಳು ಭಾರತದಲ್ಲಿ ವಿಭಜನೆ ಮಾಡುವ ಪಾಕಿಸ್ತಾನದ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂದ ಪ್ರಧಾನಮಂತ್ರಿಯವರು, ಭಾರತದ ಯಾವುದೇ ಪ್ರಜೆಗೆ ಸಿಎಎಯಿಂದ ಪ್ರತೀಕೂಲ ಪರಿಣಾಮ ಆಗುವುದಿಲ್ಲ ಎಂದು ಲೋಕಸಭೆಗೆ ಭರವಸೆ ನೀಡಿದರು.
“ಸಿಎಎ ಅನುಷ್ಠಾನದಿಂದ ಭಾರತದ ಯಾವುದೇ ಪ್ರಜೆಗೆ, ಅವರ ನಂಬಿಕೆ/ಧರ್ಮದ ಮೇಲೆ ಯಾವುದೇ ರೀತಿಯ ಪ್ರತೀಕೂಲ ಪರಿಣಾಮ ಆಗುವುದಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ”, ಎಂದು ಅವರು ತಿಳಿಸಿದರು.
Much has been said about CAA, ironically by those who love getting photographed with the group of people who want ‘Tukde Tukde’ of India: PM @narendramodi
— PMO India (@PMOIndia) February 6, 2020